Wednesday 24th, April 2024
canara news

ಬೀಜಾಡಿ: ಡಾಂಬರೀಕೃತ ರಸ್ತೆ ಉದ್ಘಾಟನೆ

Published On : 10 Jan 2017   |  Reported By : Bernard J Costa


ಕೋಟ: ಮೂಲಭೂತ ಅಗತ್ಯಗಳಾದ ರಸ್ತೆ, ಕುಡಿಯುವ ನೀರು, ದಾರಿದೀಪದ ವ್ಯವಸ್ಥೆ ಜನರಿಗೆ ಅಗತ್ಯವಾಗಿ ಬೇಕಾಗಿದೆ. ಪಂಚಾಯಿತಿ ಅನುದಾನದಲ್ಲಿ ಇವುಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರು, ಶಾಸಕರು, ಸಂಸದರು ಮತ್ತು ಇತರ ಮೂಲಗಳಿಂದ ಪಂಚಾಯಿತಿ ಮುತುವರ್ಜಿ ವಹಿಸಿದ್ದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಬೇಗನೇ ಮಾಡಬಹುದಾಗಿದೆ ಎಂದು ಬೀಜಾಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

 

ಅವರು ಭಾನುವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಸ್ಥಳೀಯ ಪ್ರದೇಶಾಭಿವೃದ್ಥಿ ನಿಧಿಯಿಂದ ಬೀಜಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕವನ್ನು ಕಲ್ಪಿಸುವ ಮಣ್ಣಿನ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದ್ದು,ಈ ಡಾಂಬರೀಕೃತ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕು ವಹಿಸಿದ್ದರು. ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಈ ರಸ್ತೆಗೆ ದಾರಿದೀಪದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಗಾಣಿಗ,ಸದಸ್ಯರಾದ ಶೇಖರ ಛಾತ್ರಬೆಟ್ಟು,ಗುಲಾಬಿಯಮ್ಮ, ಪ್ರಕಾಶ್ ಪೂಜಾರಿ,ಗೋಪಾಡಿ ಪಂಚಾಯಿತಿ ಸದಸ್ಯ ಸುರೇಶ ಶೆಟ್ಟಿ,ಸ್ಥಳೀಯರಾದ ಸುಬ್ಬಯ್ಯ ಪೂಜಾರಿ,ಶಿವ ಪೂಜಾರಿ,ಸತ್ಯನಾರಾಯಣ ಹೆಬ್ಬಾರ್,ಗೋವಿಂದ ಪೂಜಾರಿ,ಶ್ರೀನಿವಾಸ ವೈದ್ಯ,ಚಂದ್ರ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.

ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು.ಧನಂಜಯ ಅರಸ್ ವಂದಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here