Thursday 28th, March 2024
canara news

ವಾಟ್ಸಪ್‍ನಲ್ಲಿ ಚುಟುಕು ಕಥೆ-ಅಜ್ಜಿಕಥೆಗಳಿಗೆ ಆಹ್ವಾನ

Published On : 03 Jan 2017   |  Reported By : Rons Bantwal


ಮುಂಬಯಿ, ಜ.03: ಉಜಿರೆಯಲ್ಲಿ ಜ.27 ಶುಕ್ರವಾರ, 28 ಶನಿವಾರ ಮತ್ತು 29 ಆದಿತ್ಯವಾರಗಳ 3 ದಿನಗಳ ಕಾಲ ನಡೆಯಲಿರುವ 21ನೆ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ವಾಟ್ಸಪ್‍ನಲ್ಲಿ 100 ಚುಟುಕು ಕಥೆಗಳು ಸಂಕಲನ ಪ್ರಕಟಿಸಲು ನಿರ್ಧರಿಸಲಾಗಿದೆ. ಆಸಕ್ತರು ವಾಟ್ಸಪ್‍ನಲ್ಲಿ ಚುಟುಕು ಕಥೆಯನ್ನು ಬರೆದು ಜನವರಿ 18ರೊಳಗಾಗಿ ಕದ್ರಿ ನವನೀತ ಶೆಟ್ಟಿ, ಭರತೇಶ್ ಶೆಟ್ಟಿ ವ್ಯಾಟ್ಸಪ್ ನಂ.8073779432 ಈ ನಂಬರಿಗೆ ಕಳುಹಿಸಿಕೊಡಬೇಕು. ಕಥೆಗಳಿಗೆ ಪೂರಕವಾದ `ಚಿತ್ರ'ಗಳನ್ನು ವಾಟ್ಸಪ್ ಮಾಡಬಹುದು.

ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ 100 ವಾಟ್ಸಪ್ ಕಥೆಗಳನ್ನು ಪ್ರಕಟಗೊಳಿಸುವುದಲ್ಲದೆ ಪ್ರಥಮ, ದ್ವಿತೀಯ, ತೃತೀಯ, 3 ಜನ ಕೃತಿಕಾರರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಅಂಚೆ ಕಾರ್ಡಿನಲ್ಲಿ ಅಜ್ಜಿ ಕಥೆಗಳಿಗೆ ಆಹ್ವಾನ
ಜನವರಿ 27 ಶುಕ್ರವಾರ, 28 ಶನಿವಾರ ಮತ್ತು 29 ಆದಿತ್ಯವಾರದಂದು 3 ದಿನಗಳ ಕಾಲ ಉಜಿರೆಯಲ್ಲಿ ಜರಗಲಿರುವ 21ನೆಯ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಕಾರ್ಡಿನಲ್ಲಿ ಮಕ್ಕಳಿಗಾಗಿ 100 ಅಜ್ಜಿ ಕಥೆಗಳ ಸಂಕಲನ ಪ್ರಕಟಿಸಲು ನಿರ್ಧರಿಸಲಾಗಿದೆ. ಆಸಕ್ತರು ಅಂಚೆ ಕಾರ್ಡಿನಲ್ಲಿ ಸ್ವಂತ ಕೈಬರಹದಲ್ಲಿ ಕಥೆಯನ್ನು ಬರೆದು ಜನವರಿ 18ರೊಳಗಾಗಿ ಕದ್ರಿ ನವನೀತ ಶೆಟ್ಟಿ, ಅಂಚೆ ಕಾರ್ಡಿನಲ್ಲಿ ಅಜ್ಜಿಕಥೆ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ ಸಂಕೀರ್ಣ', ಕೊಡಿಯಾಲ್‍ಬೈಲ್, ಮಂಗಳೂರು-3 ಫೋನ್: 2492239 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ 100 ಅಜ್ಜಿ ಕಥೆಗಳನ್ನು ಪ್ರಕಟಗೊಳಿಸುವುದಲ್ಲದೆ ಪ್ರಥಮ, ದ್ವಿತೀಯ, ತೃತೀಯ, 3 ಜನ ಕೃತಿಕಾರರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗುವುದು. ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here