Thursday 28th, March 2024
canara news

ಶಿಕ್ಷಣ ತಜ್ಞ-ಇಂಜಿನೀಯರಿಂಗ್ ಕಾಲೇಜುಗಳ ಸರದಾರ ಪಾಂಗ್ಳಾ ಆಲ್ಬರ್ಟ್ ಡಬ್ಲ್ಯು.ಡಿ'ಸೋಜಾರ ಷಷ್ಠ್ಯಬ್ಧಿ ಸಂಭ್ರಮಚರಣೆ

Published On : 04 Jan 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.02: ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಮೂಲಕ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಲ್ಘರ್ ವೆವೂರು ಅಲ್ಲಿ ಸೈಂಟ್ ಜೋನ್ ಟೆಕ್ನಿಕಲ್ ಕ್ಯಾಂಪಸ್ ಮುಖೇನ ಸೈಂಟ್ ಜೋನ್ ಕಾಲೇಜ್ ಆಫ್ ಇಂಜಿನೀಯ ರಿಂಗ್ ಎಂಡ್ ಟೆಕ್ನಾಲಜಿ, ಸೈಂಟ್ ಜೋನ್ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಶಿ ಎಂಡ್ ರಿಸರ್ಚ್, ಸೈಂಟ್ ಜೋನ್ ಡಿಗ್ರಿ ಕಾಲೇಜ್, ಸೈಂಟ್ ಜೋನ್ ಇನ್‍ಸ್ಟಿಟ್ಯೂಟ್ ಆಫ್ ಮೇನೆಜ್‍ಮೆಂಟ್ ಎಂಡ್ ರಿಸರ್ಚ್, ಸೈಂಟ್ ಜೋನ್ ಪಾಲಿಟೆಕ್ನಿಕ್, ಸೈಂಟ್ ಜೋನ್ ಇಂಟರ್‍ನೇಶನಲ್ ಸ್ಕೂಲ್ ಇತ್ಯಾದಿಗಳನ್ನು ರೂಪಿಸಿ ಗ್ರಾಮೀಣ ಪ್ರದೇಶದ ಶೈಕ್ಷಣಿಕ ಏಳಿಗೆಗಾಗಿ ಅನನ್ಯ ಸೇವೆ ಸಲ್ಲಿಸಿದ ಆಲ್ಡೇಲ್ ಟ್ರಸ್ಟ್‍ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಸ್‍ನ ಉಪ ಕಾರ್ಯಾಧ್ಯಕ್ಷ, ಮೋಡೆಲ್ ಕೋ.ಆಪರೇಟಿವ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ವಿಲ್ಪ್ರೇಡ್ ಡಿ'ಸೋಜಾ ಅವರ ಷಷ್ಠ ್ಯಬ್ಧಿ ಜನ್ಮೋತ್ಸವಕ್ಕೆ ಅಪಾರ ಗಣ್ಯಾಧಿಗಣ್ಯರು ಶುಭಾರೈಸಿದರು.

 

 

ಆಲ್ಬರ್ಟ್ ಡಬ್ಲ್ಯು.ಡಿ'ಸೋಜಾ ಅವರ ಷಷ್ಠ್ಯಬ್ಧಿ ಜನ್ಮೋತ್ಸವ ನಿಮಿತ್ತ ಕಳೆದ ಭಾನುವಾರ ಸಂಜೆ ಅಂಧೇರಿ ಪೂರ್ವದ ಡಿವೈನ್ ಚೈಲ್ಡ್ ವಿದ್ಯಾಲಯದ ಹೋಲಿಫ್ಯಾಮಿಲಿ ಕಾನ್ವೆಂಟ್ ಚಾಪೆಲ್‍ನಲ್ಲಿ ಅಭಿವಂದನಾ ಪೂಜೆ ನೆರವೇರಿಸಿ ಬಳಿಕ ಸಾಕಿನಾಕದಲ್ಲಿನ ಹಾಲಿಡೇಇನ್ನ್ ಸಭಾಗೃಹದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿ ಶುಭಾರೈಸಲಾಯಿತು.

ಭೊಪಾಲ್ ಆರ್ಚ್‍ಬಿಷಪ್ ಲಿಯೋ ಕೊರ್ನೆಲಿಯೊ ಆಲ್ಬರ್ಟ್ ಡಿ'ಸೋಜಾ ಅವರಿಗೆ ಪ್ರಕಾಶಮಾನದ ಸಂಕೇತವಾಗಿ ದೀಪನೀಡಿ ಕೃತಜ್ಞತಾಪೂಜೆ ನೆರವೇರಿಸಿದರು. ಮುಂಬಯಿ ಬಿಷಪ್ ಫರ್ಸಿವಲ್ ಜೆ.ಇ ಫೆರ್ನಾಂಡಿಸ್ ಪ್ರಸಂಗವನ್ನೀಡಿ ಹರಸುತ್ತಾ ಆಲ್ಬರ್ಟ್ ಅವರ ಅವಿರತ ಮತ್ತು ಅನನ್ಯ ಸೇವೆ ಮನವರಿಸಿ ಅಭಿವÀಂದಿಸಿದರು. ಜಬ್ಬಲ್‍ಪುರ್ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಅಲ್ಮೇಡಾ, ವಾರಣಸಿ ಧರ್ಮಪ್ರಾಂತ್ಯದ ಬಿಷಪ್ ಎವ್ಜೀನ್ ಜೋಸೆಫ್, ಮುಂಬಯಿ ಬಿಷಪ್ ಆಗ್ನೆಲ್ಲೋ ಗ್ರೇಶಿಯಸ್ ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು. ಫಾ| ಲವ್ರೀ ಫೆರಾವೋ, ಪೂಜಾವಿಧಿ ನಡೆಸಿದರು. ರೆ|ಫಾ| ಚಾರ್ಲ್ಸ್ ವಾಸ್ ಮತ್ತು ಗಾಯಕವೃಂದವು ಭಕ್ತಿಗೀತೆಗೈದರು. ಆಲ್ಬರ್ಟ್ ಡಿ'ಸೋಜಾ ಮತ್ತು ಎಲ್ವಿನಾ ಎ.ಡಿ'ಸೋಜಾ ಬೈಬಲ್ ವಾಚಿಸಿದರು.

ಈ ಸಂದರ್ಭದಲ್ಲಿ ಡಿ'ಸೋಜಾ ಅವರ ತಾಯಿ ಎಲಿಜಬೆತ್ ಡಿ'ಸೋಜಾ, ಪತ್ನಿ ಎಲ್ವಿನಾ ಎ.ಡಿ'ಸೋಜಾ, ಪುತ್ರಿ ಎಲಾಯ್ನ್ ಎ.ಡಿ'ಸೋಜಾ, ಪುತ್ರ ಆಲ್ಡ್ರೀಜ್ ಎ.ಡಿ'ಸೋಜಾ, ಅಳಿಯ ರೂಬೆನ್ ಬುಥೇಲೊ, ಮೊಮ್ಮಗಳು ಬೇಬಿ ಇವಾ ರೂಬೆನ್ ಹಾಗೂ 50ಕ್ಕೂ ಅಧಿಕ ಧರ್ಮಗುರುಗಳು, 70ಕ್ಕೂ ಅಧಿಕ ಧರ್ಮಭಗಿನಿಯರು, ಓಸ್ವಲ್ಡ್ ಕಾರ್ಡಿನಲ್ ಗ್ರೇಷಿಯಸ್, ರೋನಿ ಹೆಚ್.ಮೆಂಡೋನ್ಸಾ, ಮೇಡಂ ಗ್ರೇಸ್ ಪಿಂಟೋ, ರಾಯ್ನ್ ಪಿಂಟೋ, ಪ್ರಿಂಟಾನಿಯಾ, ಆಲ್ಡೇಲ್ ಪರಿವಾರ ಹಾಗೂ ಮೋಡೆಲ್ ಬ್ಯಾಂಕ್ ನಿರ್ದೇಶಕರು, ಸಿಸಿಸಿಐ ಬಳಗ ಸೇರಿದಂತೆ ಅನೇಕ ಸಂಸ್ಥೆಗಳ ಮುಖ್ಯಸ್ಥರು, ಅಪಾರ ಬಂಧುಮಿತ್ರರು, ಅಭಿಮಾನಿ, ಹಿತೈಷಿಗಳು ಉಪಸ್ಥಿತರಿದ್ದು ಆಲ್ಬರ್ಟ್ ಡಿ'ಸೋಜಾ ಅವರಿಗೆ ಶುಭೇಚ್ಛಕೋರಿ ಶತಾಯುಷ್ಯವನ್ನು ಹಾರೈಸಿದರು.

ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾವನಕ್ಷೇತ್ರ ಉಡುಪಿಯ ಶಂಕರಪುರದ ಸುಸಂಸ್ಕೃತ ಮನೆತನ ಪಾಂಗ್ಳಾದ ಅಲೇಕ್ಸ್ ಡಿ'ಸೋಜಾ ಮತ್ತು ಎಲಿಜಬೆತ್ ಡಿ'ಸೋಜಾ ಅವರ ಸುಪುತ್ರರಾಗಿ ಜನಿಸಿದ ಆಲ್ಬರ್ಟ್ ಬಿ.ಎ ಪದವೀಧರರಾಗಿ ಪ್ರಿಂಟಿಂಗ್ ಟೆಕ್ನೊಲಜಿಯಲ್ಲಿ ಡಿಪೆÇ್ಲಮಾ ಹಾಗೂ ಬಿಸ್ನೆಸ್ ಮ್ಯಾನೆಜ್‍ಮೆಂಟ್‍ನಲ್ಲಿ ಪದವೀಧರರು. ಭಾರತ ದೇಶದಲ್ಲೇ ಪ್ರಮುಖವಾದ ಪ್ರಿಂಟ್‍ಹೌಸ್ ಖ್ಯಾತಿಯ ಪ್ರತಿಷ್ಠಿತ ಪ್ರಿಂಟಾನಿಯಾ ಆಫ್‍ಸೆಟ್ ಪ್ರೈವೇಟ್ ಲಿಮಿಟೆಡ್ ಇಂದು ತನ್ನ ಮೂವತ್ತೆರಡು ವರುಷಗಳನ್ನು ಯಶಸ್ವೀಯಾಗಿ ಪೂರೈಸಿದ ಮಂಗಳೂರು ಧರ್ಮ ಪ್ರಾಂತ್ಯದ ಕ್ರೈಸ್ತ ಸಮೂದಾಯದ ಉದ್ಯಮಿಗಳಲ್ಲೇ ಅಗ್ರಗಣ್ಯರು.

ಉದ್ಯಮದಲ್ಲಿ ಪರಿಪೂರ್ಣತೆ ಹೊಂದಿದ ಆಲ್ಬರ್ಟ್ ಡಿ'ಸೋಜಾ ಅವರಿಗೆ ರೋಮನ್ ಕ್ಯಾಥೋಲಿಕ್ ಸಮುದಾಯದ ಪರಮೋಚ್ಚ ಧರ್ಮಗುರು ದ್ವಿತೀಯ ಪೆÇೀಪ್ ಜಾನ್ ಪೌಲ್ ಅವರು ರೋಮನ್ ಕ್ಯಾಥೋಲಿಕರ ಪವಿತ್ರ ನಗರ ವಾತಿಕಾನ್ ಶÀಹರಕ್ಕೆ `ರೋಮ್'ಗೆ ಆಹ್ವಾನಿಸಿ ಸನ್ಮಾನಿಸಿ ಹರಸಿದ್ದು ಇವರ ಭಾಗ್ಯವಾದರೆ ಕ್ರೈಸರ ಪಾಲಿಗೆ ಸೌಭಾಗ್ಯವೆಣಿಸಿದೆ. ಈ ಮಹಾನ್ ಪುರಸ್ಕಾರ ಇವರಿಗೆ ದೊರೆತ `ಸರ್ವಶ್ರೇಷ್ಠ ಪುರಸ್ಕಾರ' ಆಗಿದ್ದು ಇದರಿಂದ ಧ್ಯನ್ಯತರೆಣಿಸಿದ ಡಿ'ಸೋಜಾ ಚರ್ಚ್‍ಗಳ ಗ್ರಂಥಗಳ ಪ್ರಕಾಶಕ, ಬೈಬಲ್‍ಗಳ ಮುದ್ರಣ, ಸ್ತೋತ್ರಕ್ಕೆ ಸಂಬಂಧಿತ ಪುಸ್ತಕಾದಿ ಮುದ್ರಣ, ಚರ್ಚ್‍ಗಳಲ್ಲಿ ದೈನಂದಿನ ಪ್ರಾರ್ಥನಾ ಪುಸ್ತಕಗಳ ಪ್ರಕಟನಕಾರರಾಗಿ ವಿಶ್ವದಲ್ಲೇ ಪ್ರಸಿದ್ಧವಾದ ಛಾಪಕ ಉದ್ಯಮಿ ಕೀರ್ತಿಗೆ ಭಾಜನರಾಗಿದ್ದಾರೆ.

ಉಚ್ಛ ಚಿಂತನೆಗಳ ವಿಚಾರವಾದಿ, ಮಿತಭಾಷಿ ವ್ಯಕ್ತಿ, ಕೊಡುಗೈ ದಾನಿಯಾದ ಡಿ'ಸೋಜಾ ನಿಷ್ಠಾವಂತ ಸಮಾಜ ಸೇವಕರಾಗಿದ್ದು, ಹತ್ತು ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಆರೋಗ್ಯ ಸಂಸ್ಥೆಗಳ ಪೆÇೀಷಕ, ಸಲಹಾಗಾರ, ನಿರ್ದೇಶರಾಗಿರುವರು. ಯುವ ಜನತೆಗೆ ಸದಾ ಆದಶರ್Àಪ್ರಾಯರೆಣಿಸಿದ ಶ್ರೀಯುತÀರು ಸಮಗ್ರ ಸಮಾಜದ ಏಕತೆಗಾಗಿ ಶ್ರಮಿಸುತ್ತಿದ್ದಾರೆ. ಸಮಗ್ರ ಧರ್ಮೀಯ, ಜಾತೀ ಜನಾಂಗಕ್ಕೆ ಇವರ ಉದಾರಹಸ್ತದ ನೆರವು ಅಪಾರವಾಗಿದ್ದು, ಸಹಸ್ರಾರು ಬಡ ವಿದ್ಯಾಥಿರ್üಗಳಿಗೆ ಆಸರೆಯಾಗಿರುವ ಸಮಾಜಕ್ಕೆ, ಶಿಕ್ಷಣಕ್ಕೆ ಇವರ ಕೊಡುಗೆ ಗಣನೀಯವಾಗಿದೆ. ಸರ್ವರ ನೋವು ನಲಿವಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಇವರ ಜನಪರ ನಿಲುವು ಶ್ರೇಷ್ಠವಾಗಿದೆ.

Mr. Albert W. D'Souza Chairman: Aldel Education Trust Mumbai, Chairman: Model Co.op. Bank. Ltd. Mumbai, Chairman & Managing Director: Printania Offset Pvt. Ltd., Mumbai.

Most. Rev.Oswald Cardinal Gracias (Arch Bishop of Mumbai), Most. Rev. Cornelio (Arch Bishop of Bhopal), Rt. Rev. Percival J.E.Fernandez (Bishop of Mumbai), Rev. Eugne Joseph (Bishop of Varanasi), Rev. Gerald Almeida (Bishop of Jabalpur), Rt. Rev. Agnello Gracias (Bishop of Mumbai)


Mrs. Elizabet A.D’Souza (Mother) Mrs.Elvina A.D’Souza (Wife), Elaine R.Buthelho (Daughter), Aldridge A.D’Souza (Son), Reuben W.Buthelho (Son-in-Law) and Baby Eva R. Buthelho (Grand Daughter),

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here