Tuesday 16th, April 2024
canara news

ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಸಿದ್ಧಗೊಳಿಸಲಿದೆ ಕಟೀಲೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ ಆಸ್ಪತ್ರೆ

Published On : 04 Dec 2016   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.03: ಮಂಗಳೂರು ಅಲ್ಲಿನ ಶ್ರೀ ಕ್ಷೇತ್ರ ಕಟೀಲುನಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ನೂತನ ಆಸ್ಪತ್ರೆ ಸ್ಥಾಪಿಸಲು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಆಡಳಿತ ಟ್ರಸ್ಟೀ ಡಾ| ಸುರೇಶ್ ಎಸ್.ರಾವ್ ಕಟೀಲು ಸಿದ್ಧತೆ ನಡೆಸಿದ್ದು, ಕಳೆದ ವಾರ ಮಣಿಪಾಲ ವಿಶ್ವವಿದ್ಯಾಲಯ ಮತ್ತು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಈ ಯೋಜನೆಯ ಒಡಂಬಡಿಕೆ ಪತ್ರೆಕ್ಕೆ ಸಹಿ ಮಾಡಿರುವರು.

ಆಸ್ಪತ್ರೆಗೆ ಕಟೀಲು ಸಂಜೀವಿನಿ ಆಸ್ಪತ್ರೆ ಎಂದು ಹೆಸರಿಡಲಾಗುತ್ತಿದ್ದು, ಆಸ್ಪತ್ರೆಯನ್ನು ಆಥಿರ್sಕವಾಗಿ ಹಿಂದುಳಿದವರಿಗಾಗಿ ಟ್ರಸ್ಟ್ ನಿರ್ಮಿಸಿಕೊಡಲಿದೆ. ಮಣಿಪಾಲ ವಿಶ್ವವಿದ್ಯಾಲಯವು ಆಸ್ಪತ್ರೆಯ ಸೇವಾಡಳಿತ ನಡೆಸಲಿದೆ. ಒಪ್ಪಂದಂತೆ 9 ಜನರ ಸಲಹಾ ಮಂಡಳಿ ಇದ್ದು ಟ್ರಸ್ಟ್‍ನ ಇಬ್ಬರು, ಮಣಿಪಾಲ ವಿವಿಯಿಂದ ಐವರು ಕಟೀಲು ದೇವಸ್ಥಾನದ ವತಿಯಿಂದ ಓರ್ವರು ಹಾಗೂ ಸ್ಥಳೀಯರೋರ್ವ ಗಣ್ಯರು ಇದ್ದು, ಸುದೀರ್ಘವಾದ ಮಾತುಕತೆ ಮೂಲಕ ತಿಳಿವಳಿಕೆ ಪತ್ರಕ್ಕೆ ವಿ.ವಿ ಕುಲಸಚಿವ ಡಾ| ನಾರಾಯಣ ಸಭಾಹಿತ್ ಹಾಗೂ ಟ್ರಸ್ಟ್‍ನ ಟ್ರಸ್ಟಿ ಡಾ| ಸುರೇಶ ಎಸ್.ರಾವ್ ಅಂಕಿತ ಹಾಕಿರುವರು. ಈ ಸಂದರ್ಭದಲ್ಲಿ ವಿ.ವಿ ಕುಲಪತಿ ಡಾ| ಎಚ್.ವಿನೋದ ಭಟ್, ಉಪ ಕುಲಪತಿ ಡಾ| ಹೆಚ್.ಎಸ್ ಬಲ್ಲಾಳ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರುಗಳಾದ ಡಾ| ಎಂ.ದಯಾನಂದ ಮಣಿಪಾಲ, ಡಾ| ಆನಂದ ವೇಣುಗೋಪಾಲ್ ಮಂಗಳೂರು, ಕೆಎಂಸಿ ಮಂಗಳೂರು ಇದರ ಸಹ ವಿದ್ಯಾಧಿಕಾರಿ ಡಾ| ಬಿ.ಉಣ್ಣಿಕೃಷ್ಣನ್, ಸಾಮಾನ್ಯ ಸೇವೆಗಳ ನಿರ್ದೇಶಕ ಬದರಿನಾರಾಯಣ್, ಯೋಜನಾಧಿಕಾರಿ ರವಿರಾಜ್, ಕಿಶೋರ್ ಎಲ್.ಕಾಮತ್, ದೇವಸ್ಥಾನ ಟ್ರಸ್ಟ್‍ನ ಹರಿನಾರಾಯಣದಾಸ ಅಸ್ರಣ್ಣ ಹಾಗೂ ವಿಶ್ವಸ್ಥ ಸದಸ್ಯ ಕೆ.ರವೀಂದ್ರನಾಥ ಪೂಂಜ ಉಪಸ್ಥಿತರಿದ್ದರು.

ಕಟೀಲು ಒಂದು ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿನ ಜನತೆಗೆ ಆಸ್ಪತೆಗಳು ಸಮೀಪದಲ್ಲಿದ ಕಾರಣ ಒಂದೇ ಮಂಗಳೂರು ಅಥವಾ ಮಣಿಪಾಲಕ್ಕೆ ತೆರಳಬೇಕಾಗುತ್ತದೆ. ಅನೇಕಬಾರಿ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲು ಇಷ್ಟು ದೂರಕ್ಕೆ ಒಯ್ಯುತ್ತಿರುವಂತೆಯೇ ದುರ್ಮರಣಕ್ಕೀಡದ ಘಟನೆಗಳಿವೆ. ಇವನ್ನೆಲ್ಲಾ ಮನವರಿಸಿ ಸ್ಥಾನೀಯ ಸುಮಾರು 10 ಗ್ರಾಮಗಳ ಜನತೆಗೆ ಅನೇಕ ಸೌಲಭ್ಯಗಳ ಧರ್ಮಾರ್ಥ ಸೇವೆ ಒದಗಿಸುವ ಉದ್ದೇಶ ನಮ್ಮದಾಗಿದೆ. ಸುಮಾರು ಒಂದುವರೆ ಎಕ್ರೆ ಜಾಗದಲ್ಲಿ ರಚಿಸಲ್ಪಡುವ ಈ ಆಸ್ಪತ್ರೆಗೆ 2017ರ ಫೆಬ್ರವರಿ ತೃತೀಯ ವಾರದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಆಸ್ಪತ್ರೆ ನಿರ್ಮಾಣ ಕಾಮಗಾರಿ ಸುಮಾರು ಒಂದುವರೆ ವರ್ಷದÀಲ್ಲಿ ಪೂರ್ಣಗೊಳ್ಳಲಿದ್ದು, 2018ರ ಮೇ ತನಕ ಸುಸಜ್ಜಿತ ಆಸ್ಪತ್ರೆ ಸೇವಾರ್ಪಣೆ ಗೊಳ್ಳುವ ನಿರೀಕ್ಷೆಯಿದೆ. 10 ಬೆಡ್‍ಗಳುಳ್ಳ ಐಸಿಯು ಘಟಕ, ತುರ್ತುನಿಗಾ ಘಟಕ, 6 ಶಸ್ತ್ರಚಿಕಿತ್ಸಾ ಗೃಹ (ಆಪರೇಶನ್ ಥಿüಯೇಟರ್‍ಗಳು), 2ಆ ಎಕೊ ಮೆಷಿನ್, ರೋಗ ವಿಜ್ಞಾನ ಸಾಧನ (ಪೆಥಾಲಾಜಿ), ರಕ್ತ ಸಂಗ್ರಹಣಾ ಘಟಕ, ಸೊನೋಗ್ರಾಫಿ, ಸಿಟಿಸ್ಕ್ಯಾನ್ ಸೇರಿದಂತೆ ಅತ್ಯಾಧುನಿಕ ಸೌಲತ್ತುಗಳುಳ್ಳ ವಿನೂತನ ಶೈಲಿಯ ಆಸ್ಪತ್ರೆ ಇದಾಗಲಿzರೀಂದು ಡಾ| ಸುರೇಶ್ ರಾವ್ ತಿಳಿಸಿದ್ದಾರೆ.

ಡಾ| ಸುರೇಶ್ ಎಸ್.ರಾವ್ ಕಟೀಲು:
ವೈಧ್ಯೋ ನಾರಾಯಣೋ ಹರಿ ಡಾ| ಸುರೇಶ್ ರಾವ್ ಸುಮಾರು 1988ರಲ್ಲಿ ಮುಂಬಯಿ ಅಂಧೇರಿ ಪೂರ್ವದಲ್ಲಿ ಸಂಜೀವನಿ ಆಸ್ಪತ್ರೆ ಆರಂಭಿಸಿದ್ದ ಡಾ| ಸುರೇಶ್ ರಾವ್ 2000 ನೇ ಇಸವಿಯಲ್ಲಿ ಇಲ್ಲಿ ಐಸಿಯು ಜೊತೆಗೆ 50 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆಯನ್ನು ರೂಪಿಸಿದ್ದರು. ತುಳುಕನ್ನಡಿಗರಿಗೆ ವಿಶೇಷವಾದ ಸೇವೆಯನ್ನೊದಗಿಸುವ ಸುರೇಶ್ ರಾವ್ ಅವರು ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮುಂಬಯಿ ಪ್ರಾಂತ್ಯದ ಮಾಜಿ ಕಾರ್ಯಾಧ್ಯಕ್ಷರಾಗಿ ಸೇವಾ ನಿರತರಾಗಿದ್ದ ಇವರು ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿ ಕಾರ್ಯನಿರತರಾಗಿದ್ದಾರೆ. ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಣಾ ಟ್ರಸ್ಟಿ ಆಗಿ, ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜುನ ಸಂಸ್ಕೃತ ಕಾಲೇಜ್‍ನ ರೂವಾರಿ ಆಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾಗಾರರಾಗಿ ಸದಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರು ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ ಅಧ್ಯಕ್ಷರಾಗಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೃಹನ್ಮುಂಬಯಿಯಲ್ಲಿನ ಹೆಸರಾಂತ ತುಳು-ಕನ್ನಡಿಗ ವೈದ್ಯಾಧಿಕಾರಿ ಎಂದೆಣಿಸಿದ ಡಾ| ಸುರೇಶ್ ಅವರು ಕಟೀಲು ಸಂಜೀವ ರಾವ್ ಮತ್ತು ಶ್ರೀಮತಿ ಕಾತ್ಯಾಯಿನಿ ರಾವ್ ದಂಪತಿ ಸುಪುತ್ರರಾಗಿದ್ದು, ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಎಸ್.ರಾವ್, ಮಕ್ಕಳಳಾದ ಪಲ್ಲವಿ ಕಲ್ಲೂರಾಯ ಮತ್ತು ರಾಘವೇಂದ್ರ ಕಲ್ಲೂರಾಯ (ಅಳಿಯ) ಹಾಗೂ ಡಾ| ಶೃತಿ ಎಸ್.ರಾವ್ ಅವರನ್ನೊಳಗೊಂಡ ರಾವ್ ಮುಂಬಯಿಯ ಜುಹೂ ನಿವಾಸಿಯಾಗಿದ್ದಾರೆ. ಸುರೇಶ್ ರಾವ್‍ರ ಆಯ್ಕೆಗೆ ಅನೇಕ ಗಣ್ಯರು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದು, ಬಿಎಸ್‍ಕೆಬಿ ಅಸೋಸಿಯೇಶನ್‍ನ ಗೋಕುಲಕ್ಕೆ ನೂತನ ಮಂದಿರ, ಭವನ ರೂಪಿಸುವ ಭವ್ಯ ಯೋಜನೆಯ ಸಂಕಲ್ಪ ಹೊಂದಿರುವ ಕನಸು ನನಸಾಗಲಿ ಎಂದು ಶುಭಾರೈಸಿದ್ದಾರೆ.

ಸಂಜೀವಿನಿ ಚಾರಿಟೇಬಲ್ ಟ್ರಸ್ಟ್:
ಈ ಟ್ರಸ್ಟ್‍ನಲ್ಲಿ ಡಾ| ಸುರೇಶ ಎಸ್.ರಾವ್ (ವಿಶ್ವಸ್ಥ ಮಂಡಳಿ ಅಧ್ಯಕ್ಷರು), ವಿಜಯಲಕ್ಷಿ ್ಮೀ ಎಸ್.ರಾವ್, ಡಾ| ಶ್ರುತಿ ಎಸ್.ರಾವ್, ಲಕ್ಷ್ಮೀಶ ಆಚಾರ್ಯ, ಡಾ| ಪ್ರಶಾಂತ್ ರಾವ್ ಮತ್ತು ಡಾ| ದೇವಿಪ್ರಸಾದ್ ರಾವ್ (ವಿಶ್ವಸ್ಥ ಮಂಡಳಿ ಸದಸ್ಯರು) ಆಗಿ ಸೇವಾ ನಿರತರಾಗಿದ್ದಾರೆ.

ಡಾ| ಸುರೇಶ್ ಎಸ್.ರಾವ್ ಕಟೀಲು:
ವೈಧ್ಯೋ ನಾರಾಯಣೋ ಹರಿ- ಡಾ| ಸುರೇಶ್ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ನಿವಾಸಿ ದರ್ಜಿ ವೃತ್ತಿಯ ಸಂಜೀವ ರಾವ್ ಮತ್ತು ಮಂಗಳೂರು ತಾಲೂಕಿನ ಸುರತ್ಕಲ್ ಕೃಷ್ಣಾಪುರ ಇಲ್ಲಿನ ಶ್ರೀಮತಿ ಕಾತ್ಯಾಯಿನಿ ರಾವ್ ದಂಪತಿಯ ಸುಪುತ್ರನಾಗಿ ಕೃಷ್ಣಾಪುರದಲ್ಲಿ 02.05.1954ರಲ್ಲಿ ಹಿರಿಯ ಸುಪುತ್ರನಾಗಿ ಜನ್ಮ ಪಡೆದವರೇ ಸುರೇಶ್ ರಾವ್. ತಂದೆಯವರು ಮುಂಬಯಿಯ ವಿಲೇಪಾರ್ಲೆಯಲ್ಲಿನ ತನ್ನ ಟೈಲರಿಂಗ್ ಶಾಪ್ ನಡೆಸಿ ಚಾಳ್‍ವೊಂದರ ಪುಟ್ಟ ಕೊಠಡಿಯಲ್ಲಿ ವಾಸವಾಗಿದ್ದ ಸುರೇಶ್ ರಾವ್ ಅವರನ್ನು ಕಾರಣಾಂತರಗಳಿಂದ 1960ರಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶೈಕ್ಷಣಿಕ ಸಂಸ್ಥೆಗೆ ಸೇರಿಸಲಾಗಿತ್ತು. ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ತವರೂರ ಕಟೀಲುನಲ್ಲಿ ಓದಿ 1970ರಲ್ಲಿ ಮತ್ತೆ ಮುಂಬಯಿ ಸೇರಿ ಅರ್ಧ ಚಡ್ದಿಯನ್ನೇ ಧರಿಸಿ ಚಿನ್ನಯ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುನ್ನಡೆಸಿದ್ದು, ನಾಯರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. ಹಾಸ್ಟೇಲ್‍ನಲ್ಲಿ ದ್ದು ಶಿಕ್ಷಣ ಮುನ್ನಡೆಸಿ1976ರಲ್ಲಿ ಟೋಪಿವಾಲ ನೇಶನಲ್ ಮೆಡಿಕಲ್ ಕಾಲೇಜು ಮತ್ತು ನಾಯರ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪದವೀಧರನಾಗಿ ಮರಣೋತ್ತರ ಶವ ಪರೀಕ್ಷೆಯ ವಿಭಾಗದಲ್ಲೂ ತೀವ್ರ ಆಸಕ್ತನಾಗಿ ಆ ಮೂಲಕ ಓರ್ವ ಸಾಧಕ ಸರ್ಜನ್ ಆಗಿ ಮೆರೆದರು. ಬಳಿಕ ರಾಜವಾಡಿ, ನಾಯರ್, ಕಸ್ತೂರ್ಬಾ ಆಸ್ಪತ್ರೆಗಳಲ್ಲೂ ಸೇವೆ ಸಲ್ಲಿಸುತ್ತಲೇ ಸಂಶೋಧನೆ ಮತ್ತು ವೈಜ್ಞನಿಕ ಚಟುವಟಿಕೆಗಳಲ್ಲಿ ತೀವ್ರ ಆಸಕ್ತರಾಗಿ ಎಂಎಸ್ ಉತ್ತೀರ್ಣರಾದರು. ಬಳಿಕ ಅಧ್ಯಾಪಕರಾಗಿ ಉಪನ್ಯಾಸವನ್ನೀಡುತ್ತಲೇ ಅನುಭವೀ ಆತ್ಮವಿಶ್ವಾಸವನ್ನು ಹೊಂದಿದರು. ಅಷ್ಟರಲ್ಲೇ 1982ರಲ್ಲಿ ಉದ್ಯಾವರ ಮೂಲದ ಶ್ರೀಮತಿ ವಿಜಯಲಕ್ಷಿ ್ಮೀ ಆಚಾರ್ಯ ಅವರೊಂದಿಗೆ ಹಸೆಮಣೆಯನ್ನೇರಿ ಸದ್ಯ ಮಹಾನಗರದ ಅಂಧೇರಿ ಪೂರ್ವದಲ್ಲಿ ಸಾಂಸರಿಕಾ ಬದುಕನ್ನು ರೂಪಿಸಿಕೊಂಡಿರುವರು. ಇಬ್ಬರು ಸುಪುತ್ರಿಯರಲ್ಲಿ ಶ್ರೀಮತಿ ಪಲ್ಲವಿ ತನ್ನ ಪತಿ ರಾಘವೇಂದ್ರÀ ಕಲ್ಲುರಾಯ (ಪ್ರಸ್ತುತ ಅಮೇರಿಕಾದಲ್ಲಿ ಸಾಂಸರಿಕ ಬದುಕು ಸಾಗಿಸುತ್ತಿದ್ದಾರೆ) ಮತ್ತು ದ್ವಿತೀಯ ಪುತ್ರಿ ಡಾ| ಶ್ರುತಿ ರಾವ್ ಸದ್ಯ ಎಂಬಿಬಿಎಸ್ ಓದಿ ತಂದೆಯೊಂದಿಗೆ ಕಾರ್ಯ ನಿರತವಾಗಿದ್ದಾರೆ. ಸ್ಮಾರ್ಟ್ ಡಾಕ್ ಮತ್ತು ಬೆಟರ್ ಸೇಫ್ ಎಂಬ ಎರಡು ಪುಸ್ತಕಗಳನ್ನು ಪ್ರಕಾಶಿಸಿ ಆರೋಗ್ಯಯುತ ಬದುಕಿಗೆ ಪ್ರೇರಣೆಯನ್ನೀಡಿದ ನಿಸ್ಸೀಮ ವೈದ್ಯಾಧಿಕಾರಿ. ಸದ್ಯ ಅಂಧೇರಿ ಪೂರ್ವದ ರೈಲ್ವೇ ಸ್ಟೇಶನ್ ಪಕ್ಕದಲ್ಲಿ 50 ಬೆಡ್ ಸೌಲಭ್ಯಗಳ ಅತ್ಯಾಧುನಿಕ ಸೌಲತ್ತುಗಳ ಸುಸಜ್ಜಿತ ಸಂಜೀವನಿ ಆಸ್ಪತ್ರೆಯ ಮೂಲಕ ಸೇವಾ ನಿರತರಾಗಿದ್ದಾರೆ.

ಅವಿಭಕ್ತ ಕುಟುಂಬದಲ್ಲೇ ಬೆಳೆದ ಡಾ| ಸುರೇಶ್ ಸದಾ ಹಸನ್ಮುಖೀ, ಮೃದುಭಾಷಿ ಮನೋಭಾವಿ. ಶಾಸ್ತ್ರೋಕ್ತವಾವಗಿ ಉಪಚರಿಸುವ ಶಸ್ತ್ರಚಿಕಿಸ್ತೆಯ ಮೋಡಿಗಾರ. ವೈದ್ಯಕೀಯ ಶಿಕ್ಷಣದ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿದರರಾಗಿ ಉಪನಗರ ಅಂಧೇರಿ ಪೂರ್ವದಲ್ಲಿ `ಸಂಜೀವನಿ' ಆಸ್ಪತ್ರೆ ಸ್ಥಾಪಿಸಿ ಚಿಕಿತ್ಸಾ ಲೋಕದ ಬಹುಮುಖ ಸೇವೆಗೈಯುತ್ತಿರುವ ಡಾ| ರಾವ್ ಸಂಸ್ಕೃತ ಶಿಕ್ಷಣ ಪರಿಣತರೂ ಹೌದು. ವೇದ, ತಂತ್ರ ಆಗಮ, ಪೌರೋಹಿತ್ಯ ಅಧ್ಯಯನಗಳ ಮೇಧಾವಿ, ಶಾಂತಿಪ್ರಿಯರು, ಸಹಜ ಸೌಮ್ಯ ಶಾಂತ ಸ್ವಾಭಾವೀ, ಸಾಧು ಸ್ವಭಾವದ ಶಿಷ್ಯರಾಗಿ, ಯಕ್ಷಗಾನ-ನಾಟಕ ಕಲಾಕಾರರಾಗಿರುವ ಇವರು ಆಸಕ್ತಿ, ಜಾಣ್ಮೆ, ಜ್ಞಾಪಕ ಶಕ್ತಿ ಮತ್ತು ಪ್ರತಿಕ್ರಿಯಾ ಚಾತುರ್ಯತೆ ಹೊಂದಿ, ವಿನಯಶೀಲತೆಯನ್ನು ಮೈಗೂಡಿರಿಸಿರುವ ಗುಣಸಂಪನ್ನತೆಯ ತಜ್ಞರೂ ಕೂಡ. ಪರೋಪಕಾರ ಪ್ರವೃತ್ತಿಯ ಧರ್ಮಾಸಕ್ತ ವೈದ್ಯಾಧಿಕಾರಿಯಾಗಿ ಸದಾ ಧನ್ಯತಾಭಾವಿ ಮನೋಭಾವ ಮೈಗೂಡಿಸಿರುವ ಇವರು ಮೃತಪ್ರಾಯ ಪ್ರಾಯರಾದವರಿಗೆ ಔಷಧಿಯನ್ನು ನೀಡಿ ಪುನಶ್ಚೇತನವನ್ನು ಕೊಟ್ಟು ಅಮೃತರನ್ನಾಗಿಸುವ ವೈದ್ಯರು. ಓರ್ವ ನಿಷ್ಠಾವಂತ ವೈದ್ಯಾಧಿಕಾರಿಯಾಗಿ ವೃತ್ತಿ ಜೀವವ ನಡೆಸುತ್ತಿರುವ ಪ್ರಸಕ್ತ ಕಾಲದ ಅಪರೂಪದ ಭವ ರೋಗಹರ ವೈದ್ಯರೆಂದರೇ ಅವರೇ ಸುರೇಶ್ ರಾವ್.

1992ರಲ್ಲಿ ಸಂಜೀವನಿ ಚ್ಯಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕವೂ ಜನಹಿತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. 1996ರಲ್ಲಿ ತನ್ನ ಮುಂದಾಳುತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನ ಸ್ಥಾಪಿಸಿ ಭವ್ಯ ಕಟ್ಟಡದೊಂದಿಗೆ ಸುಸಜ್ಜಿತ ವಿದ್ಯಾಲಯವನ್ನು ಸ್ಥಾಪಿಸಿದ ಕೀರ್ತಿ ಸುರೇಶ್ ರಾವ್ ಅವರದ್ದು. ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯ ನಡೆಸುವ ಎಂ.ಎ, ಪಿಹೆಚ್‍ಡಿ, ಡಿಪೆÇ್ಲೀಮಾ ಸಂಸ್ಕೃತ ಸ್ನಾತಕೋತ್ತರ ತರಗತಿಗಳನ್ನು ಇಲ್ಲೇ ನಡೆಸುವ ಭಾಗ್ಯವನ್ನು ಸಂಸ್ಕೃತ ಕಲಿಕಾ ವಿದ್ಯಾಥಿರ್üಗಳಿಗೆ ಒದಗಿಸಿರುವರು. ವೇದ ತಂತ್ರಾಗಮ ವಿದ್ಯಾಭ್ಯಾಸ ಮತ್ತು ಪರೀಕ್ಷೆಗಳನ್ನು ನಡೆಸುವರೇ ಆಶ್ರಯ ಕಲ್ಪಿಸಿರುವರು.

ಮಹಾನಗರದಲ್ಲೂ ಬ್ರಾಹ್ಮಣ ಮತ್ತು ಬ್ರಾಹ್ಮಣೆÉೀತರ ಸಮುದಾಯಗಳ ಶ್ರೇಯೋಕಾಂಕ್ಷಿಗಳಾಗಿ ತೆರೆಯಮರೆಯಲ್ಲಿದ್ದೇ ಅನನ್ಯ ಸೇವೆಗೈಯುತ್ತಿರುವ ರಾಯರ ಸೇವಾ ಕೈಂಕರ್ಯ ಶ್ಲಾಘನೀಯ. ತೀರಾ ಸಾಮಾನ್ಯರಂತೆ ಲೋಕಮುಖದಲ್ಲಿ ಕಾಣುವ ಸುರೇಶ್ ಅವರ ಆದರ್ಶ ಆದರನೀಯ ಮತ್ತು ಅನುಸರಣೀಯ. ವಿನಮ್ರ ಮತ್ತು ಮೃದುವಾದ ಮಾತು ಅವರದ್ದು. ಮುಂಬಯಿ ಮಹಾನಗರದಲ್ಲಿ ಸುಮಾರು ಎಂಟು ದಶಕಗಳಿಂದ ಸೇವಾ ನಿರತ ಕರ್ನಾಟಕ ಕರಾವಳಿ ಪ್ರಾಂತ್ಯದ ಬ್ರಾಹ್ಮಣ ಸಮೂದಾಯದ ಪ್ರತಿಷ್ಠಿತ ಸಂಸ್ಥೆ ಬಿಎಸ್‍ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಸಂಚಾಲಕತ್ವದಲ್ಲಿ ಉಪನಗರ ನವಿ ಮುಂಬಯಿಯ ನೆರೂಳ್ ಇಲ್ಲಿ ವಯೋವೃದ್ಧರ ಮುದಿ ಜೀವಕ್ಕೆ ಸಾಂತ್ವನ ತುಂಬುವ ನೆಮ್ಮದಿಯ ತಾಣ ಮತ್ತು ಹಿರಿಯರ ನೆಮ್ಮದಿಯ ಬಾಳಸಂಜೆಗೊಂದು ಆಧಾರಕೇಂದ್ರ `ಆಶ್ರಯ'ಸಂಸ್ಥೆ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸುಖೋಷ್ಣತೆ ಭಾವನೆಯ ಕೇಂದ್ರ ಎಂದೇ ಕರೆಯಲ್ಪಡುವ ಸ್ಥಾಪಿಸಿ ವೈಶಿಷ್ಟ ್ಯಮಯವಾದ ಕಾರ್ಯಕ್ರಮಗಳ ಮುಖೇನ ಭಾವೈಕ್ಯತೆಯ ಸಹಮಿಲನವನ್ನು ಆಯೋಜಿಸಿ ಜನಾನುರೆಣಿಸಿರುವರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here