Thursday 28th, March 2024
canara news

ಮುಂಬಯಿ: ಹಿರಿಯ ಸಾಧಕ ಜೋನ್ ಡಿ'ಸಿಲ್ವಾ ಅವರಿಗೆ ಹೊಸ ವರ್ಷದ ಪ್ರಶಸ್ತಿ

Published On : 14 Jan 2017   |  Reported By : Rons Bantwal


ಮುಂಬಯಿ, ಜ.14: ಮಣಿಪಾಲ ವಿ.ವಿ, ಆಕಾಡೆಮಿ ಆಫ್ ಜನರಲ್ ಎಜುಕೇಶನ್, ಸಿಂಡಿಕೇಟ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕವಾಗಿ ಪ್ರದಾನಿಸುವ ನೂತನ ವರ್ಷದ ಪ್ರಶಸ್ತಿಗೆ ಹಲವು ಸಹಕಾರಿ ಬ್ಯಾಂಕುಗಳ ಸ್ಥಾಪಿಸಿ ಸಾಧನಾಶೀಲರೆಣಿಸಿದ ಹೆಸರಾಂತ ಸಮಾಜ ಸೇವಕ, ಡಾ| ಟಿಎಂಎ ಪೈ ಫೌಂಡೇಶನ್-2008' ಪುರಸ್ಕೃತ ಮುಂಬಯಿ ಅಲ್ಲಿನ ಹಿರಿಯ ಬ್ಯಾಂಕಿಂಗ್ ಸಾಧಕ ಜೋನ್ ಡಿ'ಸಿಲ್ವಾ ಭಾಜನರಾಗಿದ್ದಾರೆ.

ಜೊನ್ ಡಿ'ಸಿಲ್ವಾ ಮೂಲತಃ ದಕ್ಷಿಣ ಕನ್ನಡದ ಕಾರ್ಕಳ ಜಿಲ್ಲೆಯ ಸಾನೂರು ಗ್ರಾಮದಲ್ಲಿ 1936ರ ಮೇ.16 ರಂದು ಅಂತೋನಿ ಡಿ'ಸಿಲ್ವಾ ಮತ್ತು ಶ್ರೀಮತಿ ರೇಮಿಡಿಯಾ ಡಿ'ಸಿಲ್ವಾ ಇವರ ಸುಪುತ್ರರಾಗಿ ಜನಿಸಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಸೈಂಟ್ ಜೋಸೆಫ್ ಪ್ರೈಮರಿ ಶಾಲೆ ಸಾನೂರು, ಪ್ರೌಢ ವಿದ್ಯಾಭ್ಯಾಸ ಎಸ್.ವಿ.ಟಿ ಹೈಯರ್ ಎಲಿಮೆಂಟರಿ ಶಾಲೆ ಕಾರ್ಕಳ ಇಲ್ಲಿ ನೆರವೇರಿದ್ದು, ನಂತರ ಮುಂಬಯಿ ಆಗಮಿಸಿ ಎಸ್‍ಎಸ್‍ಸಿ ವಿಧ್ಯಾಭ್ಯಾಸವನ್ನು ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಮುಂಬಯಿ ಇಲ್ಲಿ ಮುಗಿಸಿ, ಜೈ ಹಿಂದ್ ಕಾಲೇಜ್‍ನಲ್ಲಿ ತಮ್ಮ ಬಿ.ಎ ಪದವಿಯನ್ನು ಮತ್ತು ಆರ್.ಎ.ಪೆÇದರ್ ಕಾಲೇಜ್‍ನಲ್ಲಿ ಬಿ.ಕಾಂ ಪದವಿಯನ್ನು ಪಡೆದು ಕೊಂಡಿರುವರು. ಶಾಲಾ ದಿನಗಳಲ್ಲೇ ಸ್ಕೌಟ್ಸ್ ಗೈಡ್ಸ್ ಘಟಕದಲ್ಲಿ ಸಕ್ರಿಯರಾಗಿದ್ದ ಅವರು ಎಳವೆಯಲ್ಲೇ ಮುಂದಾಳತ್ವದ ಗುಣಗಳನ್ನು ಬೆಳೆಸಿ ಕೊಂಡವರು. ಮುಂಬಯಿಯಲ್ಲಿ ಹಗಲು ಮತ್ತು ರಾತ್ರಿ ಶಾಲೆಗಳಲ್ಲಿ ಶಿಕ್ಷಣ ಪೂರೈಸಿ ಬಿಎ, ಬಿಕಾಂ, ಎಲ್‍ಎಲ್‍ಬಿ, ಸ್ಕೌಟ್ಸ್ ಟೀಚರ್ ಮುಂತಾದ ಪದವಿಗಳನ್ನು ಪಡೆದು 1959ರಲ್ಲಿ ಮುಂಬಯಿಯ 4,000 ಕುಟುಂಬಗಳು ನೆಲೆಸಿದ್ದ ಅಭ್ಯುದಯ ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ನೆಲೆಸಿದರು. 1960ರಲ್ಲಿ ಅಭ್ಯುದಯ ನಗರದ ಬಾಡಿಗೆದಾರರ ಸಂಘದ ಅಧ್ಯಕ್ಷರಾದರು. ಇಂಗ್ಲೀಷ್ ಮೀಡಿಯಂ ಹೈಸ್ಕೂಲನ್ನು ಸ್ಥಾಪಿಸಿದರು. ಈ ಭಾಗಕ್ಕೆ ಬ್ಯಾಂಕ್ ಶಾಖೆ ಅಗತ್ಯವೆಂದು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದು ವ್ಯರ್ಥವಾದಾಗ ಜನತೆಯಲ್ಲಿ ಉಳಿತಾಯದ ಅಭ್ಯಾಸ ಮಾಡಲು ಹಾಗೂ ಅಗತ್ಯ ಬಿದ್ದಾಗ ಸಾಲದ ಅನುಕೂಲ ಪಡೆಯುವಂತೆ ಸಹಕಾರಿ ಸಂಘವೊಂದನ್ನು ಸ್ಥಾಪಿಸಿದರು.

`ಬ್ಯಾಂಕರ್ಸ್ ಹ್ಯಾಂಡ್‍ಬುಕ್ ಹರ್ಬನ್ ಬ್ಯಾಂಕ್ಸ್ ಆಲ್ ಇಂಡಿಯಾ ಡೈರಕ್ಟರಿ' ಇದರ ಮುಖ್ಯ ಸಂಪಾದಕ, ಮೆಂಗ್ಳೂರಿಯನ್ ಕಾಥೊಲಿಕ್ ಎಜ್ಯುಕೇಶನಲ್ ಕೋ. ಅಪರೇಟಿವ್. ಸೊಸೈಟಿ ಲಿಮಿಟೆಡ್ ಹಾಗೂ `ಪುಡಾರ್ ಪ್ರತಿಷ್ಠಾನ್' ಮಂಗಳೂರು ಇವುಗಳ ಅಧ್ಯಕ್ಷರಾಗಿ, ಕ್ರಿಶ್ಚಯನ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್, ಆಲ್ ಇಂಡಿಯಾ ಕೊಂಕಣಿ ಪರಿಷತ್ ಮತ್ತು ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಇವುಗಳ ಉಪಾಧ್ಯಕ್ಷರಾಗಿ ಅಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಇವರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಜೋನ್ ಡಿ'ಸಿಲ್ವಾ ಇವರಿಗೆ ಇಂದಿಲ್ಲಿ (ಜ.14) ಮಣಿಪಾಲದಲ್ಲಿ ನಡೆಯಲಿರುವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಈ ಪುರಸ್ಕಾರ ನೀಡಿ ಗೌರವಿಸÀಲಿದೆ ಎಂದು ಪ್ರಕಟನೆ ತಿಳಿಸಿದೆ.

ಮುಂಬಯಿ ಸಹಕಾರಿ ಬ್ಯಾಂಕ್ ಚಳುವಳಿಯ ಪ್ರವರ್ತಕ ಎಂದೇ ಪ್ರಸಿದ್ಧಿ ಪಡೆದ ಜೊನ್ ಡಿ'ಸಿಲ್ವಾ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಧೀಮಂತ ನೇತಾರರಾಗಿ ಅಭುಧ್ಯಯ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಬಯಿ, ಸಿಟಿಜನ್‍ಕ್ರೇಡಿಟ್ ಕೋ. ಅಪರೇಟಿವ್ ಬ್ಯಾಂಕ್‍ಡ್ಮಿಟೆಡ್ ಮುಂಬಯಿ, ನ್ಯೂ ಇಂಡಿಯಾ ಕೋ. ಅಪರೇಟಿವ್ ಬ್ಯಾಂಕ್‍ಡ್ಮಿಟೆಡ್ ಮುಂಬಯಿ ಹಾಗೂ ಮೋಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಬಯಿ ಈ ನಾಲ್ಕೂ ಸಹಕಾರಿ ಬ್ಯಾಂಕುಗಳ ಸ್ಥಾಪಕರಲ್ಲಿ ಓರ್ವರಾಗಿ ಮುಖ್ಯ ಕಾರ್ಯನಿರ್ವಾಹಕ ಮತ್ತು ಪ್ರಥಮ ಕಾರ್ಯಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ. ಮಂಗಳೂರಿನ ಪ್ರತಿಷ್ಠಿತ ರಚನಾ ಸಂಸ್ಥೆಯ `ರಚನಾ ಉದ್ಯಮಶೀಲ ಪುರಸ್ಕಾರ-2005' ಪುರಸ್ಕಾರ ಡಿ'ಸಿಲ್ವಾರಿಗೆ ಪ್ರಾಪ್ತಿಯಾಗಿದೆ. : ರೋನ್ಸ್ ಬಂಟ್ವಾಳ್

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here