Thursday 18th, April 2024
canara news

`ಪತ್ರಿಕೋದ್ಯಮದ ಬದುಕು' ವಿಚಾರ ಸಂಕಿರಣ ನಡೆಸಿದ ಕರ್ನಾಟಕ ಸಂಘ ಡೊಂಬಿವಲಿ ಸಂಸ್ಥೆ

Published On : 23 Oct 2016   |  Reported By : Ronida Mumbai


ಪತ್ರಿಕೋದ್ಯಮ ಸಮಾಜದ ನರನಾಡಿ ತಿಳಿಸುವ ಸಾಧನ:ದಿವಾಕರ ಶೆಟ್ಟಿ ಇಂದ್ರಾಳಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.22: ಕರ್ನಾಟಕ ಸಂಘ ಡೊಂಬಿವಲಿ ಇದರ ವಾಚನಾಲಯ ವಿಭಾಗವು ಇಂದಿಲ್ಲಿ ಶನಿವಾರ ಸಂಜೆ ಡೊಂಬಿವಲಿ ಪಶ್ಚಿಮದ ವಸಂತ ಛೇಂಬರ್ಸ್‍ನಲ್ಲಿನ ಸಂಘದ ಕಚೇರಿಯಲ್ಲಿ `ಪತ್ರಿಕೋದ್ಯಮದ ಬದುಕು' ವಿಷಯಾಧಾರಿತ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಂಘದ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ವಿಠಲ ಎ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು `ಹೊರನಾಡಿನಲ್ಲಿ ಕನ್ನಡ ಪತ್ರಿಕೋದ್ಯಮಿಗಳ ಸಮಸ್ಯೆಗಳು', ಉದಯವಾಣಿ ದೈನಿಕ ಮುಂಬಯಿ ಆವೃತ್ತಿಯ ಉಪ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಅವರು `ಮುಂಬಯಿ ಕನ್ನಡ ಪತ್ರಿಕೋದ್ಯಮ ಹಾಗೂ ಬರವಣಿಗೆಯ ಬೆಳವಣಿಗೆ' ಹಾಗೂ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರು `ಪತ್ರಿಕೋದ್ಯಮದಲ್ಲಿ ಯುವ ಪತ್ರಕರ್ತರ ಪಾತ್ರ' ವಿಷಯದಲ್ಲಿ ವಿಚಾರ ಮಂಡಿಸಿದರು.

ಪತ್ರಿಕೋದ್ಯಮ ಸಮಾಜದ ನರನಾಡಿ ತಲುಪಿಸುವ ಸಾಧನ. ಮುಂಜಾನೆ ಚಾಹಾಕ್ಕಿಂತ ಪತ್ರಿಕೆಗಳಿಗೆ ಮಹತ್ವ ಇರುವುದು. ದೈನಿಕಗಳ ಮಹತ್ವ ತಿಳಿಸುತ್ತದೆ. ಪತ್ರಿಕೋಧ್ಯಮ ಮಾಧ್ಯಮದ ಸಂಗಮವಾಗಿದೆ. ಎಂದು ಉದ್ಘಾಟನಾ ಭಾಷಣದಲ್ಲಿ ದಿವಾಕರ ಶೆಟ್ಟಿ ತಿಳಿಸಿದರು.

ಬಿಎಂಸಿಯ ಹಳೆಯ ರೆಕಾರ್ಡ್‍ಗಳು ಕನ್ನಡದಲ್ಲಿವೆ. ಆದುದರಿಂದ ಇಲ್ಲಿ ಕನ್ನಡದ ಪ್ರಬಲ್ಯವನ್ನು ಕಾಣಬಹುದು. ಇಂದು 25 ವರ್ಷಗಳ ಹಿಂದಿನ ಸ್ಥಿತಿಯಿಲ್ಲ ಯಾಕೆಂದರೆ ಯಾವುದೇ ಕನ್ನಡ ಪತ್ರಿಕೆಗಳನ್ನು ನಾವೂ ನಿರ್ಮಿಸುವಾಗ ಓದಬಹುದು. ಬಂಡವಾಳ ಶಾಯಿಗಳು ಮಾತ್ರ ಪತ್ರಿಕೆಗಳನ್ನು ನಡೆಸಬಹುದು. ಯಾವುದೇ ಪತ್ರಿಕೆ ನಿರಂತರವಾಗಿ ನಡೆಯಬೇಕಾದರೆ ಪ್ರಸರಣಾ ವಿಭಾಗ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವಾಗ ಓದುಗರನ್ನು ಗಮನಿಸಿ ಸುದ್ಧಿಯನ್ನು ಪ್ರಕಟಿಸುತ್ತದೆ ಆಗ ಓದುಗರು ಪತ್ರಿಕೆಗಳನ್ನು ಸ್ವೀಕರಿಸುತ್ತಾರೆ ಎಂದು ಪಾಲೆತ್ತಾಡಿ ಅಭಿಪ್ರಾಯ ಪಟ್ಟರು.

ರೋನ್ಸ್ ಬಂಟ್ವಾಳ್ ಮಾತನಾಡಿ ವರದಿ ಅಥವಾ ಛಾಯಾಚಿತ್ರಗಳನ್ನು ಪತ್ರಿಕೆ ಅಥವಾ ಮಾಧ್ಯಮಗಳಲ್ಲಿ ಪ್ರಕಟವಾಗುವ ಮೊದಲೇ ವಾಟ್ಸ್‍ಆ್ಯಪ್, ಫೇಸ್‍ಬುಕ್, ಟ್ವಿಟರ್, ಯೂಟ್ಯೂಬ್ ಇತ್ಯಾದಿಗಳ ಮೂಲಕ ರವಾನಿಸಿ ಆನಂದಿಸುವುದು ವೃತ್ತಿದ್ರೋಹ ಆಗುತ್ತದೆ. ಆದುದರಿಂದ ಪ್ರಸಕ್ತ ಪತ್ರಕರ್ತರಲ್ಲಿ ವೃತ್ತಿನಿಷ್ಠೆ ಮರೆಯಾಗುತ್ತಿರುವುದನ್ನು ಕಾನ ಬಹುದು. ಶೋಧನಾತ್ಮಕ ವರದಿಗಳತ್ತ ಗಮನ ಕಡಿಮೆ ಆಗಿದ್ದು ಧನಾತ್ಮಕ ಚಿಂತನೆಯ ಭಾತ್ಮಿದಾರರು ಕ್ಷಿಣಿತರಾಗಿದ್ದಾರೆ. ಪತ್ರಿಕೋದ್ಯಮವು ಉದ್ಯಮವಾಗಿ ರೂಪ ಪಡೆದ ಕಾರಣ ಪೂರ್ಣಕಾಲಿಕ ಪತ್ರಕರ್ತರ ಸಂಖ್ಯೆ ಮರೆಯಾಗುತ್ತಾ ಅರೆಕಾಲಿಕಾ ಪತ್ರಕರ್ತರಲ್ಲಿ ವೃತ್ತಿನಿಷ್ಠೆಕ್ಕಿಂತ ಹಣ ಸಂಪಾದನೆಯೇ ಉದ್ದೇಶವಾಗಿರುವ ಕಾರಣ ಪತ್ರಿಕಾರಂಗದ ಸ್ಥಿತಿಗತಿ ಅಧೋಮಯವಾಗಿದೆ. ಬಹುತೇಕರಲ್ಲಿ ವ್ಯಕ್ತಿನಿಷ್ಠೆ, ಮುಖಸ್ತುತಿಯೇ ವಸ್ತುವಾಗಿ ಪರಿಣಮಿಸಿದ್ದು ಸಾಮಾಜಿಕ ಕಳಕಳಿ ಮಾಯವಾಗಿದೆ. ವರದಿಕ್ಕಿಂತ ಭಾವಚಿತ್ರಕ್ಕೆ ಮಹತ್ವ ಜಾಸ್ತಿಯಾಗಿದ್ದು ಅವರವರ ವರದಿಗಳು ಬಂದಾಗಲೇ ಪತ್ರಿಕೆ ಕೊಂಡು ಓದುವವರ ಸಂಖ್ಯೆ ಜಾಸ್ತಿಯಾದ ಕಾರಣ ಪತ್ರಕರ್ತರೂ ತಮ್ಮ ಚಾಳಿಯನ್ನು ಬದಲಾಯಿಸಿ ಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಹವ್ಯಾಕ ಶುಭೋಧಾ ಮೊದಲಾದ ಸ್ವಾತಂತ್ರ್ಯಪೂರ್ವ ಪತ್ರಿಕೆಗಳು ಬ್ರಿಟಿಷರಿಂದ ಮುಚ್ಚಿ ಹೋಯ್ತು. ಯಾಕೆಂದರೆ ಈ ಪತ್ರಿಕೆಗಳು ಬ್ರಿಟಿಷರಿಗೆ ಸವಾಲಾಗಿ ನಿಂತಿದ್ದವು. ಇದರಿಂದಾಗಿ ಅಂದಿನ ಹೆಚ್ಚಿನ ಕನ್ನಡಿಗರು ಸ್ವಾತ್ರಂತ್ರ್ಯ ಹೋರಾಟದಲ್ಲಿ ದುಮುಕಲು ಸಹಾಯವಾಯ್ತು. ಕನ್ನಡ ಪತ್ರಿಕೋದ್ಯಮಕ್ಕೆ ಮೊತ್ತ ಮೊದಲು ವ್ಯಂಗ್ಯ ಚಿತ್ರವನ್ನು ಮುದ್ರಿಸಿದವರು ಹವ್ಯಾಕ ಶುಭೋಧಾ. ಹೊಸ ಕನ್ನಡ ಸಾಹಿತ್ಯ ಹುಟ್ಟಿ ಕೊಂಡದೆ ಮುಂಬಯಿ ಪತ್ರಿಕೋಧ್ಯಮದಿಂದ. ಕನ್ನಡ ಏಕೀಕರಣವಾಗ ಬೇಕೊ ಬೇಡವೋ ಎನ್ನುವುದರ ಬಗ್ಗೆ ಕರ್ನಾಟಕಕ್ಕಿಂತ ಮೊದಲು ಇಲ್ಲಿನ ಪತ್ರಿಕೆಗಳು ಚರ್ಚಿಸಿದವು ಎಂದು ದಿನೇಶ್ ಶೆಟ್ಟಿ ನುಡಿದರು.

ವಿಠಲ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ವ್ಯಕ್ತಿಯನ್ನು, ಸಮಾಜವನ್ನು ಅಗಸಕ್ಕೂ ಎತ್ತರಿರುವ ಪಾತಾಳಕ್ಕೆ ಎಸೆಯುವ ತಾಕತ್ತು ಪತ್ರಕರ್ತರಿಗಿದೆ. ಸಮಾಜವು ಪತ್ರಕರ್ತರನ್ನು ಗೌರವಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ| ದಿಲೀಪ್ ಕೆ.ಕೋರ್ಪಡೆ, ಜೊತೆ ಕಾರ್ಯದರ್ಶಿ ಐಕಳ ಗಣೇಶ್ ವೈ.ಶೆಟ್ಟಿ, ಜೊತೆ ಕೋಶಾಧಿಕಾರಿ ಲೋಕನಾಥ ಎ.ಶೆಟ್ಟಿ, ನ್ಯಾ| ವಸಂತ ಕಲಕೋಟಿ ಮತ್ತಿತರರು ಉಪಸ್ಥಿತರಿದ್ದರು.

ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ರಮೇಶ ಕಾಖಂಡಕಿ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಕು| ಸಾನ್ವಿ ಬ್ಯಾಡಣಿ ಪ್ರಾರ್ಥನೆಯನ್ನಾಡಿದರು. ಉಪ ಕಾರ್ಯಾಧ್ಯಕ್ಷ ಸುಕುಮಾರ್ ಎನ್.ಶೆಟ್ಟಿ, ಗೌ| ಕಾರ್ಯದರ್ಶಿ ದೇವದಾಸ್ ಎಲ್.ಕುಲಾಲ್, ಗೌ| ಕೋಶಾಧಿಕಾರಿ ಚಿತ್ತರಂಜನ್ ಎಂ.ಆಳ್ವ ಮತ್ತಿತರರು ಅತಿಥಿüಗಳಿಗೆ ಸ್ಮರಣಿಕೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಸನತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here