Friday 29th, March 2024
canara news

ಕುಂದಾಪುರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮದ ಆಚರಣೆ

Published On : 25 Dec 2016   |  Reported By : Bernard J Costa


ಕುಂದಾಪುರ, ಡಿ,25: ‘ಎಸು ನಮಗೆ ಪ್ರೀತಿ ವಿಶ್ವಾಸ ಕೊಟ್ಟು ನಮ್ಮನ್ನು ಸರಿದಾರಿಯಲ್ಲಿ ನೆಡಸಲು ಈ ಧರೆಗೆ ಬಂದದ್ದು, ಹಾಗಾಗಿ ಅಡ್ಡ ದಾರಿಯಲ್ಲಿ ನೆಡೆಸುವ ನಮ್ಮ ಜೀವನವನ್ನು ಸರಿದಾರಿಯಲ್ಲಿ ಸಾಗಿಸಿ. ವಿಶ್ವಾಸ, ಪ್ರೀತಿ ಮತ್ತು ಪ್ರಾರ್ಥನೆ ನಿಮ್ಮಲ್ಲಿ ಅಳವಡಿಸಿಕೊಳಿ. ನೀವು ಈಗ ದೇವಾಲಯದಲ್ಲಿ ಇರುವಾಗ ನಿಮ್ಮಲ್ಲಿರುವ ಪ್ರೀತಿ ಸಂತೋಷವನ್ನು ನಿಮ್ಮ ಜೊತೆಯೆ ಕೊಂಡು ಹೋಗಿರಿ’ ಎಂದು ತೆಲಾಂಗಣದಲ್ಲಿ ಸೇವೆ ನೀಡುವ ಧರ್ಮಗುರು ವ|ವಿಲ್ಸನ್ ಲೋಬೊ ಕುಂದಾಪುರದ ಹೋಲಿ ರೋಜರಿ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬದ ಬಲಿಪೂಜೆಯನ್ನು ಅರ್ಪಿಸಿ ಸಂದೇಶ ನೀಡಿದರು.

 

 

 

ಹಬ್ಬದ ದಿವ್ಯ ಬಲಿ ಪೂಜೆಯನ್ನು ಕುಂದಾಪುರ ಚರ್ಚನ ಸಹಾಯಕ ಧರ್ಮಗುರು ವ|ಸಂದೀಪ್ ಜೆರಾಲ್ಡ್ ಡಿಮೆಲ್ಲೊ ಪ್ರಧಾನ ಯಾಜಕರಾಗಿ ನೇರೆವೆರೆಸಿದರು. ಧರ್ಮಗುರು ವ| ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ವ| ಲೀಯೊ ಡಿಸೋಜಾ, ದಿಯೊಕೋನ್ ರೋಶನ್ ಡಿಸೋಜಾ, ಬಲಿಪೂಜೆಯಲ್ಲಿ ಭಾಗಿಯಾಗಿದ್ದರು. ಚರ್ಚಿನ ಪ್ರಧಾನ ಧರ್ಮಗುರು ವ|ಅನೀಲ್ ಡಿಸೋಜಾ, ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯವನ್ನು ಕೊರೀದರು. ಪೂಜೆಯ ಮೊದಲು ಕೆರೊಲ್ ಗೀತೆಗಳನ್ನು ಹಾಡಲಾಯಿತು.

ಪೂಜೆಯ ನಂತರ ಐ.ಸಿ.ಯ.ಎಮ್ ಸಂಘಟನೆ ಚರ್ಚ್ ವಾಡೆಗಳಲ್ಲಿನ ಅದ್ರಷ್ಟ ಕುಟುಂಬಗಳ ಡ್ರಾ ಮತ್ತು ಹೌಸಿ ಹೌಸಿ ಅಟದ ಕಾರ್ಯಕ್ರಮ ಎರ್ಪಡಿಸಿತ್ತು. ಈ ಕ್ರಿಸ್ಮಸ್ ಹಬ್ಬದ ಬಲಿ ಪೂಜೆಯಲ್ಲಿ ಹಲವಾರು ಧರ್ಮ ಭಗಿನಿಯರು ಮತ್ತು ಭಕ್ತಾದಿಗಳು ಪಾಲ್ಗೊಂಡರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here