Saturday 20th, April 2024
canara news

ಪ್ರೋ. ಶ್ರೀನಾಥರ ತುಳು ಕೈಂಕರ್ಮ ಅನುಕರಣೀಯ : ಧರ್ಮಪಾಲ.ಯು.ದೇವಾಡಿಗ

Published On : 14 Nov 2016   |  Reported By : Rons Bantwal


ಮಂಗಳೂರು: ಕಾಸರಗೋಡಿನಲ್ಲಿ ತುಳು ಸೇವೆಗೈದ ಪ್ರಮುಖದಲ್ಲಿ ಪ್ರೋ. ಶ್ರೀನಾಥರ ಸೇವೆ ಅನುಕರಣೀಯವಾಗಿದೆ. ತುಳು ನಿಘಂಟು ರಚನೆ ಕಾರ್ಯ, ತುಳು ಪಾಡ್ದನಗಳ ಸಂಗ್ರಹ, ಜನಪದ ಶಬ್ದ ಸಂಗ್ರಹ, ತುಳು ಸಂಘಟನೆಗಳನ್ನು ಮಾಡಿ ಅವರು ಅಗ್ರಣೀಯರು ಎನಿಸಿಕೊಂಡಿದ್ದಾರೆ.

ಅವರನ್ನು ಕೇರಳ ಸರಕಾರ ರಾಜ್ಯೋತ್ಸವ ಪುರಸ್ಕಾರ ನೀಡಿ ಸನ್ಮಾನಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಅಭಿಪ್ರಾಯ ಪಟ್ಟರು. ಅಖಿಲ ಭಾರತ ತುಳು ಒಕ್ಕೂಟದ ಮಹಾಸಭೆಯಲ್ಲಿ ಪೆÇ್ರೀ. ಶ್ರೀನಾಥರವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಆಳ್ವ, ಎ.ಸಿ.ಭಂಡಾರಿ, ಇಂದ್ರಾಳಿ ಜಯಕರ ಶೆಟ್ಟಿ, ಕಾಂತಿ ಶೆಟ್ಟಿ ಬೆಂಗಳೂರು, ವಿಜಯಲಕ್ಷ್ಮೀ ಶೆಟ್ಟಿ, ಕರುಣಾಕರ ಶೆಟ್ಟಿ ಮುಲ್ಕಿ, ಜಯಂತಿ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಅಖಿಲ ಭಾರತ ತುಳು ಒಕ್ಕೂಟದ ಜತೆಕಾರ್ಯದರ್ಶಿ ಸತೀಶ್ ಸಾಲಿಯಾನ್ ನೆಲ್ಲಿಕುಂಜೆ ಪ್ರಾರ್ಥನೆ ಹಾಡಿದರು.ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಸ್ವಾಗತಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here