Friday 29th, March 2024
canara news

ತುಳುಕೂಟ ಪುಣೆ-ಪಿಂಪ್ರಿ ಚಿಂಚ್‍ವಾಡ್ ಪ್ರಾದೇಶಿಕ ಸಮಿತಿಯ ವಾರ್ಷಿಕೋತ್ಸವ

Published On : 10 Jan 2017   |  Reported By : Rons Bantwal


ಮುಂಬಯಿ, ಜ.10: ತುಳುಕೂಟ ಪುಣೆ ಇದರ ಸ್ಥಾಪನೆ 1997ರಲ್ಲಾದರೆ; ಅದರ ಪಿಂಪ್ರಿ ಚಿಂಚ್‍ವಾಡ್ ಪ್ರಾದೇಶಿಕ ಸಮಿತಿ 2012ರಲ್ಲಿ ಅಸ್ಥಿತ್ವಕ್ಕೆ ಬಂತು. ಈ ಪರಿಸರದಲ್ಲಿ ಕ್ರಿಯಾಶೀಲವಾಗಿರುವ ಬಂಟರ ಸಂಘ, ಬಿಲ್ಲವರ ಸಂಘ, ಕುಲಾಲ ಸಂಘ, ದೇವಾಡಿಗ ಸಂಘ, ಅಯ್ಯಪ್ಪ ದೇವಸ್ಥಾನ ಇತ್ಯಾದಿ ಸಂಸ್ಥೆಗಳ ಸಹಕಾರ ಮತ್ತು ಸೇರುವಿಕೆಯಿಂದ ಚಿಗುರೊಡೆದ ಈ ಸಂಸ್ಥೆ ಅಟೋಟ, ಕ್ರಿಕೆಟ್, ವಿದ್ಯಾಥಿರ್üವೇತನ ಅಲ್ಲದೆ ಸಾಹಿತ್ತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಒಂದು ಮಾದರಿ ಸಂಸ್ಶೆಯಾಗಿ ಬೆಳೆಯುತ್ತಿದೆ. ಇದರ ಈ ವರ್ಷದ ವಾರ್ಷಿಕ ಸಮಾರಂಭ 15 ಜನವರಿ 2017 ರಂದು ಸುಭಂ ಲಾನ್ಸ್ ಎಂಡ್ ಗಾರ್ಡನ್, ಅಹೀರ್ ಮಂಗಳ ಕಾರ್ಯಾಲಯದ ಸನಿಹ, ವಾಲೇಕರ್‍ವಾಡಿ, ಚಿಂಚ್‍ವಾಡಿ ಪುಣೆ ಇಲ್ಲಿ ಸಂಜೆ 5.00 ಗಂಟೆಗೆ ನಡೆಯಲಿದೆ.

ತುಳುಕೂಟ ಪುಣೆ ಇದರ ಅಧ್ಯಕ್ಷ ತಾರಾನಾಥ ರೈ ಅವರ ಉಪಸ್ಥಿತಿ ಹಾಗೂ ಪಿಂಪ್ರಿ ಚಿಂಚ್‍ವಾಡ ಶಾಖೆಯ ತುಳು ಕೂಟದ ಅಧ್ಯಕ್ಷ ಶ್ಯಾಮ್ ಸುವರ್ಣ ಅವರ ನೇತೃತ್ವದಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಸಾಹಿತಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಒಳಗೊಂಡಿದೆ. ಇದರಲ್ಲಿ ರಾಷ್ಟ್ರೀಯ ಪ್ರಶಸ್ತಿವಿಜೇತ ನಟ, ನಿರ್ದೇಶಕ, ನಿರ್ಮಾಪಕರಾದ ಏರೆಗ್‍ಲಾ ಪನೊಚ್ಚಿ ಖ್ಯಾತಿಯ ಶಿವರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಮುಖ್ಯ ಅತಿಥಿüಗಳಾಗಿ ಅಂಕಣಕಾರ, ಚಿಂತಕ ರವಿ ರಾ.ಅಂಚನ್ ಆಗಮಿಸಿ ಸಮಾರೋಪ ಭಾಷಣ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ತುಳುನಾಡ ಸತ್ಯದ ಚಾವಡಿ ಎಂಬ ವಿಚಾರ ಗೋಷ್ಠಿ ನಡೆಯಲಿದ್ದು ಹಿರಿಯ ಲೇಖಕಿ, ಸಂಘಟಕಿ ಶಕುಂತಲಾ ಅರ್.ಪ್ರಭು ಉದ್ಘಾಟಿಸಲಿದ್ದಾರೆ. ಅದರಲ್ಲಿ ಸುಮಂಗಲ ಗುಣಾಕರ್ ಶೆಟ್ಟಿ ಅವರು ತನ್ನಿಮಾನಿಗನ ಬಗ್ಗೆ, ಹೇಮ ಸದಾನಂದ ಅಮೀನ್ ಅವರು ಕಲ್ಲುಟ್ಟಿಯ ಬಗ್ಗೆ, ಕಟ್ಪಾಡಿ ಮೀರಾ ಕೃಷ್ಣ ಅವರು ಮಾಯಂದಾಲ್ ಬಗ್ಗೆ, ಸುಗಂಧಿ ಶ್ಯಾಮ್ ಹಳೆಯಂಗಡಿ ಅವರು ಸಿರಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಲಿಕೆದ ತೆನ್ನಾಲಿ ಕಾರ್ಕಾಳ ಅವರಿಂದ ತೆಲಿಕೆದ ಬರ್ಸ ಪ್ರಹಸನ, ಸಂಘದ ಸದಸ್ಯರಿಂದ ವಿವಿಧ ವಿನೋದಾವಳಿ, ಅದೃಷ್ಟ ನಿರೀಕ್ಷೆ ಇತ್ಯಾದಿ ಕಾರ್ಯಕ್ರಮಗಳ ಜೊತೆಗೆ ಪ್ರೀತಿ ಭೋಜನವೂ ಇದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ದಿನೇಶ್ ಶೆಟ್ಟಿ ಉಜಿರೆ, ಹರೀಶ್ ಶೆಟ್ಟಿ ಕುರ್ಕಾಲ್, ಮಹೇಶ್ ಹೆಗ್ಡೆ, ನಿತಿನ್ ಕೆ. ಶೆಟ್ಟಿ ನಿಟ್ಟೆ, ಸಂತೋಷ್ ಕದಂಬ, ವಿಶ್ವನಾಥ್ ಶೆಟ್ಟಿ ಚಾಕನ್, ಪ್ರೇಮ ರಘು ಪೂಜಾರಿ, ಪ್ರಕಾಶ್ ಪೂಜಾರಿ ಬೈಲೂರು, ಸುದೀಪ್ ಪೂಜಾರಿ ಮುನಿಯಾಲು, ಸುಧೀರ್ ಶೆಟ್ಟಿ ಕುಕ್ಕುಂದೂರು, ಸೋನಿ ಶೆಟ್ಟಿ ಸೇರಿದಂತೆ ಕಾರ್ಯಕಾರಿ ಸಮಿತಿ, ಪ್ರಾದೇಶಿಕ ಸಮಿತಿ, ಯುವವೇದಿಕೆಯ ಕಾರ್ಯಕರ್ತರು ಮತ್ತು ಸದಸ್ಯರು ವಿನಂತಿಸಿದ್ದಾರೆ. ಕಾರ್ಯಕ್ರಮದ ಮೊದಲು ಮತ್ತು ಅನಂತರ ಕಾರ್ಯಕ್ರಮದ ಸ್ಥಳಕ್ಕೆ ಉಚಿತ ವಿಶೇಷ ಬಸ್ಸು ಸೇವೆಯನ್ನು ಚಿಂಚ್‍ವಾಡ ಸ್ಟೇಷನಿನಿಂದ ಎರ್ಪಡಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ನಿತಿಕ್ ಕೆ. ಶೆಟ್ಟಿ ನಿಟ್ಟೆ ತಿಳಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here