Saturday 20th, April 2024
canara news

ಕುಂದಾಪುರದಲ್ಲಿ ತೆರಾಲಿ ಪೂರ್ವಭಾವಿಯಾಗಿ ಭವ್ಯ ಮೆರವಣಿಗೆಯೊಂದಿಗೆ ಪರಮ ಪ್ರಸಾದದ ಆರಾಧನೆ

Published On : 28 Nov 2016   |  Reported By : Bernard J Costa


ಕುಂದಾಪುರ,ನ.28: ಹಲವು ಕ್ರೈಸ್ತ ಧರ್ಮ ಕೇಂದ್ರಗಳ ಮಾತಾ ಧರ್ಮಕೇಂದ್ರವಾಗಿದ್ದ ಸುಮರು 446 ವರ್ಷಗಳ ಇತಿಹಾಸ ಇರುವ “ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ನೆಡೆಯುವ ಪರಮ ಪ್ರಸಾದದ ಆರಾಧನೆ ‘ಸಮುದಾಯದ ಐಕ್ಯತೆ ದಿವ್ಯ ಪರಮ ಪ್ರಸಾದದ ಶ್ರೇಷ್ಠತೆ’ ಎಂಬ ಧ್ಯೇಯದೊಂದಿಗೆ “ಪರಮ ಪ್ರಸಾದ ಆರಾಧನೆ” ಭಾನುವಾರದಂದು ನೆಡೆಯಿತು.

 

ಇಗರ್ಜಿಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ, ಮತ್ತು ಅನೇಕ ಧರ್ಮ ಭಗಿನಿಯರೊಡನೆ ಉರಿಯುವ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಅಲಂಕ್ರಿತ ಕೋಡೆ ಮತ್ತು ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.

ನಂತರ ಪರಮ ಪ್ರಸಾದದೊಡನೆ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ನೆಡೆಸಿದ ಉಜ್ವಾಡ್ ಪತ್ರಿಕೆಯ ಸಂಪಾದಕ ವ|ಧರ್ಮಗುರು ಚೇತನ್, ಕಾಪುಚಿನ್ ‘ಪ್ರಪಂಚದಲ್ಲಿ ಒಂದು ಕಡೆ ಜನ ಹಸಿವೆ ಬಾಯಾರಿಕೆಯಿಂದ ಸಾಯುತ್ತಿದ್ದಾರೆ, ಇನ್ನೊಂದಡೆ ಉಂಡು ತಿಂದು ತೇಗಿ ಬಿಸಾಡುತಿದ್ದಾರೆ, ಈ ಪ್ರಪಂಚದ ಆಸ್ತಿ ದೇವರು ಯಾರಿಗೂ ಹಂಚಿಕೊಡಲಿಲ್ಲಾ, ಕೆಲವು ಮಾನವರು, ತಮ್ಮ ಸ್ವಾರ್ಥ ದುರಾಶೆಯಿಂದ ಕೆಲವರ ಪಾಲಿಗೆ ಇಲ್ಲವೆಂಬತ್ತೆ ಮಾಡಿದ್ದಾರೆ ಅದಕ್ಕಾಗಿಯೆ ಎಸು ತಮ್ಮಲಿದ್ದದನ್ನು ಹಂಚಿಕೊಳ್ಳಿ ಎಂದು ಹೇಳಿದರು. ಎಸು ನೀಡಿದ ಪರಮ ಪ್ರಸಾದ ನಿತ್ಯ ಜೀವಕ್ಕೆ ಆಧಾರ, ಆ ಒಂದು ರೊಟ್ಟಿ ಹಲವು ಕಾಳುಗಳಿಂದ ಕೂಡಿದ ರೊಟ್ಟಿ ಐಕ್ಯತೆಯನ್ನು ಸಂಕೇತಿಸುತ್ತಿದೆ, ನಾವು ಸೇವೆ ಮಾಡಿ ನಮ್ಮ ಜೋಳಿಗೆಯನ್ನು ತೆರೆದಿಟ್ಟು, ಇಲ್ಲದವರಿಗೆ, ಅನಾಥರಿಗೆ, ಬಡ ಬಗ್ಗರಿಗೆ ಹಂಚಿಕೊಂಡು ಎಸುವಿನ ನೀಜ ಶಿಸ್ಯರಾಗೋಣ ಹಾಗೇಯೆ ಪ್ರೇಮ ಪ್ರೀತಿ, ಮಮತೆ ಕೂಡ ಹಂಚಿಕೊಂಡು ಎಲ್ಲಾ ಸಮುದಾಯದ ಜನರು ಮಾನವೀಯತೆಯಿಂದ ಐಕ್ಯತೆಯಿಂದ ಇರೋಣ’ ಎಂದು ಅವರು ಸಂದೇಶ ನೀಡಿದರು.

ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ವ|ಅನೀಲ್ ಡಿ’ಸೋಜಾ ಹಾಜರಿದ್ದು ಅವರು ಎಲ್ಲರನ್ನು ವಂದಿಸಿದರು ಸಹಾಯಕ ಧರ್ಮ ಗುರು ವ|ಜೆರಲ್ಡ್ ಸಂದೀಪ್ ಡಿಮೆಲ್ಲೊ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಹಲವು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷರು,ಕಾರ್ಯದರ್ಶಿ ಸದಸ್ಯರು ಸಹಸ್ರಾರು ಭಕ್ತರು ಈ ಪ್ರಾಥನ ವಿಧಿಯಲ್ಲಿ ಪಾಲ್ಗೊಂಡ್ಡರು




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here