Tuesday 16th, April 2024
canara news

ಕನ್ನಡ ಸಂಘ ಮುಂಬಯಿ-ಸೃಜನಾ ಬಳಗದ ದತ್ತಿ ಉಪನ್ಯಾಸ-ಕೃತಿ ಸಮೀಕ್ಷೆ ಕಾರ್ಯಕ್ರಮ

Published On : 10 Jan 2017   |  Reported By : Rons Bantwal


ಭಾಷೆ ಬಳಸಿದಷ್ಟು ಸಮೃದ್ಧವಾಗಿ ಬೆಳೆಯುತ್ತದೆ : ಲತಾ ಸಂತೋಷ್ ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.09: ಕನ್ನಡ ಸಂಘ ಮುಂಬಯಿ ಮತ್ತು ಸೃಜನಾ ಬಳಗ ಮುಂಬಯಿ ಸಂಸ್ಥೆಗಳು ಎರಡು ದತ್ತಿ ಉಪನ್ಯಾಸ ಹಾಗೂ ಕೃತಿ ಸಮೀಕ್ಷೆ ಕಾರ್ಯಕ್ರಮವನ್ನು ಕಳೆದ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹÀದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುಖ್ಯ ಅತಿಥಿüಯಗಿದ್ದು, ಕನ್ನಡ ಪ್ರೇಮಿ ಮಂಡಳಿ ಖಾಲ್ಸಾ ಕಾಲೇಜು ಪ್ರಾಯೋಜಿತ `ಮುಂಬಯಿಯಲ್ಲಿ ಕನ್ನಡದ ಭವಿಷ್ಯ' ವಿಚಾರವಾಗಿ ಲೇಖಕಿ ಹೇಮಾ ಸದಾನಂದ ಅವಿೂನ್ ನೀಡಿದರು. ದಿ| ಜಿ.ವಿ ರಂಗಸ್ವಾಮಿ ಸ್ಮಾರಕ `ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾಧನೆ' ವಿಚಾರಿತ ದತ್ತಿ ಉಪನ್ಯಾಸವನ್ನು ಉದಯೋನ್ಮುಖ ಲೇಖಕ ದುರ್ಗಪ್ಪ ಯು.ಕೋಟಿಯವರ್ ನೀಡಿದರು.

ಲತಾ ಸಂತೋಷ್ ಮಾತನಾಡಿ ಮುಂಬಯಿಯಲ್ಲಿ ಕನ್ನಡದ ಉಜ್ವಲ ಭವಿಷ್ಯಕ್ಕೆ ಮೆರಗು ನೀಡಲೆಂದು ಸಂಘ ಸಂಸ್ಥೆಗಳನ್ನು ಕಟ್ಟಿದ ಹಿರಿಯರ ಶ್ರಮ ವ್ಯರ್ಥವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಸತ್ವದ ಸವಿರುಚಿಯ ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯ. ಕನ್ನಡವನ್ನು ನಿಂತ ನೀರರಾಗದೆ ಅದಕ್ಕೆ ಮಿಂಚಿನ ಸಂಚಾರವನ್ನು ತಂದು ಕೊಟ್ಟ ಹಿರಿಮೆ ಗರಿಮೆ ಮುಂಬಯಿ ತುಳು ಕನ್ನಡಿಗರಿಗೆ ಸಲ್ಲುತ್ತದೆ.ಪರಕೀಯ ಭಾಷೆ ಹಾವಳಿಯಿಂದ ಕನ್ನಡ ಕುಂದುತ್ತಿದೆ. ಕೊರಗುತ್ತಿದೆ ಎಂಬ ಚಿಂತೆ ಬೇಡಾ. ಮನೆ ಮನೆಯಲ್ಲಿ ಕನ್ನಡ ನಿನಾದ ಮೊಳಗುಬೇಕು. ಮನಮನದಲ್ಲಿ ಕನ್ನಡ ಪ್ರೀತಿ ತುಂಬಿ ತುಳಳಬೇಕು. ಭಾಷೆ ಬಳಸಿದಷ್ಟು ಅದು ಸಂಬ್ರದ್ಧವಾಗಿ ಬೆಳೆಯುತ್ತದೆ. ಕನ್ನಡ ಕೇವಲ ಭಾಷೆ ಮಾತ್ರವಲ್ಲ ನಮ್ಮೆಲ್ಲರನ್ನು ಅತ್ಮೀಯವಾಗಿ ಬೇಸೇವ ಕೊಂಡಿ. ಕೃತಿ ವಿಮರ್ಶೆಯಿಂದ ಸಾಹಿತ್ಯದ ಬೇರುಗಬ್ಬಗೊಳ್ಳುತ್ತದೆ. ಡಾ| ಸುನೀತಾ ಶೆಟ್ಟಿ ಅವರ ಹಾಗೂ ಸೃಜನದ ಕೃತಿ ವಿಮರ್ಶೆ ನಮಗೆಲ್ಲಾ ಹಲವು ಮಾಹಿತಿ ನೀಡಿತು. ಮುಂಬಯಿ ಲೇಖಕಿಯರ ಬಳಗ ಸೃಜನವೊಂದು ಸುಂದರವಾದ ಹೂವಿನ ತೋಟವಿದ್ದಂತೆ. ಇಲ್ಲಿನ ಲೇಖಕಿಯರು ಬಗೆಬಗೆಯ ಹೂವಿಗೆ ಸಮಾನ. ಇವರ ಕವನ, ಕತೆ, ಲೇಖನ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಕಂಪು ನಾಡಿನಾದ್ಯಂತ ಪಸರಿಸಲಿ ಎಂದು ಆಶಯ ವ್ಯಕ್ತ ಪಡಿಸಿದರು.

ನಂತರ ಡಾ| ಸುನೀತಾ ಎಂ.ಶೆಟ್ಟಿ ಅವರ ಪ್ರವಾಸ ಕಥನ `ಸಾಗರದಾಚೆಗೆ' ಕೃತಿಯನ್ನು ಕವಿ, ಸಾಹಿತಿ ಡಾ| ಕರುಣಾಕರ ಎನ್.ಶೆಟ್ಟಿ ಅವರು ಹಾಗೂ ಇತ್ತೀಚೆಗೆ ಬಿಡುಗಡೆಗೊಂಡ ಸೃಜನಾ ಬಳಗ ಮುಂಬಯಿ ಇದರ ಲೇಖಕಿಯರ ಪ್ರಬಂಧ ಸಂಗ್ರಹ `ಮಹಿಳಾ ಜಾನಪದ' ಕೃತಿಯನ್ನು ಅಪರ್ಣಾ ರಾವ್ ಸಮೀಕ್ಷೆ ನಡೆಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಪ್ರಧಾನ ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಕೋಶಾಧಿಕಾರಿ ಸುಧಾಕರ ಜಿ.ಪೂಜಾರಿ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ, ಸೃಜನಾ ಬಳಗ ಮುಂಬಯಿ ಇದರ ಡಾ| ಸುನೀತಾ ಎಂ.ಶೆಟ್ಟಿ, ವಿೂನಾ ಕಳವಾರ, ಶಾಂತಾ ಶಾಸ್ತ್ರೀ, ಡಾ| ಗಿರಿಜಾ ಶಾಸ್ತ್ರಿ, ದಕ್ಷಾಯಿಣಿ ಯೆಡಹಳ್ಳಿ, ಸುಮಂಗಲ ಶೆಟ್ಟಿ, ಡಾ| ಜಿ.ಪಿ.ಕುಸುಮಾ, ಶಾರದಾ ಅಂಬೆಸಂಗೆ ಮತ್ತಿತರರು ಉಪಸ್ಥಿತರಿದ್ದರು.

ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ಸೋಮನಾಥ ಕರ್ಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here