Thursday 18th, April 2024
canara news

ಕನ್ನಡ ವಿಭಾಗದಿಂದ ಸಾಹಿತ್ಯ ಸಂಜೆ ಮತ್ತು ಕನ್ನಡ ಕಲಿಕಾ ವಿದ್ಯಾಥಿರ್sಗಳಿಗೆ ಪ್ರಮಾಣ ಪತ್ರ ವಿತರಣೆ

Published On : 22 Jan 2017   |  Reported By : Rons Bantwal


ಮುಂಬಯಿ ವಿವಿ ಕನ್ನಡ ವಿಭಾಗ ವಿದ್ಯಾ ದೇಗುಲದಂತಿದೆ : ಸುರೇಂದ್ರಕುಮಾರ್ ಹೆಗ್ಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.21: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಸಾಹಿತ್ಯ ಸಂಜೆ ಮತ್ತು ಕನ್ನಡ ಕಲಿಕಾ ವಿದ್ಯಾಥಿರ್sಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‍ನಲ್ಲಿರುವ ರಾನಡೆ ಭವನದಲ್ಲಿ ನೇರವೇರಿಸಲ್ಪಟ್ಟಿತು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಉಪಸ್ಥಿತರಿದ್ದು ಕನ್ನಡ ಕಲಿಕಾ ಸುಮಾರು ನಲ್ವತ್ತೈದು ವಿದ್ಯಾಥಿರ್sಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿದರು. ಹಾಗೂ ವಿವಿಧ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕರಾದ ಶ್ರೀಪಾದ ಪತಕಿ, ಡಾ| ಉಮಾ ರಾವ್, ವಿದುಷಿ ಶ್ಯಾಮಲಾ ಪ್ರಕಾಶ್, ಶೈಲಜಾ ಹೆಗಡೆ, ಗೀತಾ ಆರ್.ಎಸ್, ಕೆ.ಅನಿತಾ, ರಮಾ ಉಡುಪ, ಡಾ| ಪೂರ್ಣಿಮಾ ಎಸ್.ಶೆಟ್ಟಿ ಅವರನ್ನು ಸತ್ಕರಿಸಲಾಯಿತು.

ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗ ಒಂದು ವಿದ್ಯಾ ದೇಗುಲವಿದ್ದಂತೆ. ಇಲ್ಲಿ ನಿರಂತರವಾಗಿ ಕನ್ನಡ ಕ್ರಾಂತಿ ನಡೆಯುತ್ತಿದೆ.ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ ಅವರು ಕೇವಲ ಕನ್ನಡ ಭಾಷೆಯನ್ನು ಬೋಧಿಸುತ್ತಿಲ್ಲ. ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕನ್ನಡ ಭಾಷೆ ಒಂದು ಜೀವನದ ಅವಿಭಾಜ್ಯ ಅಂಗ. ಇಲ್ಲಿ ಉತ್ತಮ ಸಂಸ್ಕೃತಿ ಇದೆ. ಇಂದು ಸರ್ಟಿಫಿಕೇಟ್ ಪಡೆದ ಎಲ್ಲಾ ಮಕ್ಕಳು ಕನ್ನಡ ಭಾಷೆಯನ್ನು ಉಳಿಸುವತ್ತ ಪರಿಶ್ರಮ ಮಾಡಬೇಕು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಪುಸ್ತಕ ಓದಿದಾಗ ಮಾತ್ರ ಅದು ಪುಸ್ತಕದಲ್ಲಿ ಉಳಿಯುತ್ತದೆ ಎಂದು ಸುರೇಂದ್ರಕುಮಾರ್ ಹೆಗ್ಡೆ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ಭಾಷೆ ಎನ್ನುವುದು ಜೀವನ ಸಂಸ್ಕೃತಿ. 20 ಲಕ್ಷ ಮುಂಬಯಿ ಕನ್ನಡ, ತುಳುವರು ಕನ್ನಡವನ್ನು ಉಳಿಸುವಲ್ಲಿ ಶತ ಪ್ರಯತ್ನ ಮಾಡುತ್ತಿದೆ. ಕನ್ನಡ ಸರ್ಟಿಫಿಕೇಟ್ ಕೋರ್ಸಿನ ಮುಖಾಂತರ ಅಳಿಲು ಸೇವೆಯನ್ನು ಮಾಡುತ್ತಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಉಪಾಧ್ಯ ನುಡಿದರು.

ಕನ್ನಡ ಸರ್ಟಿಪಿಕೇಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹಸ್ತಾ ಶೆಟ್ಟಿ ಹಾಗೂ ಸ್ವರೂಪ್ ಕಮ್ಮಟ್, ದ್ವಿತೀಯ ಸ್ಥಾನ ಪಡೆದ ದೀಕ್ಷಾ ಬೈಚಾಪುರ್ ಹಾಗೂ ಪೂಜಾ ನಾಡಿಗ್ ಹಾಗೂ ತೃತೀಯ ಸ್ಥಾನ ಪಡೆದ ಪ್ರಜ್ಞ ಶೆಟ್ಟಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಎನ್ ಉಡುಪ ಜೆರಿಮೆರಿ, ಡಾ| ಜಿ.ವಿ ಕುಲ್ಕರ್ಣಿ, ಸುಗಂಥಾ ಸತ್ಯಮೂರ್ತಿ, ಆರ್.ಎಂ ಗಣಚಾರಿ, ಪ್ರವೀಣಿ ಸಾಲ್ಯಾನ್, ಸುಶೀಲಾ ಎಸ್.ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು, ಹೆಸರಾಂತ ಚಿತ್ರಕಲಾ ಕಲಾವಿದ ಜಯ್ ಸಿ.ಸಾಲ್ಯಾನ್ ರಚಿತ ಡಾ| ಜಿ.ಎನ್ ಉಪಾಧ್ಯ ಅವರ ಕಲಾಕೃತಿಯನ್ನು ಉಪಾಧ್ಯಯರಿಗೆ ಹಸ್ತಾಂತರಿಸಿ ಅಭಿವಂದಿಸಿದರು.

ಅಣುಶಕ್ತಿ ನಗರ ಕಲಿಕಾ ಕೇಂದ್ರದ ಮಕ್ಕಳಿಂದ ಸ್ವಾಗತ ಗೀತೆ. ಇಂದ್ರಜಾಲ ಕಲಾವಿದ ಸೂರಪ್ಪ ಕುಂದರ್ ಅವರು ಮ್ಯಾಜಿಕ್‍ಶೋ ಪ್ರದರ್ಶಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿsವರ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲೂರು ಮಧುಸೂದನ್ ರಾವ್ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here