Friday 19th, April 2024
canara news

ಬಂಟರ ಭವನದಲ್ಲಿ ರಂಗೇರಿದ ಹದಿನಾಲ್ಕನೇ ಚಿಣ್ಣರ ಬಿಂಬದ ವಾರ್ಷಿಕೋತ್ಸವ

Published On : 12 Nov 2016   |  Reported By : Rons Bantwal


ಚಿಣ್ಣರಬಿಂಬ ಸಾಂಸ್ಕೃತಿಕ ಲೋಕದ ಕಾಮಧೇನು :ಕೃಷ್ಣ ಪಾಲೇಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.12: ಚಿಣ್ಣರಬಿಂಬ ಕರ್ನಾಟಕದ ಜನತೆಯ ಹೆಮ್ಮೆಯ ಸಂಸ್ಥೆ ಆಗಿದ್ದು, ಮುಂಬಾದೇವಿಯ ಅನುಗ್ರಹಕ್ಕೆ ಪಾತ್ರವಾದ ಹಿರಿಮೆಯ ಸಂಸ್ಥೆಯಾಗಿದೆ. ಈ ಸಂಸ್ಥೆ ಕರ್ನಾಟಕವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಬೆಳೆಸುತ್ತಿರುವುದು ಹೆಮ್ಮೆಯ ವಿಚಾರ. ಮಕ್ಕಳನ್ನು ಇಂಟರ್‍ಕಾಮ್ ಇಂಟರ್‍ನೆಟ್‍ನಿಂದ ದೂರವಿರಿಸಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿ ಕೊಳ್ಳಲು ಶ್ರಮಿಸುತ್ತಿರುವ ರಾಷ್ಟ್ರದ ಏಕೈಕಸÀಂಸ್ಥೆ ಎನ್ನಲು ಅಭಿಮಾನ ಆಗುತ್ತದೆ. ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಸಂಸ್ಕೃತಿ ಸಂಪ್ರದಾಯದ ಉಳುವಿಗೆ ಚಿಣ್ಣರ ಬಿಂಬ ಮಾದರಿ ಸಂಸ್ಥೆಯಾಗಿದೆ. ಪ್ರಸಕ್ತ ಜನಜೀವನ ರೋಗಾಗ್ರಸ್ಥವಾಗುತ್ತಿರುವುದು ಶೋಚನೀಯ. ಇದನ್ನು ತಡೆದು ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಚಿಣ್ಣರ ಬಿಂಬದ ಶ್ರಮ ಅನನ್ಯವಾಗಿದೆ. ಈ ಸಂಸ್ಥೆ ರಾಷ್ಟ್ರವಾಪಿ ವಿಸ್ತಾರಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಈ ಸಂಸ್ಥೆ ಆದರಣೀಯವಾಗಲಿ ಎಂದು ಕರ್ನಾಟಕ ರಾಜ್ಯದ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ತಿಳಿಸಿದರು.

 

 

ಇಂದಿಲ್ಲಿ ಶನಿವಾರ ಬೆಳಿಗ್ಗೆ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಚಿಣ್ಣರ ಬಿಂಬ ಸಂಸ್ಥೆಯು ಸಂಭ್ರಮಿಸಿದ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ತುಳಸಿ ಗಿಡಕ್ಕೆ ಬತ್ತಿಯನ್ನಿರಿಸಿ ಸಾಂಘಿಕವಾಗಿ ಚಾಲನೆಯನ್ನಿತ್ತು ಕೃಷ್ಣ ಜೆ.ಪಾಲೇಮಾರ್ ಮಾತನಾಡಿದರು.


ಮುಂಬಯಿ ಬೋರಿವಿಲಿ ಲೋಕಸಭಾ ಸಂಸದ ಗೋಪಾಲ ಸಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ವಾಸ್ತು ಪಂಡಿತ ಚಂದ್ರಶೇಖರ ಗುರೂಜಿ, ಗೌರವ ಅತಿಥಿüಗಳಾಗಿ ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮಿತಿ ಕಾರ್ಯಧ್ಯಕ್ಷ ಜಯರಾಮ ಎನ್.ಶೆಟ್ಟಿ, ವಿ.ಕೆ ಸಮೂಹದ ಕಾರ್ಯಧ್ಯಕ್ಷ ಕರುಣಾಕರ ಎಂ.ಶೆಟ್ಟಿ, ಮೊಗವೀರ ಬ್ಯಾಂಕ್‍ನ ಉಪಕಾರ್ಯಧ್ಯಕ್ಷ ಸುರೇಶ್ ಆರ್.ಕಾಂಚನ್, ಪೆಸ್ಟ್‍ಮೊರ್ಟಮ್ ಸಂಸ್ಥೆಯ ಕಾರ್ಯಧ್ಯಕ್ಷ ಜೆ.ಪಿ ಶೆಟ್ಟಿ ಉಪಸ್ಥಿತರಿದ್ದರು.

ನಮ್ಮ ಮಕ್ಕಳಲ್ಲಿ ಸಂಬಂಧಗಳು ಮರೆಯಾಗುತ್ತಿದ್ದು, ಸಾಂಘಿಕ ಜೀವನ ಕುಂಠಿತವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅಜ್ಜಅಜ್ಜಿ, ಮಾತಾಪಿತರು ಇರುವ ಮನೆಗೆ (ಅಜ್ಜಅಜ್ಜಿ ಇತ್ತಿನ ಇಲ್ಲಾಗ್ ಪೆÇಣ್ಣು ಇಜ್ಜಿ)ಮದುವೆಯಾಗಿ ಹೋಗಲೂ ಹಿಂದೇಟು ಹಾಕುವ ಮಟ್ಟಿಗೆ ನಾವು ಬಂದಿದ್ದೇವೆ ಎನ್ನುವುದು ಶೋಚನೀಯ ವಿಚಾರ ಎಂದೂ ಪಾಲೇಮಾರ್ ಖೇದವ್ಯಕ್ತ ಪಡಿಸಿದರು.

ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಚಿಣ್ಣರ ಪ್ರವರ್ತಕ ಆಗಿದ್ಡಾರೆ. ಚಿಣ್ಣರ ಬಿಂಬ ಸಾಂಸ್ಕೃತಿಕ ಸೇತುವೆ ಆಗಿದ್ದು ಅದು ತನ್ನ ಸೇವಾಪ್ರಸಿದ್ಧಿಯನ್ನು ಸ್ವಂತಿಕೆಯಿಂದ ರೂಪಿಸಿದೆ. ಇಡೀ ಪ್ರಪಂಚ ಜಾಗತೀಕರಣಕ್ಕೆ ಸ್ಪಂದಿಸಿದ್ದು ಇಂಗ್ಲೀಷ್ ಭಾಷೆ ಬದುಕಿನ ಭಾಷೆ ಆಗಿದೆ. ಆದರೆ ಪ್ರಾದೇಶಿಕ ಮಾತೃಭಾಷೆಯ ಉಳಿವು ನಮ್ಮ ಮಕ್ಕಳಲ್ಲಿ ಅಡಗಿದೆ. ಇದನ್ನು ಜಾರಿಯಲ್ಲಿರಿಸಲು ಚಿಣ್ಣರ ಬಿಂಬದ ಶ್ರಮ ಗಣನೀಯ ಮತ್ತು ಗಮನೀಯವಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಮಹಿಳೆಯರನ್ನು ಚಿಣ್ಣರೊಂದಿಗೆ ಜಾಸ್ತಿಯಾಗಿ ಕೂಡಿಸಿದ್ದಲ್ಲಿ ಸಂಸ್ಕೃತಿ ತನ್ನೀತ್ತಾನೆ ಬೆಳೆಯಲು ಸಾಧ್ಯ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಗೋಪಾಲ ಶೆಟ್ಟಿ ಆಶಯ ವ್ಯಕ್ತಪಡಿದರು.

ಚಂದ್ರಶೇಖರ ಗುರೂಜಿ ಮಾತನಾಡಿ ಚಿಣ್ಣರ ಬಿಂಬ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ. ಸಂಸ್ಕಾರ ಸ್ಪಂದನೆಯಿಂದ ಶ್ರೇಷ್ಠ ನಾಗರಿಕರಾಗಲು ಸಾಧ್ಯ. ಇದನ್ನು ಮಕ್ಕಳಲ್ಲಿ ರೂಪಿಸಲು ಚಿಣ್ಣರ ಬಿಂಬ ಫಲಪ್ರದವಾಗಿದೆ. ಚಿಣ್ಣರಿಗೆ ಸ್ವರ್ಗದ ಮಾರ್ಗ ತೋರಿಸುವ ಪ್ರಯತ್ನದಲ್ಲಿ ಚಿಣ್ಣರ ಬಿಂಬ ಕಾರ್ಯ ನಿರ್ವಾಹಿಸುತ್ತಿರುವುದು ಅಭಿನಂದನೀಯ ಎಂದು ಎಲ್ಲಾ ಚಿಣ್ಣರಿಗೆ ಶ್ಲಾಘನೀಯ ನುಡಿಗಳನ್ನಾಡಿದರು.

ಚಿಣ್ಣರ ಸಂತಸವನ್ನು ತಿಳಿಸಲು ಶಬ್ದಗಳಿಲ್ಲದ ಶುಭಾವಸರ ಇದಾಗಿದೆ. ಚಿಣ್ಣರ ಪಾಲಿನ ಸಂಭ್ರಮೋತ್ಸವ ಇದಾಗಿದೆ. ಸಂಸ್ಕೃತಿ ಮನೆಯಿಂದ ಮೂಡುತ್ತಿದೆ. ಇಲ್ಲಿಂದ ಮಕ್ಕಳ ಸಂಪ್ರದಾಯ ಬೆಳೆಸಿಕೊಳ್ಳುವುದು ವಾಡಿಕೆ. ಇದನ್ನು ಭಂಡಾರಿ ಪರಿವಾರ ಚಿಣ್ಣರ ಬಿಂಬದ ಮೂಲಕ ತೋರ್ಪಡಿಸಿದೆ. ಇಂತಹ ಸಾಧನೆ ಜಗತ್ತಿನ ಯಾವುದೇ ಸಂಸ್ಥೆಯಲ್ಲಿ ಇರದು ಎಂದು ಚಿಣ್ಣರಿಗೆ ನಲ್ಮೆಯ ಮಾತುಗಳನ್ನಾಡಿ ಜಯರಾಮ ಶೆಟ್ಟಿ ಶುಭಾರೈಸಿದರು.

ಗುಣಮಟ್ಟದ ಸಂಸ್ಕೃತಿ ರೂಪಿಸುವಲ್ಲಿ ಚಿಣ್ಣರ ಬಿಂಬ ಯಶಸ್ವೀ ಕಂಡಿದೆ. ರಾಷ್ಟ್ರದ ಒಳ್ಳೆಯ ಪ್ರಜೆಗಳಾಗಲು ಈ ಸಂಸ್ಥೆಯ ಶ್ರಮ ಸ್ತುತ್ಯುರ್ಹ. ಈ ಸಂಸ್ಥೆಯ ಲಾಭ ಪಡೆದು ಸಮಾಜದ ಋಣ ತೀರಿಸುವಲ್ಲಿ ಪಾಲಕರು ಮತ್ತು ಮಕ್ಕಳು ಮರೆಯಬಾರದು. ಸಂಸ್ಕೃತಿಯ ಪ್ರತೀಕವಾಗಿ ಸಂಸ್ಥೆ ಬೆಳೆದು ಮಕ್ಕಳನ್ನು ಬೆಳಗಿಸಲಿ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.

ಮುಂಬಯಿ ನಗರದಲ್ಲಿ ಇಷ್ಟು ದೊಡ್ಡ ಸಂಸ್ಥೆ ಬೆಳೆಸಿ ಪೆÇೀಷಿ ಬರುವುದು ಪ್ರಶಂಸನೀಯ. ಚಿಣ್ಣರ ಬಿಂಬದ ಬಗ್ಗೆ ಸರಕಾರಗಳು ಕನಿಕರ ತೋರ್ಪಡಿಸಬೇಕಾಗಿದೆ. ಚಿಣ್ಣರ ಬಿಂಬದ ಗೌರವ ರಾಷ್ಟ್ರದ ಗೌರವವಾಗಿದೆ. ಶ್ರೀ ಮಹಿಷಾ ಮರ್ದಿನಿ ದೇವಿ ಚಿಣ್ಣರ ಬಿಂಬ ಪರಿವಾರಕ್ಕೆ ಲಕ್ಷಾಂತರ ಚಿಣ್ಣರನ್ನು ಒಗ್ಗೂಡಿಸಲಿ ಎಂದು ಸುರೇಶ್ ಕಾಂಚನ್ ಆಶಯ ವ್ಯಕ್ತ ಪಡಿಸಿದರು.

ಮುಂಬಯಿಗರ ಸಹಯೋಗದಲ್ಲಿ ಈ ಸಂಸ್ಥೆ ಇಷ್ಟೊಂದು ಹೆತ್ತರಕ್ಕೆ ಬೆಳೆದು ಸಂಸ್ಕೃತಿಯ ಪೆÇೀಷಣೆಗೆ ನೆರಳಾಗಿ ನಿಂತಿದೆ. ಯಾರ ಕನಿಕರದಿಂದಲೂ ನಮ್ಮ ಸಂಸ್ಥೆಗೆ ರಾಜ್ಯೋತ್ಸವ ಪುರಸ್ಕಾರ ಬೇಕಾಗಿಲ್ಲ. ಪ್ರಶಸ್ತಿಗಳನ್ನು ಕೇಳಿ ಪಡೆಯುವ ಪ್ರಮೇಯವೂ ನಮಗಿಲ್ಲ. ನಮ್ಮ ಸಾಧನೆಯನ್ನು ಮನವರಿಸಿ ಮುಂದೆ ರಾಷ್ಟ್ರೀಯ ಗೌರವವು ನಮಗೆ ಒಲಿಯಲಿವೆ ಎನ್ನುವ ಆಶಯ ನಮ್ಮಲ್ಲಿದೆ. ಆದರೆ ಬಹುತೇಕವಾಗಿ ಕನ್ನಡಾಂಭೆಯ ಸೇವೆಯಲ್ಲಿ ಸಕ್ರೀಯರಾಗಿಸಿ ಕೊಂಡ ಈ ಸಂಸ್ಥೆಗೆ ಕರ್ನಾಟಕ ಸರಕಾರದ ಪೆÇ್ರೀತ್ಸಾಹವಂತೂ ನಾವು ಆಶಿಸುತ್ತಿದ್ದೇವೆ ಎಂದು ಆಶಯನುಡಿಗಳನ್ನಾಡಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಬಿ.ಭಂಡಾರಿ ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಸ್ಥಾಪಕ ಕಾರ್ಯಾಧ್ಯಕ್ಷೆ ಕು| ಪೂಜಾ ಪ್ರಕಾಶ್ ಭಂಡಾರಿ, ಮುಖ್ಯ ಸಂಚಾಲಕ ಸತೀಶ್ ಸಾಲ್ಯಾನ್, ಜಯಪ್ರಕಾಶ್ ಶೆಟ್ಟಿ, ವಿಜಯ್ ಕೋಟ್ಯಾನ್, ಜಗದೀಶ್ ರಾವ್, ಸೀತಾರಾಮ ಶೆಟ್ಟಿ, ಸುಮಿತ್ರಾ ದೇವಾಡಿಗ, ಶೋಭಾ ಶೆಟ್ಟಿ, ವಿನಯ ಶೆಟ್ಟಿ, ಗೀತಾ ಹೆರಳ ಆಸೀನರಾಗಿದ್ದರು.

ಚಿಣ್ಣರ ಬಿಂಬದ ಆಡಳಿತ ವಿಶ್ವಸ್ಥ ಸುರೇಂದ್ರಕುಮಾರ್ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಹೆಮ್ಮರವಾಗಿ ಬೆಳೆದು ನೆರಳು ನೀಡುವ ಆಶ್ರಯದಾತ ಸಂಸ್ಥೆ ಚಿಣ್ಣರ ಬಿಂಬ ಆಗಿದೆ. ಪಾಶ್ಚತ್ಯ ಸಂಸ್ಕೃತಿ ಮುಕ್ತ ಸಂಪ್ರದಾಯ. ಆಚರಣೆ, ಬಾಳಿಗೆ ಈ ಸಂಸ್ಥೆ ಮಕ್ಕಳಿಗೆ ಪ್ರೇರಣೆ ಆಗಿದೆ. ವೈಜಾ ್ಞನಿಕ ಹಿನ್ನಲೆಯಿಂದ ಶಿಬಿರದ ಮೂಲಕ ಚಿಣ್ಣರಿಗೆ ಸದ್ಪ್ರಜೆಗಳಾಗಲು ಪೆÇ್ರೀತ್ಸಾಹಿಸುವ ಸಂಸ್ಥೆಯಾಗಿದೆ ಎಂದರು.

ಸಮಾರಂಭದಲ್ಲಿ ಚಿಣ್ಣರ ಬಿಂಬದ ಕಾರ್ಯಾಧ್ಯಕ್ಷೆ ಕು| ನೈನಾ ಪ್ರಕಾಶ್ ಭಂಡಾರಿ, ವಿಶ್ವಸ್ಥ ಮಂಡಳಿ ಸದಸ್ಯೆ ರೇಣುಕಾ ಪಿ.ಭಂಡಾರಿ, ಭಾಸ್ಕರ್ ಶೆಟ್ಟಿ ತಾಳಿಪಾಡಿ, ಕೇಂದ್ರ ಕಚೇರಿ ಸಂಚಾಲಕಗಳಾದ ತೋನ್ಸೆ ಸಂಜೀವ ಪೂಜಾರಿ, ಕಯ್ಯಾರು ರಮೇಶ್ ಡಿ.ರೈ ಸೇರಿದಂತೆ ಚಿಣ್ಣರ ಬಿಂಬದ ಪದಾಧಿಕಾರಿಗಳು, ನೂರಾರು ಚಿಣ್ಣರು, ಪೆÇೀಷಕರು ಉಪಸ್ಥಿತರಿದ್ದು ಪೆÇ್ರೀತ್ಸಾಹಕರುಗಳಾದ ಎರ್ಮಾಳ್ ಹರೀಶ್ ಶೆಟ್ಟಿ, ನಂದಿಕೂರು ಜಗದಿಶರು ಶೆಟ್ಟಿ ಅವರನ್ನು ಪುಷ್ಪಗುಪ್ಚಗಳನ್ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಸಲ್ಪಟ್ಟವು. ಭಜನೆ ನಾ ಸ್ಪರ್ಧೆ, ಸಮೂಹ ಗೀತೆ, ವಾದನಾ ಸಂಗೀತ, ಜಾನಪದ ಸಂಗೀತ ಮತ್ತು ನೃತ್ಯ ಹಾಗೂ ಯಕ್ಷಗಾನ ಇತ್ಯಾದಿಗಳನ್ನು ಚಿಣ್ಣರು ಪ್ರದರ್ಶಿಸಿದರು. ಅತಿಥಿüಗಳು ಶಿಬಿರಗಳ ಮಕ್ಕಳಿಗೆ, ವಿಜೇತರಿಗೆ ಬಹುಮಾನ ಪ್ರದಾನಿಸಿ ಗೌರವಿಸಿದರು.


ಹಸ್ತ ಶೆಟ್ಟಿ, ಶೈನಿ ಶೆಟ್ಟಿ, ಕೀರ್ತಿ ಶೆಟ್ಟಿ, ತೀರ್ಥ ಮಾಡಾ, ನೇತಿ ಭಟ್, ಅಮಿತ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here