Tuesday 19th, March 2024
canara news

72ನೇ ವಾರ್ಷಿಕೋತ್ಸವ ಸಂಭ್ರಮಿಸಿದ ತೀಯಾ ಸಮಾಜ ಮುಂಬಯಿ

Published On : 27 Dec 2016   |  Reported By : Rons Bantwal


ಸಂಘವು ಸಮಾಜದ ಮುಕುಟದ ಇದ್ದಂತೆ:ಜಯಕೃಷ್ಣ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25: ಶಾಂತಿ, ಪ್ರೀತಿ, ಸೌರ್ಹದತೆ ಇತ್ಯಾದಿಗಳು ತಿಯಾ ಸಮಾಜದ ಆದರ್ಶಗಳಾಗಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನೇ ಮೈಗೂಡಿಸಿ ಬಾಳುವ ತೀಯಾ ಸಮಾಜವು ವಿನಯತೆಯ ಪ್ರತೀಕರು. ಇಂತಹ ಶುಭಾವಸರದಲ್ಲಿ ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸುವ ಅಗತ್ಯವಿದ್ದು ಸಮಾಜದಲ್ಲಿನ ಸಾಧಕರ ಸನ್ಮಾನ ಸಮಾಜೋಭಿವೃದ್ಧಿಗೆ ಪ್ರೇರಕವಾಗಿದೆ. ಈ ಸಂಸ್ಥೆಗೆ ನಮ್ಮ ಮಿತ್ರ ಚಂದ್ರಶೇಖರ ಬೆಳ್ಚಡರು ಐದನೇ ಅಧ್ಯಕ್ಷರು ಎನ್ನುವುದು ಅಭಿಮಾನವೆಣಿಸುತ್ತಿದೆ. ಸಂಸ್ಥೆಯು 75 ವರ್ಷದತ್ತ ಮುನ್ನಡೆದು ಇವರ ಸಾರಥ್ಯದಲ್ಲೇ ಅಮೃತಮ ಹೋತ್ಸವ ಸಂಭ್ರಮಿಸುವಂತಾಗಲಿ. ಸಂಘವು ಸಮಾಜದ ಮುಕುಟದ ಇದ್ದಂತೆ. ಸಮಾಜ ಬಂಧುಗಳು ಮುಕುಟದ ಮುತ್ತುಗಳು. ಆದುದರಿಂದ ಮುತ್ತುಗಳು ಹೊಳಪಿಸಿದಾಗ ಅಖಂಡಸಮಾಜವೇ ಕಂಗೋಳಿಸುತ್ತದೆ. ಅಂತೆಯೇ ಸಂಘವು ಸಮಾಜದ ಮರವಾಗಿದ್ದರೆ ಸಮಾಜ ಬಂಧುಗಳು ಅದರ ಕೊಂಬೆಗಳಂತೆ. ಮರ ವಿಸ್ತಾರವಾಗಿ ಬೆಳೆಯಲು ಗೆಲ್ಲುಗಳು ಸಹಾಯವಾದಂತೆ ಸಮಾಜದ ಜನತೆ ಸ್ಪಂದಿಸಿದಾಗ ಸಂಸ್ಥೆಯೂ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆರಳು ನೀಡಬಲ್ಲದು. ಸಂಘಸಂಸ್ಥೆಗಳಿಂದ ಸಮಾಜೋದ್ಧಾರ ಸಾಧ್ಯವಾಗಿದ್ದು ಅಂತೆಯೇ ಇಡೀ ತೀಯಾ ಸಮಾಜ ಒಟ್ಟಾಗಿ ಧೀಶಕ್ತಿಯಾಗಿ ಬೆಳೆಯಲಿ. ಸರ್ವ ಜಾತಿಧರ್ಮ ಪಂಥಗಳನ್ನು ಗೌರವಿಸುತ್ತಾ ಸಾಮರಸ್ಯದ ಬಾಳಿಗೆ ಪ್ರೇರಕವಾಗ ಎಂದು ಉದ್ಯಮಿ ಜಯಕೃಷ್ಣ ಎ.ಶೆಟ್ಟಿ ನುಡಿದರು.

ಕಾಳೆದ ಭಾನುವಾರ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಶ್ರೀ ಗುರು ನಾರಾಯಣ ಸಭಾಗೃಹದಲ್ಲಿ ತೀಯಾ ಸಮಾಜ ಮುಂಬಯಿ ಸಂಭ್ರಮಿಸಿದ 72ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದು ಉತ್ಸವಕ್ಕೆ ಚಾಲನೆಯನ್ನೀಡಿ ಸಾಧಕರನ್ನು ಸನ್ಮಾನಿಸಿ ಜಯಕೃಷ್ಣ ಶೆಟ್ಟಿ ಮಾತನಾಡಿದರು.

ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಅಧ್ಯಕ್ಷತೆಯಲ್ಲಿ ನೇರವೇರಿಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಸ್ತ್ರೀಶಕ್ತಿ ಮಹಿಳಾ ಮಂಡಳಿ ಥಾಣೆ ಅಧ್ಯಕ್ಷೆ ಉಷಾ ಕೆ.ಹೆಗ್ಡೆ, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಕಮೋಟೆ ನವಿಮುಂಬಯಿ ಅಧ್ಯಕ್ಷ ಬೋಳ ರವಿ ಕೆ.ಪೂಜಾರಿ, ಸಮಾಜ ಸೇವಕಿ ವತ್ಸಲಾ ಕೆ.ಪೂಜಾರಿ, ಬಂಟರ ಸಂಘ ಪ್ರಾದೇಶಿಕ ಸಮಿತಿ ಡೊಂಬಿವಲಿ ಇದರ ಗೌರವ ಕಾರ್ಯದರ್ಶಿ ಆನಂದ ಡಿ.ಶೆಟ್ಟಿ ಎಕ್ಕಾರು ಮತ್ತು ಸಂಸ್ಥೆಯ ವಿಶ್ವಸ್ಥ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್.ಬಂಗೇರ, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌರವ ಕೋಶಾಧಿಕಾರಿ ರಮೇಶ್ ಎನ್.ಉಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಶ್ವ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ರಾಷ್ಟ್ರೀಯ ಭೂಷನ ಪ್ರಶಸ್ತಿ ಪುರಸ್ಕೃತ ಕಲಾವಿದ ಪದ್ಮನಾಭ ಸಸಿಹಿತ್ಲು, ರಂಗನಟಿ ಪ್ರತಿಮಾ ಬಂಗೇರ, ತೀಯಾ ಸಮಾಜದ ಸಾಧಕರುಗಳಾದ ಜಯ ಸಿ.ಸಾಲಿಯಾನ್, ಸುನೀಲ್ ಕುಮಾರನ್, ಗೋಪಾಲ ಸಾಲ್ಯಾನ್, ತೋನ್ಸೆ ಲಾಜರ್ ಕೋಟ್ಯಾನ್, ನಾರಾಯಣ ಸಾಲ್ಯಾನ್, ತೀಯಾ ಸಮಾಜ ಮುಂಬಯಿ ಇದರ ನಿಕಟಪೂರ್ವ ಗೌರವ ಕಾರ್ಯದರ್ಶಿ ಐಲ್ ಬಾಬು, ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್.ಸುವರ್ಣ ಅವರನ್ನು ಅತಿಥಿsಗಳು ಸನ್ಮಾನಿಸಿ ಅಭಿನಂದಿಸಿದರು.

ಲತಾ ಶೆಟ್ಟಿ ಮಾತನಾಡಿ ಸಂಸ್ಥೆಯ 72ರ ಸೇವಾವಧಿ ಹೆಮ್ಮೆವಾಗಿ ಸಮಾಜಕ್ಕೆ ಆಧಾರವಾಗಿದೆ. ಈ ಹಿಂದಿನ ಶ್ರಮ ಊಹಿಸಲಸಾಧ್ಯ. ಕರ್ಮಭೂಮಿಯಲ್ಲಿ ಜನ್ಮಭೂಮಿಕ್ಕಿಂತ ಮಿಗಿಲಾದ ಸೇವೆ ಅರ್ಥಗರ್ಭಿತವಾಗಿದೆ. ಸಂಸ್ಕೃತಿ ಮತ್ತು ವಿದ್ಯೆ ನಾಣ್ಯದ 2 ಮುಖಗಳಂತಿದ್ದು ಇವೆರಡರ ಕೂಡುವಿಕೆಯಿಂದ ಸಂಸ್ಕಾರಯುತ ಬದುಕು ಸಾಧ್ಯ. ಇದನ್ನು ಮೈಗೂಡಿಸಿ ಮುನ್ನಡೆಯುವ ನಿಮಗೆ ಯಶವಾಗಲಿ. ಸಮಾಜದ ಸ್ತ್ರೀಯರು ಲಕ್ಷ್ಮೀ ಸ್ವರೂಪ ಭಾಗ್ಯದ ಹಳದಿ ಕುಂಕುಮ ಕಾರ್ಯಕ್ರಮದ ಮಹತ್ವ ಗಾಢತೆ ತಿಳಿದು ಭವಿಷ್ಯತ್ತಿನ ಬಾಲೆಯರಿಗೆ ತಿಳಿಪಡಿಸುವ ಅಗತ್ಯವಿದೆ. ಏಕತಾ ಭಾವನೆ ಹಾಗೂ ಧನಾತ್ಮಕ ಚಿಂತನೆಯಿಂದ ಸಮುದಾಯವನ್ನು ಕಟ್ಟಿ ಬದುಕು ಹಸನಗೊಳಿಸಿರಿ ಎಂದರು.

ಮಹಿಳೆಯರ ಏಕೀಕರಣಕ್ಕೆ ಇದು ಸೂಕ್ತ ವೇದಿಕೆ. ಇದು ಸ್ತ್ರೀಶಕ್ತಿಯನ್ನು ಬಲಪಡಿಸುವಲ್ಲಿ ಸಫಲೆತೆ ಹೊಂದಲಿ ಎಂದು ಉಷಾ ಹೆಗ್ಡೆ ತಿಳಿಸಿದರು.

ಆನಂದ ಶೆಟ್ಟಿ ಮಾತನಾಡಿ ಬೀಜ ಹಾಕಿ ಗಿಡವಾಗಿಸಿದ ಸಂಸ್ಥೆಯ ಹಿರಿಯರ ತ್ಯಾಗಮಯ ಜೀವನ ನೆನಪಿಸಿಕೊಳ್ಳಲೇ ಬೇಕು. ಸಂಸ್ಥೆ ಇಂದು ಮgವಾಗಿÀ ಎತ್ತರಕ್ಕೆ ಬೆಳೆಸಲು ಅವರ ಅವಿರತ ಶ್ರಮವೇ ಕಾರಣ. ಇದನ್ನು ನಡೆಸುವ ಇಂದಿನ ಪದಾಧಿಕಾರಿಗಳು ಸಂತಸಮಯವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಾ ಕೂಡು ಕುಟುಂಬವಾಗಿ ಬೆಳೆಯಲು ಪ್ರೇರಕವಾಗಲಿ ಎಂದರು.

ಸನ್ಮಾನಕ್ಕೆ ಉತ್ತರಿಸಿದ ಧರ್ಮಪಾಲ ದೇವಾಡಿಗರು ಸಮಾಜದ ಜನತೆಯ ಅಶೋತ್ತರಕ್ಕೆ ಸ್ಪಂದಿಸುತ್ತಾ 72ರ ಸೇವೆಯಲ್ಲಿರುವುದು ಸ್ತುತ್ಯರ್ಹ. ಪ್ರತಿಯೊಂದು ಸಮಾಜದ ಮುಂದೆ ತಲೆಯೆತ್ತಿ ಮುನ್ನಡೆಯುತ್ತ್ತಿರುವುದು ಅಭಿನಂದನೀಯ. ಚಂದ್ರಶೇಖರ ಬೆಳ್ಚಡ ಅವರ ನೇತೃತ್ವದಲ್ಲಿ ಶೀಘ್ರವೇ ತೀಯಾ ಭವನ ರೂಪುಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಪದ್ಮನಾಭ ಸಸಿಹಿತ್ಲು ಮಾತನಾಡುತ್ತಾ ನನ್ನ ಸಾಧನೆಯ ಹಿಂದೇ ಈ ಸಮಾಜದ ಕೊಡುಗೆಯೂ ಇದೆ. ನಾನು ಭಗವತೀ ಸಾನಿಧ್ಯದಲ್ಲಿ ಬೆಳೆದವನು. ಈ ಸನ್ಮಾನ ಸಂಗೀತ ಕ್ಷೇತ್ರಕ್ಕೆ ಸಂದ ಗೌರವವಾಗಿದ್ದು, ಸನ್ಮಾನ ಯುವ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸುನೀಲ್ ಕುಮಾರನ್ ಮಾತನಾಡಿ ಏಕತೆಗಾಗಿ ಹಿರಿಯರು ಸ್ಥಾಪಿಸಿದ ಸಂಸ್ಥೆ ನಮ್ಮೆಲ್ಲರ ಹೆಮ್ಮೆಯಾಗಿದೆ. ಅವರ ಉದ್ದೇಶಗಳನ್ನು ಈಡೇರಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಕೇರಳ ಮತ್ತು ಕರ್ನಾಟಕ ಗಡಿಪ್ರದೇಶದ ಜನತೆಯಾದ ನಾವು ಭಾಷಾಭಿಮಾನದ ಜೊತೆಗೆ ಪರಂಪರಿಕಾತೆಯನ್ನು ರೂಪಿಸಿ ಮುನ್ನಡೆಯಬೇಕು ಎಂದರು.

ನಮ್ಮ ಪೂರ್ವಜರು ದೂರದೃಷ್ಠಿತ್ವ ಹೊಂದಿ ಭವಿಷ್ಯತ್ತಿನ ಪೀಳಿಗೆಗಾಗಿ ವರವಾಗಿಸಿದ್ದ ಸಂಸ್ಥೆಗಳನ್ನು ನಾವು ನಡೆಸುತ್ತಾ ನಮ್ಮ ಪೀಳಿಗೆಗೆ ಮುನ್ನಡೆಸುವುದು ನಮ್ಮ ಆದ್ಯಕರ್ತವ್ಯವೇ ಸರಿ. ಪ್ರಸ್ತುತ ಸಂಸ್ಥೆಗಳ ಮುನ್ನಡೆಗೆ ಸಂಕಟದ ಕಾಲ ಇದಾಗಿದ್ದರೂ ಸಮಾಜ ಬಾಂಧವರ ಪೆÇ್ರೀತ್ಸಹ ನಮ್ಮನ್ನು ಹುರಿದುಂಬಿಸಿ ಪ್ರೇರೆಪಿಸುತ್ತಿದೆ. ಸಮುದಾಯದ ಜನತೆ ಒಗ್ಗಟ್ಟಾದಾಗ ಮಾತರ ಸಂಸ್ಥೆ ಬಲಗೊಳ್ಳುತ್ತದೆ. ಆವಾಗಲೇ ಉದ್ದೇಶಗಳೂ ಈಡೇರುತ್ತವೆ. ಎಲ್ಲರಂತೆ ನಾವೂ ಒಗ್ಗಟ್ಟಿನೊಂದಿಗೆ ಸಂಘಟಿತರಾಗೋಣ. 5 ಬೆರಳುಗಳ ಮುಷ್ಠಿಯಂತೆ ಸಮಾಜದಲ್ಲಿ ನಾವೆಲ್ಲರೂ ಸಮಾನರಾಗೋಣ. ಸಮಾನತೆಯಿಂದ ಸಂಸ್ಥೆ ಮತ್ತು ಸಮುದಾಯವನ್ನು ಭದ್ರಪಡಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಚಂದ್ರಶೇಖರ ಬೆಳ್ಚಡ ಕರೆಯಿತ್ತರು.

ಕಾರ್ಯಕ್ರಮದಲ್ಲಿ ವಿಶ್ವಸ್ಥ ಸದಸ್ಯರುಗಳಾದ ಶಂಕರ್ ಸಿ.ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ನ್ಯಾ| ಬಿ.ಕೆ ಸದಾಶಿವ, ನ್ಯಾ| ನಾರಾಯಣ ಸುವರ್ಣ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಕೆ.ಬಿ, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ.ಎಂ., ಪೂರ್ವ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್, ಬಾಬು ಟಿ.ಬಂಗೇರ, ಅಪ್ಪುಂಜ್ಞಿ ಬಂಗೇರ ಸೇರಿದಂತೆ ಬಹುತೇಕ ಸಂಖ್ಯೆಯ ತೀಯಾ ಬಂಧುಗಳು ಪಾಲ್ಗೊಂಡು ವಾರ್ಷಿಕೋತ್ಸವದ ಯಶಸ್ಸಿಗೆ ಸಹಕರಿಸಿದ್ದು, ವಿಶೇಷ ಆಮಂತ್ರಿತರಾಗಿದ್ದ ಮಾಧವ ಸುವರ್ಣ ಉಳ್ಳಾಲ, ನಗರ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳದ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಬಿ.ಮುನಿರಾಜ ಜೈನ್ ಅಜಿಲ, ಶಿಮಂತೂರು ಚಂದ್ರಹಾಸ ಸುವರ್ಣ, ಕೆ.ಶಂಕರ ಸುವರ್ಣ ಖಾರ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ಡಾ| ಯು.ಧನಂಜಯ ಕುಮಾರ್, ಹ್ಯಾರಿ ಆರ್.ಸಿಕ್ವೇರಾ, ಕುರುಣಾಕರ ಕಾಪು, ಕು| ಕಾಜಲ್ ಕುಂದರ್ ಸಸಿಹಿತ್ಲು ಮತ್ತಿತರರನ್ನು ಅಧ್ಯಕ್ಷರು ಗೌರವಿಸಿದರು.

ಸಮಾರಂಭದ ಆದಿಯಲ್ಲಿ ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ಮಲಯದ ಮಹಿಳಾ ವಿಭಾಗವು ವಿಭಾಗಧ್ಯಕ್ಷೆ ದಿವ್ಯಾ ಆರ್.ಕೋಟ್ಯಾನ್ ಮುಂದಾಳುತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿಸಿತು. ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜತಾ ಎಸ್.ಉಚ್ಚಿಲ್, ಗೌರವ ಕಾರ್ಯದರ್ಶಿ ಚಂದ್ರ ಎಂ.ಸುವರ್ಣ, ಗೌರವ ಕೋಶಾಧಿಕಾರಿ ರಂಜನಿ ಎ.ಸುವರ್ಣ ಸಹಯೋಗವನ್ನಿತ್ತರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಮಂಟಪ ಮುಂಬಯಿ ತಂಡವು `ಒಯಿಕ್‍ಲಾ ದಿನ ಬರೊಡು' ತುಳು ನಾಟಕ ಪ್ರದರ್ಶಿತು.

ತೀಯಾ ಕುಲದೇವತೆ ಭಗವತೀ ಮಾತೆ ಹಾಗೂ ಕುಲಗುರು ಬ್ರಹ್ಮಶ್ರೀ ಗುರು ನಾರಾಯಣರಿಗೆ ಪೂಜಿಸಿ ಉತ್ಸವಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೀಡಲಾಯಿತು. ಯಶವಂತಿ ಉಚ್ಚಿಲ್ ಪ್ರಾರ್ಥನೆಗೈದರು. ವಿಶ್ವನಾಥ ಯು.ಕೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಂ.ಐಲ್ ಮತ್ತು ಚಂದ್ರ ಎಂ.ಸುವರ್ಣ ಸನ್ಮಾನಿತರನ್ನು ಮತ್ತು ಅತಿಥಿüಗಳನ್ನು ಪರಿಚಯಿಸಿದರು. ಶ್ರೀಮತಿ ದಿವಿಜಾ ಚಂದ್ರಶೇಖರ್, ಹರ್ಷಾ ಚಂದ್ರಶೇಖರ್ ಮತ್ತು ಭಾಸ್ಕರ್ ಸುವರ್ಣ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಪ್ರತಿಮಾ ಬಂಗೇರ ಧನ್ಯವದಿಸಿದರು.




More News

 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್  ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ

Comment Here