Saturday 20th, April 2024
canara news

ಮಠ-ಮಠಾಧಿಪತಿಗಳಿಂದ ಸಾಮಾಜಿಕ ಏಕತೆ: ವಿ.ಆರ್ ಗೌರೀಶಂಕರ್

Published On : 29 Nov 2016   |  Reported By : Rons Bantwal


ಮುಂಬಯಿ (ಬದಿಯಡ್ಕ), ನ.29: ಮಠ, ಮಠಾಧಿಪತಿಗಳ ಮೂಲಕ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆಗಳ ಅರಿವು ಭಕ್ತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಕ್ರಮಗಳ ಅನೂಚವಾದ ಅನುಸರಣೆಯೊಂದಿಗೆ ಸಾಂಸ್ಕøತಿಕವಾಗಿಯೂ, ಧಾರ್ಮಿಕವಾಗಿಯೂ ಎಡನೀರು ಮಠ ತನ್ನದೇ ಕೊಡುಗೆ ನೀಡುವುದರ ಮೂಲಕ ಗುರುತಿಸಿಕೊಂಡಿದೆಯೆಂದು ಶೃಂಗೇರಿ ಶ್ರೀಮಠದ ಆಡಳಿತಾಧಿಕಾರಿ ವಿ.ಆರ್ ಗೌರೀಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಎಡನೀರು ಮಠದ ಹಿಂದಿನ ಮಠಾಧೀಶರಾದ ಈಶ್ವರಾನಂದ ಭಾರತೀ ಶ್ರೀಪಾದಂಗಳ ಆರಾಧನೋತ್ಸವದ ಅಂಗವಾಗಿ ನಡೆದ ಅಭಿನಂದನೆ ಮತ್ತು ವವಿಧ ಕಾರ್ಯಕ್ರಮಗಳನ್ನು ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಧಾರ್ಮಿಕ ಶ್ರದ್ದೆ ಹಾಗೂ ನಂಬಿಕೆಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವುದ ಜೊತೆಗೆ ಧಾರ್ಮಿಕತೆಯ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಲ್ಲಿ ಮಠಗಳು ಪ್ರಧಾನ ಪಾತ್ರ ವಹಿಸುತ್ತವೆ.ಧರ್ಮ ಮತ್ತು ಜೀವನ ಕ್ರಮಗಳ ಮಧ್ಯದ ಗೊಂದಲಗಳಿಗೆ ಶ್ರೀಮಠಗಳ ಮೂಲಕ ನೈಜ ಅರ್ಥಗಳನ್ನು ಕಂಡುಕೊಳ್ಳಲಾಗುತ್ತಿದ್ದು ಶ್ರೀಎಡನೀರು ಮಠ ಕಲೆ,ಸಂಸ್ಕøತಿಗಳ ಪ್ರೋತ್ಸಾಹಗಳಿಗೆ ಮಾದರಿಯಾಗಿ ಮಾರ್ಗದರ್ಶಕವಾಗಿದೆಯೆಂದು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಂ ಭಟ್ ಅಧ್ಯಕ್ಷತೆ ವಹಿಸಿದ್ದರು.ಉದುಮ ಶಾಸಕ ಕುಂಞÂರಾಮನ್ ಮುಖ್ಯ ಅತಿಥಿüಗಳಾಗಿ ಉಪಸ್ಥಿತರಿದ್ದು, ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ ಹಾಗೂ ಕೊಯಂಬುತ್ತೂರು ಆರ್ಯವೈದ್ಯಶಾಲೆಯ ನಿರ್ದೇಶಕ ಡಾ| ಕೆ.ಜಿ ರವೀಂದ್ರನ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ಎಂ.ಎಲ್ ಸಾಮಗ ಹಾಗೂ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಗೈದರು.

ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಗುರುವಂದನೆ ಸಲ್ಲಿಸಿದರು. ಮಠದ ಕಾರ್ಯನಿ ರ್ವಹಣಾಧಿಕಾರಿ ಜಯರಾಮ ಮಂಜತ್ತಾಯ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಐ.ವಿ ಭಟ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ವಂದಿಸಿದರು. ಬಳಿಕ ಬೆಂಗಳೂರಿನ ಎಂ.ಎಸ್ ಪ್ರಸಾದ್ ಮತ್ತು ತಂಡವು ಮ್ಯೇಂಡಲಿನ್ ನಿನಾದ ಪ್ರಸ್ತುತಗೊಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here