Tuesday 23rd, April 2024
canara news

ಸಾಹಿತ್ಯ ಬಳಗ ಮುಂಬಯಿ ಯಿಂದ ಮೂಲನಂಬಿಕೆ ಮತ್ತು ಮೂಢ ನಂಬಿಕೆ ಗೋಷ್ಠಿ ಧರ್ಮಗಳ ಬಗ್ಗೆ ದ್ವೇಷ ಸಿದ್ಧಾಂತ ಬೇಡ : ಪ್ರೊ. ಪಿ. ಶ್ರೀಪತಿ ತಂತ್ರಿ

Published On : 24 Oct 2016   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.23: ಜನರ ನಂಬಿಕೆಗಳ ಮೇಲೆ ಯಾವ ಸರಕಾರವೂ ಆಕ್ರಮಣ ಮಾಡದಿರಿ. ಶಾಸನದ ರೂಪದಲ್ಲಿ ಸಮಾಜ ಪರಿವರ್ತನೆ ಅಸಾಧ್ಯ. ಕ್ರೂರ ನಂಬಿಕೆಗಳಿಂದ ಜನತೆ ವಿಮುಖರಾಗುವಂತೆ ಉತ್ತಮ ತಿಳುವಳಿಕೆಯುಳ್ಳ ಜಾಗೃತಿಯ ಶಿಕ್ಷಣಗಳು ನೀಡಬೇಕೆ ಹೊರತು ಜನರ ನಂಬಿಕೆಗಳ ವಿರುದ್ಧ ಸವಾರಿ ಬೇಡ. ಸಂಘರ್ಷ ಬೇಕಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಪೆÇ್ರ್ರ. ಪಿ. ಶ್ರೀಪತಿ ತಂತ್ರಿ ನುಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹಯೋಗದೊಂದಿಗೆ ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಾಹಿತ್ಯ ಬಳಗ ಮುಂಬಯಿ ತನ್ನ ರಜತ ಮಹೋತ್ಸವ ಸಂಭ್ರಮದ ಶುಭಾವಸರದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ನೆಲೆಯಲ್ಲಿ ಧಾರ್ಮಿಕ ಚಿಂತನೆ, ಮೂಲನಂಬಿಕೆ ಮತ್ತು ಮೂಢ ನಂಬಿಕೆ ವಿಚಾರಿತ ಎರಡು ದಿನಗಳ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಶ್ರೀಪತಿ ತಂತ್ರಿ ಮಾತನಾಡಿ ಎಲ್ಲಾ ಬ್ರಾಹ್ಮಣರು ಮಾಂಸಾಹಾರಿಗಳಲ್ಲ. ಧರ್ಮದ ಬಗ್ಗೆ ತಿಳಿಯದವರ ಮಾತುಕೇಳಿ ಸಚಿವ ಪ್ರಮೋದ್ ಅವರು ವಿರೋಧಾಭಾಸಗಳ ಹೇಳಿಕೆ ನೀಡುತ್ತಿರುವು ದು ಶೋಭೆಗೆ ತಕ್ಕುದಲ್ಲ. ಸಮನ್ವಯ ಸಾಧಿಸಿ ಬದುಕು ಕಟ್ಟಿಕೊಳ್ಳಬೇಕಿದೆ. ಕರಾವಳಿಯ ಧರ್ಮ ನಾಗನ ಮೂಲದಲ್ಲಿ ನಿಂತಿದೆ. ಒಂದು ವರ್ಗ ಇನ್ನೊಂದು ವರ್ಗದ ಬಗ್ಗೆ ದ್ವೇಷ ಸಿದ್ಧಾಂತ ಬೇಡ ಎಂದರು.

ಆಧ್ಯಾತ್ಮಿಕ ಕ್ಷೇತ್ರವೇ ನಂಬಿಕೆಯಾಗಿದ್ದು, ಸಾಕ್ಷಾತ್ಕರಿಸಲು ಅಸಾಧ್ಯ, ಅದಕ್ಕಾಗಿ ಅವೆಲ್ಲವನ್ನೂ ಮೂಢ ನಂಬಿಕೆಗಳೆನ್ನಲಾಗುತ್ತಿಲ್ಲ.ಸಾರ್ವತ್ರಿಕವಾಗಿ ಒಪ್ಪಿ ನಂಬಿಕೆ ಆಚರಿಸುವ ಕಾರ್ಯವೇ ಮೂಲ ನಂಬಿಕೆಯಾಗಿದೆ. ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ಧರ್ಮಗಳು ಹುಟ್ಟಿಕೊಂಡಿದೆ. ಆಕ್ರಮಣ ಶೀಲ ಪ್ರವೃತ್ತಿಯಿಂದ ಕೆಲ ಧರ್ಮಗಳು ಹೇರಿಕೆಯಾಗುತ್ತದೆ. ಭಾರತದ ಧರ್ಮವನ್ನು ವಿದೇಶಿಗರು ಸಮರ್ಥವಾಗಿ ಅರ್ಥೈಸದೆ ವ್ಯಾಖ್ಯಾನಿಸಿದ್ದರಿಂದ ಅರ್ಥಹೀನ ಸಮಸ್ಯೆ ಉದ್ಭವವಾಗಿದೆ. ಇದೆಲ್ಲವನ್ನು ಮೆಟ್ಟಿನಿಂತು, ಸಾರ್ವತ್ರಿಕ, ಭಾವನಾತ್ಮಕವಾಗಿ ನಡೆಯುವ ಪ್ರಕ್ರಿಯೆಯ ಗಟ್ಟಿತನದೊಂದಿಗೆ, ದ್ವೇಷ ಸಿದ್ಧಾಂತ ರಹಿತವಾಗಿ ಸಮನ್ವಯ ಸಾಧಿಸಿ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರಹ್ಲಾದಾಚಾರ್ಯ ನಾಗರಹಳ್ಳಿ ಮಾತನಾಡಿ, ವೈಚಾರಿಕ, ವಿದೇಶಿ ಆಕ್ರಮಣಗಳಾದರೂ ವಿರೂಪಗೊಳ್ಳಲಸಾಧ್ಯವಾಗಿ ಮನುಷ್ಯ ಜಾತಿಗೆ ಸಿಕ್ಕ ಬೃಹತ್ ಸಂಪತ್ತು ವೇದಗಳು. ಪಾರಂಪರಿಕ ಚಿಂತಕರನ್ನು ಹೊರತುಪಡಿಸಿ ಉಳಿದವರು ವೇದಗಳನ್ನು ತಿಳಿಯದೆ ಮಾಡಿರುವ ಆರೋಪಗಳೇ ಹೆಚ್ಚು. ವಿದೇಶದಲ್ಲಿ ಆಂತರಿಕ ವಿಷಯಗಳ ಬಗ್ಗೆ ಅಲಕ್ಷ್ಯ ಇದೆ. ಆಯಾಯ ವ್ಯವಸ್ಥೆಯಲ್ಲಿನ ಸುವ್ಯವಸ್ಥೆಯೇ ವಿಜ್ಞಾನವಾಗಿದೆ. ವಿಶ್ವದ ಶಕ್ತಿಯ ಅಭಿವ್ಯಕ್ತಿ ವೇದವೇ ಆಗಿದೆ. ಸ್ವೇಚ್ಛೆಯಿಂದ ನಡೆದಲ್ಲಿ ವ್ಯವಸ್ಥೆ ಸರ್ವನಾಶವಾಗಲಿದೆ ಎಂದರು.

ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಉಪಾನ್ಯಾಸ ನೀಡಿ, ವಸ್ತುವನ್ನು ಇದ್ದ ಹಾಗೆಯೇ ತಿಳಿದುಕೊಂಡರೆ, ಇತರರಿಗೆ ತಿಳಿಸಿದರೆ, ಪರೀಕ್ಷಿಸಿದರೆ ಅದು ಸಕಲಕ್ಕೂ ಆಧಾರವಾದ ನಂಬಿಕೆಯಾಗುತ್ತದೆ. ಪರಂಪರೆಯಿಂದಿರುವ ಸಿದ್ಧ ವಿಷಯಗಳ ಬಗ್ಗೆ ಚಿಂತನೆ ಬೇಕಿಲ್ಲ. ನಂಬಿಕೆಯ ಮೇಲಿರಿಸಿದ ವಿಶ್ವಾಸ ಹಳಿ ತಪ್ಪಿದಾಗ ಪರೀಕ್ಷೆಗೊಡ್ಡುತ್ತೇವೆ. ಆ ಹೊತ್ತಿಗೆ ನಿಲುಗಡೆ ರಹಿತವಾದ ಅಂಧ ವಿಶ್ವಾಸ ಪ್ರಕಟವಾಗುತ್ತದೆ. ಪ್ರತಿಯೊಂದು ವ್ಯವಸ್ಥೆಯೊಳಗೆ ಅಶಾಸ್ತ್ರೀಯವಾದುದನ್ನು ತೋರಿಸಿ ಶಾಸ್ತ್ರೀಯತೆಯ ಮೇಲೆ ನಡೆಸುವ ಪ್ರಹಾರ ಅಸಮಂಜಸ. ಲೋಕದ ನಿಯಮಕ್ಕೆ ಎಲ್ಲವನ್ನೂ ನಿಷೇಧಿಸಿದಲ್ಲಿ ಮನುಷ್ಯ ಒತ್ತಡಕ್ಕೊಳಗಾಗುತ್ತಾನೆ. ದೇವರ ಚೈತನ್ಯ ಎಂಬುದು ಪುಟಕ್ಕಿಟ್ಟ ಚಿನ್ನದಂತೆ ಎಂಬ ನೆಲೆಗಟ್ಟಿನಲ್ಲಿ ಸಮಾಜ ಹಿತಕಾಪಾಡಿಕೊಳ್ಳಲು ಪ್ರಾಜ್ಞರು ತತ್ತ್ವಾಧಾರಿತ ನಿಯಮಗಳನ್ನು ರೂಪಿಸಿದ್ದಾರೆ ಎಂದು ವಿವರ ಮಂಡಿಸಿದರು.

ಋಗ್ವೇದ ಘನಪಾಠಿ ದುರ್ಗಾಪ್ರಸಾದ್ ಭಟ್ ಋಷಿ ಪರಂಪರೆಗೆ ನಮನ ಸಲ್ಲಿಸಿದರು. ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿದರು. ಮುಂಬಯಿ ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಎಸ್.ಕೆ ಸುಂದರ್ ವಂದಿಸಿದರು. ಕೋಶಾಧಿಕಾರಿ ವೈ.ವಿ ಮಧುಸೂದನ ರಾವ್, ಶಶಿಕಲಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here