Friday 29th, March 2024
canara news

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ-2014 ಮುಡಿಗೇರಿಸಿಕೊಂಡ

Published On : 13 Nov 2016   |  Reported By : Rons Bantwal


ಮುಂಬಯಿಯ ತುಳುಕನ್ನಡಿಗ ರಾಜಶೇಖರ್ ಆರ್.ಕೋಟ್ಯಾನ್
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.13: ಬೆಳ್ಳಿತೆರೆಯ ಬಾನಂಗಳದಿ ಬೆಳಗುತ್ತಿರುವ ಕನ್ನಡ ಚಿತ್ರತಾರೆಯರಿಗೆ ಕೊಡಮಾಡುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರು ಹೆಬ್ಬಾಳ ಅಲ್ಲಿನ ಜಿಕೆವಿಕೆ ಆವರಣದ ಡಾ| ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ಇಂದಿಲ್ಲಿ ಭಾನುವಾರ ಸಂಜೆ ಪ್ರದಾನಿಸಲ್ಪಟ್ಟಿತು.

ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಆಯೋಜಿಸಿರುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ 2014 ಮತ್ತು 2015ರ ಪ್ರದಾನಿಸಿದ್ದು `ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ' ಪ್ರಶಸ್ತಿ ವಿಭಾಗದ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಯನ್ನು ತುಳು ಕನ್ನಡಿಗ ನಿರ್ಮಾಪಕ, ನಿರ್ದೇಶಕ, ನಟ ರಾಜಶೇಖರ್ ಆರ್.ಕೋಟ್ಯಾನ್ ನಿರ್ಮಾಪಕತ್ವ, ನಿರ್ದೇಶನದಲ್ಲಿ ನಿರ್ಮಿಸಿದ `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರಕ್ಕೆ ಪ್ರದಾನಿಸಿ ಗೌರವಿಸಿದರು.

 

ಕರ್ನಾಟಕ ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ ಸದಾನಂದ ಗೌಡ ಅವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿüಯಾಗಿಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ವಿಧಾನ ಪರಿಷತ್ತ್ ಸದಸ್ಯರುಗಳಾದ ಪುಟ್ಟಣ್ಣ, ಬಿ.ಜೆ ಪುಟ್ಟಸ್ವಾಮಿ, ಬಿ.ಎಸ್ ಸುರೇಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ಶ್ರೀ ಕಂಠೀರವ ಸ್ಟೂಡಿಯೋಸ್ ನಿಯಮಿತ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಕೃಷ್ಣಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು, ಬೆಂಗಳೂರು ಮೇಯರ್ ಜಿ.ಪದ್ಮಾವತಿ ಹಾಜರಿದ್ದರು.

2014ನೇ ಸಾಲಿನ ಜೀವಿತಾವಧಿ ಸಾಧನಾ ಪುರಸ್ಕಾರವನ್ನು ಬಸಂತಕುಮಾರ್ ಪಾಟೀಲ್ (ಡಾ| ರಾಜ್‍ಕುಮಾರ್ ಪ್ರಶಸ್ತಿ), ಡಾ| ಬರಗೂರು ರಾಮಚಂದ್ರಪ್ಪ (ಪುಟ್ಟಣ್ಣ ಕಣಗಾಲ್ ಪ್ರಶಸ್ತಿ), ಸುರೇಶ್ ಅರಸ್ (ಡಾ| ವಿಷ್ಣುವರ್ಧನ್ ಪ್ರಶಸ್ತಿ), 2015ನೇ ಸಾಲಿನ ಜೀವಿತಾವಧಿ ಸಾಧನಾ ಪುರಸ್ಕಾರವನ್ನು ಶ್ರೀಮತಿ ಹರಿಣಿ (ಡಾ| ರಾಜ್‍ಕುಮಾರ್ ಪ್ರಶಸ್ತಿ), ಡಾ| ನಾಗತೀಹಳ್ಳಿ ಚಂದ್ರಶೇಖರ (ಪುಟ್ಟಣ್ಣ ಕಣಗಾಲ್ ಪ್ರಶಸ್ತಿ), ಶ್ರೀ ರಾಜನ್ (ಡಾ| ವಿಷ್ಣುವರ್ಧನ್ ಪ್ರಶಸ್ತಿ) ಇವರಿಗೆ ಪ್ರದಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷಿ ್ಮೀನಾರಾಯಣ, ನಿರ್ದೇಶಕ ಎನ್.ಆರ್ ವಿಶುಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ತುಳು ಚಲನಚಿತ್ರದ ಮೂಲಕ ಇದೇ ಮೊತ್ತಮೊದಲಾಗಿ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿ ಇಂದಿಲ್ಲಿ ಪ್ರಶಸ್ತಿ ಸ್ವೀಕರಿಸಿದ ಶುಬಾವಸರದಲ್ಲಿ ರಾಜಶೇಖರ್ ಕೋಟ್ಯಾನ್ ಅವರಿಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ ಮತ್ತು ಪದಾಧಿಕಾರಿಗಳು, ನಿಲೇಶ್ ಪೂಜಾರಿ ಪಲಿಮಾರು, ಉದ್ಯಮಿಗಳಾದ ಹರೀಶ್ ಜಿ.ಅಮೀನ್, ಸುರೇಂದ್ರ ಎ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ಅನೇಕ ಅಭಿನಂದಿಸಿದ್ದಾರೆ.


ರಾಜಶೇಖರ್ ಆರ್.ಕೋಟ್ಯಾನ್:
ಓರ್ವ ನಿಷ್ಠಾವಂತ ಕಲಾಕಾರ, ಪ್ರಾಮಾಣಿಕತೆ ಮತ್ತು ಅವಿರತ ಶ್ರಮ ಇವರ ಸದ್ಗುಣತಾ ಸಂಪನ್ನರಾಗಿ ಅತ್ತ್ಯುತ್ತಮ ಸಂಘಟನಾ ಚತುರ, ಪ್ರತಿಭಾನ್ವಿತ ಕಲಾಕಾರ ಎಂದೇ ಗುರುತಿಸಲ್ಪಟ್ಟ ರಾಜಶೇಖರ್ ಆರ್.ಕೋಟ್ಯಾನ್ ಮುಂಬಯಿ ಸೇರಿ ಓರ್ವ ಹೊಟೇಲು ಕಾರ್ಮಿಕನಾಗಿದ್ದು ಮೂವತ್ತು ರೂಪಾಯಿ ಸಂಬಳಕ್ಕೆ ದುಡಿತ್ತಾ ಅಪ್ರತಿಮ ಕಲಾಕಾರನಾಗಿ ದುಡಿಸಿಕೊಂಡ ರಾಜಶೇಖರ್ ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಪ್ರಮ ಭಕ್ತರಾಗಿದ್ದು ಅವರ ಜೀವನಕ್ಕೆ ತನ್ನ ಬದುಕನ್ನು ಮುಡುಪಾಗಿಸಿ ಕೊಂಡವರಾಗಿದ್ದಾ ರೆ. ಕನ್ನಡ, ತಮಿಳು, ತೆಲುಗು, ತುಳು ಹೀಗೇ ಬಹುಭಾಷಾ ಚಲನಚಿತ್ರಗಳಲ್ಲಿ ನಟಿಸಿ ಚಲನಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಗಳಿಸಿಕೊಂಡ ರಾಜಶೇಖರ್ ಅವರು ಕನ್ನಡದ ಸ್ಟಾಂಟ್ ಮಾಸ್ಟರ್ ಚಿತ್ರದಲ್ಲಿ ಹಿರೋ ಪಾತ್ರ ಮಾಡಿದ್ದಾರೆ. ಈ ಚಿತ್ರದ ಹಿರೋಹಿನ್ ಆಗಿ ಸುಧಾರಾಣಿ ನಟಿಸಿದ್ದಾರೆ. ಅಂಥರ್‍ಗಾಮಿ, ಗಡಿಪಾರ್ ಚಿತ್ರಗಳಲ್ಲೂ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸುಮಾರು 20 ವರ್ಷಗಳಲ್ಲಿ 35 ಚಲನಚಿತ್ರಗಳಲ್ಲಿ ನಟಿಸಿ ಪರಶುರಾಮನ ಸೃಷ್ಠಿಯ ಬಹುತೇಕರ ಮನೆಮನಗಳಲ್ಲಿ ಪರಿಚಿತ ಹೆಸರು ಇವರದ್ದಾಗಿದ್ದು ದರ್ಶನ್ ಅವರ ನಾಯಕ ನಟನೆಯ ಜಗ್ಗುದಾದ, ವಿಜಯ್ ನಾಯಕ ನಟನೆಯ ಮುರ್ಗ ಚಿತ್ರಗಳಲ್ಲೂ ನಟಿಸಿದ್ದ್ದಾರೆ. ಜೀವನಧಾರೆ, ನಾ..ಮೆಚ್ಚಿದ ಹುಡುಗನಿಗೆ, ಇಂಡಿಯನ್ ಪೆÇಲೀಸ್ ಹಿಸ್ಟರಿ, ವ್ಹಿಲನ್, ಕಲಸೀ ಪಾಳ್ಯ, ಪಾದು, ಅಕ್ಕತಂಗಿ, ಮಂಡ್ಯ, ಐದ್ಯು, ಆಟೋ ಶಂಕರ್ ಸೇರಿದಂತೆ ಹತ್ತುಹಲವಾರು ಚಿತ್ರಗಳಲ್ಲಿ ನಟಿಸಿರುವರು. ತುಳುವಿನ ಕೋಟಿ ಚೆನ್ನಯ ಚಿತ್ರದಲ್ಲಿ ಚೆನ್ನಯನ ಪಾತ್ರ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರದಲ್ಲಿ ಸೂರಪ್ಪನ ಪಾತ್ರ ಅಂತೆಯೇ ದೇವುಪೂಂಜ ಚಿತ್ರದಲ್ಲಿ ದೇವುಪೂಂಜನ ಪಾತ್ರ ನಿಭಾಯಿಸಿ ಜನಮೆಚ್ಚಿದ ನಟನಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕು ಮುದರಂಗಡಿ ಅಲ್ಲಿನ ಸಾಂತೂರು ಗರಡಿ ಮನೆತನದ ರಾಘವೇಂದ್ರ ಕೋಟ್ಯಾನ್ ಮತ್ತು ಕಲ್ಯಾಣಿ ಆರ್.ಕೋಟ್ಯಾನ್ ದಂಪತಿಯ ಸುಪುತ್ರನಾಗಿರುವ ರಾಜಶೇಖರ್ ಓರ್ವ ಬಹುಮುಖ ಪ್ರತಿಭೆಯ ಚಿರಪರಿತ ಕಲಾವಿದ. ಪ್ರಸ್ತುತ ಧರ್ಮಪತ್ನಿ ಹರಿಣಾಕ್ಷಿ ಆರ್. ಕೋಟ್ಯಾನ್ ಹಾಗೂ ಏಕೈಕ ಸುಪುತ್ರ ರಂಜಿತ್ ಆರ್. ಕೋಟ್ಯಾನ್ ಅವರನ್ನೊಳಗೊಂಡು ಮುಂಬಯಿಯಲ್ಲಿ ನೆಲೆಯಾಗಿದ್ದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here