Tuesday 23rd, April 2024
canara news

ಪೂಜಾರಿ ಹೇಳಿಕೆ ಹಾಸ್ಯಾಸ್ಪದ: ಜೆಡಿಎಸ್‌

Published On : 26 Oct 2016   |  Reported By : Canaranews Network


ಮಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರವನ್ನು ಉರುಳಿಸಲು ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಒಳಸಂಚು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಮುಹಮ್ಮದ್‌ ಕುಂಞಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್‌ ಸರಕಾರವನ್ನು ಉರುಳಿಸುವ ಅಗತ್ಯ ಜೆಡಿಎಸ್‌ಗಿಲ್ಲ.

ದೇವೇಗೌಡ ಅವರ ಆಡಳಿತವನ್ನು ಸಿ.ಎಂ. ಇಬ್ರಾಹಿಂ ಪ್ರಶಂಸೆ ಮಾಡಿದ್ದಕ್ಕಾಗಿ ಪೂಜಾರಿ ಇಂತಹ ಹೇಳಿಕೆ ನೀಡುವುದಾದರೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಪೂಜಾರಿ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಎಂದೋ ಉಚ್ಚಾಟಿಸಬೇಕಿತ್ತು ಎಂದರು.ಕಾಂಗ್ರೆಸ್‌ ಸರಕಾರ ಉರುಳಿಸಲು ಪೂಜಾರಿ,ಮಾಜಿ ಸಂಸದ ವಿಶ್ವನಾಥ್‌ ಅವರಂತಹವರೇ ಸಾಕು.

ಪಕ್ಷ ಮೂಲೆಗುಂಪು ಮಾಡಿರುವ ಬಗ್ಗೆ ನಮಗೂ ವಿಷಾದವೆನಿಸುತ್ತಿದೆ ಎಂದರು.ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಸಿದ್ದರಾಮಯ್ಯ, ಮಹಾದೇವಯ್ಯ, ದೇಶಪಾಂಡೆ, ಐವನ್‌ ಡಿ'ಸೋಜಾ ಸೇರಿದಂತೆ ಸುಮಾರು 15ರಷ್ಟು ಜೆಡಿಎಸ್‌ ನಾಯಕರನ್ನು ಎಳೆದಿರುವುದು ಕಾಂಗ್ರೆಸ್ಸಿಗರು. ರಾಜ್ಯಸಭೆ ಚುನಾವಣೆಗೂ ನಮ್ಮ ಶಾಸಕರಿಂದ ಮತ ಹಾಕಿಸಿದ್ದಾರೆ ಎಂದು ಆರೋಪಿಸಿದರು. ಅಝೀಝ್ ಕುದ್ರೋಳಿ,ಅಕ್ಷಿತ್‌ ಸುವರ್ಣ, ಮುನೀರ್‌ ಮುಕ್ಕಚ್ಚೇರಿ, ಸುಧೀರ್‌, ಮೀರಾ ಸಾಹೇಬ್‌, ಪ್ರವೀಣ್‌ಚಂದ್ರ ಜೈನ್‌, ಶಾಲಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here