Friday 29th, March 2024
canara news

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯಿದೆ 2012ರ ಕುರಿತು ಮಾಹಿತಿ ಶಿಬಿರ

Published On : 17 Nov 2016   |  Reported By : Bernard J Costa


ಮಕ್ಕಳು ದೇವರಿಗೆ ಸಮಾನ ಎಂದು ಹೇಳುವ ನಾವು ಅದೇ ಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸುವ ಮಂದಿ ನಮ್ಮ ಸುತ್ತಮುತ್ತಲೂ ಇದ್ದಾರೆ. ಇವರಿಂದ ಮಕ್ಕಳನ್ನು ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶ್ರೀಮತಿ ಮಾಲತಿ ಬಿ. ಆಚಾರ್ಯ ಅಧ್ಯಕ್ಷರು 40ನೇ ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಅವರು ಹೇಳಿದರು.

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ರೈತರ ಸಹಕಾರಿ ಸಂಘ (ನಿ.) ಹಿರಿಯಡಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ ಇಲ್ಲಿ ನಡೆದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಪೋಕ್ಸೊ ಕಾಯಿದೆ 2012ರ ಕುರಿತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾಡಿದರು. ಅಲ್ಲದೆ ನಮ್ಮ ದೇಶದ ಬಹುದೊಡ್ಡ ಸಂಪತ್ತು ಮಕ್ಕಳು, ಅವರ ವಿಕಾಸ ಹೊಂದುವ ಹಕ್ಕನ್ನು ಯಾರು ದುರುಪಯೋಗ ಪಡಿಸದಂತೆ ನಿರ್ಲಕ್ಷ ಮಾಡದೆ ರಕ್ಷಿಸಬೇಕಾಗಿರುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸಭಾಧ್ಯಕ್ಷತೆಯನ್ನು ಶ್ರೀ ರಂಗನಾಥ ಭಟ್ ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ ಇವರು ವಹಿಸಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನಮ್ಮ ಕರ್ತವ್ಯ ಹೊಂದಿರಬೇಕು ಯಾರ ಮನೆಯ ಮಕ್ಕಳೆ ಆಗಲಿ ಯಾವುದೇ ಕ್ರೌರ್ಯದಿಂದ ಅದು ಬಾಲ್ಯವನ್ನು ಕಳೆಯಬಾರದು ಅಲ್ಲದೆ ಈ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಶ್ರಿ ಬಿ. ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷರು ರೈತರ ಸಹಕಾರಿ ಸಂಘ(ನಿ.) ಹಿರಿಯಡಕ, ಶ್ರೀ ಪ್ರಶಾಂತ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೈತರ ಸಹಕಾರಿ ಸಂಘ(ನಿ.) ಹಿರಿಯಡಕ, ಶ್ರೀ ಗಂಗಪ್ಪ ಸಬ್‍ಇನ್ಸ್‍ಪೆಕ್ಟರ್ ಹಿರಿಯಡಕ ಪೋಲಿಸ್ ಠಾಣೆ ಹಿರಿಯಡಕ, ಶ್ರೀ ಕರುಣಾಕರ ಆಚಾರ್ಯ ಡೆಪ್ಯೂಟಿ ರೆಂಜ್ ಫಾರೆಸ್ಟ್ ಅಫೀಸರ್ ಪೆರ್ಡೂರು ವಿಭಾಗ ಪೆರ್ಡೂರು, ಶ್ರೀಮತಿ ವೀಣಾ ಡಿ. ನಾಯಕ್ ಉಪ ಪ್ರಾಂಶುಪಾಲರು ಸ.ಪ.ಪೂರ್ವ ಕಾಲೇಜು ಹಿರಿಯಡಕ, ಶ್ರಿ ವಿನೋದ ಕುಮಾರ್ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಸ.ಪ.ಪೂರ್ವ ಕಾಲೇಜು ಹಿರಿಯಡಕ, ಶ್ರೀ ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಸಂಪನ್ಮೂಲ ವ್ಯಕ್ತಿ ಹಾಗೂ ಉಡುಪಿ ಜಿಲ್ಲಾ ಸರಕಾರಿ ಅಭಿಯಾಜಕರು (ಪೋಕ್ಸೋ) ಉಡುಪಿ, ಶ್ರೀ ವಿಜಯವಾಸು ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತ ಉಡುಪಿ ನಿರೂಪಿಸಿ, ಶ್ರೀ ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀಮತಿ ಶಕಿಲಾ ಡಿ.ರಾವ್ ವಂದಿಸಿದರು. ಸುಮಾರು 485 ವಿದ್ಯಾರ್ಥಿಗಳು ಈ ಮಾಹಿತಿಯಿಂದ ಪ್ರಯೋಜನ ಪಡೆದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here