Thursday 25th, April 2024
canara news

ವಿಪಿಎಂ ಕನ್ನಡ ಶಾಲೆಯ ವಾರ್ಷಿಕ ಸ್ನೇಹ-ಸಮ್ಮೇಳನ ಮತ್ತು ಬಹುಮಾನ ವಿತರಣಾ ಸಮಾರಂಭ

Published On : 03 Jan 2017   |  Reported By : Rons Bantwal


ಹೃದಯ ಶ್ರೀಮಂತಿಕೆಯಲ್ಲಿ ಕನ್ನಡಿಗರೇ ಅಗ್ರಗಣ್ಯರು-ಸುರೇಶ್.ಎನ್ ಶೆಟ್ಟಿ

ಮುಂಬಯಿ, ಜ.03: ಶಾಲಾ ವಾರ್ಷಿಕೋತ್ಸವದಕನ್ನಡ ಹಬ್ಬದಲ್ಲಿ ಪಾಲುದಾರನಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಅನ್ಯ ಭಾಷೆಗಳ ವ್ಯಾಮೋಹವಿಲ್ಲದೆ ಕೇವಲ ಮಾತೃ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ಚೀನಾ ಮತ್ತು ಜಪಾನ ರಾಷ್ಟ್ರಗಳನ್ನು ನೋಡಿದರೆ ನಮಗೆ ಬೇಸರದ ಸಂಗತಿಯಾಗಬಹುದು, ಏಕೆಂದರೆ ಭಾರತೀಯರಾದ ನಾವು ಮಾತೃಭಾಷೆಯ ವೈವಿಧ್ಯತೆಯಜೊತೆಗೆ ಅನ್ಯ ಭಾಷೆಗಳಲ್ಲೂ ಪ್ರಬುದ್ಧತೆ ಹೊಂದಿದ್ದರೂ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿದ್ದೇವೆ. ಶೈಕ್ಷಣಿಕ ವರ್ಷದ ವಿದ್ಯಾಥಿರ್üಗಳು ಅನಾವರಣಗೊಳಿಸಿದ ಸುಪ್ತ ಪ್ರತಿಭೆಯನ್ನು ಗುರುತಿಸುವುದು. ವಿದ್ಯೆ ಏಕಮುಖಿಯಾಗಿರದೇ ಬಹುಮುಖಿಯಾಗಿರಬೇಕು. `ವಿದ್ಯಾಹೀನಂ ಪಶುಸಮಾನಂ', `ವಿದ್ಯೆ ಇಲ್ಲದವನು ಹದ್ದಿಗಿಂತ ಕೀಳು' ಎಂಬ ಗಾದೆಯಂತೆ ವಿದ್ಯೆಯಿಂದಲೇ ಸುಸಂಸ್ಕøತತೆ, ಮಾನವೀಯತೆ, ಮನುಷ್ಯತ್ವ, ಭಾವೈಕ್ಯತೆ, ಏಕತೆ, ರಾಷ್ಟ್ರೀಯ ಐಕ್ಯತೆಯನ್ನು ಮೈಗೂಡಿಸಿಕೊಂಡವರು ನಮ್ಮ ಹೊನ್ನ ಹೃದಯವಂತ ಕನ್ನಡ ಭಾಷೆಯ ಜನರು. ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ, ಅನ್ನ ಒಬ್ಬ ವ್ಯಕ್ತಿಯನ್ನು ಕೇವಲ ಕೆಲವು ಸಮಯ ಮಾತ್ರ ಸಂತೃಪ್ತಿಗೊಳಿಸಿದರೆ, ವಿದ್ಯೆಯು ಹರಿಯುವ ನೀರಿನಂತೆ ಕುಲಗೋತ್ರಗಳೆನ್ನದೇ ಸರ್ವರನ್ನು ಸಂಪನ್ನಗೊಳಿಸುತ್ತದೆ.ಯಾವುದೇ ಭಾಷೆಯ ಮಾಧ್ಯಮವಿರಲಿ ಸಂಕುಚಿತ ಮನೋಭಾವನೆಯನ್ನು ತಾಳದೆ, ವಿಶಾಲ ದೃಷ್ಟಿಕೋನದಿಂದ, ಶಾಲಾ ವಾರ್ಷಿಕೋತ್ಸವದ ಸಮಾರಂಭಕ್ಕೆ ಮುಖ್ಯಅತಿಥಿ ಸ್ಥಾನದಿಂದ ದೀಪ ಪ್ರಜ್ವಲಿಸಿ, ಬಹುಮಾನ ವಿತರಿಸುತ್ತಾ, ವಿ.ಪಿ.ಎಂ ಹಳೇ ವಿದ್ಯಾಥಿರ್ü ಸಂಘದ ಆಧ್ಯಕ್ಷರು, ಮುಖ್ಯ ಅತಿಥಿüಗಳಾಗಿ ಸುರೇಶ್ ಶೆಟ್ಟಿ ಶುಭ ಹಾರೈಸಿದರು.

ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಪಿ.ಎಂ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀವಿಗೆಯನ್ನು ಹೊತ್ತಿಸಿ, ಅತಿಥಿüಗಳಿಗೆ ಗೌರವಿಸಿ, ಬಹುಮಾನಗಳನ್ನು ವಿತರಿಸುತ್ತಾ, ವ್ಯವಸಾಯ, ಉದ್ಯೋಗವನ್ನು ಬದಿಗಿಟ್ಟು ಆಗಮಿಸಿದ ಪಾಲಕ ಬಂಧುಗಳಿಗೆ ವಂದಿಸಿ, ಪಾಲಕರು ವಿದ್ಯಾಥಿರ್üಗಳ ಭವ್ಯವಾದ ಭವಿಷ್ಯವನ್ನು ನಿರ್ಮಾಣ ಮಾಡುವವರು. ಜ್ಞಾನಕೋಶದ ವಿಕಾಸವನ್ನು, ಶೈಕ್ಷಣಿಕ ಗುಣಮಟ್ಟದ ಅಳತೆಯನ್ನು ಮಾಡಬೇಕೇ ವಿನ:ಹ ಅಲ್ಲಿ ವಿದ್ಯಾಥಿರ್üಗಳಿಗೆ ಎಷ್ಟು ತರಹದ ಸಲಕರಣೆಗಳು ಸಿಗುತ್ತವೆ ಎನ್ನುವ ವಿಚಾರಶಕ್ತಿಯನ್ನು ಬೆಳೆಸಿಕಳ್ಳಬೇಕು. ನಾವು ಅವರಿಗೆ ಫಲಪ್ರದವಾದ ಶಿಕ್ಷಣವನ್ನು ಕೊಡುವುದರ ಮೂಲಕ ಮಹಾನಗರ ಪಾಲಿಕೆಯಲ್ಲಿ ಸಿಗುವ ಎಲ್ಲಾ ಪ್ರಕಾರದ ಸಲಕರಣೆಗಳನ್ನು ಕೊಡುತ್ತೇವೆಂದು ಘಂಟಾಘೋಷವಾಗಿ ಹೇಳುವುದರ ಮೂಲಕ ಪಾಲಕರನ್ನು ಜಾಗೃತಿ ಗೊಳಿಸಿದರು. ವಿದ್ಯಾ ಪ್ರಸಾರಕ ಮಂಡಳದ ಕಟ್ಟಡದ ಪುನರ್ ದುರಸ್ಥಿ ನಿರ್ಮಿತಿಗಾಗಿ 12 ಕೋಟಿಯ ಖರ್ಚಿನ ಬಹುದೊಡ್ಡ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಅದಕ್ಕಾಗಿ ಶಿಕ್ಷಣ ಪ್ರೇಮಿಗಳು ಉದಾರ ಮನಸ್ಸಿನಿಂದ ಕೊಡುಗೈ ದಾನಿಗಳಾಗಲು ಮುಂದೆ ಬರಬೇಕು. ವಿದ್ಯಾ ಪ್ರಸಾರಕ ಮಂಡಳವು ವಜ್ರ ಮಹೋತ್ಸವದ ಉದ್ಘಾಟನೆಯನ್ನು ಮೊದಲು ಮಾಡಿ ಬರುವ ಸಂಸ್ಥೆಯ ಸ್ಥಾಪನಾಚರಣೆಯಲ್ಲಿ ಅದನ್ನು ಆಚರಿಸಲಾಗುದುದೆಂದು ಅದಕ್ಕೆ ಎಲ್ಲರ ಸಹಕಾರ-ಸಹಾಯ ಬೇಕೆಂದು ವಿನಂತಿಸಿಕೊಂಡು ಬರುವ ಕ್ರಿಸ್ಮಮಸ್ ಹಾಗೂ ಹೊಸ ವರ್ಷದ ಶುಭಾಶಯ ಹೇಳಿ ಶುಭ ಹಾರೈಸಿದರು. ತಮ್ಮ ಪರಿಸರದಲ್ಲಿರುವ ಕನ್ನಡದ ಮಕ್ಕಳನ್ನು ಶಾಲೆಗೆ ಕರೆತಂದರೆ ಅವರನ್ನು ಸಂಸ್ಥೆಯ ಸ್ಥಾಪನಾಚರಣೆಯ ಸಂದರ್ಭದಲ್ಲಿ ಸನ್ಮಾನ ಮಾಡಿ, ವಿದ್ಯಾಥಿರ್üಗಳ ಶ್ರೇಯೋಭಿವೃದ್ಧಿಗಾಗಿ ಸದಾ ಸೇವೆಗೆ ಸಿದ್ದವೆಂದು ಶುಭ ಹಾರೈಸಿದರು.

ವಿದ್ಯಾಥಿರ್üನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಪೆÇ್ರ| ಸಿ.ಜೆ ಪೈ, ಮುಖ್ಯೋಪಾಧ್ಯಾಯಿನಿ ಯವರಾದ ಸುವಿನಾ ಶೆಟ್ಟಿ ಹಾಗೂ ಅರುಣಾ ಭಟ್ ವಾರ್ಷಿಕ ವರದಿಯನ್ನು ಮಂಡಿಸಿದರು. ಶಿಕ್ಷಕಿ ಜಯಂತಿ ಐಲ್ ಮತ್ತುರಮೇಶ ಚಾನಕೋಟೆ ಅವರು ಅತಿಥಿü-ಅಧ್ಯಕ್ಷರ ಪರಿಚಯ ಮಾಡಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಶೈಕ್ಷಣಿಕ ಮತು ್ತದತ್ತಿ ಬಹುಮಾನ ವಿಜೇತ ವಿದ್ಯಾಥಿರ್üಗಳ ಯಾದಿಯನ್ನು ಪರೀವಿಕ್ಷಕಿ ರತ್ನಾ ಕುಲಕರ್ಣಿ ಶಿಕ್ಷಕಿಯರಾದ ಲಕ್ಷ್ಮೀ ಕೆಂಗನಾಳ, ಸುನಿತಾ ಮಠ ಓದಿದರು. ಶಿಕ್ಷಕಿ ಅಶ್ವಿನಿ ಬಂಗೆರಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಪರಿವೀಕ್ಷಕಿ ರತ್ನಾಕುಲಕರ್ಣಿ ಧನ್ಯವಾದಗೈದರು. ಸಮ್ಮೇಳನದಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಮತ್ತು ವಿದ್ಯಾಥಿರ್üಗಳು ಉಪಸ್ಥಿತರಿದ್ದು ಶಾಲಾ ವಿದ್ಯಾಥಿರ್üಗಳು ಸಾಂಸ್ಕøತಿಕ ಕಾರ್ಯಕ್ರಮದ ನೀಡಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾರೋಪಗೊಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here