Thursday 28th, March 2024
canara news

ರಾಷ್ಟ್ರೀಯ ಗ್ರಾಹಕ ಗ್ರಾಹಕ ದಿನಾಚರಣೆ 2016

Published On : 23 Dec 2016   |  Reported By : media release


ಗ್ರಾಹಕ / ಬಳಕೆದಾರನಿಗೆ ಬಲನೀಡಬೇಕೆಂಬ ಉದ್ದೇಶದಿಂದ 2001 ನವೆಂಬರ್ 2 ರಂದು ನಮ್ಮ ಒಕ್ಕೂಟ ಪ್ರಾರಂಭಗೊಂಡು ಕಳೆದ ಹದಿನಾರು ವರ್ಷಗಳಿಂದ ಗ್ರಾಮೀಣ, ಅನಕ್ಷರಸ್ಥ, ಬಡವ, ಶ್ರೀಮಂತÀ ಎಂಬ ಭೇದಭಾವ ರಹಿತವಾಗಿಎಲ್ಲರನ್ನೂ ಎಚ್ಚರಿಸಿ ಅವರ ಹಕ್ಕು- ಜವಾಬ್ದಾರಿಗಳನ್ನು ತಿಳಿಸಿ ಕೊಡುವ ಕೆಲಸವನ್ನು ಮಾಡುತ್ತಿದೆ. ಸರಕಾರ ಅನುದಾನ ಕೊಡಲಿ ಬಿಡಲಿ ಈ ಎಲ್ಲಾ ಕಾರ್ಯ ಸತತ ನಡೆಯುತ್ತಿದೆ.

1. ಸಾರ್ವಜನಿಕವಾಗಿ ತಿಳಿದು ಬಂದ ಕುಂದು-ಕೊರತೆಗಳನ್ನು ನಿವಾರಿಸಲು, ಪರಿಹರಿಸಲು ನಾವೇ ಪ್ರಯತ್ನಿಸುತ್ತಿದ್ದೇವೆ.

2. ಗ್ರಾಹಕ ವೇದಿಕೆಗೆ ನೇರವಾಗಿ ದೂರು ಕೊಂಡೊಯ್ಯುವ ಮುನ್ನ ಗ್ರಾಹಕರಿಗೆ ಅವರ ಹಕ್ಕು, ಕರ್ತವ್ಯಗಳನ್ನು ತಿಳಿಸಿ ತಾವೇ ಪರಿಹಾರ ಕಂಡುಕೊಳ್ಳಲು ಪ್ರೇರೇಪಿಸಲಾಗುತ್ತಿದೆ. ಮಾಹಿತಿ ಕೇಂದ್ರದಲಿ ಎಲ್ಲಾ ದಿನಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ನಮ್ಮ ಒಕ್ಕೂಟದ ಪದಾದಿಕಾರಿಗಳಿಂದ ಈ ಎಲ್ಲಾ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ.

3. ಮಕ್ಕಳ ಮೂಲಕ ಹೆತ್ತವರಲ್ಲಿ ಗ್ರಾಹಕ ತಿಳುವಳಿಕೆ ಹೆಚ್ಚಿಸುವುದಕ್ಕಾಗಿ 60 ಶಾಲೆಗಳಲ್ಲಿ ಗ್ರಾಹಕ ಕ್ಲಬ್, 8 ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿ. ವಿ. ಮಟ್ಟದ ಗ್ರಾಹಕ ಸರ್ಟಿಫಿಕೇಟ್ ಕೋರ್ಸ ನಡೆಸುತ್ತಿದ್ದೇವೆ.

4. ಸರಕಾರದ ವಿವಿಧ ಇಲಾಖಾ ಅಧಿಕಾರಿಗಳಿಂದ ಶಾಲೆ ,ಕಾಲೇಜುಗಳಲ್ಲಿ ತೂಕ, ಅಳತೆ, ಆರೋಗ್ಯ, ಸಂಚಾರ ಇತ್ಯಾದಿ ಸಾರ್ವಜನಿಕ ವಿಷಯಗಳ ಮಾಹಿತಿ ನೀಡಿ, ವಿವಿಧ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸಲಾಗುತ್ತಿದೆ.

5. ಶಾಲೆ ಹಾಗೂ ಕಾಲೇಜುಗಳ ಸಂಪನ್ಮೂಲ ಶಿಕ್ಷಕರಿಗೆ ಪ್ರತೀ ವರ್ಷ ವರ್ಷಕ್ಕೊಮ್ಮೆ ತರಬೇತಿ ಕಾರ್ಯಾಗಾರ ನಡೆಸಿ ಸಂಪನ್ಮೂಲ ಭರಿತರನ್ನಾಗಿಸಲಾಗುತ್ತಿದೆ.

6. ಎಲ್ಲಾ ಶಾಲೆ ಹಾಗೂ ಕಾಲೇಜುಗಳ ಗ್ರಾಹಕ ಕ್ಲಬ್ ಸದಸ್ಯರಿಗೆ ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಾಕಷ್ಟು ಮಾರ್ಗದರ್ಶನ ನೀಡಲಾಗುತ್ತಿದೆ.

7. ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ತರಬೇತಿ ಶಿಬಿರ ನಡೆಸಿ ಹೆಚ್ಚಿ ತರಬೇತಿ ಒದಗಿಸಲಾಗುತ್ತಿದೆ.

8. ಶಾಲೆ, ಕಾಲೇಜಿನ ಕ್ಲಬ್ ನವರು ಇಡೀ ವರ್ಷ ನಡೆಸಿದ ಕಾರ್ಯಕ್ರಮ, ಚಟುವಟಿಕೆ, ವರದಿಯ ಆಧಾರದಲ್ಲಿ ಮತ್ತು ಉತ್ತಮ ಪ್ರೋಜೆಕ್ಟ್, ಉತ್ತಮ ಫಲಿತಾಂಶದ ಕಾಲೇಜುಗಳಿಗೆ ಮಾರ್ಚ 15 ರ ವಿಶ್ವಗ್ರಾಹಕ ದಿನಾಚರಣೆಯಂದು ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

9. ಸುರತ್ಕಲ್ ಗೋವಿಂದದಾಸ, ಪುತ್ತೂರು ಸಂತ ಫಿಲೋಮಿನಾ, ಮಂಗಳೂರು ಕೆನರಾ ಎಸ್.ಡಿ.ಎಂ.ಬಿಸಿನೆಸ್ ಮೇನೇಜ್ಮೆಂಟ್,ಕಾವೂರು ಸರಕಾರಿ ಕಾಲೇಜುಗಳಲ್ಲಿಯ ಸರ್ಟಿಫಿಕೇಟ್ ಕೋರ್ಸ ಮಕ್ಕಳ ಉಪಯೋಗಕ್ಕಾಗಿ ನಮ್ಮದೇ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ ಸಿಲೆಬಸ್ ಗೆ ಅನುಗುಣವಾಗಿ ಪುಸ್ತಕವನ್ನು ರಚಿಸಲಾಗಿದೆ. ಒಟ್ಟು 128 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ-ಪರೀಕ್ಷೆ, ಲಿಖಿತ-ಮೌಖಿಕ ಪರೀಕ್ಷೆ, ಪ್ರಾಜೆಕ್ಟ ಇತ್ಯಾದಿಗಳನ್ನು ಯಶಸ್ವಿಯಾಗಿ ಪೂರೈಸಿದಲ್ಲಿ ಮಾತ್ರ ಸರ್ಟಿಫಿಕೇಟ್ ನೀಡಲಾಗುತ್ತಿದೆ.

10. ಮಂಗಳೂರು ವಿಶ್ವ ವಿದ್ಯಾಲಯ ಕೊಣಾಜೆ, ಸಂತ ಅಲೋಷಿಯಸ್ ಕಾಲೇಜು ಮಂಗಳೂರು, ಶ್ರೀನಿವಾಸ ಕಾಲೇಜು ಮಂಗಳೂರುಗಳ ಎಂ.ಎಸ್.ಡಬ್ಲ್ಯು. ವಿದ್ಯಾರ್ಥಿಗಳ ಕ್ಷೇತ್ರ ಕಾರ್ಯಕ್ಕೆ ಫೆqರೇಷನ್ ನ ಪದಾಧಿಕಾರಿಗಳು ಉತ್ತಮವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

11. ಒಂದು ದಿನದ ಗ್ರಾಹಕ ದಿನಾಚರಣೆಯನ್ನು ಹಿಂದಿನ ಎರಡು ವರ್ಷಗಳಲ್ಲಿ ದಶಂಬರ್ 3 ನೇ ವಾರದಲ್ಲಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಸ್ತ್ರೀ ಶಕ್ತಿ ಗುಂಪುಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿ ರಾಷ್ಟ್ರೀಯ ಗ್ರಾಹಕ ಸಪ್ತಾಹವನ್ನಾಗಿ ಆಚರಿಸಲಾಗಿತ್ತು. ಆದರೆ ಈ ವರ್ಷ ಅನಿವಾರ್ಯವಾಗಿ ಮತ್ತೆ ಒಂದು ದಿನದ ಗ್ರಾಹಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದ ದಶಂಬರ್ 24ರ ಗ್ರಾಹಕ ದಿನಾಚರಣೆಗೆ ಸ್ವತ: ಗ್ರಾಹಕ ಇಲಾಖೆಯ ಮಂತ್ರಿಗಳಾದ ಶ್ರೀ.ಯು.ಟಿ.ಖಾದರ್ ರವರೇ ಆಗಮಿಸುತ್ತಿರುವುದು ಬಹಳ ಸಂತಸದ ಸಂಗತಿ ಆದರೊಂದಿಗೇ ಇಡೀ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾ ಪಂಚಾಯತಗಳೂ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ.

12. ಜಾಹೀರಾತು ರಹಿತವಾಗಿ ಕಳೆದ ಎಂಟು ವರ್ಷಗಳಿಂದ ಗ್ರಾಹಕ ಜಾಗೃತಿ ಮತ್ತು ಶಿಕ್ಷಣವನ್ನೇ ದೃಷ್ಟಿಯಲ್ಲಿರಿಸಿಕೊಂಡು ಗ್ರಾಹಕ ಛಾಯಾ ಕನ್ನಡ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಗ್ರಾಹಕರು ಸಾಕಷ್ಟು ಪ್ರಯೋಜನ ಪಡೆಯುತ್ತಿರುವುದು ಸಂತಸ ತಂದಿದೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here