Saturday 20th, April 2024
canara news

ಭಂಡಾರಿ ಸೇವಾ ಸಮಿತಿಯಿಂದ ಕಡಲಮಗೆ ತುಳು ನಾಟಕ ಪ್ರದರ್ಶನ

Published On : 13 Nov 2016   |  Reported By : Rons Bantwal


ಕಲಾಕಾರರನ್ನು ಗೌರವಿಸುವುದೂ ಕಲಾರಾಧನೆ:ಯಾದವ ಮಣ್ಣಗುಡ್ಡೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ನ.13: ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ತನ್ನ ವಿದ್ಯಾನಿಧಿ ಹಾಗೂ ಆರೋಗ್ಯನಿಧಿ ಸಹಾಯಾರ್ಥ ಇಂದಿಲ್ಲಿ ಶನಿವಾರ ಸಂಜೆ ಘಾಟ್ಕೋಪರ್ ಪಶ್ಚಿಮದಲ್ಲಿನ ನ್ಯೂ ಎಸ್‍ಎಸ್‍ಡಿಟಿ ಸಭಾಗೃಹದಲ್ಲಿ `ಕಡಲಮಗೆ' ತುಳು ನಾಟಕ ಆಯೋಜಿಸಿತ್ತು. ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷ ಹಾಗೂ ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಸಂಜೀವ ಭಂಡಾರಿ ಉಪಸ್ಥಿತರಿದ್ದು ಭಂಡಾರಿ ಮತ್ತು ಅತಿಥಿüಯಾಗಿ ಉಪಸ್ಥಿತ ಕಲಾಸಂಗಮದ ವಿಜಯಕುಮಾರ್ ಕೊಡಿಯಾಲ್‍ಬೈಲ್ ಅವರು ಸಮಾಜದ ಪ್ರತಿಭಾನ್ವಿತ ರಂಗನಟ ಯಾದವ ಮಣ್ಣಗುಡ್ಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಲಾಕಾರರನ್ನು ಗೌರವಿಸುವುದೇ ಕಲಾರಾಧನೆ ಅಂದು ಕೊಂಡಿದ್ದೇನೆ. ಮಹಾನಗರದಲ್ಲಿ ಅದೂ ನನ್ನ ಸ್ವಸಮಾಜವು ನನ್ನನ್ನು ಸನ್ಮಾನಿಸಿ ಗೌರವಿಸಿರುವುದು ನನ್ನ ಪೂರ್ವಜನ್ಮದ ಪುಣ್ಯವೆ ಸರಿ. ನಾನೋರ್ವ ಹವ್ಯಾಸಿ ಕಲಾಕಾರನಾಗಿ ಕಲಾಮಾತೆಯ ಸೇವೆಯಲ್ಲಿ ಹೆಜ್ಜೆಗಳನ್ನಿರಿಸುತ್ತಿದ್ದೇನೆ. ಕಡಲ ಮಗೆ ನಾಟಕದಲ್ಲಿ ಕಥಾನಾಯಕನಾಗಿ ಅಭಿನಯಿಸುವ ಅವಕಾಶ ನನ್ನ ಆಶಯ ಬೆಳಗಿಸಿದೆ. ಅಭಿನಯವನ್ನೇ ಮಾತನ್ನಾಗಿಸಿದ ನನಗೆ ನಿಮ್ಮೆಲ್ಲರ ಸಹಯೋಗದ ಅಗತ್ಯವಿದೆ. ನಮ್ಮ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರನು ನಮ್ಮೆಲ್ಲರನ್ನು ಮುನ್ನಡೆಸಿ ಸಮಾಜದಲ್ಲಿ ಏಕತೆಯಿಂದ ಬಲಪಡಿಸುವಂತೆ ಅನುಗ್ರಹಿಸಲಿ ಎಂದು ಸನ್ಮಾನಕ್ಕೆ ಉತ್ತರಿಸಿ ಯಾದವ ಮಣ್ಣಗುಡ್ಡೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪರಸ್ಪರ ಸ್ಪಂದನಾ ಭಾವನೆಯಿಂದ ಸಮುದಾಯ ಏಕತೆ ಸಾಧ್ಯವಾಗುವುದು. ಒಬ್ಬರನೊಬ್ಬರ ಸಹಕಾರದಿಂದ ಸಮಾಜವನ್ನು ಏಕತೆಯಿಂದ ಮುನ್ನಡೆಸಲಾಗುವುದು.ಇಂತಹ ಕಾರ್ಯಕ್ರಮಗಳು ಏಕಾತಾ ಮನೋಭಾವಕ್ಕೆ ಪೂರಕವಾಗಿದ್ದು ಮುಂದಿನ ದಿನಗಳಲ್ಲಿ ಬಲಾಢ್ಯ ಭಂಡಾರಿ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಶೇಖರ ಭಂಡಾರಿ ಕರೆಯಿತ್ತರು.

ವೇದಿಕೆಯಲ್ಲಿ ಭಂಡಾರಿ ಸಮಿತಿಯ ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ ಡೊಂಬಿವಿಲಿ, ನಾಟಕ ಸಂಘಟಕರುಗಳಾ ದ ಪ್ರಕಾಶ್ ಶೆಟ್ಟಿ ಸುರತ್ಕಲ್, ಕರುಣಾಕರ ಶೆಟ್ಟಿ ಕುಕ್ಕುಂದೂರು ಉಪಸ್ಥಿತರಿದ್ದು, ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ ಸ್ವಾಗತಿಸಿದರು. ಪತ್ರಕರ್ತ ಸತೀಶ್ ಎರ್ಮಾಳ್ ಸನ್ಮಾನಿತರನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ನ್ಯಾ| ರಾಮಣ್ಣ ಎಂ.ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ಥಾಣೆ ಜೊತೆ ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಕರುಣಾಕರ ಎಸ್.ಭಂಡಾರಿ ಮತ್ತು ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಪುತ್ತೂರು (ಪುಣೆ), ಉದಯ ಭಂಡಾರಿ, ಕೇಶವ ಭಂಡಾರಿ, ಸೌರಭ್ ಸುರೇಶ್.ಭಂಡಾರಿ, ಪದ್ಮನಾಭ ಭಂಡಾರಿ, ರಾಕೇಶ್ ಭಂಡಾರಿ, ಜಯಶೀಲ ಭಂಡಾರಿ, ವಿಶ್ವನಾಥ ಭಂಡಾರಿ, ಜಯ ಭಂಡಾರಿ, ನವೀನ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ, ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಲಿತಾ ವಿ.ಭಂಡಾರಿ, ಶಾಲಿನಿ ರಮೇಶ್ ಭಂಡಾರಿ, ಸುರೇಶ್ ಭಂಡಾರಿ (ಯು.ಕೆ), ಡಾ| ಶಿವರಾಮ ಕೆ.ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ, ವೆಂಕಟೇಶ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಮನೋರಂಜನಾ ಕಾರ್ಯಕ್ರಮವಾಗಿ ವಿಜಯಕುಮಾರ್ ಕೊಡಿಯಾಲ್‍ಬೈಲ್ ರಚಿಸಿ ನಿರ್ದೇಶಿಸಿದ ` ಕಡಲ ಮಗೆ' ತುಳು ನಾಟಕವನ್ನು ಕಲಾಸಂಗಮದ ಪ್ರಭುದ್ಧ ಕಲಾವಿದರು ಪ್ರದರ್ಶಿಸಿದರು. ತುಳುನಾಡ ರತ್ನ ದಿನೇಶ್ ಅತ್ತಾವರ್ ಪ್ರಧಾನಭೂಮಿಕೆಯಲ್ಲಿ ಅಭಿನಯಿಸಿ ಕಲಾಭಿಮಾನಿಗಳನ್ನು ರಂಜಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here