Thursday 28th, March 2024
canara news

ಸಂಸ್ಕೃತಿ ಭವನದ ಉದ್ಘಾಟನೆ ಮತ್ತು ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಕರ್ಮಯೋಗ ಪೀಠಾರೋಹಣ

Published On : 06 Nov 2016   |  Reported By : Rons Bantwal


ನವೆಂಬರ್ 3 ಮತ್ತು 4, 2016, ಎಸ್-ವ್ಯಾಸ ವಿಶ್ವವಿದ್ಯಾಲಯದ ಪ್ರಶಾಂತಿಕುಟೀರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾದದ್ದು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಿಂದ. ಇವೆರಡು ದಿನಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಅಧ್ಯಾಪಕ ವರ್ಗದವರಿಗೆ ಹಾಗೂ ಉಳಿದೆಲ್ಲ ಪ್ರಶಾಂತಿಕುಟೀರದ ಸದಸ್ಯರಿಗೆ ಅವಿಸ್ಮರಣೀಯ ಕ್ಷಣಗಳಾಗಿದ್ದವು.

 

ಸಂಸ್ಕೃತಿ ಭವನದ ಉದ್ಘಾಟನೆ - ಯೋಗ ಶಿಕ್ಷಣ, ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ಮುಖವಾಣಿಯಾಗಿ ಸ್ವೀಕರಿಸಿ ಯೋಗಕ್ಕಾಗಿಯೇ ಮುಡಿಪಾಗಿರುವ ಎಸ್-ವ್ಯಾಸ ವಿಶ್ವವಿದ್ಯಾಲಯವು ನಿರಂತರವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ಪ್ರಮುಖ ಯೋಗ ಸಂಸ್ಥೆಗಳಲ್ಲೊಂದು. 2002 ರಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನೆಗಳ ಮೂಲಕ ಯೋಗದ ರಸದೌತಣವನ್ನು ಉಣಬಡಿಸಿದೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅಮೃತಪ್ರಾಯವಾಗಿದೆ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಎಚ್ ಆರ್ ನಾಗೇಂದ್ರರವರು ಪ್ರಶಾಂತಿಕುಟೀರದ ಆವರಣದಲ್ಲಿ ನೂತನ ಸಭಾಮಂಟಪವನ್ನು ಧರ್ಮಸ್ಥಳ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕರಕಮಲಗಳಿಂದ ಉದ್ಘಾಟಿಸಬೇಕೆಂಬ ಸತ್ಸಂಕಲ್ಪದ ಕರೆಯನ್ನು ಮನ್ನಿಸಿ ಇಲ್ಲಿಗೆ ಬಂದಿದ್ದು ನಮ್ಮೆಲ್ಲರ ಸೌಭಾಗ್ಯ.

ನವೆಂಬರ್ 3, 2016 ರಂದು ಸಂಸ್ಕೃತಿಭವನದ ಉಧ್ಘಾಟನೆಯನ್ನು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿತ್ತು. ಅನೇಕ ಪ್ರಮುಖರ ಸಮ್ಮುಖದಲ್ಲಿ ಕಾರ್ಯಕ್ರಮವು ಸುಂದರವಾಗಿ ಮೂಡಿಬಂದಿತು. ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗದ ಅಧ್ಯಕ್ಷರಾದ ಡಾ. ಬಿನ್ನಿ ಸರೀನ್, ಉದ್ಯಮಿಗಳಾದ ಶ್ರೀ ಸುರೇಶ್ ಬಗಾರಿಯ, ಇನ್ನೂ ಅನೇಕ ಮಹನೀಯರ ಉಪಸ್ಥಿತಿಯಲ್ಲಿ ಉಧ್ಘಾಟನಾ ಸಮಾರಂಭ ಸುಸೂತ್ರವಾಗಿ ಸಂಪನ್ನವಾಯಿತು.

ಕರ್ಮಯೋಗಪೀಠ ಅಧಿಷ್ಠಾನ – ಎಸ್ ವ್ಯಾಸ ವಿಶ್ವವಿದ್ಯಾಲಯದಲ್ಲಿ 5 ವಿಭಾಗಗಳೆವೆ; ಯೋಗ ಅಧ್ಯಾತ್ಮವಿಭಾಗ, ಯೋಗ ಮತ್ತು ಜೀವವಿಜ್ಞಾನ ವಿಭಾಗ, ಯೋಗ ಮತ್ತು ಭೌತವಿಜ್ಞಾನ ವಿಭಾಗ, ಯೋಗ ಮತ್ತು ನಿರ್ವಹಣವಿಜ್ಞಾನ ವಿಭಾಗ ಹಾಗೂ ಯೋಗ ಮತ್ತು ಮಾನವಿಕವಿಜ್ಞಾನ ವಿಭಾಗ. ಪ್ರತಿಯೊಂದರಲ್ಲಿ ಪೀಠಗಳನ್ನು ಪ್ರತಿಷ್ಠಾಪಿಸಿ ಅದರಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿಶ್ವವಿದ್ಯಾಲಯದ ಪರಂಪರೆ. ಯೋಗಾಧ್ಯಾತ್ಮ ವಿಭಾಗದಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ರಾಜಯೋಗಗಳೆಂಬ 4 ಪೀಠಗಳಲ್ಲಿ ಒಂದಾದ ಕರ್ಮಯೋಗಪೀಠವನ್ನು ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಸುವ ವಿಶ್ವವಿದ್ಯಾಲಯದ ಪದಾಧಿಕಾರಿಗಳ ಸಂಕಲ್ಪವನ್ನು ಅಂಗೀಕರಿಸಿ ಇಲ್ಲಿಗೆ ಬಂದದ್ದು ಪ್ರೇರಣಾದಾಯಕ.

ನವೆಂಬರ್ 4, 2016 ಶುಕ್ರವಾರದಂದು ಬೆಳಗ್ಗೆ 5 ಗಂಟೆಗೆ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಆಯುಷ್ಯಾಭಿವೃದ್ಧಿಗಾಗಿ ಆಯುಷ್ಯ ಹೋಮವನ್ನು ಆಚರಿಸಲಾಯಿತು, ಪೂರ್ಣಾಹುತಿಯ ವರೆಗೆ ಅವರು ಉಪಸ್ಥಿತರಿದ್ದು ಧರ್ಮಸ್ಥಳದ ಮಂಜುನಾಥೇಶ್ವರನಲ್ಲಿ ಪ್ರಶಾಂತಿಕುಟೀರಕ್ಕೆ ಒಳಿತಾಗಲೆಂಬ ಪ್ರಾರ್ಥನೆ ಸಲ್ಲಿಸಿದರು. ಕರ್ಮಯೋಗದ ಪೀಠಾರೋಹಣದ ಸಮಾರಂಭವು ಬೆಳಗ್ಗೆ 8 ರಿಂದ ಯೋಗವಿನಾಯಕ ಮಂದಿರದ ಆವರಣದಿಂದ ಶುರುವಾಯಿತು. ವಿಶ್ವವಿದ್ಯಾಲಯದ ಎಲ್ಲ ಸದಸ್ಯರೂ ಡಾ|| ಡಿ ವೀರೇಂದ್ರ ಹೆಗ್ಗಡೆಯವರನ್ನು ಪೂರ್ಣಕುಂಭದೊಂದಿಗೆ ವೇದಘೋಷಪೂರ್ವಕವಾಗಿ ಸಂಸ್ಕೃತಿಭವನದ ವರೆಗೆ ಸ್ವಾಗತಿಸಿದರು. ಡಾ. ಎಚ್ ಆರ್ ನಾಗೇಂದ್ರರವರು ಕರ್ಮಯೋಗಪೀಠದ ಪರಿಚಯ ಮತ್ತು ಹಿನ್ನೆಲೆಯನ್ನು ಸವಿಸ್ತಾರವಾಗಿ ವಿವರಿಸಿದರು. ಕರ್ಮಯೋಗಪೀಠಾಧಿಷ್ಠಾನವನ್ನು ಭಾರತೀಯ ಸಂಸ್ಕೃತಿಯ ಅನುಸಾರವಾಗಿ ಪುಷ್ಪವೃಷ್ಟಿಯೊಂದಿಗೆ, ಸುಮಂಗಲಿಯರ ಸುಮಧುರ ಸಂಗೀತದೊಂದಿಗೆ ಆರತಿಯ ಮೂಲಕ ನೆರೆವೇರಿಸಲಾಯಿತು. ಶ್ರೀ ಹೆಗ್ಗಡೆಯವರ ಸಾಮಾಜಿಕ ಧಾರ್ಮಿಕ ಕಳಕಳಿಯನ್ನು ಬಿಂಬಿಸುವ ಗೀತಸಪ್ತಕವೊಂದನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ರಾಮಚಂದ್ರ ಭಟ್ ರವರು ರಚಿಸಿ ಹಾಡಿಸಿದ್ದು ರೋಚಕವಾಗಿತ್ತು. ಪೀಠಾರೋಹಣದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ, ಕೇಂದ್ರದ ಮಂತ್ರಿಗಳಾದ ಶ್ರೀ ನರೇಂದ್ರ ಸಿಂಗ್ ತೋಮರ್, ಕುಲಾಧಿಪತಿಗಳಾದ ಡಾ. ಎಚ್ ಆರ್ ನಾಗೇಂದ್ರ, ಕುಲಪತಿಗಳಾದ ಪೆÇ್ರ. ರಾಮಚಂದ್ರ ಜಿ ಭಟ್, ಉಪಕುಲಾಧಿಪತಿಗಳಾದ ಪೆÇ್ರ. ಕೆ ಸುಬ್ರಹ್ಮಣ್ಯಮ್ ಮತ್ತು ಕುಲಸಚಿವರಾದ ಡಾ. ಸಂಜೀಬ್ ಪಾತ್ರ ಇವರುಗಳು ಉಪಸ್ಥಿತರಿದ್ದರು.

ಡಾ| ವೀರೇಂದ್ರ ಹೆಗ್ಗಡೆ ಜಿ ಯವರ ಶುಭಾಶೀರ್ವಾದವು ಅವರ ಜೀವನದ ಅನೇಕ ಒಳಹಂದರಗಳನ್ನು ಬಿಚ್ಚಿಟ್ಟು ವಿದ್ಯಾರ್ಥಿಗಳ ಜೀವನಕ್ಕೊಂದು ಮಾರ್ಗದರ್ಶಿ ದಿಕ್ಸೂಚಿಯಾದದ್ದು ಪ್ರೇರಣಾಪ್ರಸಂಗ. ಕರ್ಮಯೋಗದ ಸಾಕಾರಮೂರ್ತಿಗಳಾದ ಅವರ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೆ! ಈ ಶುಭಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಸಂದೇಶ ಸಮಯೋಚಿತವಾಗಿತ್ತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here