Thursday 25th, April 2024
canara news

ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ವಾರ್ಷಿಕ ಮಹಾ ಉತ್ಸವ

Published On : 01 Dec 2016   |  Reported By : Bernard J Costa


ಕುಂದಾಪುರ,ನ.30: “ನಿಮ್ಮ ಮಾತಿನಂತೆ ಪ್ರೀತಿ ಸೇವೆ ಒಗ್ಗಟ್ಟಿನ ಕುಟುಂಬವಾಗಲಿ ” ಎಂಬ ಧ್ಯೇಯ ವಾಕ್ಯದೊಂದಿಗೆ ಸಂಭ್ರಮ ಹಾಗೂ ಭಕ್ತಿ ಪೂರ್ವಕವಾದ ಪವಿತ್ರ ಬಲಿ ಪೂಜೆಯನ್ನು ಅರ್ಪಿಸುವ ಮೂಲಕ ಕುಂದಾಪುರ ರೋಜರಿ ಮಾತೆ ಇಗರ್ಜಿಯ ವಾರ್ಷಿಕ ಮಹಾ ಹಬ್ಬದ ಉತ್ಸವನ್ನು ಬುದವಾರದಂದು ಆಚರಿಸಲಾಯಿತು.

 

 

ಇದರ ನೇತ್ರತ್ವನ್ನು ವಹಿಸಿದ ಧಾರ್ಮಿಕ ಎಪಿಸ್ಕೊಪಲ್ ಧರ್ಮಗುರು ವಂ| ಜೋನ್ ಪಿಯುಸ್ ಡಿಸೋಜಾ “ದೇವರ ಯೋಜನೆಗಳನ್ನು ಒಪ್ಪಿಕೊಳ್ಳುವುದು, ಸೇವಾ ತ್ಯಾಗದ ನನೋಭಾವವನ್ನು ಬೆಳಸಿಕೊಳ್ಳುವುದು, ಒಗ್ಗಟ್ಟು ಸಂತೊಷದಿಂದ ಬದುಕುವುದು ಮತ್ತು ಕಶ್ಟ ಸಂಕಷ್ಟದಲ್ಲಿರುವಾಗ ಶಿಲುಬೆಯನ್ನು ಅಪ್ಪಿಕೊಳ್ಳುವುದರ ಮೂಲಕ ಇವೆಲ್ಲವನ್ನು ನಿಮ್ಮ ಮಾತಿನಂತೆ ನೆಡೆಯಲೆಂದು ದೇವರ ಮೇಲೆ ಭರವಶೆಯಿಟ್ಟು ಒಪ್ಪಿಕೊಳ್ಳುವುದು, ದೇವರ ಯೋಜನೆಯಂತೆ ನಾವು ನೆಡೆದುಕೊಂಡರೆ ಸುಖ, ಶಾಂತಿ, ಸಂತೊಷವು ಲಭಿಸುವುದೆಂದು’ ಅವರು ಸಂದೇಶ ನೀಡಿದರು.

ಈ ಉತ್ಸವದ ಬಲಿ ಪೂಜೆಯಲ್ಲ್ಲಿ ಈಹಿಂದೆ ಈ ಧರ್ಮ ಕೇಂದ್ರದಲ್ಲಿ ಸೇವೆ ನೀಡಿದ ವಂ|ಜೆ.ಬಿ.ಕ್ರಾಸ್ತಾ ಧರ್ಮ ಕೇಂದ್ರದ ಪ್ರಧಾನರಾದ ಧರ್ಮಗುರು ವಂ|ಅನಿಲ್ ಡಿಸೋಜಾ, ಭಾಗವಹಿಸಿ ವಂದಿಸಿದರು. ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್, ಕುಂದಾಪುರ ವಲಯದ ಧರ್ಮ ಕೇಂದ್ರಗಳ ಅನೇಕ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಧರ್ಮಕೇಂದ್ರದ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಬಲಿಪೂಜೆಯಲ್ಲಿ ಪಾಲ್ಗೊಂಡು ವಂದನಾರ್ಪಣೆ ಸಲ್ಲಿಸಿದರು.

ಅನೇಕ ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜಾನ್ಸನ್ ಆಲ್ಮೇಡಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here