Saturday 20th, April 2024
canara news

ಭಾರತ ಮಾತಾ ಪ್ರೌಢ ಶಾಲೆ ಮುದೂರು.ಇದರ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ 22.11.2016 ರಂದು ನಡೆಯಿತು.

Published On : 30 Nov 2016   |  Reported By : Bernard J Costa


ಕಾರ್ಯಕ್ರಮದ ಅಧ್ಯಕ್ಷತೆ ಪರಮಪೂಜ್ಯ ಲಾರೆನ್ಸ್ ಎಮ್. ಟಿ. ಧರ್ಮಾಧ್ಯಕ್ಷರು, ಬೆಳ್ತಂಗಡಿ ಧರ್ಮಪ್ರಾಂತ್ಯ ಇವರು ವಹಿಸಿದ್ದರು. ರಜತ ಮಹೋತ್ಸವದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಐ.ಎ.ಎಸ್. ಇವರು ನೆರವೇರಿಸಿದರು.

 

ಸಭೆಯಲ್ಲಿ ಗೌರವ ಉಪಸ್ಥಿತಿ :

ಶ್ರೀ ಅನಂತ ಮೂರ್ತಿ ಅಧ್ಯಕ್ಷರು ಗ್ರಾಂ. ಪಂ. ಜಡ್ಕಲ್.
ಶ್ರೀ ರಾಜು ಪೂಜಾರಿ ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ.
ಶ್ರಿ ನಾಗೇಶ್ ನಾಯಕ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು.
ವಂ|| ಫಾ|| ಸಭಾಸ್ಟಿನ್ ಸಿ.ಕೆ. ಕಾರ್ಯದರ್ಶಿ ಕೆ.ಸಿ.ಇ.ಸಿ.ಎಸ್. ಬೆಳ್ತಂಗಡಿ.
ವಂ|| ಫಾ|| ಜೋಸ್ ಪೂವತ್ತಿಂಗಲ್ ಧರ್ಮಗುರುಗಳು. ಸೆಂಟ್ ಜಾರ್ಜ್ ಪೆÇರೊನಾ ಚರ್ಚ್ ಜಡ್ಕಲ್.
ವಂ|| ಫಾ|| ಕ್ಸೆವಿಯರ್ ಗೂಮ್ಸ್ ಧರ್ಮಗುರುಗಳು ಇಮ್ಯಾನುಕ್ಯುಲೇಟ್ ಕನ್ಸೆಪ್ಷನ್ ಚರ್ಚ್ ಮುಲ್ಕಿ.
ಸಿ|| ಜೊಯಿಸ್ ಮರಿಯಾ ಸಿ.ಎಮ್. ಸಿ. ಪೆÇ್ರವಿನ್ಸಿಯಲ್ ಸುಪೀರಿಯರ್ ಸೆಂಟ್ ಯೂಪ್ರಾಸ್ಯ ಪೆÇ್ರ್ರವಿನ್ಸ್ ಬೆಂಗಳೂರು.
ವಂ|| ಫಾ|| ಜೊಜಿ ವಡಕ್ಕೇವೀಟ್ಟಿಲ್ ಸಂಚಾಲಕರು.
ಶ್ರೀ ಪ್ರಸಾದ್ ಪಿ. ಕೆ. ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ .

ಮುಖ್ಯ ಶಿಕ್ಷಕಿ ಸಿ || ಆನಿಗ್ರೇಸ್ ರಜತ ಮಹೋತ್ಸವದ ವರದಿಯನ್ನು ವಾಚಿಸಿದರು. ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಾಜಿ ಸಂಚಾಲಕರನ್ನು, ವರ್ಗಾವಣೆಗೊಂಡ ಶಿಕ್ಷಕ ವೃಂದ ಕೊಡುಗೈದಾನಿಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪರಮ ಪೂಜ್ಯ ಲಾರೆನ್ಸ್ ಎಂ. ಟಿ. ಧರ್ಮಾಧ್ಯಕ್ಷರು ಬೆಳ್ತಂಗಡಿ ಧರ್ಮಪ್ರಾಂತ್ಯ. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ ಬದಲಾದ ಪರಿಸ್ಥಿತಿಯಲ್ಲಿ ಕನ್ನಡ ಮಾದ್ಯವ ಶಿಕ್ಷಣ ಸಂಸ್ಥೆಗಳನ್ನು ಪೆÇ್ರೀತ್ಸಾಹಿಸಬೇಕು. ಇಂಗ್ಲೀಷ್ ಬೇಕು ಆದರೆ ವ್ಯಾಮೋಹ ಬೇಡ ಎಂದು ಜನತೆಗೆ ಮನಮುಟ್ಟುವಂತೆ ವಿವರಿಸಿದರು.

ಸಭಾ ಕಾರ್ಯ ಕ್ರಮದ ನಂತರ ಸೇರಿದ ಎಲ್ಲರಿಗೂ ಭೋಜನ ಕೂಟದ ವ್ಯವಸ್ಥೆ ಮಾಡಲಾಯಿತು.ನಂತರ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ ಜರುಗಿತು.

ಸಂಚಾಲಕರಾದ ವಂ|| ಫಾ|| ಜೊಜಿ ವಡಕ್ಕೇವೀಟ್ಟಿಲ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಶ್ರೀಧರ ವಂದನಾರ್ಪಣೆಗೈದರು. ಶ್ರೀ ಚಂದ್ರ ಶೇಖರ್ ಕಾರ್ಯಕ್ರಮ ನಿರೂಪಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here