Thursday 25th, April 2024
canara news

ಬರಹಗಾರರ ಅಕ್ಷರ ಸಮ್ಮೇಳನದಲ್ಲಿ ಕುಂದಾಪ್ರ ಕನ್ನಡ ಅಕಾಡೆಮಿಯ ಕೂಗು

Published On : 24 Oct 2016   |  Reported By : Bernard J Costa


ಕುಂದಾಪುರ,ಅ.24: ಇಂದಿನ ವಿದ್ಯಾರ್ಥಿಗಳು ಬುದ್ಧಿವಂತರು. ಸುಂದರವಾದ ಕನಸುಗಳನ್ನು ಕಾಣಬಲ್ಲರು. ಸರಿಯಾದ ಮಾರ್ಗದರ್ಶನ ದೊರೆತರೆ ಆ ಕನಸುಗಳನ್ನು ನನಸಾಗಿ ಸಾಧಿಸಿ ತೋರಿಸಬಲ್ಲರು. ಇಂದು ವೇಗದ ಕಾಲಮಾನ ಅರೆಕ್ಷಣ ನಿಧಾನಿಸಿದರೆ ಬೇರೆಯವರು ಮೀರಿಸಿ ಮುಂದೋಡುತ್ತಾರೆ. ಕ್ರೀಡಾಪಟುವಿನ ಮನೋಭಾವ ಬೇಕು. ಇಂದು ವಿಶ್ವ ಸಾಧನೆಗಳ ಮಹಾಪೂರ ವಾಗಿದೆ. ಕನಸುಕಟ್ಟುವುದು ಮಾತ್ರವಲ್ಲ ಅದನ್ನು ಸಾಧಿಸಿ ಸಾಕಾರಗೊಳಿಸುವ ಎಲ್ಲಾ ಅವಕಾಶಗಳು ಇವೆ. ಸಾಹಿತ್ಯ ಕ್ಷೇತ್ರ ಇದಕ್ಕೆ ಹೊರತಲ್ಲ. ನಮ್ಮ ನೆಲ, ಮಣ್ಣು, ಸಾಹಿತ್ಯ ಸಂಸ್ಕøತಿ ಉಳಿಸಿ ಬೆಳೆಸುವ ಪ್ರಯತ್ನಗಳು ಸಾಕಾರಗೊಳ್ಳಬೇಕು.

 

ಇಂದು ನಮ್ಮ ದೇಶದಲ್ಲಿ ಜನರು ಅವರವರ ಮಾತೃಭಾಷೆಯಿಂದ ದೂರವಾಗುತ್ತಿದ್ದಾರೆ. ಮಕ್ಕಳನ್ನು ಪ್ರಾದೇಶಿಕ ಭಾಷೆ ಹಾಗೂ ಸಂಸ್ಕøತಿಯಿಂದ ಹೆತ್ತವರೇ ವಿಮುಖರನ್ನಾಗಿಸುತ್ತಿರುವುದು ವಿಷಾದನೀಯ. ಸರಕಾರವೂ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಇದು ಹೀಗೆಯೇ ಮುಂದುವರಿದಲ್ಲಿ ಈ ಸಮಾಜ ಅಪಾಯದ ಅಂಚಿಗೆ ಹೋಗುವುದು ನಿಶ್ಚಿತ ಎಂದು ಕೋಟೇಶ್ವರದವರೇ ಆದ ಸಾಹಿತಿ ಬೆಂಗಳೂರಿನ ಮಾಧುರಿಕೃಷ್ಣ ಹೇಳಿದರು.

ಅವರು ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ನಡೆದ ಬರಹಗಾರರ ಅಕ್ಷರ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬರೆಹಗಾರರ ಅಕ್ಷರ ಸಮ್ಮೇಳನದ ಅಧ್ಯಕ್ಷತೆಯನ್ನು ಕವಿ ಹೆಚ್.ಡುಂಡಿರಾಜ್ ವಹಿಸಿದ್ದರು.

ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿಯಾಗಲಿ :
ದಿಕ್ಸೂಚಿ ಭಾಷಣ ಮಾಡಿದ ಸಂಶೋಧಕ, ವಿದ್ವಾಂಸ ಪ್ರೊ| ಎ.ವಿ. ನಾವಡ ಮಂಗಳೂರು ಮಾತನಾಡಿ , ಕುಂದಾಪ್ರ ಕನ್ನಡ ಐದ್ ಲಕ್ಷ ಜನ ಉಡುಪಿ ಜಿಲ್ಲೆಯಲ್ಲೇ ಮಾತಾಡ್ತ್ರ. ಪರರಾಜ್ಯ ಪರದೇಶ ಲೆಕ್ಕ ಹಾಕ್ರೆ 20 ಲಕ್ಷ ಜನ ಆತ್ರ. ಕುಂದಾಪ್ರ ಕನ್ನಡ ಭಾಷಿ, ಸಂಸ್ಕøತಿ , ಜಾನಪದ ಹಾಡ, ಜನಪದ ಬದಕ ಎಲ್ಲ ಉಳ್ಸಕ್, ಬೆಳ್ಸಕ್ , ಈ ಭಾಷಿಗೆ ಒಂದ್ ಅಕಾಡೆಮಿ , ಮಂಗ್ಳೂರ್ ವಿ.ವಿ.ಯಲ್ಲೊಂದ್ ಪೀಠ ,ಆಯ್ಕೆ -ಆಯ್ಕ್. ನಾವೆಲ್ಲ ಒಟ್ಟಾಯ್ ಹೋರಾಟ ಮಾಡ್ರೆ ಇದೆಲ್ಲಾ ಸಿಗತ್’

ಕುಂದಾಪುರದ ಭಾಷೆ ಒಂದು ಪ್ರಾದೇಶಿಕ ಭಾಷೆಯೂ ಸಾಮಾಜಿಕ ಭಾಷೆಯೂ ಆಗಿದೆ. ಈ ಭಾಷೆ , ಕುಂದ ಸಂಸ್ಕøತಿಯ ಪುನರ್ ಅಧ್ಯಯನ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಕುಂದಗನ್ನಡ ಭಾಷಾ ಅಕಾಡೆಮಿ ಆಗಬೇಕು. ಇದರಿಂದ ಈ ಭಾಷೆ ಹಾಗೂ ಸಂಸ್ಕøತಿಯ ಪುನರ್ ಅಧ್ಯಯನ ಸಾಧ್ಯ. ಸತ್ವಯುತವಾದ ಈ ಭಾಷೆ ತನ್ನತನವನ್ನು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಈ ಭಾಷೆಯನ್ನು ಉಳಿಸುವ ಬೆಳೆಸುವ ಕಾರ್ಯಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಕ.ಸಾ.ಪ. ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಐ.ಎಂ.ಎ. ಅಧ್ಯಕ್ಷೆ ಭವಾನಿ ರಾವ್, ಸಾಹಿತಿ ಓಂ ಗಣೇಶ್ ಉಪ್ಪುಂದ ಹಾಗೂ ಡಾ| ಅಣ್ಣಯ್ಯ ಕುಲಾಲ್ ಮಂಗಳೂರು ಮಾತನಾಡಿ ಕುಂದಕನ್ನಡದ ಭಾಷೆಯ ವೈಶಿಷ್ಟ್ಯವನ್ನು ಉಳಿಸಿಕೊಳ್ಳುವಲ್ಲಿ ನಡೆಸುವ ಎಲ್ಲ ಪ್ರಯತ್ನಗಳಲ್ಲೂ ತಮ್ಮ ಕರ್ತವ್ಯವನ್ನು ನಿಭಾಯಿಸುವುದಾಗಿ ತಿಳಿಸಿದರು. ಸಾಹಿತ್ಯದ ಬಗ್ಗೆ ಜನಸಾಮಾನ್ಯರಿಗಿರುವ ಒಲವುಗಳ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬರಹಗಾರರ ಸಮ್ಮೇಳನ ಬರಹಗಾರರ ನಡುವಿನ ಸಂವಹನ ಮಾತ್ರವಲ್ಲದೇ ಹೊಸ ಬರಹಗಾರರಿಗೆ ಪ್ರೇರಣೆ ನೀಡುವಲ್ಲಿ ತುಂಬ ಉಪಯುಕ್ತವಾಗಿದೆ ಎಂದರು.

ಯು.ಎಸ್.ಶೆಣೈ ಸ್ವಾಗತಿಸಿದರು. ಕೊ.ಶಿವಾನಂದ ಕಾರಂತ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ವಿಶ್ವನಾಥ ಕರಬ ಹಾಗೂ ರಾಜೀವ್ ನಾಯ್ಕ್ ನಿರೂಪಿಸಿದರು. ಪಿ.ಜಯವಂತ ಪೈ ವಂದಿಸಿದರು. ಅನಂತರ ಸಾಹಿತ್ಯ ಮಿಡಿತ, ಕುಂದ ನಾಡಿನ ವೈಶಿಷ್ಟ್ಯ , ಯಕ್ಷ ಕಾವ್ಯ ಕಥೆ ವಿಚಾರ ಗೋಷ್ಠಿ ನಡೆಯಿತು.

ನಂತರ ನೆಡೆದ “ಸಾಹಿತ್ಯ ಮಿಡಿತ” ಗೋಷ್ಠಿಯಲ್ಲಿ ಪ್ರಗತಿ ಶೆಟ್ಟಿ, ಚೇತನಾ ಶ್ಯಾನುಭಾಗ್, ರಾಧಿಕಾ, ಕೀರ್ತಿ ಡಿ.ಕೆ, ಭಾಗವಹಿಸಿದ್ದು. ಪ್ರೊ. ನಾರಾಯಣ ರಾವ್ ಸಮನ್ವಯಕಾರರಾಗಿ ಗೋಷ್ಠಿ ನಡೆಸಿಕೊಟ್ಟರು.
“ಕುಂದನಾಡು ವೈಶಿಷ್ಟ್ಯ” ಗೋಷ್ಠಿಯ ಅಧ್ಯಕ್ಷತೆಯನ್ನು ಡಾ|ಗಾಯತ್ರಿ ನಾವಡ ವಹಿಸಿದರು, ಡಾ. ಭಾರತಿ ಮರವಂತೆ, ಲತಾ ಶೆಟ್ಟಿ ಮೂಡ್ಲಕಟ್ಟೆ, ಮೂರೂರು ಚಂದ್ರ ಬೆಂಗಳೂರು, ಕೋಟೇಶ್ವರ ಸೂರ್ಯ ನಾರಾಯಣ ರಾವ್, ಭಾಗವಹಿಸಿದರು. ಹಿರಿಯ ಪತ್ರಕರ್ತ ಎಸ್.ಜನಾರ್ಧನ್ ಸಮನ್ವಯಕಾರಕರಾಗಿ ಕಾರ್ಯನಿರ್ವಹಿಸಿದರು.

“ಯಕ್ಷ-ಕಾವ್ಯ-ಕಥೆ” ಗೋಷ್ಠಿಯ ಅಧ್ಯಕ್ಷತೆಯನ್ನು ಶಾರದಾ ಭಟ್ ಉಡುಪಿ ವಹಿಸಿದ್ದು. ರಾಜೇಂದ್ರ ನಾಯಕ್, ಶುಭಾÀ ಮರವಂತೆ, ಬಸವರಾಜ್ ಶೆಟ್ಟಿಗಾರ್, ಸಂದೀಪ ಹೆಗ್ಗದ್ದೆ, ಪ್ರಕಾಶ್ ಹೆಬ್ಬಾರ್ ನಾಡಾ, ಪುಂಡಲೀಕ ನಾಯಕ್ ಮಾತನಾಡಲಿದ್ದಾರೆ. ಬೆಳಗೋಡು ರಮೇಶ್ ಭಟ್ ಸಮನ್ವಯಕಾರಕರಾಗಿದ್ದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು

“ಬರಹ-ಪ್ರಕಟಣೆ-ಓದು-ವಿಮರ್ಶೆ” ವಿಷಯದಲ್ಲಿ ಲೇಖಕರು ಮತ್ತೆ ಪ್ರಕಾಶನದವರ ಮಧ್ಯೆ ನೆಡೆದ “ಪಟ್ಟಾಂಗ” ಸಂವಾದ ಗೋಷ್ಠಿಯಲ್ಲಿ ಉಪೇಂದ್ರ ಸೋಮಯಾಜಿ, ಮಾಲಿನಿ ಮಲ್ಯ, ಡಾ|ಭಾಸ್ಕರ ಆಚಾರ್ಯ, ಕು.ಗೋಪಾಲ್ ಭಟ್, ಆನಂದ, ಅಶೋಕ್ ತೆಕ್ಕಟ್ಟೆ, ತಾರಾಭಟ್, ಸಂಧ್ಯಾ ಶೆಣೈ, ಇಂದಿರಾ ಹಾಲಂಬಿ, ಪೂರ್ಣಿಮಾ ಭಟ್, ವೈ.ಎನ್.ವೆಂಕಟೇಶ ಮೂರ್ತಿ ಭಟ್ಟ, ಬರ್ನಾಡ್ ಡಿ’ಕೋಸ್ತ, ಸುಬ್ರಹ್ಮಣ್ಯ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ಕೆ.ಕೆ.ಕಾಳಾವರ್. ಅಂಶುಮಾಲಿ, ಗಣಪತಿ ಹೋಬಳಿದಾರ್, ಚಂದ್ರ ಹೆಮ್ಮಾಡಿ, ಡಾ| ಕಿಶೋರ್ ಕುಮಾರ್, ಪಂಜು ಬಿಲ್ಲವ ಮುಂತಾದವರು ಸಂವಾದ ನೆಡೆಸಿದರು.

ಮುನಿಯಾಲ್ ಗಣೇಶ್ ಶೆಣೈ, ಆರ್ಗೋಡು ಸುರೇಶ್ ಶೆಣೈ ಸಮನ್ವಯಕರಾಗಿ ಕಾರ್ಯನಿರ್ವಹಿದರೆ, ಕರುಣಾಕರ ಮೊಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಆಗುಂಬೆ ನಟರಾಜ್ ಸಮಾರೋಪ ಭಾಷಣ ಮಾಡಿದರು, ಡಾ|ಎಚ್.ರಂಜಿತ್ ಕುಮಾರ್ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊ. ಸೂರ್ಯನಾರಾಯಣ ರಾವ್, ಡಾ|ಎಚ್.ರಾಮ ಮೋಹನ್, ಡಾ.ಕನರಾಡಿ ವಾದಿರಾಜ ಭಟ್, ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ, ಕ.ಸಾ.ಪ. ಕುಂದಾಪುರ ತಾಲ್ಲೂಕು ಕಾರ್ಯಾಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್, ದತ್ತಾನಂದ ಗಂಗೊಳ್ಳಿ, ಭಾಗವಹಿಸಿದ್ದರು

ಡಾ|ಎನ್.ಪಿ. ಕಮಲ್, ಕೆ.ಪಿ.ಶ್ರೀಶನ್, ಎಸ್.ಕೃಷ್ಣಾನಂದ ಚಾತ್ರ ವಿಶೇಷ ಅತಿಥಿಗಳಾಗಿದ್ದ ಅವರನ್ನು ಸಾಹಿತ್ಯ ಬಗೆಗಿನ ಉದಾರತ್ವಕ್ಕಾಗಿ ಹಾಗೂ ಸಮಾಜ ಸೇವೆಗಾಗಿ ಕುಂದಪ್ರಭಾದ ಪರವಾಗಿ ಸನ್ಮಾನಿಸಲಾಯಿತು. ಪತ್ರಕರ್ತ ಶೇಖರ್ ಅಜೆಕಾರ್, ಸಮನ್ವಯಾಕಾರಾಗಿದ್ದು, ಉಪನ್ಯಾಸಕಿ ಜಯಶೀಲ ಪೈ ನಿರೂಪಣೆ ಮಾಡಿದರು

ಸಮ್ಮೇಳನದಲ್ಲಿ ವಾಗೀಶ್ ಭಟ್ ಅವರ ಭಾವಗೀತೆ, ಹಾಡುಗಾರ ಗಣೇಶ್ ಗಂಗೊಳ್ಳಿ ಕುಂದಕನ್ನಡ ಗೀತೆ ಹಾಡಿದರು ಕು.ಮಾನಸ ಹೊಳ್ಳ, ಕು.ಅನುಷಾ ಭಟ್, ಕು.ಮೇದಿನಿ, ಕು. ಭುವನ ಹೊಳ್ಳ, ಕು. ವಿಜಯಲಕ್ಷ್ಮೀ, ರಶ್ಮಿರಾಜ್ ಭಾವಗೀತೆ ಹಾಡಿದರು. ಎಚ್.ಸೋಮಶೇಖರ ಶೆಟ್ಟಿ, ದಿನೇಶ್ ಪ್ರಭು ಮದ್ದುಗುಡ್ಡೆ, ನಿರ್ವಹಿಸಿದರು. . ಎಚ್.ಸೋಮಶೇಖರ ಶೆಟ್ಟಿ, ಧನ್ಯವಾದಗಳನ್ನು ಅರ್ಪಿಸಿದರು.

ಒಂದು ದಿನ ಪೂರ್ತಿ ನೆಡೆದ ಈ ಅಕ್ಷರ ಉತ್ಸವದಲ್ಲಿ ಉಡುಪಿ ಜಿಲ್ಲೆಯ ನೂರಾರು ಸಾಹಿತಿಗಳು, ಸಾಹಿತ್ಯಾಸಕ್ತರು ಮತ್ತು ಹಲವಾರು ಸಾಹಿತ್ಯಾಕ್ಷ ವಿಧ್ಯಾರ್ಥಿಗಳು ಭಾಗವಹಿಸಿದ್ದು ಕಾರ್ಯಕ್ರಮ ಬಹಳ ಯಶಸಿಯಾಗಿ ಮೂಡಿಬಂತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here