Saturday 20th, April 2024
canara news

ನೇತ್ರಾವತಿ ಮಡಿಲಲ್ಲಿ ನೂತನ ಬಂಟವಾಳ ಬಂಟರ ಭವನ ಲೋಕಾರ್ಪಣೆ

Published On : 30 Oct 2016   |  Reported By : Rons Bantwal


ಬಂಟರು ಸ್ವಾಭಾವಿಕ ಸಹಸ ಪ್ರವೃತ್ತರು : ಮುಖ್ಯಮಂತ್ರಿ ಸಿದ್ಧರಾಮಯ್ಯ
ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬಂಟ್ವಾಳ, ಅ.30: ರಾಜ್ಯದ ಮಹಾನಗರಗಳಲ್ಲೂ ಇಲ್ಲದ ಆದರೆ ತಾಲೂಕು ಮಟ್ಟದೊಳಗಿನ ಪ್ರದೇಶದಲ್ಲಿ ಆತ್ಯಾಧುನಿಕ, ಸುಸಜ್ಜಿತ ಬೃಹತ್ ಬಂಟರ ಭವನ ರೂಪಿಸಿರುವುದು ಸ್ತುತ್ಯರ್ಹ. ಬಂಟ ಸಮಾಜದಲ್ಲಿ ಶ್ರೀಮಂತರು ಇರುವುದರಿಂದ ಇದು ಸಾಧ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆಥಿರ್sಕವಾಗಿ ಸದೃಢರಾಗಿರುವ ಬಂಟರು ಸ್ವಾಭಾವಿಕ ಸಾಹಸ ಪ್ರವೃತ್ತರು. ರಾಜ್ಯ ಸರಕಾರದ ವತಿಯಿಂದ ಬಂಟ್ವಾಳದ ಬಂಟರ ಭವನಕ್ಕೆ ಒಂದು ಕೋಟಿ ರೂ. ಆಥಿರ್sಕ ನೆರವು ನೀಡುವುದಾಗಿ ಘೋಷಿಸಿದರು. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲೂ ಬೆಳಕನ್ನು ತರಲಿ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಸಿದ್ಧರಾಮಯ್ಯ ದೀಪಾವಳಿಯ ಶುಭಾಶಯ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ವಳವೂರು ಇಲ್ಲಿನ ನೇತ್ರಾವತಿ ತೀರದಲ್ಲಿ ನೂತನ ಬಂಟವಾಳ ಬಂಟರ ಭವನ ಲೋಕಾರ್ಪಣೆಗೈದು, ಸಂಘದ ಎಲ್‍ಐಡಿ ಅನಾವರಣಗೊಳಿಸಿ, ಕರಜನ ಸ್ವರಣ ಸಂಚಿಕೆ ಬಿಡುಗಡೆಗೊಳಿಸಿದ ಸಿದ್ಧರಾಮಯ್ಯ ಲಿಂಗತಾರತಮ್ಯವಿಲ್ಲದ ಬಂಟರಲ್ಲಿ ಮಹಿಳೆಯರಿಗೂ ಸಮಾನತೆ ಇರುವುದು ಪ್ರಶಂಸನೀಯ. ಬಂಟರಲ್ಲಿನ ಬಹುತೇಕ ಮಹಿಳೆಯರು ಸುಶಿಕ್ಷಿತರು ಸಮಾಜವೊಂದರ ತಾಯಿ ವಿದ್ಯಾವತರಾದರೆ ಮಕ್ಕಳು ತನ್ನಿಂತಾನೇ ಸುಶಿಕ್ಷಿತರಾಗುತ್ತಾರೆ. ಇದು ಬಂಟರಲ್ಲಿ ಮೂಡಿದೆ. ಆದುದರಿಂದಲೇ ಬಂಟರು ಜಗದ್ವ್ಯಾಪಿ ಪಸರಿಸಿಯಶಸ್ಸು ಕಂಡಿದ್ದಾರೆ. ಬಂಟರಲ್ಲಿ ಉದ್ಯಮಶೀಲತೆ ಹೆಚ್ಚಾಗಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ವಿಧ್ಯುಕ್ತವಾಗಿ ಬಂಟರ ಭವನ ಲೋಕಾರ್ಪಣೆಗೈದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನಿಡಿ ಹರಸಿದರು. ನಗ್ರಿಗುತ್ತು ವಿವೇಕ್ ಶೆಟ್ಟಿ ಮತ್ತು ಶ್ರೀಮತಿ ಸಂಧ್ಯಾ ವಿ.ಶೆಟ್ಟಿ ದಂಪತಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ ಮತ್ತು ಒಡಿಯೂರುಶ್ರೀಗಳಿಗೆ ಧಾರ್ಮಿಕ ವಿಧಿವತ್ತಾಗಿ ಭಕ್ತಿಪೂರ್ವಕವಾಗಿಸುಖಾಗಮನ ಬಯಸಿದರು.

ಅತಿಥಿsಗಳಾಗಿ ಸಚಿವ ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮುಂಬಯಿ ಸಂಸದ ಗೋಪಾಲ ಶೆಟ್ಟಿ, ಶಾಸಕರಾದ ಅಭಯಚಂದ್ರಜೈನ್, ಮೊಯ್ದೀನ್ ಬಾವಾ, ಶಾಸಕಿ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೋ, ಐವನ್ ಡಿ.ಸೋಜ, ಕೆನರಾ ಬ್ಯಾಂಕ್ ಕಾರ್ವನಿರ್ವಾಹಕ ನಿರ್ದೇಶಕ ಹರ್ದೀಶ್ ಕುಮಾರ್ ಶೆಟ್ಟಿ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಡಾ| ಪಿ.ವಿ.ಶೆಟ್ಟಿ, ವೇದಿಕೆಯಲ್ಲಿ ಉದ್ಯಮಿಗಳಾದ ಬಿ.ಆರ್.ಶೆಟ್ಟಿ ಅಬುಧಾಬಿ, ಪಿ.ವಿ.ಶೆಟ್ಟಿ ಬೆಳ್ಳೂರು ಪರಾರಿ, ಶಶಿಕಿರಣ್ ಶೆಟ್ಟಿ ಮುಂಬಯಿ, ಡಾ| ಆರ್.ಎನ್ ಶೆಟ್ಟಿ ಹುಬ್ಬಳ್ಳಿ, ಪ್ರಕಾಶ್ ಶೆಟ್ಟಿ, ಸುಧೀರ್ ಶೆಟ್ಟಿ, ಡಾ| ಎ.ಜೆ.ಶೆಟ್ಟಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ| ಎಂ.ಮೋಹನ್ ಆಳ್ವ, ಎ.ಸದಾನಂದ ಶೆಟ್ಟಿ, ಪದ್ಮನಾಭ ಪಯ್ಯಡೆ, ಜಲಂಧರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ರಾಜೇಶ್ ಎಸ್.ಚೌಟ, ಕುಸುಮಾಧರ ಡಿ.ಶೆಟ್ಟಿ, ಸರಸ್ವತಿ ಜಿ.ರೈ, ಕೆ.ಪಿ.ಶೆಟ್ಟಿ ಮೊಡಂಕಾಪುಗೊತ್ತು, ಡಾ| ನಂದ ಕಿಶೋರ್ ಆಳ್ವ ಮಿತ್ತಳಿಕೆ, ರವಿ ಶೆಟ್ಟಿ ಮೂಡಂಬೈಲು, ವಿಶ್ವನಾಥ ಪಿ.ಶೆಟ್ಟಿ, ತಿಮ್ಮಪ್ಪ ನಾೈಕ್, ಸುಜೀರುಗುತ್ತು ಐತಪ್ಪ ಆಳ್ವ, ಎಂ.ಸಿ.ಆರ್. ಶೆಟ್ಟಿ, ಪ್ರಸನ್ನ ಶೆಟ್ಟಿ , ಕೃಷ್ಣಪ್ರಸಾದ್ ಅಡ್ಯಂತಾಯ, ಸಂತೋಷ್ ಶೆಟ್ಟಿ, ಸುರೇರ್ಶ ಆಳ್ವ, ಅಜಿತ್ ಚೌಟ, ಜಗನ್ನಾಥ ಚೌಟ, ಸುರೇಶ್ ರೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಸುಧಾಕರ ಪೂಂಜ, ಪದಾಧಿಕಾರಿಗಳಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಸದಾನಂದ ಡಿ. ಶೆಟ್ಟಿ ರಂಗೋಲಿ, ಶಶಿರಾಜ ಶೆಟ್ಟಿ ಕೊಳಂಬೆ ಕಿರಣ್ ಹೆಗ್ಡೆ ಅನಂತಾಡಿ, ಪ್ರಫುಲ್ಲ ಆರ್. ರೈ ವಿಠಲಕೋಡಿ, ಜಗದೀಶ್ ಶೆಟ್ಟಿ ಇರಾಗುತ್ತು, ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಚಂದ್ರಹಾಸ ರೈ ಬಾಲಾಜಿಬೈಲು, ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಉಪಸ್ಥಿತರಿದ್ದು ವಿವೇಕ್ ಶೆಟ್ಟಿ ಅವರು ಸಂಪ್ರದಾಯಿಕ ತಂಬೂಲ ನೀಡಿದರು ಹಾಗೂ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಮನೆ ನನ್ನದು ಸಮಾಜ ನಮ್ಮದು ಆದಗ ಸಾಮರಸ್ಯದ ಬದುಕು ಸಾಧ್ಯವಾಗುವುದು. ತುಳುನಾಡ ಸಂಸ್ಕøತಿಯ ಮೂಲ ಪುರಷರು ಬಂಟರು. ದೂರದೃಷ್ಟಿಯ ದೊಡ್ಡ ಗುಣ ಇಟ್ಟುಕೊಂಡವರು. ಮುಂಬಯಿಯಂತಹ ನಗರಕ್ಕೆ ಹೋಗಿ ಕಷ್ಟದ ಬದುಕು ಸಾಗಿಸಿ ಇಂದು ಉದ್ಯಮ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಎಷ್ಟೇ ಬೆಳೆದರೂ ತಮ್ಮ ನಾಡನ್ನು ಮರೆತವರಲ್ಲ, ಸಾಹಿತ್ಯ ನಾಡು ನುಡಿಗಳಿಗೂ ಪ್ರೋತ್ಸಾಹ ನೀಡಿದವರು.ಇದಕ್ಕೆ ಬಂಟರು ಪ್ರೇರಕರೂ ಮತ್ತು ಮಾದರಿ ಆಗಿದ್ದಾರೆ. ಬಹುಶಃ ಭೂಮಸೂದೆ ಕಾಯಿದ ತುಳುನಾಡಿಗೆ ವರದಾನವಾಗಿ ಪರಿಣಮಿಸಿದೆ ಅನ್ನಬೇಕು. ಆದುದರಿಂದಲೇ ಬಂಟರು ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎನ್ನಬಹುದು. ಸಂಪ್ರದಾಯಿಕ ಉತ್ಸಹ, ವರ್ಚದ್ದುವುಳ್ಳ ಸ್ವಾಭಾವದ ಬಂಟರು ತುಳುನಾಡಿನ ಸಂಸ್ಕೃತಿಯ ಪ್ರತೀಕರಾಗಿದ್ದು ತುಳುನಾಡ ತಾಯಿಯ ಕಿರೀಟದ ರತ್ನಗಳಾಗಿ ಪ್ರಜ್ವಲಿಸುತ್ತಿರುವುದು ಅಭಿನಂದನೀಯ. ದೂರದೃಷ್ಟಿಯ ದೊಡ್ಡತನ ಹೊಂದಿರುವ ಬಂಟರು ಇನ್ನೂ ಯಶ ಕಾಣಲಿ ಎಂದು ವೀರೇಂದ್ರ ಹೆಗ್ಗಡೆ ಶುಭಕೋರಿದರು.

ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನದಾಸ ಶೆಟ್ಟಿ, ಉದ್ಯಮಿಗಳಾದ ಕಿಶನ್ ಜೆ.ಶೆಟ್ಟಿ, ಸಂತೋಷ್ ಶೆಟ್ಟಿ ನವಿಮುಂಬಯಿ ಮತ್ತಿತರು ಉಪಸ್ಥಿತರಿದ್ದು ಕಳೆದ ಶನಿವಾರ ಸಂಜೆ ಹೊರಕಾಣಿಕೆ, ಶೋಭಾಯಾತ್ರೆ ಮತ್ತು ಬಂಟ ದ್ವಜಾರೋಹಣ ಇತ್ಯಾದಿಗಳೊಂದಿಗೆ ತ್ರಿದಿನಗಳ ಸಂಭ್ರಮ ಆದಿಗೊಂಡಿತು.

ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿsಗಳಿಗೆ ಸ್ವರಣಿಕೆ ಪುಷ್ಪಗುಚ್ಛನೀಡಿ ಗೌರವಿಸಿದರು. ಫರಂಗಿಪೇಟೆ ಬಂಟ ಯುವತಿಯರು ಪ್ರಾರ್ಥನೆಯನ್ನಾಡಿದರು. ಬಿ.ದೇವದಾಸ ಶೆಟ್ಟಿ, ಅಶೋಕ್ ಪಕ್ಕಳ ಮುಂಬಯಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ವಂದನಾರ್ಪಣೆಗೈದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here