Thursday 18th, April 2024
canara news

ಮಹಾನಗರಕ್ಕೆ ಜಿಎಸ್‍ಬಿ ಮುಖ್ಯ ಪ್ರಾಣ ದೇವರ ವಿಗ್ರಹದ ರಥಯಾತ್ರೆಯ ಆಗಮನ

Published On : 23 Oct 2016   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.22: ಹರಿದ್ವಾರ ವಾಸಾಶ್ರಮದಲ್ಲಿ ಶ್ರೀ ಕಾಶಿ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ವೃಂದಾವನದಲ್ಲಿ 2017ರ ಜನವರಿಯÀಲ್ಲಿ ಪ್ರತಿಷ್ಠಾಪನೆ ಆಗಲಿರುವ ಮುಖ್ಯಪ್ರಾಣ ದೇವರ(ಹನುಮಾನ್) ಶ್ರೀ ವಿಗ್ರಹದ ರಥಯಾತ್ರೆ ಆರಂಭ ಗೊಂಡಿದ್ದು ಈ ರಥವು ಮುಂಬಯಿಯಲ್ಲಿನ ಜಿಎಸ್‍ಬಿ ಸಮಾಜದ ವಿವಿಧ ಸಂಘ ಸಂಸ್ಥೆಗಳಿಗೆ ತೆರಳಲಿದ್ದು ಇಂದಿಲ್ಲಿ ಶನಿವಾರ ಸಂಜೆ ಉಪನಗರ ಕುರ್ಲಾದಲ್ಲಿನ ಬಾಲಾಜಿ ಮಂದಿರದಿಂದ ಹೊರಟು ಜಿಎಸ್‍ಬಿ ಸೇವಾ ಮಂಡಲ ಸಯನ್ ಇಲ್ಲಿನ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹಕ್ಕೆ ಆಗಮಿಸಿತು.

ಜಿಎಸ್‍ಬಿ ಸೇವಾ ಮಂಡಲ ಅಧ್ಯಕ್ಷ ಯಶವಂತ್ ಕಾಮತ್, ಉಪಾಧ್ಯಕ್ಷ ಪ್ರಶಾಂತ್ ಪುರಾಣಿಕ್, ಕಾರ್ಯದರ್ಶಿ ರಮನಾಥ್ ಆರ್. ಕಿಣಿ, ಕೋಶಾಧಿಕಾರಿ ವಿಜಯ ಎಸ್.ಭಟ್, ಜೊತೆ ಕಾರ್ಯದರ್ಶಿ ವಿಷ್ಣು ಆರ್.ಕಾಮತ್, ಜೊತೆ ಕೋಶಾಧಿಕಾರಿ ದೀಪಕ್ ಕಾಮತ್, ಮುಂದಾಳುಗಳಾದ ಆರ್.ಜಿ.ಭಟ್, ಸತೀಶ್ ರಾಮನಾಯಕ್, ಅಮೀತ್ ಡಿ.ಪೈ ರಥಯಾತ್ರೆ ಸಿದ್ಧತೆ ನಡೆಸಲ್ಪಟ್ಟಿತು. ಜಿಎಸ್‍ಬಿ ವೈದಿಕರ ವೇದ ಘೋಷಣೆ, ಭಜನೆ, ವಾದ್ಯಗಳ ನೀನಾದಗಳೊಂದಿಗೆ ಪೂರ್ಣಕುಂಭ ಸ್ವಾಗತ ಮೂಲಕ ಭವ್ಯ ಮೆರವಣಿಗೆಯಲ್ಲಿ ರಥಯಾತ್ರೆಯನ್ನು ಸಭಾಗೃಹಕ್ಕೆ ಅದ್ದೂರಿಯಾಗಿ ಬರಮಾಡಲಾಯಿತು. ಬಳಿಕ ರಥಕ್ಕೆ ಹಾರಾರ್ಪಣೆ, ಸ್ತೋತ್ರ, ಪಠಣೆ, ಭಜನೆ, ಆರತಿ ಇತ್ಯಾದಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಘನತೆಗೊಳಿಸಲಾಯಿತು.

ಇಂದು (ಅ.23) ಆದಿತ್ಯವಾರ ಬೆಳಿಗ್ಗೆ ವ್ಯಾಸೋಪಾಸನೆ, ಭಜನೆ, ಸೇವಾ ಮಂಡಲದ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗ ಹಾಗೂ ವಾಲ್ಕೇಶ್ವರ ತಂಡದಿಂದ ಭಜನೆ ನಡೆಸಿ ದೈವೈಕ್ಯ ಶ್ರೀಗಳ ಗುಣಗಾನ, ಗುರು ಕಾಣಿಕೆ ಸಮರ್ಪಣೆ, ಪುಷ್ಪಾರ್ಚನೆ, ಆರತಿ ನೆರವೇರಿಸಿ ಸಂಜೆ ವೇಳೆಗೆ ರಥಯಾತ್ರೆಯು ಗುರುಗಣೇಶ ಸಭಾಗೃಹದಿಂದ ಕಿಂಗ್ ಸರ್ಕಲ್ ಅಲ್ಲಿನ ಜಿಎಸ್‍ಬಿ ಸಭಾ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಮಂದಿರ ಹೊರಡಲಿದೆ ಎಂದು ಜಿಎಸ್‍ಬಿ ಸೇವಾ ಮಂಡಲ ಅಧ್ಯಕ್ಷ ಯಶವಂತ್ ಕಾಮತ್ ತಿಳಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here