Tuesday 23rd, April 2024
canara news

ಕನ್ನಡ ಸೇವಾ ಸಂಘ ಪೋವಾಯಿ ಸಂಭ್ರಮಿಸಿದ ಕರ್ನಾಟಕ ಸಂಸ್ಕೃತಿ ವೈಭವ `ಸಂಸ್ಕೃತಿ ಸಂಭ್ರಮ' ಸ್ಮರಣ ಸಂಚಿಕೆ ಬಿಡುಗಡೆ-ಸಾಧಕರಿಗೆ ಸನ್ಮಾನ

Published On : 13 Dec 2016   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.11: ಕನ್ನಡ ಸೇವಾ ಸಂಘ ಪೋವಾಯಿ (ರಿ.) ತನ್ನ ವಾರ್ಷಿಕ ಇದರ ಕರ್ನಾಟಕ ಸಂಸ್ಕೃತಿ ಸಂಭ್ರಮ 2016 ಸಮಾರಂಭವು ಇಂದಿಲ್ಲಿ ರವಿವಾರ ಸಂಜೆ ಪೋವಾಯಿ ಸಾಕಿವಿಹಾರ್ ರೋಡ್‍ನ ಸಂಘದ ಕಛೇರಿಯ ಆವರಣದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದ್ದು, ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಅರ್ಚಕ ಶ್ರೀ ಎಸ್.ಎನ್ ಉಡುಪ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿsಯಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಗೌರವ ಅತಿಥಿsಗಳಾಗಿ ಎಲ್ಲೈಸಿ ಪ್ರಸಿದ್ಧಿಯ ಆಥಿರ್üಕ ತಜ್ಞ ಡಾ| ಆರ್.ಕೆ.ಶೆಟ್ಟಿ, ಉದ್ಯಮಿಗಳಾದ ಜಯರಾಮ ಎನ್.ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಪ್ರಕಾಶ್ ಶೆಟ್ಟಿ ದಾಂಡೇಲಿ, ಚಂದ್ರಹಾಸ ರೈ ಬೊಳ್ನಾಡುಗುತ್ತು, ಕರುಣಾಕರ ಪುತ್ರನ್, ರವೀಂದ್ರನಾಥ ಆರ್.ಭಂಡಾರಿ, ರಾಜಕೀಯ ಮುತ್ಸದ್ಧಿಗಳಾದ ಶರದ್ ಎಸ್.ಪವರ್, ಸವೀತಾ ಎಸ್.ಪವರ್, ಜ್ಯೋತಿ ಆರ್.ಶೆಟ್ಟಿ ಉಪಸ್ಥಿತರಿದ್ದು ದಕ್ಷಿಣ ಕನ್ನಡಜಿಲ್ಲೆಯಲ್ಲಿನ ಪ್ರಸಿದ್ಧ ಸಮಾಜ ಸೇವಾ ಸಾಧಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಅವರಿಗೆ `ಸಮಾಜ ರತ್ನ ಪ್ರಶಸ್ತಿ' ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರಿಗೆ `ಕನ್ನಡ ಜ್ಯೋತಿ ಪ್ರಶಸ್ತಿ' ಮತ್ತು ಉಮೇಶ್ ಕಡ್ತಲ ಅವರಿಗೆ `ಅಭಿನಯಶ್ರೀ' ಪ್ರಶಸ್ತಿ ಪ್ರಧಾನಿಸಿ ಅತಿಥಿsಗಳು ಸನ್ಮಾನಿಸಿದರು. ಶ್ರೀಮತಿ ಶ್ಯಾಮಲಾ ವಿ.ಶೆಟ್ಟಿ, ಕರುಣಾಕರ ಜಿ.ಶೆಟ್ಟಿ, ಉಮೇಶ್ ಹೆಗ್ಡೆ ಅವರಿಗೂ ಗೌರವಿಸಿ ಅಭಿನಂದಿಸಿದರು. ಅಂತೆಯೇ ಸಂಘದ `ಸಂಸ್ಕೃತಿ ಸಂಭ್ರಮ' ಸ್ಮರಣ ಸಂಚಿಕೆ ಮತ್ತು ಸಂಘದ ಗೌ| ಪ್ರ| ಕಾರ್ಯದರ್ಶಿ ನಾಗರಾಜ ಗುರುಪುರ ಅವರ `ಉಂದು ಏರಾದುಪ್ಪು' ತುಳು ನಾಟಕ ಕೃತಿ ಹಾಗೂ `ದೋಲು' ಪುಸ್ತಕವನ್ನು ಬಿಡುಗಡೆ ಗೊಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಸಂಘದ ಬಾಲ ಪ್ರತಿಭಾನ್ವಿತರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು `ಕರ್ನಾಟಕ ಸಂಸ್ಕೃತಿ ನೃತ್ಯ ವೈಭವ' ಪ್ರಸ್ತುತ ಪಡಿಸಿದರು. ಅಂಗವಾಗಿ ಗೋಕುಲ ಮಹಿಳಾ ಕಲಾ ವೃಂದವು ನ್ಯಾ| ಗೀತಾ ಆರ್.ಎಲ್ ಭಟ್ ನಿರ್ದೇಶನದಲ್ಲಿ `ಶಶಿಪ್ರಭಾ ಪರಿಣಯ' ಕನ್ನಡ ಯಕ್ಷಗಾನ ಪ್ರದರ್ಶಿದರು.

ಈ ಶುಭಾವಸರದಲ್ಲಿ ಸಂಘದ ಉಪಾಧ್ಯಕ್ಷ ದಿವಾಕರ ಎಂ.ಶೆಟ್ಟಿ, ಗೌ| ಕೋಶಾಧಿಕಾರಿ ಸಂದೇಶ್ ಆರ್.ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಅನಿತಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ ನಾೈಕ್, ಕಟ್ಟಡ ಸಮಿತಿ ಸಂಚಾಲಕ ಸುಧಾಕರ ಜಿ.ಪೂಜಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಡಿ.ಕೆ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಯಶೋಧರ ಪುತ್ರನ್, ಸಾಮಾಜಿಕ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಜಿ.ಅಂಚನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಸಿ.ಬಂಗೇರ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಪ್ರಶಾಂತಿ ಡಿ.ಶೆಟ್ಟಿ, ತುಳು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಾಂತೂರು ಅಶೋಕ್ ಶೆಟ್ಟಿ, ಸದಸ್ಯ ನೊಂದಾವಣೆ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಲಕ್ಷ್ಮೀ ಜೆ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸ್ಮರಣ ಸಂಚಿಕೆ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಆರ್.ಜಿ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ| ಪೂರ್ಣಿಮಾ ಸುಧಾಕರ್ ಸೆಟ್ಟಿ ಮತ್ತು ಬಾಬಾ ಪ್ರಸಾದ್ ಅರಸ್ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ನಾಗರಾಜ ಗುರುಪುರ ಸಂಘದ ಸಂಘದ ಸೇವೆಯನ್ನು ಭಿತ್ತರಿಸಿ ವಂದನಾರ್ಪಣೆಗೈದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here