Friday 29th, March 2024
canara news

ನ.12: ಗೋರೆಗಾಂವ್ ಗ್ರಂಥಾಯನದಿಂದ ನವನೋಟ ಪ್ರಸ್ತುತಿ

Published On : 09 Nov 2016   |  Reported By : Rons Bantwal


ಮುಂಬಯಿ, ನ.09: ಗ್ರಂಥಾಯನ ಗೋರೆಗಾಂವ್ ಕರ್ನಾಟಕ ಸಂಘದ ಸಂಶೋಧನಾ ಮತ್ತು ಪ್ರಕಟಣಾ ವಿಭಾಗವು ಇದೇ ನವೆಂಬರ್ 12ನೇ ಶನಿವಾರ ಅಪರಾಹ್ನ 4.30 ಗಂಟೆಗೆ ಗೋರೆಗಾಂವ್ ಪಶ್ಚಿಮದ ಅರೇರೋಡ್, ಅಂಬಾಬಾಯಿ ದೇವಸ್ಥಾನದ ಪಾಶ್ವದಲ್ಲಿರುವ ಕೇಶವ ಗೋರೆ ಸಭಾಗೃಹದಲ್ಲಿ `ನವನೋಟ'ಎಂಬ ವಿನೂತನ ಕಾರ್ಯಕ್ರಮವನ್ನು ಸಂಯೋಜಿಸಿದೆ.

ಚೈತನ್ಯ ಶೀಲ ಸಂಘಟಕಿ ಉಷಾ ಎಸ್.ಶೆಟ್ಟಿ ನವನೋಟದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿüಯಾಗಿ ಮುಂಬಯಿಯ ಹಿರಿಯ ಲೇಖಕಿ ಶಾಂತ ವಿ.ಶೆಟ್ಟಿ, ಯುವ ಸಂಘಟಕ ಗಣೇಶ್ ಕುಮಾರ್, ಹಿರಿಯ ಉತ್ಸಾಹಿ ಕಾರ್ಯಕರ್ತೆ ಸುಮಿತ್ರಾ ಬಿ.ಗುಜರನ್ ಆಗಮಿಸಲಿದ್ದಾರೆ. ಲೇಖಕಿ ಶಕುಂತಲಾ ಅರ್. ಪ್ರಭು ಆಶಯ ಭಾಷಣ ನೀಡಲಿದ್ದಾರೆ. ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಶುಭನುಡಿ ಗಳನ್ನಾಡಲಿದ್ದು ಗ್ರಂಥಾಯನದ ನಿರ್ದೇಶಕಿ ಅಪರ್ಣ ವಿ.ರಾವ್ ಪ್ರ್ರಸ್ತಾವನೆ ನೀಡಲಿರುವರು.

ನ್ಯಾಯದ ತಿಮಿರ ಗೋಷ್ಠಿಯಲ್ಲಿ ಸುಮಂಗಲ ಜಿ.ಶೆಟ್ಟಿ-ಪ್ರಗತಿಪರ ಬಂಡಾಯದ ತನ್ನಿಮಾನಿಗ, ರಘುನಾಥ್ ಜಿ.ಹಳೆಯಂಗಡಿ-ಸಮಾನತೆಯ ಗುಡುಗು ಮಾಯಂದಾಲ್, ರಂಜನಿ ರಮೇಶ್ ಮೊೈಲಿ- ಅಮಾನುಶತೆಗೆ ಸಿಡಿದ ಕಲ್ಲುಟ್ಟಿ, ಮಹಿಳಾ ಸ್ವಾಭಿಮಾನದ ಸಿರಿ-ಸುಗಂಧಿ ಶ್ಯಾಮ್ ಹಳೆಯಂಗಡಿ ಉಪನ್ಯಾಸ ನೀಡಲಿದ್ದಾರೆ. ನೆನಹಿನ ನಮನ ಗೋಷ್ಠಿಯಲ್ಲಿ ರಜನಿ ವಿ. ಪೈ-ವೀರ ನಾರಿ ಕಿತ್ತೂರು ಚೆನ್ನಮ್ಮ, ಎಚ್.ಪರಸಪ್ಪ-ಸ್ವಾತಂತ್ರ್ಯ ಸೇನಾನಿ ಭಾಯಿ ದಾಮೋದರ ಬಂಗೇರ, ವಸುಧ ಅರ್. ನಾಯಕ್- ಮಿನುಗುತಾರೆ ಕಲ್ಪನ, ಕಟ್ಪಾಡಿ ಮೀರಾ ಕೃಷ್ಣ-ನಟ ಸಾರ್ವಭೌಮ ಡಾ| ರಾಜ್ ಕುಮಾರ್ ಅವರುಗಳ ಬಗ್ಗೆ ಮಾತನಾಡಲಿದ್ದಾರೆ. ನಮನದ ನುಡಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ಪಯ್ಯಾರು ರಮೇಶ್ ಶೆಟ್ಟಿ, ಜಿ.ಟಿ ಆಚಾರ್ಯ, ರವಿ ರಾ.ಅಂಚನ್ ಮಾತನಾಡಲಿದ್ದಾರೆ.

ಜನಪ್ರೀಯ ಹಾಡುಗಳ ವೃಂದಗಾನದಲ್ಲಿ ವೃಂದಗಾನದಲ್ಲಿ ಬಿಲ್ಲವರ ಎಸೋಸಿಯೇಶನ್-ಗೋರೆಗಾಂವ್ ಶಾಖೆಯ ವಿಶ್ವನಾಥ್ ಪೂಜಾರಿ ತಂಡ, ಆರ್‍ಎಸ್‍ಬಿ ಅಸೋಸಿಯೇಶನ್‍ನ ರಮಾ ನಾಯಕ್ ತಂಡ, ಬಿಲ್ಲವರ ಅಸೋಸಿಯೇಶನ್ ಭಯಂದರ್ ಶಾಖೆಯ ಸದಾನಂದ ಎ.ಸುವರ್ಣ ತಂಡ, ಚಾರ್‍ಕೋಪ್ ಕನ್ನಡ ಬಳಗದ ರಾಜೀವಿ ಕೋಟ್ಯಾನ್ ತಂಡ, ಬಿಲ್ಲವರ ಅಸೋಸಿಯೇಶನ್‍ನ ಮೀರಾರೋಡ್ ಸ್ಥಳೀಯ ಸಮಿತಿಯು ಲೀಲಾ ಗಣೇಶ್ ಕಾರ್ಕಳ್ ತಂಡ, ವರದಸಿದ್ಧಿ ವಿನಾಯಕ ಭಜನಾ ಮಂಡಳಿಯ ಜ್ಯೋತಿ ಪಾಟ್ಕರ್ ತಂಡ, ವೀರಕೇಸರಿ ಕಲಾ ವೃಂದದ ಮಮತಾ ಭಟ್ ತಂಡಗಳು ಭಾಗವಹಿಸಲಿದೆ.

ಗೋರೆಗಾವ್ ಕರ್ನಾಟಕ ಸಂಘದ ಯುವ ವಿಭಾಗದ ಸುಚಲತ ಪೂಜಾರಿ ತಂಡ, ಮಹಿಳಾ ವಿಭಾಗದ ಸೀಮಾ ಕುಲಕರ್ಣಿ ತಂಡ ಮತ್ತು ರಂಗಸ್ಥಳದ ವಾಣಿ ಶೆಟ್ಟಿ ತಂಡಗಳು ಗೀತವಂದನಾ ನಡೆಸಲಿವೆ. ಕಾರ್ಯಕ್ರಮದ ಸಂಚಾಚನೆಯನ್ನು ಲಲಿತಾ ಪ್ರಭು ಅಂಗಡಿ, ಹೇಮಾ ಸದನಂದ ಅಮೀನ್, ಅಕ್ಷತಾ ದೇಶ್‍ಪಾಂಡೆ, ಗುಣೋದಯ ಐಲ್ ನಿರ್ವಹಿಸಲಿದ್ದಾರೆ.

ಮಹಾನಗರದಲ್ಲಿನ ಸರ್ವ ತುಳುಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವ ಂತೆ ಗೌ| ಪ್ರ| ಕಾರ್ಯದರ್ಶಿ ಜಯಕರ ಡಿ.ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here