Saturday 20th, April 2024
canara news

ಡಿ.25 : ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಸಮ್ಮಿಲನ

Published On : 16 Dec 2016   |  Reported By : Rons Bantwal


ಮುಂಬಯಿ, ಡಿ.16: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ವಾರ್ಷಿಕೋತ್ಸವ ಸಮಾರಂಭವು ಇದೇ ಡಿ.25ನೇ ಆದಿತ್ಯವಾರ ಬೆಳಿಗ್ಗೆಯಿಂದ ಸಾಯಂಕಾಲ 7.00ರ ವರೆಗೆ ಥಾಣೆ ಪಶ್ಚಿಮದ ಮುಲುಂಡ್ ಚೆಕ್‍ನಾಕಾ ಸಮೀಪದಲ್ಲಿರುವ ವಾಗ್ಲೇ ಎಸ್ಟೇಟ್‍ನಲ್ಲಿರುವ ಡಿ'ಸೋಜಾವಾಡಿ ಇಲ್ಲಿನ ಸೈಂಟ್ ಲಾರೇನ್ಸ್ ಶಾಲಾ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Adv. Shekhar S. Bhandary

 Udaya Shetty Kanavara

Dharmapal U.Devadiga

Harish Vasu Shetty

Sadashiva Bhandary Sakaleshpur

 K.Suresh Bhandary

ಅಧ್ಯಕ್ಷ ಶೇಖರ್ ಭಂಡಾರಿ ಅವರು ಬೆಳಿಗ್ಗೆ 10.00 ಗಂಟೆಗೆ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಿದ್ದು, ಬಳಿಕ ಸಮಾಜದ ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಯಶೀಲ ಉಮೇಶ್ ಭಂಡಾರಿ ಮತ್ತು ಬಳಗವು `ಮಾಯದ ದೈವ', ಹಾಸ್ಯ ಪ್ರಹಸನ ಕಾರ್ಯಕ್ರಮ, ಸಮಿತಿ ಸದಸ್ಯರು ಮತ್ತು ಅತಿಥಿü ಕಲಾವಿದರುಗಳು `ಮಾಲ್ತಿನಕ್ಲು ತಿನ್ಪೆರ್' ತುಳು ನಾಟಕ ಪ್ರದರ್ಶಿಸಲಿದೆ.

ಸಂಜೆ 3.00 ಗಂಟೆಯಿಂದÀ ಸಮಾರೋಪ ಸಮಾರಂಭ ನಡೆಸಲಾಗುತ್ತಿದ್ದು ಮುಖ್ಯ ಅತಿಥಿüಯಾಗಿ ತುಳು ಚಿತ್ರ ನಿರ್ಮಾಪಕ ಉದಯ ಶೆಟ್ಟಿ ಕಾಂತಾವಾರ, ಗೌರವ ಅತಿಥಿüಗಳಾಗಿ ಅಖಿಲ ಕರ್ನಾಟಕ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಬಾಲಿವುಡ್ ನಟ,ಸಿಐಡಿ ಪ್ರಸಿದ್ಧಿ ಕಲಾವಿದ ಹರೀಶ್ ವಾಸು ಶೆಟ್ಟಿ, ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಬಾರ್ಕೂರು ಇದರÀ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಆಗಮಿಸಲಿ ದ್ದಾರೆ ಎಂದು ಗೌ| ಕೋಶಾಧಿಕಾರಿ ಕರುಣಾಕರ ಬಿ.ಭಂಡಾರಿ ತಿಳಿಸಿದ್ದಾರೆ.

ಬೃಹನ್ಮುಂಬಯಿ, ಉಪನಗರಗಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಭಂಡಾರಿ ಸಮಾಜದ ಸರ್ವ ಬಾಂಧವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಉಪಾಧ್ಯಕ್ಷರುಗಳಾದ ಆರ್. ಎಂ ಭಂಡಾರಿ ಮತ್ತು ಪ್ರಭಾಕರ ಭಂಡಾರಿ, ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಆರ್.ಭಂಡಾರಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್.ಭಂಡಾರಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here