Friday 19th, April 2024
canara news

ಬಿಲ್ಲವರ ಎಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ

Published On : 21 Jan 2017   |  Reported By : Rons Bantwal


ಮಕರ ಸಂಕ್ರಾಂತಿಯ ಅರಸಿನ-ಕುಂಕುಮ ಹಾಗೂ ಮಹಿಳಾ ಕವಿಗೋಷ್ಠಿ

ಮುಂಬಯಿ, ಜ.21: ಬಿಲ್ಲವರ ಎಸೋಸಿಯೇಶನ್ ಮಹಿಳಾ ವಿಭಾಗವು ಕಳೆದ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಮಹಿಳಾ ಕವಿಗೋಷ್ಠಿ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಆಚರಿಸಿತು. ಬಿಲ್ಲವರ ಎಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು.

ಮಹಿಳಾ ವಿಭಾಗಧ್ಯಕ್ಷೆ ಶಕುಂತಲ ಕೆ.ಕೋಟ್ಯಾನ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮಕ್ಕೆ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಪುರಸ್ಕøತ ಡಾ| ವಾಣಿ ಉಚ್ಚಿಲ್ಕರ್ ಚಾಲನೆಯನ್ನಿತ್ತರು. ಅತಿಥಿü ಗಣ್ಯರಾಗಿ ಸರಳಾ ಆರ್.ಶೆಟ್ಟಿ, ಶೈಲಾ ಪ್ರವೀಣ ಪೂಜಾರಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಕೆ. ಸಾಲ್ಯಾನ್, ಮಹಿಳಾ ವಿಭಾಗದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷೀಯ ನುಡಿಗಳನ್ನಾಡಿ ಮಹಿಳೆಯರ ಸಮಾವೇಶ ಮಾಡಬೇಕು. ಮಾರ್ಗದರ್ಶಕರಾದ ಜಯ ಸಿ.ಸುವರ್ಣರು ಕೊಟ್ಟ ಅವಕಾಶವನ್ನು ಉಪಯೋಗಿಸಿ,ಸಮಾಜ ಮುನ್ನಡೆಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.

ಡಾ| ಸುನೀತ ಶೆಟ್ಟಿ ಮಾತನಾಡಿ ಮಹಿಳೆಯರು ಹೆಚ್ಚು ಹೆಚ್ಚು ಬರೆಯುವ ಕ್ಷೇತ್ರದಲ್ಲಿ ಲೇಖಕಿಯರಾಗಿ ಮಿಂಚಬೇಕು. ಗಾಳಿಪಟ ಮಕರ ಸಂಕ್ರಮಣದ ಕೇವಲ ಸಂಕೇತವಲ್ಲ ನಮ್ಮ ಜೀವನದ ಏರುಪೇರು. ದಾರ ಸರಿಯಾಗಿ ಹಿಡಿದಲ್ಲಿ ಹೇಗೆ ಗಾಳಿಪಟ ಮೇಲೇರುವಂತೆ. ನಮ್ಮ ಗುರಿ ಸಾಧಿಸುವಲ್ಲಿ ನಮ್ಮ ಜೀವನದ ದಾರ ಸರಿಯಾಗಿ ಹಿಡಿದುಕೊಳ್ಳಬೇಕು ಎನ್ನುತ್ತಾ ಇಂಪಾದ ಧ್ವನಿಯಲ್ಲಿ ಕವನವನ್ನು ಹಾಡಿದರು.

ನಾವು ಮಹಿಳೆಯರು ಒಳ್ಳೆ ಪಾಕ ಪ್ರವೀಣೆಯರಾಗಿ ಉತ್ತಮ ಅಡಿಗೆ ಮಾಡಿ ಮಕ್ಕಳು ಹೊರಗಿನ ತಿಂಡಿಯನ್ನು ತಿನ್ನದೆ, ನಮ್ಮ ಮನೆ ಅಡಿಗೆ ಮೇಲೆ ಅವರು ಆಕರ್ಷಿತರಾಗುವಂತೆ ಮಾಡಬೇಕು ಎಂದÀು ಸರಳಾ ಶೆಟ್ಟಿ ನುಡಿದರು.

ಲೇಖಕಿಯರಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಿ, ತಮ್ಮ ಮಕ್ಕಳಿಗೆ ನಮ್ಮ ಸಂಸ್ಕøತಿಯ ಬಗ್ಗೆ ತಿಳಿವು ನೀಡಬೇಕಾಗಿದೆ ಎಂದು ಡಾ| ಉಚ್ಚಿಲ್ಕರ್ ಕರೆಯಿತ್ತರು.

ರೋಹಿಣಿ ಸಾಲ್ಯಾನ್ ಮಾತನಾಡಿ ನಾವು ಇಂದು ಕೇಳಿದ ಕವನಗಳನ್ನು ಮರೆಯದೆ, ಎಲ್ಲರೂ ಕವನವನ್ನು ಬರೆಯುವ ಛಲವನ್ನು ರೂಢಿಸಿಕೊಳ್ಳಬೇಕು ಎಂದರು.

ಮಹಿಳಾ ಸದಸ್ಯರಾದ ಸಬೀತಾ ಪೂಜಾರಿ, ಲೀಲಾ ಪೂಜಾರಿ ಮತ್ತು ಶೋಭಾ ಪೂಜಾರಿ ಪ್ರಾರ್ಥನೆ ಹೇಳಿದರು. ಮಹಿಳಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಡಾ| ವಾಣಿ ಉಚ್ಚಿಲ್ಕರ್ ವಹಿಸಿದರು. ವೇದಿಕೆಯಲ್ಲಿ ಅನಿತಾ ಪಿ. ತಾಕೋಡೆ, ಶಾರದಾ ಅಂಚನ್, ಹೇಮಾ ಸದಾನಂದ ಅಮೀನ್, ಶಿಲ್ಪ ಲಕ್ಷ್ಮಿಕಾಂತ್ ಪೂಜಾರಿ, ಸುಗುಣ ಬಂಗೇರ, ಪ್ರೇಮ ಪೂಜಾರಿ, ಉಪಸ್ಥಿತರಿದ್ದರು. ಶಕುಂತಳಾ ಕೋಟ್ಯಾನ್ ಸ್ವಾಗತಿಸಿದರು.

ಕವಯಿತ್ರಿಯವರು ತಮ್ಮ ತಮ್ಮ ಸ್ಪಾರಸ್ಯಕರ, ಹಾಸ್ಯಮಯ ಕವನವನ್ನು ಸಭೆಯ ಮುಂದೆ ಓದಿ, ಸಭೆಯನ್ನು ರಂಜಿಸಿದರು. ಲೇಖಕಿ ಅನಿತಾ ಪಿ. ತಾಕೊಡೆ ಕಾರ್ಯಕ್ರಮ ನಿರೂಪಣೆಗೈದರು. ಗೌ| ಕಾರ್ಯದರ್ಶಿ ಸುಮಿತ್ರ ಎಸ್.ಬಂಗೇರ ವಂದನೆಗೈದರು.

ನಂತರ ಅರಸಿನ ಕುಂಕುಮ ಕಾರ್ಯಕ್ರಮದ ನಡೆಸಲಾಗಿದ್ದು ಮಕರ ಸಂಕ್ರಮಣದ ಸಂಕೇತವಾಗಿ ವೇದಿಕೆಯಲ್ಲಿದ್ದ ಗಣ್ಯರೆಲ್ಲ ಗಾಳಿಪಟ ಹಾರಿಸಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಂತಿ ಕೋಟ್ಯಾನ್, ಸಬೀತಾ ಪೂಜಾರಿ, ಸುಮಿತ್ರ ಎಸ್. ಬಂಗೇರ ಗಣ್ಯರ ಪರಿಚಯ ಮಾಡಿದ್ದು, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಎಲ್ಲರಿಗೂ ಶಾಲು ಹೊದಿಸಿ ಫಲಫುಷ್ಪ, ತಾಂಬೂಲ, ಭಗವದ್ಗೀತೆ ನೀಡಿ, ಗೌರವಿಸಿದರು. ಶಕುಂತಲಾ ಕೆ.ಕೋಟ್ಯಾನ್ ಅರಸಿನ ಕುಂಕುಮದ ಬಗ್ಗೆ ಮಾಹಿತಿ ನೀಡಿದರು. ಗೌ| ಕಾರ್ಯದರ್ಶಿ ಸುಮಿತ್ರ ಎಸ್.ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಎಸೋಸಿಯೇಶನ್‍ನ ಉಪಾಧ್ಯಕ್ಷ ಭಾಸ್ಕರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಕಾರ್ಕಳ, ಜೊತೆ ಕಾರ್ಯದರ್ಶಿಗಳಾದ ಪ್ರೇಮನಾಥ್ ಕೋಟ್ಯಾನ್, ಹರೀಶ್ ಜಿ.ಸಾಲ್ಯಾನ್, ಆಶಾಲತಾ ಕೋಟ್ಯಾನ್, ಶುಭಮಂಗಲ ಉಪಸಮಿತಿ ಕಾರ್ಯಾಧ್ಯಕ್ಷೆ ಬೇಬಿ ಕುಕ್ಯಾನ್, ಆನಂದ ಪೂಜಾರಿ, ಲೀಲಾ ಸಿ.ಟಿ ಸಾಲ್ಯಾನ್, ಸವಿತಾ ಗಂಗಾಧರ ಪೂಜಾರಿ, ಯುವ ಸಮಿತಿ ಮುಖ್ಯಸ್ಥ ನೀಲೇಶ್ ಪೂಜಾರಿ ಪಲಿಮಾರ್ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣ, ಸರಸ್ವತಿ ಚಂದ್ರಹಾಸ ಸುವರ್ಣ, ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಲಕ್ಷಿ ್ಮೀ ಎಸ್.ಪೂಜಾರಿ, ಸುಮಲತಾ ಅಮೀನ್, ಚಂದ್ರಕಲಾ ಸುವರ್ಣ, ವತ್ಸಲಾ ಪೂಜಾರಿ, ಪ್ರೇಮ ಕೋಟ್ಯಾನ್, ಭವಾನಿ ಕೋಟ್ಯಾನ್, ವನಿತಾ ಪೂಜಾರಿ, ಲೀಲಾ ಗಣೇಶ ಕಾರ್ಕಳ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು. ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್.ಸಾಲ್ಯಾನ್ ವಂದನಾರ್ಪಣೆಗೈದರು. ಕಾರ್ಯಕ್ರಮದ ಕೊನೆಗೆ ಸೇರಿದ ಮಹಿಳೆಯರಿಗೆ ಅತಿಥಿüಗಣ್ಯರಿಗೆ ಅರಸಿನ-ಕುಂಕುಮ ಬಾಗಿಣ ನೀಡಲಾಯಿತು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here