Tuesday 23rd, April 2024
canara news

ಮುದರಂಗಡಿಯ ಶಿಕ್ಷಕಿ ಸುನೀತಾ ಡಿ'ಸೋಜಾ ಸಾಧನೆ ರಾಷ್ಟ್ರಮಟ್ಟದ ರಿಲೇ ತಂಡಕ್ಕೂ ಆಯ್ಕೆ ಸ್ವರ್ಣ ಪದಕದ ಭರವಸೆ

Published On : 14 Dec 2016   |  Reported By : Rons Bantwal


ಮುಂಬಯಿ (ಪಡುಬಿದ್ರಿ), ಡಿ.13 : ಉಡುಪಿ ಜಿಲ್ಲೆಯ ಮುದರಂಗಡಿಯ ಶಾಲಾ ಶಿಕ್ಷಕಿ ಸುನೀತಾ ಡಿ'ಸೋಜಾ ಅವರು ಬೆಂಗಳೂರಿನಲ್ಲಿ ನಡೆದ 37ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಡಿ.10ಮತ್ತು 11ರಂದು ನಡೆದ 35+ ವಿಭಾಗದ 200 ಮೀ. ಓಟದಲ್ಲಿ 33:05:00 ಸೆಕುಂಡ್ ಸಾಧನೆಗೈದು ದ್ವಿತೀಯ ಸ್ಥಾನಿಯಾಗಿ ಬೆಳ್ಳಿಯ ಪದಕ ಮತ್ತು ಲಾಂಗ್‍ಜಂಪ್‍ನಲ್ಲಿ 3.50 ಮೀ. ಸಾಧನೆಗೈದು ತೃತೀಯ ಸ್ಥಾನಿಯಾಗಿ ಕಂಚಿನ ಪದಕದ ಸಾಧನೆ ನಡೆಸಿರುತ್ತಾರೆ.

ಪ್ರಪ್ರಥಮವಾಗಿಯೇ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಪದಕಗಳನ್ನು ಗಳಿಸಿರುವ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಶಾಲೆಯ ಟೀಚರಮ್ಮ ಫೆ.21ರಿಂದ 25ರವರೆಗೆ ಹೈದರಾಬಾದ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮ್ಯಾರಥಾನ್‍ನಲ್ಲಿ ಚಿನ್ನದ ಬೇಟೆಗೆ ಸಜ್ಜಾಗುವ ಜೊತೆಗೆ 100 ಮೀ. ಓಟದಲ್ಲಿ 4ನೇ ಸ್ಥಾನಿಯಾಗಿ ರಾಷ್ಟ್ರಮಟ್ಟದ ರಿಲೇ ತಂಡಕ್ಕೆ ಆಯ್ಕೆಯಾಗಿರುತ್ತಾರೆ.

ಈ ಮೊದಲು ಈ ಟೀಚರಮ್ಮ ಉಡುಪಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ತನ್ನ ಪುತ್ರ-ಪುತ್ರಿ ಅವಳಿ ಮಕ್ಕಳೊಂದಿಗೆ ಶಾಲಾ ಕ್ರೀಡಾಂಗಣದಲ್ಲಿ ತನ್ನ ಓಟವನ್ನು ಒರೆಗೆ ಹಚ್ಚುವುದರೊಂ ದಿಗೆ ನಿತ್ಯ ಮನೆಯಂಗಳದಲ್ಲಿ ರಾತ್ರಿ 8ರ ನಂತರ ನಿತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಈ ಸಾಧನೆಯನ್ನು ಮಾಡಿರುತ್ತಾರೆ. ಸತತ ಶಾಲಾ ಕೆಲಸದ ಒತ್ತಡದ ನಡುವೆಯೂ ಬಿಡುವಿನ ಸಿಕ್ಕ ವೇಳೆಯನ್ನು ಬಳಸಿ ಕೊಂಡು ನಡೆಸಿದ ಈ ಸಾಧನೆಯ ಬಗ್ಗೆ ಸಾರ್ವಜನಿಕರು, ಶಾಲಾಡಳಿತ ಮಂಡಳಿ, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿರುತ್ತದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here