Thursday 18th, April 2024
canara news

ಸಯಾನ್‍ನ ಗೋಕುಲದಲ್ಲಿ ನಿರಾಶ್ರಿತರಾಗಲಿರುವ ಪುಸ್ತಕ-ಕೃತಿಗಳ ರಾಶಿರಾಶಿ

Published On : 09 Jan 2017   |  Reported By : Rons Bantwal


ಮುಂಬಯಿ, ಜ.09: ಸಯಾನ್ ಪೂರ್ವದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಸಂಸ್ಥೆಯ ಯೋಜನೆ ಗೋಕುಲ ಭವನದ ನಿಮಿತ್ತ ಶೀಘ್ರವೇ ನೆಲಸಮಗೊಳ್ಳಲಿರುವ ಸದ್ಯದ ಹಳೆ ಕಟ್ಟದ ವಾಚನಾಲಯದಲ್ಲಿನ ಸಾವಿರಾರು ಪುಸ್ತಕ-ಕೃತಿಗಳು ಸದ್ಯ ಗೋಕುಲದ ಸಭಾಗೃಹದಲ್ಲಿ ರಾಶಿರಾಶಿಯಾಗಿ ಹಾಕಲಾಗಿದೆ.

ಕಳೆದ ಅನೇಕ ದಶಕಗಳಿಂದ ಖರೀದಿಸಿಯೋ ಅಥವಾ ಕೊಡುಗೆಯಾಗಿ ನೀಡಲ್ಪಟ್ಟು ವಾಚನಾಲಯದಲ್ಲಿ ಸಂಗ್ರಹಿಸಲ್ಪಟ್ಟ ಅದೆಷ್ಟೋ ಅಪರೂಪದ ಇನ್ನು ಎಲ್ಲೂ ಸಿಗÀದಂತಹ ಮೌಲ್ಯಭರಿತ ಕೃತಿ, ಕಾದಂಬರಿ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ನೂರಾರು ವಿಚಾರಿತ ಪುಸ್ತಕಗಳು ಇಲ್ಲಿ ಸಾವಿರಾರು ಓದುಗರ ಅರಿವು ವೃದ್ಧಿಸಿ ಕೊಂಡದ್ದಿದೆ. ಆದರೆ ಅಂತಹ ಪುಸ್ತಕಗಳು ಇದೀಗ ಸ್ಥಳಾವಕಾಶದ ಆಡಚಣೆ, ನವೀಕರಣದ ನಿಮಿತ್ತ ಓದುಗರಿಂದ ದೂರ ಸಾಗುತ್ತಿದ್ದು ಅನೇಕವು ಮಾಯವಾಗಲಿವೆ.

ಧರ್ಮಾರ್ಥವಾಗಿ ನೀಡಲ್ಪಡುವ ಇವುಗಳನ್ನು ಇದೀಗಲೇ ಆಸಕ್ತ ಸಾಹಿತ್ಯಾಭಿಮಾನಿಗಳು, ಲೇಖಕರು ಪಡೆದರೂ ಇನ್ನೂ ಸಾವಿರಾರು ಪುಸ್ತಕಗಳು ರಾಶಿರಾಶಿಯಾಗಿಯೇ ಉಳಿದಿರುವುದು ಓದುಗರ ಕಣ್ಮನ ಸೆಳೆಯುತ್ತಿದ್ದು ತಮ್ಮಿಂದ ದೂರ ಸರಿಯುವ ಪುಸ್ತಕಗಳ ಬಗ್ಗೆ ಒಂದೆಡೆ ಚಿಂತೆ ವ್ಯಕ್ತಪಡಿಸುತ್ತಿದ್ದರಾದರೂ ಆಧುನಿಕ ಯುಗದ ವಾಚನಾಲಯ, ಇ-ಲೈಬ್ರರಿ, ವಿಕಿವಿೂಡಿಯಾ, ಹೈಬ್ರೀಡ್-ಲೈಬ್ರರಿ, ಬುಕ್‍ಲೆಸ್ ಲೈಬ್ರರಿ, ಡಿಜಿಟಲ್ ಲೈಬ್ರರಿ, ಟೂಲ್, ಟ್ರಾವೆಲ್ಲಿಂಗ್ ಲೈಬ್ರರಿ ಇತ್ಯಾದಿಗಳನ್ನೇ ನೆನೆದು ದಿಲ್‍ಕುಶ್ ಮಾಡಿಕೊಂಡು ಸ್ವಂತಃಕ್ಕೆ ಸಮಾಧಾನ ಪಡುವಂತಾಗಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here