Thursday 18th, April 2024
canara news

ಉಪ್ಪಿನ ಕೊರತೆಯಿಲ್ಲ: ಸಚಿವ ಖಾದರ್‌

Published On : 14 Nov 2016   |  Reported By : Canaranews Network   |  Pic On: photo credit: DHNS


ಮಂಗಳೂರು: ದೇಶ ಮಾತ್ರವಲ್ಲ ವಿಶ್ವದಲ್ಲೇ ಉಪ್ಪಿನ ಕೊರತೆ ಉಂಟಾಗಲು ಸಾಧ್ಯವಿಲ್ಲ. ಇದೇ ಸಬೂಬು ನೀಡಿ ದರ ಹೆಚ್ಚಿಸಿ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದಲ್ಲಿ ಇಲಾಖಾ ಆಧಿಕಾರಿಗಳಿಗೆ ಮಾಹಿತಿ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಆದಿತ್ಯವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಪ್ಪು ಕೊರತೆ ಸಮಸ್ಯೆಯಿಲ್ಲ. ಎಲ್ಲೆಡೆ ಉಪ್ಪು ಉತ್ಪಾದನೆಯಾಗುತ್ತಿರುವುದರಿಂದ ಈ ಕೊರತೆ ಉಂಟಾಗಲು ಸಾಧ್ಯವಿಲ್ಲ. ಈಗಾಗಲೇ ಆಹಾರ ಇಲಾಖೆ ಮತ್ತು ತೂಕ ಹಾಗೂ ಅಳತೆ ಇಲಾಖೆ ಅಧಿಧಿಕಾರಿಗಳು ಪರಿಶೀಲನೆ ನಡೆಸಿದ್ದು, ಎಲ್ಲಿಯೂ ಸಮಸ್ಯೆ ಕಂಡುಬಂದಿಲ್ಲ. ಪ್ರಸ್ತುತ ಶೇ. 90ರಷ್ಟು ಉಪ್ಪು ಪೊಟ್ಟಣಗಳಲ್ಲೇ ಬರುತ್ತಿದ್ದು, ಅದರಲ್ಲಿ ಎಂಆರ್‌ಪಿ ಮುದ್ರಿತವಾಗಿರುತ್ತದೆ. ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವುದು ಅಥವಾ ಅಧಿಕೃತ ದರದ ಮೇಲೆ ಹೆಚ್ಚಿನ ಸ್ಟಿಕ್ಕರ್‌ ಅಂಟಿಸಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಇಲಾಖಾ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here