Friday 19th, April 2024
canara news

ಸಂತ ಮೇರಿಸ್ ಶಾಲೆಯ ವಾರ್ಷಿಕೋತ್ಸವ; ಜೀವನದಲ್ಲಿ ಶಿಸ್ತು ಮೌಲ್ಯಗಳು ಬೇಕು

Published On : 24 Dec 2016   |  Reported By : Bernard J Costa


ಕುಂದಾಪುರ,ಡಿ.23: ಕುಂದಾಪುರದ ಪುರಾತನ 135 ವರ್ಷಗಳ ಚರಿತ್ರೆಯುಳ್ಳ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂತ ಮೇರಿಸ್ ಕಾಲೇಜಿನ ಸಭಾಭವನದಲ್ಲಿ ನೆಡೆಯಿತು, ಬೆಳ್ಳಿಗ್ಗಿನ ಕಾರ್ಯಕ್ರಮದಲ್ಲಿ ಡಾ|ಸತೀಶ್ ಪೂಜಾರಿ ಧ್ವಜಾ ರೋಹಣ ಗೈದು ‘ಮಕ್ಕಳಲ್ಲಿ ಕೂಡ ವತ್ತಡ ಇರುತ್ತದೆ, ಆದ್ದರಿಂದ ಮಕ್ಕಳಿಗೆ ಹೆತ್ತವರು ಹೆಚ್ಚು ವತ್ತಡ ತರಬಾರದು ಎಂದು’ ಕಿವಿ ಮಾತು ಹೇಳಿದರು, ಅತಿಥಿಗಳಾಗಿ ವಿಘ್ನೇಶ್ ಪಂಡಿತ್ ಆಗಮಿಸಿದ್ದರು.

 

 

ಬೆಳಿಗ್ಗೆ ಮತ್ತು ಸಂಜೆಯ ವಾರ್ಷಿಕೋತ್ಸವದ ಕಾರ್ಯಕ್ರಮPದ ಅಧ್ಯಕ್ಷತೆಯನ್ನು ಕಥೊಲೊಕ್ ವಿಧ್ಯಾ ಶಿಕ್ಷಣದ ಜಾಯಿಂಟ್ ಸೆಕ್ರಟರಿ ಧರ್ಮಗುರು ಅನಿಲ್ ಡಿಸೋಜಾ ವಹಿಸಿ ‘ಮನುಷ್ಯನಿಗೆ ಶಿಕ್ಷಣ ದೊರೆತಲ್ಲಿ ಮಾತ್ರ ಅವನು ಉತ್ತಮ ನಾಗರಿಕನಾಗುತ್ತಾನೆಂಬ ಭರವಶೆ ಇಲ್ಲಾ, ಆದ್ದರಿಂದ ಶಿಕ್ಷಿತರು, ಉನ್ನತ್ತ ಹುದ್ದೆಯವರು ಅಪರಾಧ ಮಾಡುವುದನ್ನು ನಾವು ಕಾಣುತ್ತೆವೆ, ಮನುಷ್ಯನಿಗೆ ಉತ್ತಮ ಮೌಲ್ಯಗಳ ಅಗತ್ಯ ವಿದೆ’ ಎಂದು ಅವರು ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಂಡ್ಯ ಎಜುಕೇಶನ್ ಟ್ರಸ್ಟ್ ಜಂಟಿ ಕಾರ್ಯ ನಿರ್ವಾಹಕಿ ಅನುಪಮ ಶೆಟ್ಟಿ ‘ಮಕ್ಕಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ, ಜೀವನದಲ್ಲಿ ಸಫಲತೆಯನ್ನು ಪಡೆಯ ಬಹುದು, ಹೆತ್ತವರು ಮಕ್ಕಳಿಗೆ ಮಾಡುವ ಅತೀ ಪ್ರೀತಿ ವಿಷವಾಗಿ ಪರಿಣಮಿಸ ಬಹುದೆಂದು’ ತೀಳಿಸಿದರು.

ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ವರದಿಯನ್ನು ವಾಚಿಸಿದರು, ವೇದಿಕೆಯಲ್ಲಿ, ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಮೇರಿಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಮುಖ್ಯಸ್ತರು ಉಪಸ್ಥಿತರಿದ್ದರು ವಿಧ್ಯಾರ್ಥಿಗಳು ಮನೋರಂಜನವಾಗಿ ಕಿರು ನಾಟಕ,ನ್ರತ್ಯ, ಟ್ಯಾಬ್ಲೊಗಳ ಪ್ರದರ್ಶನ ನೀಡಿದರು

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here