Thursday 25th, April 2024
canara news

74ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸೈಂಟ್ ಪಾವ್ಲ್'ಸ್ ಕಥೊಲಿಕ್ ಅಸೋಸಿಯೇಶನ್

Published On : 12 Dec 2016   |  Reported By : Rons Bantwal


ಕ್ರಿಶ್ಚನ್ನರು ಸದಾ ಸೇವಾಂಕ್ಷಿಗಳಾಗಿರುವರು: ಸ್ಟಾಯನಿ ಫೆರ್ನಾಂಡಿಸ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.11: ಬೃಹನ್ಮುಂಬಯಿಯ ಅಲ್ಲಿನ ಫೋರ್ಟ್ ಅಲ್ಲಿನ ಶಹೀದ್ ಭಗತ್‍ಸಿಂಗ್ ರಸ್ತೆಯಲ್ಲಿನ ಲಯನ್ ಗೇಟ್ ಸನಿಹದಲ್ಲಿ ಸಾಮಾಜಿಕ ಸೇವೆಗೈದು ಶ್ರಮಿಸುತ್ತಿರುವ ಸೈಂಟ್ ಪಾವ್ಲ್'ಸ್ ಕಥೊಲಿಕ್ ಅಸೋಸಿಯೇಶನ್ ಮುಂಬಯಿ ತನ್ನ 74ನೇ ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ದಿನಾಚರಣೆಯನ್ನು ಇಂದಿಲ್ಲಿ ರವಿವಾರ ಅಸೋಸಿಯೇಶನ್‍ನ ಸಭಾಗೃಹದÀಲ್ಲಿ ಅದ್ದೂರಿಯಾಗಿ ನೇರವೇರಿಸಿತು.

ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಕೊಲಬಾ ಅಲ್ಲಿನ ವುಡ್‍ಹೌಸ್ ಹೊಲಿನೇಮ್ ಕಾಥೆದ್ರಾಲ್‍ನಲ್ಲಿ ಸಂಭ್ರಮಿಕ ಕೃತಜ್ಞತಾ ಪೂಜೆ ಸಂಭ್ರಮಿಸಿದ್ದು, ರೆ| ಫಾ| ಜೋಕಿಂ ಡಿ'ಸೋಜಾ ಕೊಂಕಣಿಯಲ್ಲಿ ಪೂಜೆ ನೆರವೇರಿಸಿ ಹರಸಿದರು.

ಪೂರ್ವಾಹ್ನ ಸೈಂಟ್ ಪಾವ್ಲ್'ಸ್ ಸಭಾಗೃಹದÀಲ್ಲಿ ಸಂಭ್ರಮಾಚರಣಾ ಕಾರ್ಯಕ್ರಮ ನಡೆಸಲಾಗಿದ್ದು, ಲವಿನಾ ಸಾಂಕ್ತೀಸ್, ರಜನಿ ಡಿ'ಸೋಜಾ, ಮತ್ತು ವಾೈಲೇಟ್ ತಾವ್ರೋ ಅವರು ಅಸೋಸಿಯೇಶನ್‍ನ ಹಿರಿಯ ಸದಸ್ಯ ಥೋಮಸ್ ನೊರೋನ್ಹಾ, ಅಧ್ಯಕ್ಷ ಆ್ಯಂಟನಿ ಡಿ'ಸೋಜಾ ಮತ್ತು ಪದಾಧಿಕಾರಿಗಳನ್ನೊಳಗೊಂಡು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿü ಗಣ್ಯರಾಗಿ ಉಪಸ್ಥಿತ ಮಾಜಿ ಅಧ್ಯಕ್ಷ ಸ್ಟ್ಯಾನಿ ಫೆರ್ನಾಂಡಿಸ್ ಅವರು `ಬಿಡಾರ್ 2016' ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು.

ಕ್ರೈಸ್ತರು ಹುಟ್ಟಿನಿಂದಲೇ ಸಮಾಜಿಕ ಕಳಕಳಿಹೊಂದಿ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡವರಾಗಿದ್ದಾರೆ. ಸೌಮ್ಯ ಮತ್ತು ಸರಳ ನಡತೆ ಕ್ರೈಸ್ತರ ಹಿರಿತನವಾಗಿದೆ. ಸಮಾಜ ಘಾತುಕ ಕಾಯಕ ಮುಕ್ತ ಸಮಾಜವಾಗಿರುವ ಕ್ರಿಶ್ಚನ್ನರು ಸದಾ ಸೇವಾಂಕ್ಷಿಗಳಾಗಿಯೇ ಗುರುತಿಸಿ ಕೊಂಡವರಾಗಿದ್ದಾರೆ. ನಮ್ಮ ಪೂರ್ವಜರು ಸ್ವಸ್ಥ ಸಮಾಜಕ್ಕಾಗಿ ಶ್ರಮಿಸಿದ್ದು, ನಾವೂ ಅವರ ಮಾದರಿ ಜೀವನವನ್ನು ಮೈಗೂಡಿಸಿ ಮುನ್ನಡೆಯಬೇಕು. ಇದೇ ಸದ್ಗುಣ ಕ್ರೈಸ್ತರ ಆಸ್ತಿ ಆಗಿದೆ ಎಂದು ಸ್ಟಾ ್ಯನಿ ಫೆರ್ನಾಂಡಿಸ್ ನುಡಿದರು.

ಉಪಾಧ್ಯಕ್ಷ ಪ್ರಸಾದ್ ನಜ್ರೇತ್, ಗೌರವ ಕೋಶಾಧಿಕಾರಿ ಮೈಕಲ್ ಲೊಬೋ, ಜೊತೆ ಕಾರ್ಯದರ್ಶಿ ಆ್ಯಂಟನಿ ನಜ್ರೇತ್, ಜೊತೆ ಕೋಶಾಧಿಕಾರಿ ಸುನೀಲ್ ತಾವ್ರೋ ವೇದಿಕೆಯಲ್ಲಿ ಉಪಸ್ಥಿತರಿದ್ದು, ಗೌರವ ಕಾರ್ಯದರ್ಶಿ ರಿಚಾರ್ಡ್ ಡಿ'ಸೋಜಾ ಸ್ವಾಗತಿಸಿ ಸಂಸ್ಥೆಯ 74ರ ಸಾಧನೆ, ಕಾರ್ಯಚಟುವಟಿಕೆ ಗಳನ್ನು ಪ್ರಸ್ತಾಪಿಸಿದರು. ಐವಾನ್ ಫೆರ್ನಾಂಡಿಸ್ ಅವರು ಸಾಂತಕ್ಲೋಸ್ ವೇಷಧರಿಸಿ ನೆರೆದ ಸರ್ವರನ್ನೂ ಮನೋರಂಜಿಸಿದರು. ಥೋಮಸ್ ನೊರೋನ್ಹಾ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಪ್ರದಾನಿಸಿ ಶುಭಾರೈಸಿದರು. ಅಧ್ಯಕ್ಷರು ಅತಿಥಿüಗಳಿಗೆ ಹಾಗೂ ಉಪಸ್ಥಿತ ಹಿರಿಯ ಸದಸ್ಯರುಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ರಾಯಾನ್ ಕಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here