Thursday 28th, March 2024
canara news

ಭಟ್ಕಳದ ವ್ಯಕ್ತಿ ಬಳಿ 25.7 ಲ. ರೂ. ವಿದೇಶಿ ಕರೆನ್ಸಿ ಪತ್ತೆ

Published On : 07 Jan 2017   |  Reported By : Canaranews Network


ಮಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿ.ಆರ್.ಐ.) ಮಂಗಳೂರು ಕೇಂದ್ರದ ಅಧಿಕಾರಿಗಳು ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಹಾರಲೆತ್ನಿಸುತ್ತಿದ್ದ ಭಟ್ಕಳದ ಮೊಹಮದ್ ಫಾರೂಕ್ ಆರ್ಮರ್ (51)ನನ್ನು ಬಂಧಿಸಿ ಅಕ್ರಮವಾಗಿ ಸಾಗಿಸಲೆತ್ನಿಸಿದ 25,07, 162 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶ ಪಡಿಸಿಕೊಂಡಿದ್ದಾರೆ. ಅಮೆರಿಕನ್ ಡಾಲರ್, ಬ್ರಿಟಿಷ್ ಪೌಂಡ್, ಯೂರೋ, ಯುಎಇ ಧಿರಂ, ಸೌದಿ ರಿಯಾಲ್, ಖತಾರ್ ರಿಯಾಲ್ಗಳು ವಶ ಪಡಿಸಿಕೊಂಡಿರುವ ವಿದೇಶಿ ಕರೆನ್ಸಿಯಲ್ಲಿ ಒಳಗೊಂಡಿವೆ.

ಖಚಿತ ಮಾಹಿತಿ ಮೇರೆಗೆ ಗುರುವಾರ ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿದ ಡಿ.ಆರ್.ಐ. ಅಧಿಕಾರಿಗಳು ದುಬಾೖಗೆ ತೆರಳಲಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧತೆ ಮಾಡಿದ್ದ ಮೊಹಮದ್ ಫಾರೂಕ್ ಆರ್ಮರ್ನನ್ನು ವಶಕ್ಕೆ ಪಡೆದು ಬಳಿಕ ಬಂಧಿಸಿದರು. ಇಮಿಗ್ರೇಶನ್ ವಿಭಾಗದ ಅಧಿಕಾರಿಗಳು ಆರೋಪಿಯ ಪಾಸ್ಪೋರ್ಟ್ ಮತ್ತು ಇತರ ತಪಾಸಣೆಯ ವಿಧಿ ವಿಧಾನಗಳನ್ನು ಮುಗಿಸಿದ್ದರು.

ಆದರೆ ಡಿ.ಆರ್.ಐ. ಅಧಿಕಾರಿಗಳಿಗೆ ಸಂಶಯ ಉಳಿದಿತ್ತು. ಅವರು ಮೊಹಮದ್ ಫಾರೂಕ್ ಆರ್ಮರ್ನ ಲಗ್ಗೇಜ್ನ್ನು ಕೂಲಂಕುಷವಾಗಿ ತಪಾಸಣೆಗೆ ಒಳ ಪಡಿಸಿದಾಗ ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳ ಪ್ಯಾಕೆಟ್ಗಳೆಡೆಯಲ್ಲಿ ವಿದೇಶಿ ಕರೆನ್ಸಿಗಳ ಕಂತೆಯನ್ನು ಬಚ್ಚಿಟ್ಟಿರುವುದು ಕಂಡು ಬಂತು. ಆರೋಪಿಯನ್ನು ವಿಚಾರಣೆಗೆ ಒಳ ಪಡಿಸಿದಾಗ ಈ ಹಿಂದೆ ಆತ ಕೊಲ್ಲಿ ರಾಷ್ಟ್ರಗಳಿಂದ ಬರುವಾಗ ಹಲವು ಬಾರಿ ಮೊಬೈಲ್ ಫೋನ್ಗಳನ್ನು ಹಾಗೂ ಚಾಕೊಲೇಟ್ ಮತ್ತಿತರ ತಿಂಡಿ ತಿನಿಸುಗಳನ್ನು ಅಕ್ರಮವಾಗಿ ಭಾರತಕ್ಕೆ ತಂದಿರುವ ಬಗ್ಗೆ ತಿಳಿಸಿದ್ದಾನೆ. ಹಾಗೆ ತಂದ ವಸ್ತುಗಳನ್ನು ಭಟ್ಕಳ ಪರಿಸರದಲ್ಲಿರುವ ಭೂಗತ ವ್ಯಕ್ತಿಗಳಿಗೆ ಮಾರಾಟ ಮಾಡಿ ಅವರಿಂದ ವಿದೇಶಿ ಕರೆನ್ಸಿಗಳನ್ನು ಸಂಗ್ರಹಿಸಿರುವ ವಿಚಾರ ಈ ಸಂದರ್ಭ ಆತ ತಿಳಿಸಿದ್ದಾನೆ. ಈ ಭೂಗತ ವ್ಯಕ್ತಿಗಳು ಹಾಗೂ ಅವರ ಚಟುವಟಿಕೆಗಳ ಕುರಿತು ತನಿಖೆ ನಡೆಸ ಬೇಕಾಗಿದೆ ಎಂದು ಡಿ.ಆರ್.ಐ. ಅಧಿಕಾರಿಗಳು ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here