Thursday 18th, April 2024
canara news

ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ಉಡುಪಿ ಜಿಲ್ಲಾ ಮಟ್ಟದ ‘ಶೈನ್’ ಕ್ರಿಡೋತ್ಸವ ಆರಂಭ

Published On : 16 Nov 2016   |  Reported By : Bernard J Costa


ಕುಂದಾಪುರ, ನ.15: ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜು  ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ‘ಶೈನ್-2016’ ಎಂದು ಹೆಸರಿಡಲಾದ ಕ್ರಿಡೋತ್ಸವವು ಕುಂದಾಪುರದ ಗಾಂಧಿ ಮೈದಾನದಲ್ಲಿ ಅದ್ದೂರಿಯಿಂದ ಆರಂಭಗೊಂಡಿತು.

ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜಾರು ,ಕ್ರೀಡಾಳುಗಳ ಪಥ ಸಂಚಲನೆಯ ಮೂಲಕ ಗೌರವ ಪಡೆದ ಬಳಿಕ್ ಕ್ರೀಡಾ ಧ್ವಜವನ್ನು ದ್ವಜಾರೋಹಣ ಮಾಡುವ ಮೂಲಕ ಕ್ರಿಡೋತ್ಸವಕ್ಕೆ ಚಾಲನೆ ನೀಡಿ ‘130 ಕೋಟಿಕ್ಕಿಂತಲೂ ಹೆಚ್ಚಿನ ಜನ ಸಂಖ್ಯೆ ಇರುವ ನಮ್ಮ ದೇಶದಲ್ಲಿ ಬೇರೆ ಬೇರೆ ಯೋಜನೆಗಳಿಗೆ ಹಣ ವಿನಿಯೋಗಿಸಲಾಗುತ್ತೆ, ಆದರೆ ಕ್ರೀಡಾ ಕ್ಷೇತ್ರಕ್ಕೆ ಬೇಕಾದಸ್ಟು ಹಣ ವಿನಿಯೋಗ ಆಗದಿರುವುದು ಬೇಸರದ ಸಂಗತಿ, ಕ್ರೀಡಾ ಕಾರ್ಯಗಳಿಗಾಗಿಯೆ ಬಜೆಟನಲ್ಲಿ ಹಣ ತೆಗೆದಿಡುವ ಸಂಪ್ರದಾಯ ಬರಬೇಕು. ಕ್ರೀಡೆಯಲ್ಲಿ ಭಾಗವಹಿಸುವರಿಗೆ ಶಾಲ ಹಾಜರಿತಿಯಲ್ಲಿ ವಿನಾಯಿತಿ ನೀಡ ಬೇಕು, ವೀಜೆತರಿಗೆ ಪೆÇ್ರೀತ್ಸಹ ಹಣ ನೀಡಬೇಕು, ಕ್ರೀಡಾ ನೀತಿಯಲ್ಲಿ ಸಮಗ್ರ ಬದಲಾವಣೆ ಆಗ ಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ’ ಎನ್ನುತ್ತಾ ಸೋಲು ಗೆಲುವು ಸಮಾನಾಗು ಸ್ವೀಕರಿಸಿ, ಇಲ್ಲಿ ನಿಮ್ಮ ಸಾಮರ್ಥ್ಯ ತೋರಿಸಿ ಮುಂದೆ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಕೀರ್ತಿವಂತರಾಗಿ ಎಂದು ಅವರು ಕ್ರೀಡಾಳುಗಳಿಗೆ ಶುಭ ಕೋರಿದ ಅವರು ಸಂಘಟಕರನ್ನು ಶ್ಲಾಘಿಸಿದರು.

ಈ ಮೊದಲು ಸಂತ ಮೇರಿಸ್ ಕಾಲೇಜಿನ ಮೈದಾನದಲ್ಲಿ, ಉಡುಪಿ ಧರ್ಮ ಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಅ|ವಂ| ಲಾರೆನ್ಸ್ ಡಿಸೋಜಾ ಇವರು ಕ್ರಿಡೋತ್ಸವದ ಯಶ್ವಸಿಗೆ ಪ್ರಾರ್ಥಿಸಿದರು, ಸೈಂಟ್ ಮೇರಿಸ್ ಸಮೂಹ ವಿಧ್ಯಾ ಸಂಸ್ಥೆಯ ಸಂಚಾಲಕರಾದ ಅ|ವಂ| ಅನಿಲ್ ಡಿಸೋಜಾರವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಉದ್ಘಾಟಿಸಿದರು. ಕ್ರೀಡಾ ಜ್ಯೋತಿಯೊಂದಿಗೆ ವಿಧ್ಯಾರ್ಥಿ, ಶಿಕ್ಷಕ ಸಮೂಹ ಪುರ ಮೆರವಣಿಗೆಯ ಮೂಲಕ ಗಾಂಧಿ ಮೈದಾನಕ್ಕೆ ಸಾಗಿದರು.

ಕ್ರೀಡಾ ಮೈದಾನದಲ್ಲಿ ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತಾನಾಡಿದ ಅ|ವಂ| ಲಾರೆನ್ಸ್ ಡಿಸೋಜಾ ‘ನಮ್ಮ ಕಾಲದಲ್ಲಿ ಕ್ರೀಡೆ ಮತ್ತು ಪಾಠ ಒಟ್ಟಿಗೆ ಸಾಗುತಿರಲಿಲ್ಲಾ, ಆಟದಲ್ಲಿ ಮುಂದೆ ಇದ್ದರೆ, ಪಾಠದಲ್ಲಿ ಹಿಂದೆ, ಈಗ ಹಾಗಿಲ್ಲಾ ಸರ್ವಾಂಗಿಣ ಅಭಿವ್ರದ್ದಿಯಾಗುತಿದೆ, ಅದರೂ ಕ್ರೀಡೆಯಲ್ಲಿ ಹಿಂದೆ ಇದ್ದು, ನಾವು ಒಲಿಪಿಂಕನಲ್ಲಿ ಚಿನ್ನ ಗೆಲ್ಲದದಂತಾಗಿದೆ, ಇದರತ್ತ ನಮ್ಮ ಗಮನ ಹರಿಸ ಬೇಕಾಗಿದೆ’ ಎಂದು ಕ್ರೀಡುಳುಗಳಿಗೆ ಶುಭ ಹಾರೈಸಿದರು.

ಸಂಚಾಲಕಾರಾದ ಅ|ವಂ| ಅನಿಲ್ ಡಿಸೋಜಾರವರು ಮಾತಾನುಡುತ್ತಾ ‘ಜಿಲ್ಲೆಯ 105 ಪ.ಪೂ.ಕಾಲೇಜುಗಳಲ್ಲಿ ಸುಮಾರು 72 ಕಾಲೇಜುಗಳ ಸುಮಾರು 720 ಕ್ರೀಡಾ ಪಟುಗಳು ಈ ಕ್ರಿಡೋತ್ಸವದಲ್ಲಿ ಭಾಗವಹಿಸಿದ್ದಾರೆ ಸ್ಪರ್ಧೆ ಸಮಾಜದ ಶ್ವಾಸ್ಥವನ್ನು ಬಯಸುತ್ತದೆ, ಕೆಡುಕನಲ್ಲಾ ಈ ಕ್ರಿಡೋತ್ಸವವು ಯಶಸ್ವಿಯಾಗಲೆಂದು ನಾವು ಭಗವಂತನಲ್ಲಿ ಪ್ರಾಥಿಸುತ್ತೇವೆ’ ಎನ್ನುತಾ ಕ್ರೀಡಾಳುಗಳಿಗೆ ಶುಭ ಕೋರಿದರು.

ಕ್ರಿಡಾ ಜ್ಯೋತಿಯನ್ನು ಬೆಳಗಿಸಿದ ಸಭಾ ಕಾರ್ಯಧ್ಯಕ್ಷ, ಪುರಸಭೆ ಉಪಾಧ್ಯಕ್ಷ ಹಳೆ ವಿಧ್ಯಾರ್ತಿ ರಾಜೇಶ್ ಕಾವೇರಿ ‘ಒಂದು ಹಳ್ಳಿಯಲ್ಲಿ ಬಂಡೆ ಕಲ್ಲುಗಳು ಇದ್ದರೆ, ಒಬ್ಬ ಶಿಲ್ಪಿ ಆ ಬಂಡೆ ಕಲ್ಲುಗಳನ್ನು ಶಿಲ್ಪಗಳನ್ನಾಗಿಸುತ್ತಾನೆ, ಹಾಗೆ ಸಂತ ಮೇರಿಸ್ ಶಿಕ್ಷಣ ಸಂಸ್ಥೆಗೆ ಹಾಗೆಯೆ ಈಗ ಬಂದಿರುವ ಸಂಚಾಲಕರು, ಪ್ರಾಂಶುಪಾಲರು ಅಂತವರಾಗಿದ್ದಾರೆ, ಅವರು ಸಾವಿರಾರೂ ವಿಧ್ಯರ್ತಿಗಳ ಭವಿಶ್ಯವನ್ನು ಬೆಳಗಿಸುವಂತಾಗಲಿ, ಹಾಗೆ ಸ್ಪರ್ಧೆಗೆ ಬಂದಿರುವ ಕ್ರೀಡಾಳುಗಳ ಭವಿಸ್ಯ ಬೆಳಗಲಿ ಎನ್ನುತ್ತಾ’ ಕ್ರೀಡಾಳುಗಳಿಗೆ ಶುಭ ಕೋರಿದರು.

ಗಣ್ಯರು ಪಾರಿವಾಳ ಮತ್ತು ಬೆಲೂನುಗಳನ್ನು ಹಾರಿ ಬಿಟ್ಟು ಕ್ರೀಡೆಗೆ ಚಾಲನೆಯನ್ನು ನೀಡಿದರು. ದೈಹಿಕ ಶಿಕ್ಷಕ ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.

ಜಿಲ್ಲಾ ಉಪ ನಿರ್ದೇಶಕ ಪ.ಪೂ.ಕಾಲೇಜ್ ಶಿಕ್ಷಣ ಇಲಾಖೆ ಆರ್.ಬಿ.ನಾಯಕ್ ರವರು ಸ್ವಾಗತ ಕೋರಿದರು. ಸಂತ ಮೇರಿಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಮಂಜುಳಾ ನಾಯರ್, ಕುಂದಾಪುರ ಚರ್ಚಿನ ಉಪಾಧ್ಯಕ್ಷ ಜಾನ್ಸನ್ ಆಲ್ಮೇಡಾ, ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಗೌರವಧ್ಯಕ್ಷ ವಸಂತ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಅಧ್ಯಕ್ಷ ಶರತ್ ರಾವ್, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಉಪಧ್ಯಕ್ಷ ಬಾಲಕ್ರಸ್ಟ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಕರ ಬೀಜಾಡಿ, ಶಾಂತಿರಾಣಿ ಬಾರೆಟ್ಟೊ, ರತ್ನಾಕರ ಶೆಟ್ಟಿ, ದಾನಿಗಳಾದ ಮೊಂತು ಫೆರ್ನಾಂಡಿಸ್ ಮುಂತಾದದವರು ಹಾಜರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here