Saturday 20th, April 2024
canara news

ಎತ್ತಿನಹೊಳೆ ಕುರಿತಂತೆ ಸಮಾಲೋಚನಾ ಸಭೆ

Published On : 04 Dec 2016   |  Reported By : Canaranews Network

ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಡಿಸೆಂಬರ್ ೧೦ರಿಂದ ೧೨ರವರೆಗೆ ನಡೆಯುವ ರಥಯಾತ್ರೆಯಲ್ಲಿ ಜಿಲ್ಲೆಯಲ್ಲಿ ಹರಿಯುವ ಐದು ಪವಿತ್ರ ನದಿಗಳ ತೀರ್ಥವನ್ನು ರಥದಲ್ಲಿರುವ ಕಲಶಕ್ಕೆ ಹಾಕಿ, ಜಿಲ್ಲೆಯ ೫ ತಾಲೂಕು ಹಾಗೂ ೮ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ರು. ಅವರು ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಡಿಸೆಂಬರ್ ೧೦ರಂದು ಸುಬ್ರಹ್ಮಣ್ಯದಿಂದ ಹೊರಡುವ ಈ ರಥಯಾತ್ರೆ ಧರ್ಮಸ್ಥಳ, ಬೆಳ್ತಂಗಡಿ, ಕಲ್ಲಡ್ಕ, ಕದ್ರಿ, ಸುರತ್ಕಲ್ ಮೂಲಕ ಸಾಗಿ ಡಿಸೆಂಬರ್ ೧೨ರಂದು ಕಟೀಲಿನಲ್ಲಿ ಸಮಾಪನಗೊಳ್ಳಲಿದೆ. ಈ ಮೂಲಕ ಎತ್ತಿನಹೊಳೆ ಹೋರಾಟ ಇನ್ನಷ್ಠು ಬಲಗೊಳ್ಳಲಿದೆ ಎಂದು ಹೇಳಿದರು. ಸಮಾಲೋಚನಾ ಸಭೆಯಲ್ಲಿ ಎಲ್ಲಾ ಜಾತಿ, ಧರ್ಮ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here