Wednesday 24th, April 2024
canara news

ಮಂಗಳೂರು ಪುರಭವನದಲ್ಲಿ 12ನೇ ವಾರ್ಷಿಕ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Published On : 23 Nov 2016   |  Reported By : Rons Bantwal


ವಿಶ್ವಾಸಭರಿತ ಸಮಾಜಕ್ಕೆ ಪ್ರಶಸ್ತಿಗಳು ಮಾದರಿ: ಸಚಿವ ಯು.ಟಿ ಖಾದರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮಂಗಳೂರು, ನ.22: ಪುರಸ್ಕಾರ ಗೌರವಗಳು ಇನ್ನಷ್ಟು ಸೇವೆ ಮಾಡಲು ಪೆÇ್ರೀತ್ಸಾಹದಾಯಕವಾಗಿ ವೆ. ದೀನದಳಿತರ ಸೇವೆಗೆ ತನ್ನ ಜೀವನ ಮುಡುಪಾಗಿಸಿ ಇಂದಿಲ್ಲಿ ಪುರಸ್ಕಾರಕ್ಕಾಗಿ ಭಾಜನರಾದ ಸುರೇಶ್ ಭಂಡಾರಿ ಅವರಿಗೆ ಇಡೀ ಕರ್ನಾಟಕ ಜನತೆ ಪರವಾಗಿ ಅಭಿನಂದಿಸುತ್ತೇನೆ. ಇವರ ಜೀವನ ಸಾಮಾಜಿಕ ಚಿಂತಕರಿಗೆ ಮತ್ತು ಯುವ ಜನತೆಗೆ ಮಾದರಿ. ಪ್ರಶಸ್ತಿ-ಪುರಸ್ಕಾರ, ಗೌರವಗಳು ಉತ್ಸುಕತೆಗೆ ಮಾದರಿ ಆಗಿದೆ. ಸಮಾಜ ಸೇವಕರದ್ದು ಶಾಶ್ವತ ಹೆಸರು ರೂಪಿಸಿಕೊಳ್ಳಲು ಇವು ಅನುಕರನೀಯ. ಮನುಷ್ಯ ಜಾತಿ ಧರ್ಮ ಪದೆದು ಭವಿಷ್ಯ ಬರೆಯಲಾರ. ಆದುದರಿಂದ ಹುಟ್ಟು ಸಾವುಗಳ ಮಧ್ಯೆ .ಧರ್ಮಗಳು ಸಲ್ಲದು. ಬದುಕಿನ ಆತ್ಮಾವಲೋಕನ ಮಾಡಿ ಮನುಷ್ಯ ಜೀವನ ಸಂಬಂಧದ ಆಯ್ಕೆ ನಮಗೆಲ್ಲರಿಗೂ ಅಗತ್ಯವಾಗಿದೆ. ಆದುದರಿಂದ ವಿಶ್ವಾಸಭರಿತ ಸಮಾಜಕ್ಕೆ ಪ್ರಶಸ್ತಿಗಳು ಮಾದರಿ ಆಗಲಿ. ಸಮಸ್ಯೆಗಳಿಲ್ಲದ ಮಾನವ ಮತ್ತು ಜಾಗವಿಲ್ಲ ಸಮಸ್ಯೆಗಳನ್ನು ಮೀರಿ ಬೆಳೆಯುವುದೇ ಮಾನವ ಜೀವನವಾಗಿದೆ. ಸ್ವರ್ಗ ಬಿಟ್ಟರೆ ಸಮಸ್ಯೆಗೆಳಿಲ್ಲದ ಜಾಗವಿಲ್ಲ. ಆದುದರಿಂದ ಸ್ವರ್ಗ ಸೇರಲು ಸಮಸ್ಯೆಮುಕ್ತ ಬದುಕು ರೂಪಿಸೋಣ. ಸಂಕೋಚ ಮನೋಭಾವ ಮುಕ್ತರಾಗಿ ಸರ್ವ ಧರ್ಮಗಳ ಆಚಾರಿಸೋಣ ಎಂದು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಸಂಜೆ ಮಂಗಳೂರು ಪುರಭವನದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ರೈ| ರೆ| ಡಾ| ಅಲೋಸಿಯಸ್ ಪಾವ್ಲ್ ಡಿ'ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಚಿವ ಖಾದರ್ ಸುರೇಶ್ ಭಂಡಾರಿ ಬಯೋಗ್ರಾಫಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದರು.

ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಕನ್ನಡ ಸಾಪ್ತಾಹಿಕವಾಗಿ ಪ್ರಕಾಶಿತಗೊಳ್ಳುವ `ಪಿಂಗಾರ' ವಾರಪತ್ರಿಕೆಯು ವಾರ್ಷಿಕವಾಗಿ ಪ್ರದಾನಿಸುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಾಯ್ಜಿವರ್ಲ್ಡ್ ಡಾಟ್‍ಕಾಮ್ ಸಂಪಾದಕಿ ಅನೀಷಾ ಫಾತಿಮಾ ಅವರು ಪಿಂಗಾರ ಅರಳಿಸಿ ಬತ್ತದ ಕಣಜದಲ್ಲಿರಿಸಿ ಉದ್ಘಾಟಿಸಿದರು.

ಕೇಮಾರು ಸಾಂದಿಪನಿ ಸಾಧನಾಶ್ರಮ ಕ್ಷೇತ್ರದ ಶ್ರೀ ಈಶ ವಿಠಲದಾಸ ಸ್ವಾಮಿಜಿ ಆಶೀರ್ವಚನ ನೀಡಿದ್ದು, ಗೌರವ ಅತಿಥಿüಗಳಾಗಿ ಕನ್ನಡ ಸಾಹಿತ್ಯ ಪರಿಷತ್ತ್ ಕರ್ನಾಟಕ ರಾಜ್ಯದ ಪೂರ್ವಾಧ್ಯಕ್ಷ ಪ್ರಶಸ್ತಿ ಸಮಿತಿ ಜಂಟಿ ಸಂಚಾಲಕ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಿ.ಜಿ ಪಿಂಟೋ, ಪ್ರಶಸ್ತಿ ಸಮಿತಿ ಸಂಯೋಜಕ ಫಾ| ವಿಲಿಯಂ ಮಿನೇಜಸ್, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ರೆ| ಫಾ| ಡೆನಿಸ್ ಮೊರಸ್ ಪ್ರಭು, ಜಂಟಿ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ವೇದಿಕೆಯಲ್ಲಿ ಆಸೀನರಾಗಿದ್ದು ಭಂಡಾರಿ ಸಮಾಜ ದ ಧೀಮಂತ ನಾಯಕ, ಕೊಡುಗೈದಾನಿ ಕಡಂದಲೆ ಸುರೇಶ್ ಸಂಜೀವ ಭಂಡಾರಿ ಅವರಿಗೆ 12ನೇ ವಾರ್ಷಿಕ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2016' ಪ್ರದಾನಿಸಿ ಅಭಿನಂದಿಸಿದರು.

ಇದು ನಮ್ಮೂರು ಇಡೀ ಕಡಂದಲೆಗೆ ಸಂದ ಗೌರವವಾಗಿದೆ. ಬಡವರಲ್ಲಿ ದೇವರು ಕಂಡ ಸುರೇ±ರು ಧನ್ಯರು. ಜನರೆಲ್ಲರೂ ಬಡವರಲ್ಲಿ ಭಗವಂತನನ್ನು ಕಾಣಬೇಕಾಗಿದೆ. ಕೊಟ್ಟು ಇನ್ನೂ ಕೊಟ್ಟಿಲ್ಲ ಎಂದು ತಿಳಿಯುವ ವ್ಯಕ್ತಿತ್ವ ಇವರದ್ದಾಗಿದೆ. ಇಂತಹ ಭಂಡಾರಿ ವನ್ನು ಭಗವಂತಹ ಭಂಡಾರವನ್ನು ಹೊಂದಿದ್ದಾರೆ. ಅವರಿಗೆ ನೀಡಿದ ಈ ಪ್ರಶಸ್ತಿ ಇನ್ನೂ ಗೌರವಯುತವಾಗಿದೆ ಎಂದು ಕೇಮಾರುಶ್ರೀ ತಿಳಿಸಿದರು.

ಬಿಷಪ್ ಅಲೋಸಿಯಸ್ ಪಾವ್ಲ್ ಮಾತನಾಡಿ ಮಹಾನ್ ವ್ಯಕ್ತಿಗಳ ಕಾರ್ಯ ಗುರುತಿಸುವಿಕೆ ಮಹತ್ತರದ್ದಾಗಿದೆ. ಸದಾ ಸತ್ಯ ನೀತಿಯಿಂದಾಗಿ ಜೀವನಕ್ಕೆ ಉತ್ತಮ ಮೌಲ್ಯ ನೀಡುವಂತಾಗಬೇಕು. ಸುರೇಶ್ ಭಂಡಾರಿ ಅವರಲ್ಲಿ ನನಗೆ ಅಭಿಮಾನ ಹೆಚ್ಚಿದ್ದು, ಗಳಿಕೆಯ ಬಹುಭಾಗ ದೀನದಲಿತ, ಶೋಷಿತರಿಗೆ ನೀಡುತ್ತಾ ಪರರಿಗಾಗಿ ಬದುಕ ಇವರ ಜೀವನ ಸ್ತುತ್ಯುರ್ಹ. ಶೋಷಿತರಿಗೆ ಸಾಂತ್ವನ ನೀಡುವುದೇ ದೇವರ ಸೇವೆಯಾಗಿದೆ. ಆಶ್ವರ್ಯವನ್ನಿಟ್ಟು ಸಂತೋಷ ಪಟ್ಟು ಬದುಕುವುದಕ್ಕಿಂತ ಸ್ವರ್ಗದ ಬದುಕಿಗಾಗಿ ಸೇವಾ ಐಶ್ವರ್ಯವನ್ನು ರೂಪಿಸುವ ಅಗತ್ಯವಿದೆ. ಭಂಡಾರಿ ಅವರ ಬದುಕು ಬಂಗಾರವಾಗಲಿ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಸುಶೀಲ್ ಎಂ.ನೊರೊನ್ಹಾ, ವಿನ್ಸೆಂಟ್ ಮಸ್ಕರೇನ್ಹಸ್, ಶಂಕರ್ ಕೆ.ಸುವರ್ಣ ಖಾರ್, ಕಡಂದಲೆ ಶೋಭಾ ಸುರೇಶ್ ಭಂಡಾರಿ, ಚಿತ್ರನಟ ಸೌರಭ್ ಸುರೇಶ್ ಭಂಡಾರಿ, ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಭಂಡಾರಿ, ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಸತೀಶ್ ಭಂಡಾರಿ, ಶೇಖರ್ ಭಂಡಾರಿ ಕಾರ್ಕಳ ಮತ್ತಿತರ ಗಣ್ಯರು ಮುಂಬಯಿ ಉಪಸ್ಥಿತರಿದ್ದರು.

ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮತ್ತು `ಪಿಂಗಾರ' ಸಾಪ್ತಾಹಿಕದ ಸಂಪಾದಕ, ಪ್ರಕಾಶಕ ರೇಮಂಡ್ ಡಿ'ಕುನ್ಹ್ಹಾ ತಾಕೋಡೆ ಸ್ವಾಗತಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮತ್ತು ಪ್ರಶಸ್ತಿ ಸಮಿತಿ ಸಂಚಾಲಕ ರೋಯ್ ಕಾಸ್ತೆಲಿನೋ ಪ್ರಸ್ತಾವಿಕ ನುಡಿಗಳನ್ನಾಡಿದರು. ಪಿಂಗಾರ ವ್ಯವಸ್ಥಾಪಕ ಸುನೀಲ್ ಡಿ'ಕುನ್ಹ್ಹಾ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕು| ರಿಯಾನಾ ಡಿ'ಕುನ್ಹ್ಹಾ ಸನ್ಮಾನಿತರನ್ನು ಪರಿಚಯಿಸಿದರು. ಸುರೇಖಾ ಎಳವರಾ ಕಾರ್ಯಕ್ರಮ ನಿರೂಪಿಸಿದರು. ನತಾಲಿಯಾ ಡಿ'ಕುನ್ಹ್ಹಾ ವಂದಿಸಿದರು. ಮನೋರಂಜನೆಯ ಅಂಗವಾಗಿ ಜೂನಿಯರ್ ರಾಜ್‍ಕುಮಾರ್ ಬಿರುದಾಂಕಿತ ಕೆ.ಆರ್ ಅಬ್ಬಾಸ್ ಕನ್ನಡ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ಪ್ರಸ್ತುತಿ ಗೊಳಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here