Friday 29th, March 2024
canara news

ಬಹರೇನ್ ಬಿಲ್ಲವಾಸ್ ದೀಪಾವಳಿ ಸಂಭ್ರಮಾಚರಣೆ

Published On : 07 Nov 2016   |  Reported By : Rons Bantwal


ಅನಿವಾಸಿ ಬಿಲ್ಲವರ ಒಕ್ಕೂಟವಾದ ಬಹರೇನ್ ಬಿಲ್ಲವಾಸ್ ದೀಪಾವಳಿ ಸಂಭ್ರಮಾಚರಣೆಯನ್ನು ಬಹಳ ಅದ್ದೂರಿಯಾಗಿ ಸಮುದ್ರ ತಡಿಯ ಈಜು ಕೊಳದ ಸುಂದರ ಪರಿಸರವಾದ ಸೀ ಸೈಡ್ ಗಾರ್ಡನ್ ತುಭ್ಲ್ಲಿ ಯಲ್ಲಿ ಆಯೋಜಿಸಲ್ಪಟ್ಟಿತ್ತು. ಸುಮಾರು 250 ಸದಸ್ಯರು ಹಾಗು ಅತಿಥಿಗಳು ಭಾಗವಹಿಸಿದ್ದರು.

ಈ ಸಂಭ್ರಮಾಚರಣೆಯ ಪ್ರಮುಖ ಆಕರ್ಷಣೆಯಾಗಿ ದೀಪಾವಳಿಯ ಸಾಂಪ್ರದಾಯಿಕ ರೀತಿಯ ಆಹಾರ ಉತ್ಸವವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಸುಮಾರು 50 ಸದಸ್ಯರು ಸುಮಾರು 65 ವಿವಿಧ ಬಗೆಯ ಸ್ವಾದಿಷ್ಟಭರಿತವಾದ ಆಹಾರ ತಿನಸುಗಳನ್ನು ತಾವು ಮನೆಯಲ್ಲಿ ತಯಾರಿಸಿ ತಂದು ಪ್ರದರ್ಶಿಸಲಾಯಿತು.

ಗಣ್ಯರ ಉಪಸ್ಥಿತಿಯಲ್ಲಿ ದೀಪಬೆಳಗಿಸಿ ಉದ್ಘಾಟಿಸಲ್ಪಟ್ಟ ಬಳಿಕ ಎಲ್ಲರೂ ಅದರ ಸವಿರುಚಿ ಸವಿದರು.

ಮನೋರಂಜನೆಯ ಭಾಗವಾಗಿ ವಿವಿಧ ಬಗೆಯ ನೃತ್ಯಗಳು ಹಾಗು ಸಂಗೀತ ರಸಮಂಜರಿಯನ್ನು ಹಮ್ಮಿಕೊಳ್ಳಲಾಗಿತ್ತು.

ಸ್ಥಳದಲ್ಲಿಯೇ ತಯಾರಿಸಿ ವಿತರಿಸಲಾದ ವಿವಿಧ ಬಗೆಯ ಖಾದ್ಯ, ಸಿಹಿ ಹಾಗು ಕರಿದ ಆಹಾರ ತಿನಸುಗಳು ಎಲ್ಲರ ಪ್ರಶಂಶೆಗೆ ಪಾತ್ರವಾಯಿತು. ದೀಪಾವಳಿಯ ಸಂಭ್ರಮಾಚರಣೆಯ ಭಾಗವಾಗಿ ವಿವಿಧ ಬಗೆಯ ಸಿಡಿ ಮದ್ದಿನ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ಆಹಾರ ಉತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೂ ಹಾಗು ವಿವಿಧ ನೃತ್ಯಗಳಲ್ಲಿ ಭಾಗವಹಿಸಿದವರಿಗೆ ಬಹರೇನ್ ಬಿಲ್ಲವಾಸ್ ನ ಅಧ್ಯಕ್ಷರಾದ ರಾಜಕುಮಾರ್ ಗೌರವ ಉಡುಗೊರೆ ನೀಡಿ ಸನ್ಮಾನಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here