Wednesday 24th, April 2024
canara news

ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರ ಬಿಡುಗಡೆ

Published On : 25 Oct 2016   |  Reported By : Rons Bantwal


ಕೈಕಂಬ: ಒಮ್ಮತದಿಂದ ಎಲ್ಲರೂ ಸೇರಿ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ದೇವರು ಸಹ ತಮ್ಮ ಭಕ್ತಿಗೆ ಪಾತ್ರನಾಗುತ್ತಾನೆ. ವೈಮನಸ್ಸು, ಅತೃಪ್ತಿ ಎಲ್ಲವನ್ನೂ ಬಿಟ್ಟು ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಊರಿನ ಭಕ್ತಾಧಿಗಳು ದೇವರ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ದೇವರನ್ನು ಪ್ರತಿಷ್ಠಾಪಿಸಿದರೆ ದೇವ ಸಂತೃಪ್ತಿಗೊಳ್ಳುತ್ತಾನೆ ಎಂದು ರಾಮಕೃಷ್ಣ ತಪೋವನದ ಸ್ವಾಮೀಜಿ ಸ್ವಾಮಿ ವಿವೇಕ ಚೈತ್ಯಾನಂದ ನುಡಿದರು.

ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೀರ್ಣೋದ್ಧಾರದ ಬಗ್ಗೆ ಅ.23ರಂದು ಭಾನುವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಞಾಪನ ಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅವರು ದ.ಕ.ಜಿಲ್ಲಾ ನಾನಾ ದೇವಸ್ಥಾನಗಳಿಗೆ ಸರಕಾರದಿಂದ ಅನುದಾನ ದೊರೆತ್ತಿದ್ದು, ಶ್ರಿ ಸದಾಶಿವ ದೇವಸ್ಥಾನಕ್ಕೂ ಅನುದಾನ ದೊರಕಿಸಿಕೊಡುವುದಾಗಿ ಈ ಸಂದರ್ಭದಲ್ಲಿ ಕೋಟ್ಯಾನ್ ಭರವಸೆ ನೀಡಿದರು.

2017 ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 6ವರೆಗೆ ಅಷ್ಠಬಂಧ ಬ್ರಹ್ಮಕಲಶೋತ್ಸವವು ನಿರ್ವಿಘ್ನವಾಗಿ ನೆರವೇರಲು ಊರಿನವರ ಹಾಗೂ ಸಂಘ ಸಂಸ್ಥೆಗಳ ಅಗತ್ಯತೆಯಿದ್ದು, ಸುಲಲಿತವಾಗಿ ಬ್ರಹ್ಮಕಲಶೋತ್ಸವ ನೆರವೇರಲು ಸಾಧ್ಯ ಎಂದು ಕುಡುಪು ವಾಸ್ತುತಜ್ಞ ಕೃಷ್ಣರಾಜ ತಂತ್ರಿ ಈ ಸಂದರ್ಭದಲ್ಲಿ ತಿಳಿಸಿದರು.

ಅಧ್ಯಕ್ಷತೆಯನ್ನು ಸದಾಶಿವ ದೇವಸ್ಥಾನದ ಆಡಳಿತ ಮುಕ್ತೇಸರ ಪದ್ಮನಾಭ ಶೆಟ್ಟಿ ಪೆರ್ಮಂಕಿ ಗುತ್ತು ವಹಿಸಿದ್ದರು, ಜೀಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಚಂದ್ರಹಾಸ ಶೆಟ್ಟಿ, ಕುಡುಪು ವಾಸ್ತುಶಿಲ್ಪ ತಜ್ಞರು ಕೃಷ್ಣರಾಜ ತಂತ್ರಿ, ಜೀರ್ಣೋದ್ಧರ ಸಮಿತಿ ಗೌರಾವಧ್ಯಕ್ಷರು ಪಿ. ವಿಠಲ ಶೆಟ್ಟಿ, ದೇವಳದ ಪ್ರಧಾನ ಅರ್ಚಕ ಅನಂತ ರಾಮ ಭಟ್, ನಳಂದ ರವಿರಾಜ್ ರಾವ್, ಪಟ್ರುಕೋಡಿ ಎಚ್,ಪ್ರಸಾದ್ ಪಂಡಿತ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಗಳಾದ ಕೃಷ್ಣ ಪ್ರಕಾಶ್ ಉಳಿತ್ತಾಯ ಮತ್ತು ಶ್ರೀನಾಥ್, ಜೊತೆ ಕಾರ್ಯದರ್ಶಿ ತೇಜಾಕ್ಷ ಕುಲಾಲ್, ಅಜಿತ್ ಕುಮಾರ್, ಹರೀಶ್ ದೆವಾಡಿಗ, ಆಡಳಿತ ಸಮಿತಿ ಅಧ್ಯಕ್ಷರಾದ ಕಿಂಞÂಣ್ಣ ಪಕ್ಕಳ, ಲೋಕೇಶ್ ಮಾಡ, ದೇವಪ್ಪ ಅಮೀನ್, ಪುಷ್ಪ ಭೋಜ ಪೂಜಾರಿ, ಶಾರದಾ ಶೇಖರ ಕುಲಾಲ್, ಸುಧಾಕರ್, ಗೌರವ ಸಲಹೆಗಾರರು ಸತೀಶ್ ಪೂಂಜಾ, ಪದ್ಮನಾಭ ಜೋಶಿ, ಶೇಖರ ಪೂಜಾರಿ, ಶ್ರೀಧರ ಪೂಜಾರಿ, ಶಿಕ್ಷಕ ಗಂಗಾಧರ, ರಾಜೀವ್ ಸಲ್ಲಾಜೆ, ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಉಳಾಯಿಬೆಟ್ಟು ಗ್ರಾ.ಪಂ ಅಧ್ಯಕ್ಷ ವಸಂತ್ ಕುಮಾರ್ ಪೆರ್ಮಂಕಿ, ಉಪಸ್ಥಿತರಿದ್ದರು. ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಲೋಕೇಶ್ ಮಾಡ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here