Thursday 25th, April 2024
canara news

ತುಳುನಾಡಿಗರ ಭಾವನೆಗಳ ಸಂಗಮ ವಿಶ್ವ ತುಳುವೆರೆ ಆಯನೊ- ಕ್ಯಾ. ಗಣೇಶ್ ಕಾರ್ಣಿಕ್

Published On : 07 Nov 2016   |  Reported By : Rons Bantwal


ಬದಿಯಡ್ಕ: ಕಾಸರಗೋಡು ಕರ್ನಾಟಕದಿಂದ ವಿಭಜಿಸಿ ಹೋಗಿದ್ದರೂ ತುಳುನಾಡಿನ ಭಾವನಾತ್ಮಕ ಹಾಗೂ ಸಾಂಸ್ಕøತಿಕ ಸಂಬಂದವನ್ನು ಬೆಸೆಯುವಲ್ಲಿ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಿದೆ. ತುಳುವೇಶ್ವರದಿಂದ ಹೊರಟ ತುಳುನಾಡು ತಿರ್ಗಾಟ ಯಾತ್ರೆ ವಿವಿಧ ಮತೀಯ ಧಾರ್ಮಿಕ ಕ್ಷೇತ್ರಗಳನ್ನು ಭೇಟಿನೀಡಿ ಸೌಹಾರ್ದತೆಯನ್ನು ಉಂಟುಮಾಡುತ್ತಿರುವುದು ಕಾರ್ಯಕ್ರಮಕ್ಕೆ ಕನ್ನಡಿಹಿಡಿದಂತಾಗಿದೆ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.

ಅವರು ಡಿಸೆಂಬರ್ 9ರಿಂದ 13ರ ತನಕ ನಡೆಯುವ ವಿಶ್ವ ತುಳುವೆರೆ ಆಯನೊದ ಕಛೇರಿಯಲ್ಲಿ ಪ್ರಾಥಮಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯನ್ನು ಅಬ್ದುಲ್ ರಹಿಮಾನ್ ಸುಬ್ಬಯಕಟ್ಟೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಆಯನೊ ಸಂಘಾಟಕರಾದ ನರೇಂದ್ರ ಬಿ.ಎನ್ ಬದಿಯಡ್ಕ, ಮಹಮ್ಮದಲಿ ಪೆರ್ಲ, ಮಾಹಿನ್ ಕೇಳೋಟ್, ಕುಮಾರ್ ಪೈಸಾರಿ, ಪ್ರೊ. ಶ್ರೀನಾಥ್ ಕಾಸರಗೋಡು, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಶಿವದಾಸ್ ಸಿ. ಎಚ್, ಭಾಸ್ಕರ ಪಿಲಾಂಕಟ್ಟೆ, ರಾಮಚಂದ್ರ ಭಟ್ ದರ್ಮತಡ್ಕ, ಶಂಕರ ಸ್ವಾಮಿಕೃಪ, ರಾಮಚಂದ್ರ ಬದಿಯಡ್ಕ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು. ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಸ್ಕರ ಕುಂಬಳೆ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here