Thursday 18th, April 2024
canara news

ನವೋದಯ ಜೂನಿಯರ್ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಸಮಾರಂಭ

Published On : 21 Nov 2016   |  Reported By : Rons Bantwal


ನವೋದಯ ಶಾಲೆಯ ಶೇ. ನೂರು ಫಲಿತಾಂಶ ಅಭಿನಂದನೀಯ: ಸುಧೀರ್ ವಿ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.21: ಶಾಲೆಯ ವಿದ್ಯಾಥಿರ್sಗಳು ತುಂಬಾ ಮನೋರಂಜನಾಕಾರಿಯಾಗಿ ನೃತ್ಯ ಮಾಡಿದರು. ನವೋದಯ ಶಾಲೆಯ ಶೇಕಡಾ ನೂರು ಫಲಿತಾಂಶ ಬರುವುದರಿಂದ ನಮಗೆಲ್ಲಾ ಹೆಮ್ಮೆಯಾಗಿದೆ. ಇನ್ನೂ ಮುಂದೆ ಕೂಡಾ ಈ ಶಾಲೆಗೆ ನನ್ನ ಪೆÇ್ರೀತ್ಸಾಹ ಇರುತ್ತದೆ ಎಂದು ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ವಿದ್ಯಾನಿಧಿ ಸಂಗ್ರಹ ಸಮಿತಿ ಮುಖ್ಯ ಸಲಹೆಗಾರ ಸಲಹೆಗಾರ ಹಾಗೂ ಚರಿಷ್ಮಾ ಸಮೂಹದ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ತಿಳಿಸಿದರು.

ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಥಾಣೆ ಅಲ್ಲಿನ ಕಿಸನ್ ನಗರದಲ್ಲಿನ ನವೋದಯ ಕನ್ನಡ ಸೇವಾ ಸಂಘ ಸಂಚಾಲಿತ ನವೋದಯ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಜೂನಿಯರ್ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಔಪಚಾರಿಕ ಸಮಾರಂಭ ಉದ್ಘಾಟಿಸಿ ಸುಧೀರ್ ಶೆಟ್ಟಿ ಮಾತನಾಡಿದರು.

ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿ ಕಾರ್ಯಾಧ್ಯಕ್ಷ ಜಯ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಎಂಆರ್‍ಜಿ ಸಮೂಹ ಬೆಂಗಳೂರು ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ, ಗೌರವಾನ್ವಿತ ಅತಿಥಿüಗಳಾಗಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಉದ್ಯಮಿಗಳಾದ ಸುಂದರ್ ಎಂ.ಶಾಹ, ರಾಘವ ಎಸ್.ಶೆಟ್ಟಿ (ಹೊಟೇಲ್ ಗೋಪಾಲಾಶ್ರಮ), ಶಿವರಾಮ ಕೆ.ಶೆಟ್ಟಿ (ಸತ್ಕಾರ್ ರೆಸಿಡೆನ್ಸಿ ಮತ್ತು ನಿಧಿ ಸಂಗ್ರಹ ಸಮಿತಿ ಗೌರವಾಧ್ಯಕ್ಷ), ಮಾತೃಭೂಮಿ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ ನಿಧಿ ಸಂಗ್ರಹ ಸಮಿತಿ ಸದಸ್ಯ), ಸೇರಿದಂತೆ ಸಂಘದ ಉಪಾಧ್ಯಕ್ಷ ಕೇಶವ ಟಿ.ನಾಯಕ್, ಗೌ| ಕೋಶಾಧಿಕಾರಿ ಸುನಿಲ್ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ಶಶಿಧರ್ ಕೆ.ಶೆಟ್ಟಿ, ಜೊತೆ ಕೋಶಾಧಿಕಾರಿ ದಯಾನಂದ್ ಬಿ.ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಅನುರಾಧಾ ಎ.ವಾಡ್ಕರ್, ಅಜಿತಾ ಪಿ.ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಶಿವರಾಮ ಕೆ.ಶೆಟ್ಟಿ, ಸುಧೀರ್ ವಿ.ಶೆಟ್ಟಿ, ಸುಂದರ್ ಎಂ.ಶಾಹ, ಕೃಷ್ಣ ಪ್ಯಾಲೇಸ್‍ನ ಕೃಷ್ಣ ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿ ಹಾಗೂ ಬನ್ಸೂರಿ ಹೋಟೇಲಿನ ರತ್ನಾಕರ ಶೆಟ್ಟಿ, ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು. ಅಲ್ಲದೆ ಎಲ್ಲಾ ಕಾರ್ಯಗಳಲ್ಲಿ ಬೆನ್ನಿಗೆ ಬೆನ್ನು ಕೊಟ್ಟು ಶ್ರಮ ಪಟ್ಟ ಗೌ| ಪ್ರ| ಕಾರ್ಯದರ್ಶಿ ದಯಾನಂದ ಎಸ್.ಶೆಟ್ಟಿ ಮತ್ತು ಗೌ| ಕೋಶಾಧಿಕಾರಿ ಸುನಿಲ್ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಿದರು.

ಪ್ರಕಾಶ್ ಶೆಟ್ಟಿ ಮಾತನಾಡಿ ಕನ್ನಡ ಸೇವಾ ಸಂಘ ಬಹಳ ಒಳ್ಳೆಯ ಕಾರ್ಯ ಮಾಡಿದ್ದು, ನಮಗೆ ತುಂಬಾ ಸಂತೋಷವಾಗಿದೆ. ಈ ದಿನ ಶ್ರೀಮಂತರನ್ನು ನೋಡುವ ಬದಲಾಗಿ ನಿಮ್ಮನ್ನು ನೋಡಿ ನನಗೆ ಸಂತೋಷವಾಗುತ್ತದೆ. ನಾನು ಡಿಗ್ರಿ ಮಾಡಬೇಕೆಂದು ತುಂಬಾ ಆಸೆ ಇತ್ತು, ಆದರೆ ಆಥಿರ್sಕ ಪರಿಸ್ಥಿತಿಯಿಂದ ನನಗೆ ಕೈಗೂಡಲಿಲ್ಲ.ನಾನು 1200 ಮಕ್ಕಳಿಗೆ ದತ್ತು ಸ್ವೀಕಾರ ಮಾಡಿದ್ದೇನೆ. ಅಲ್ಲದೆ 500 ಮಕ್ಕಳಿಗೆ ಧನ ಸಹಾಯ ಮಾಡುತ್ತಿದ್ದೇನೆ. ಈ ಮಹತ್ವದ ಸಾಧನೆಗೆ ಶಿವರಾಮ ಶೆಟ್ಟಿ ಅವರ ಹೃದಯ ಶ್ರೀಮಂತಿಕೆ ಅಪಾರ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನಗೆ ತುಂಬಾ ಸಂತೋಷ ನೀಡಿದ್ದು, ನನ್ನ ಜೀವನದಲ್ಲಿ ಇಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿರಲಿಲ್ಲ. ನಿಮಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು. ಈ ಮಕ್ಕಳು ಹಾಗೂ ನವೋದಯ ಶಾಲೆಯೂ ಮುಂದಿನ ಭವಿಷ್ಯಕ್ಕೂ ಮಾದರಿಯಾಗಲಿಎಂದರು.

ದೇಶಭಿಮಾನ ಭಾಷಾಭಿಮಾನ ಇವರೆಲ್ಲರಾ ನಡುವೆ ಕನ್ನಡ ಸೇವಾ ಸಂಘ ಒಳ್ಳೆಯ ಕೆಲಸ ಮಾಡುತ್ತಿದೆ. ಕಳೆದ 47 ವರ್ಷದಿಂದ ಕಷ್ಟಪಟ್ಟು ನಡೆಸಿಕೊಂಡು ಬಂದ ಕನ್ನಡ ಸಂಘ ಎಲ್ಲಾ ಪದಾಧಿಕಾರಿಗಳಿಗೆ ನಾನೂ ಅಭಿನಂದನೆ ನೀಡುತ್ತೇನೆ. ನವೋದಯ ಹೊಸ ಕಟ್ಟಡ ಉದ್ಘಾಟೆನೆಯಿಂದ ನಮಗೆಲ್ಲರಿಗೂ ಸಂತೋಷವಾಗಿದೆ ಎಂದು ಪ್ರಭಾಕರ್ ಶೆಟ್ಟಿ ತಿಳಿಸಿದರು.


ಶಿವರಾಮ ಶೆಟ್ಟಿ ಅವರ ಸಾಧನೆ ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಾವೂ 12 ತಿಂಗಳಿನ ಒಳಗೆ ಕಟ್ಟಡ ನಿರ್ಮಾಣ ಮಾಡಿದ್ಡೇವೆ. ಇದರಲ್ಲಿ ಶಿವರಾಮಣ್ಣ ಅವರ ಪಾತ್ರ ಅಪಾರ. ಈ ದಿನ ಮಕ್ಕಳ ಶಿಸ್ತು, ಅಚ್ಚುಕಟ್ಟಾದ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಗುತ್ತಿದೆ. ಅಲ್ಲದೆ ನಾವೂ ಮಾಡಿದ ಒಳ್ಳೆಯ ಕೆಲಸ ಪರಿಪೂರ್ಣವಾಗಿದೆ. ವಿದ್ಯೆ ಎಂಬುದು ಬಹಳ ಅಮೂಲ್ಯವಾದದು. ನಮ್ಮೆಲ್ಲರ ಸಹಾಯ ಮುಂದೆಯೂ ನಿಮಗೆ ನೀಡುಲಾಗುವುದು ಎಂದು ಶಂಕರ್ ಶೆಟ್ಟಿ ನುಡಿದರು.

ಶಿವರಾಮ ಶೆಟ್ಟಿ ಮಾತನಾಡಿ ನಾನು ಕೂಡ ಬಡ ಕುಟುಂಬದಿಂದ ಬಂದವ. ನವೋದಯ ಶಾಲೆ ಶಿಸ್ತು ಮತ್ತು ಸಾಂಸ್ಕೃತಿಕವಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ನನ್ನ ಈ 25 ಲಕ್ಷದ ಕೊಡುಗೆ ಇದು ಅಳಿಲು ಸೇವೆ. ನಾನು ಈ ಕಾರ್ಯಕ್ಕೆ ಕೊಡುಗೆ ನೀಡಿದ್ದು ನನಗೆ ತುಂಬಾ ಹೆಮ್ಮೆಯ ವಿಷಯ. ನಾನು ನವೋದಯ ಕನ್ನಡ ಸೇವಾ ಸಂಘದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಸನ್ಮಾನದಿಂದ ನನಗೆ ಸಂತೋಷ ತಂದಿದೆ. ಇನ್ನೂ ಮುಂದೆ ಕೂಡ ನನ್ನ ಸಹಾಯ ನಿಮಗೆ ಇರುತ್ತದೆ ಎಂದರು.

ನಮಗೆಲ್ಲರಿಗೂ ಮಾರ್ಗದರ್ಶಕರಾದ ಶಿವರಾಮ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ನವೋದಯ ಶಾಲೆಯು ಇನ್ನೂ ಮುಂದೆಯೂ ಒಳ್ಳೆಯ ಫಲಿತಾಂಶ ತರಲಿ ಎಂದು ರಾಘವ ಶೆಟ್ಟಿ ತಿಳಿಸಿದರು.

ಈ ಸಮಾರಂಭವನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತದೆ. ನಾವೂ ಎಲ್ಲಾ ಗಣ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾವೂ ಇಂದಿನ ದಿನವನ್ನು ಅಮೂಲ್ಯ ದಿನ ಎಂದು ಸ್ವೀಕರಿಸುತ್ತೇವೆ. ನಾವೂ ಈ ಕಟ್ಟಡ ನಿರ್ಮಾಣ ಮಾಡಿದ್ದು ನಿಜವಾಗಿಯೂ ಹೆಮ್ಮೆಯ ವಿಷಯ. ಈ ಶಾಲೆ ಉತ್ತಮ ಫಲಿತಾಂಶವನ್ನು ಕೊಡುತ್ತಾ ಬಂದಿದೆ. ಶಿವರಾಮ ಶೆಟ್ಟಿ ಅವರು ತುಂಬಾ ಸಹಾಯ ಸಹಕಾರವನ್ನು ನೀಡಿದ್ದು ಅವರಿಗೆ ನಮ್ಮ ಕೃತಜ್ಞತೆಗಳು. ಈ ಸಂಘಕ್ಕೆ ಶಾಲೆಗೆ ಸಹಾಯ ಮಾಡಿದ ಎಲ್ಲಾ ದಾನಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಜಯ ಕೆ.ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ| ಸುರೇಂದ್ರ ವಿ.ಶೆಟ್ಟಿ, ಕೆ.ಡಿ.ಶೆಟ್ಟಿ, ಸಂಜೀವ ಶೆಟ್ಟಿ, ರತ್ನಾಕರ ಶೆಟ್ಟಿ ಬನ್ಸೂರಿ, ಕೆ.ಎಂ.ಶೆಟ್ಟಿ, ಸೀತಾರಾಮ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಚಂದ್ರಹಾಸ ರೈ ಬೊಳ್ನಾಡು, ಸಂಘದ ಮಾಜಿ ಅಧ್ಯಕ್ಷರುಗಳಾದ ಆರ್.ಹೆಚ್ ಬೈಕಂಪಾಡಿ, ಕೆ.ಎಸ್ ಬಂಗೇರ, ಸುಂದರ ವಿ.ಶೆಟ್ಟಿ, ಭಾಸ್ಕರ ಎನ್.ಶೆಟ್ಟಿ, ಸಂಘದ ವಿದ್ಯಾನಿಧಿ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಎಸ್.ಶೆಟ್ಟಿ, ಡಾ| ಸತ್ಯಪ್ರಕಾಶ್ ಎಸ್.ಶೆಟ್ಟಿ, ಚಂದ್ರಹಾಸ ಎಸ್.ಶೆಟ್ಟಿ, ಅಶೋಕ್ ಎಂ.ಕೋಟ್ಯಾನ್, ಸಿಎ| ಜಗದೀಶ್ ಬಿ.ಶೆಟ್ಟಿ, ಎಸ್.ಶ್ರೀನಾಥ್ ಶೆಟ್ಟಿ, ಅಧ್ಯಾಪಕ, ಶಿಕ್ಷಕೇತರ ವೃಂದ, ಪಾಲಕರು, ವಿದ್ಯಾಥಿರ್üಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸಮಾರಂಭದಲ್ಲಿ ಸಂಘದ ಸಂಸ್ಥಾಪಕ ದಿ| ಯಶೋಧರ ಶೆಟ್ಟಿ, ಶಿಕ್ಷಣ ಸಂಸ್ಥೆಯ ಸ್ಥಾಪಕರÀು ಹಾಗೂ ಅಗಲಿದ ಸರ್ವರಿಗೂ ಶ್ರದ್ಧಾಂಜಲಿ ಕೋರಲಾಯಿತು. ಅಂತೆಯೇ ಸೇವಾಕರ್ತರನ್ನು ಸ್ಮರಿಸಲಾಯಿತು.

ಗೌ| ಪ್ರ| ಕಾರ್ಯದರ್ಶಿ ದಯಾನಂದ ಎಸ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿಯ ವೃಂದದವರು ಪ್ರಾರ್ಥನೆಯನ್ನಾಡಿದರು. ದಯಾಸಾಗರ್ ಚೌಟ ಅವರು ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

ಮನೋರಂಜನೆ ಅಂಗವಾಗಿ ಸಂಗೀತ ಲಹರಿ, ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ವಿದ್ಯಾಥಿರ್ಗಳು `ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶಿಸಿದರು. ಕೃಷ್ಣರಾಜ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಾಹಿಸಿದರು. ಈ ಮೂಲಕ ಮೂರುದಿನಗಳ ಅದ್ದೂರಿ ಸಂಭ್ರಮ ಸಮಾಪನ ಕಂಡಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here