Wednesday 24th, April 2024
canara news

ನಿಜರ್ಥದ ದೀಪಾವಳಿ ಸಂಭ್ರಮಕ್ಕೆ ಮಹಾನಗರಿ ಸಜ್ಜು.....ಮುಂಬಯಿಯಾದ್ಯಂತ ಎಲ್ಲೆಲ್ಲೂ ಬೆಳಕಿನ ಪ್ರಕಾಶಮಾನ

Published On : 26 Oct 2016   |  Reported By : Rons Bantwal


(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ,ಅ.24: ಮಹಾನಗರ ಮುಂಬಯಿ ಮತ್ತೆ ನವ ವಧುವಿನಂತೆ ಶೃಂಗಾರಗೊಂಡು ಬೆಳಕಿನ ಹಬ್ಬದ ಸಂಭ್ರವಕ್ಕೆ ಮೆರೆದು ನಿಂತಿದೆ. ಕಾರ್ತಿಕ ಮಾಸದ ಶರದೃತುವಿನ ಪ್ರಾಪ್ತತೆಯ ಸೌಂದರ್ಯತೆಯ ಪ್ರಕೃತಿಯಲ್ಲೂ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಇದೀಗ ಕಂಗೋಳಿಸುತ್ತಿದೆ.

ಭಾರತ ದೇಶದ ನಿಜರ್ಥದ ಭಾವೈಕ್ಯತೆ, ಸಾಮರಸ್ಯದ ಗೂಡಾದ ಮುಂಬಯಿ ಸರ್ವಧಮೀಯರ ನಾಡಿಗಿದ್ದು ಇಂತಹ ಬೆಳಕಿನ ಹಬ್ಬ ದೀಪಾವಳಿಗೆ ಅರ್ಥವನ್ನುಂಟು ಮಾಡುವ ನಾಡು ಕೂಡಾ ಹೌದು. ಇಲ್ಲಿನ ಜನತೆ ಜಾತಿಮತ ಬೇಧ ಮರೆತು ಏಕತೆಯಿಂದ ಬಾಳುತ್ತಾ ಪರಸ್ಪರ ಅನ್ಯೋನ್ಯತೆಯಿಂದ ದೀಪಾವಳಿಯನ್ನೂ ಆಚರಿಸುತ್ತಿರುವುದು ಅಭಿನಂದನೀಯ. ಇದು ದೇಶವಿದೇಶಿಯರಿಗೂ ಮಾದರಿ. ದೀಪಾರಾಧನೆಗೆ ತುಂಬಾ ಇಲ್ಲಿ ತುಂಬಾ ಮಹತ್ವವಿದೆ.

ನಗರದಾದ್ಯಂತ ಅಂಧಾಕಾರ ನಿವಾರಣೆಗೊಂಡು ವೈವಿಧ್ಯಮಯ ಲೈಟು, ಗೂಡುದೀಪ, ನಕ್ಷತ್ರಗಳಿಂದ ಪ್ರಕಾಶಮಾನವಾಗಿ ಕಂಗೋಳಿಸುತ್ತಿದೆ. ನರಕ ಚತುರ್ದಶಿಯಿಂದ, ಲಕ್ಷ್ಮೀಪೂಜೆ, ಬಲಿಪಾಡ್ಯ, ಗೋವರ್ಧ ನ ಪೂಜೆ, ಸಹೋದರ ಬಿದಿಗೆ (ಬಾವುಬೀಚ್), ಲಕ್ಷದೀಪೆÇೀತ್ಸವ ಇತ್ಯಾದಿಗಳಿಂದ ತುಳಸೀ ಪೂಜೆ ತನಕವೂ ಮುಂಬಯಿಗರಿಗೆ ದೀಪಾವಳಿಯ ಸಡಗರವೋ ಸಡಗರ. ಇಲ್ಲಿನ ಜನತೆ ಎಲ್ಲವನ್ನೂ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಆಚರಿಸುತ್ತಾ ಹಬ್ಬದ ನಿಜರ್ಥದ ಸಂದೇಶ ಹಂಚಿಕೊಳ್ಳುತ್ತಾರೆ. ಈ ಬಾರಿಯ ದೀಪಾವಳಿಯು ಸರ್ವರ ಮನ-ಮನೆಗಳ ಅಂತರ್ಜ್ಯೋತಿಯನ್ನು ಉರಿಸುತ್ತಾ ಸಹಬಾಳ್ವೆಗೆ ಪ್ರೇರಕವಾಗಲಿ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here