Thursday 18th, April 2024
canara news

ನವೋದಯ ಕನ್ನಡ ಸೇವಾ ಸಂಘ ಥಾಣೆ 47ನೇ ವಾರ್ಷಿಕ ಮಹಾಸಭೆ

Published On : 23 Jan 2017   |  Reported By : Rons Bantwal


ನೂತನ ಕಾರ್ಯಕಾರಿ ಸಮಿತಿಗೂ ಅಧ್ಯಕ್ಷರಾಗಿ ಜಯ ಕೆ.ಶೆಟ್ಟಿ ಆಯ್ಕೆ

ಮುಂಬಯಿ, ಜ.23: ವಿದ್ಯಾ ಪ್ರಸಾರವನ್ನೇ ತನ್ನ ಮುಖ್ಯ ಧ್ಯೇಯವನ್ನಾಗಿಟ್ಟು, ಅದಕ್ಕೆಂದೇ ಬಹುವಿಧದಿಂದ ಪ್ರಯತ್ನಶೀಲರಾಗಿ ಕಾರ್ಯಗಳನ್ನು ಮಾಡುತ್ತಾ, ತುಳು ಕನ್ನಡಿಗರ ಹೆಮ್ಮೆಯ ಧ್ಯೋತಕವಾಗಿ ಮುಲುಂಡ್ ಥಾಣೆ ಮಧ್ಯಭಾಗದಲ್ಲಿರುವ ಚೆಕ್‍ನಾಕಾ ಸಮೀಪದ ಶಿವಾಜಿ ನಗರದಲ್ಲಿ ಇತ್ತೀಚೆಗೆÉ ಉದ್ಘಾಟನೆಗೊಂಡ ನವೋದಯ ಜ್ಯೂನಿಯರ್ ಕಾಲೇಜು ಹಾಗೂ ಕಿಸನ್ ನಗರದಲ್ಲಿ ರಾರಾಜಿಸುತ್ತಿರುವ ನವೋದಯ ಇಂಗ್ಲೀಷ್ ಹೈಸ್ಕೂಲಿನ ಸಂಚಾಲಕರಾದ ನವೋದಯ ಕನ್ನಡ ಸೇವಾ ಸಂಘದ 47ನೇ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ನವೋದಯ ಜ್ಯೂನಿಯರ್ ಕಾಲೇಜಿನ ನೂತನ ಸಭಾಗೃಹದಲ್ಲಿ ನೆರವೇರಿತು.

ಸಂಘದ ಗೌರವ ಕಾರ್ಯದರ್ಶಿ ಅವರ ಸೂಚನೆ ಹಾಗೂ ನೆರೆದ ಸದಸ್ಯರ ಅನುಮೋದನೆಯೊಂದಿಗೆ ಸಂಘದ ಅಧ್ಯಕ್ಷ ಜಯ.ಕೆ ಶೆಟ್ಟಿ ಅವರು ಕಾರ್ಯಕ್ರಮಗಳಿಗೆ ಚಾಲನೆಯಿತ್ತರು. ಸ್ಥಾಪಕ ಅಧ್ಯಕ್ಷರ ಸ್ಮರಣೆಯೊಂದಿಗೆ ಸಭೆಯು ಮಧ್ಯಾಹ್ನ 3.30 ಕ್ಕೆ ಆರಂಭಗೊಂಡಿತು. ಗೌ| ಪ್ರ| ಕಾರ್ಯದರ್ಶಿಯವರು 46ನೇ ವಾರ್ಷಿಕ ಮಹಾ ಸಭೆಯ ವರದಿಯನ್ನು ಸಭೆಗೆ ಓದಿ ತಿಳಿಸಿದರು. ತದ ನಂತರ 2015-16ನೇ ವರ್ಷದ ಕಾರ್ಯಕಾರಿ ಸಮಿತಿಯ ವರದಿಯನ್ನು ಸಭೆಯ ಮುಂದಿಡಲಾಗಿ, ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆದು ಸರ್ವಾನುಮತದಿಂದ ಸಭೆಯು ಮಂಜೂರಿಯನ್ನಿತ್ತಿತು.

2015-16ರ ಪರಿಶೋದಿಸಲ್ಪಟ್ಟ ಲೆಕ್ಕ ಪತ್ರದ ಬಗ್ಗೆ ಸಭಿಕರಿಂದ ಬಂದ ಪ್ರಶ್ನೆಗೆ ಗೌ. ಕೋಶಾಧಿಕಾರಿಯವರು ಉತ್ತರವನ್ನೀಯಲು, ಸಭೆಯು ಅದನ್ನು ಸರ್ವಾನುಮತದಿಂದ ಮಂಜೂರು ಮಾಡಿತು. 2016-17ನೇ ವರ್ಷಕ್ಕೂ, ಮೆಸರ್ಸ್ ಸದಾಶಿವ ಮತ್ತು ಕಂಪೆನಿಯವರನ್ನು ಲೆಕ್ಕ ಪರಿಶೋಧಕರಾಗಿ ಸಭೆಯಲ್ಲಿ ನೇಮಕ ಮಾಡಲಾಯಿತು.ಅಧ್ಯಕ್ಷರ ಅನುಮತಿಯ ಮೇರೆಗೆ ಬಂದ ಕೆಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭಿಕರ ಭಾಷಣದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು ಹಾಗೂ ಕೆಲವು ಹಿರಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ, ಸಂಘದ ಏಳ್ಗೆಗಾಗಿ, ಸದಸ್ಯ ಬಾಂಧವರೆಲ್ಲರೂ ತಮ್ಮ ಭಿನ್ನಾಭಿಪ್ರಾಯವನ್ನು ಮರೆತು, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನಿಟ್ಟು ಮುಂದಕ್ಕೂ ತಮ್ಮ ಸಹಕಾರವನ್ನು ಕಾರ್ಯಕಾರಿ ಸಮಿತಿಗೆ ಕೊಟ್ಟು ಸಹಕರಿಸಿ, ಸಂಘ ಹಾಗೂ ಸಂಘದ ಸಂಚಾಲಕತ್ವದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಉದ್ಧಾರಕಾಗಿ ಶ್ರಮಿಸಬೇಕೆಂದು ವಿನಂತಿಸಿದರು.

ಗೌ| ಪ್ರ| ಕಾರ್ಯದರ್ಶಿ ದಯಾನಂದ ಶೆಟ್ಟಿ ಮಾತನಾಡುತ್ತಾ, ಸದ್ಯದ ಕಾರ್ಯಕಾರಿ ಸಮಿತಿಯು ಒಂದು ವರ್ಷದಲ್ಲಿ ಎಲ್ಲರ ಸಹಕಾರದಿಂದ ಮಾಡಿ ಮುಗಿಸಿದ ಕೆಲಸಗಳ ವಿವರದೊಂದಿಗೆ, ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆಯೂ ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.

2016-17ನೇ ವರ್ಷದ ಕಾರ್ಯಕಾರಿ ಸಮಿತಿಯಲ್ಲಿ, ಗೌ| ಪ್ರ| ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆದು ದಯಾನಂದ್ ಎಸ್.ಶೆಟ್ಟಿ ಅವರು ಬಹುಮತದಿಂದ ಚುನಾಯಿಸಲ್ಪಟ್ಟರು. ಚುನಾವಣಾಧಿಕಾರಿಗಳಾದ ಎಸ್. ಎಂ. ಬಿರಾದರ್ ಹಾಗೂ ಶ್ರೀ ಸುಂದರ ವಿ.ಶೆಟ್ಟಿ ಅವರು 2016-17ನೇ ವರ್ಷದ ಕಾರ್ಯಕಾರಿ ಸಮಿತಿಗೆ ಚುನಾಯಿಸಲ್ಪಟ್ಟ ಸದಸ್ಯರ ಹೆಸರುಗಳನ್ನು ಸಭೆಯಲ್ಲಿ ಈ ಕೆಳಗಿನಂತೆ ಜಾಹೀರು ಮಾಡಿದರು.

ನೂತನ ಕಾರ್ಯಕಾರಿ ಸಮಿತಿ: ಜಯ ಕೆ.ಶೆಟ್ಟಿ (ಅಧ್ಯಕ್ಷರು), ಕೇಶವ ಟಿ.ನಾಯಕ (ಉಪಾಧ್ಯಕ್ಷರು), ದಯಾನಂದ್ ಎಸ್.ಶೆಟ್ಟಿ, (ಗೌ.ಪ್ರ. ಕಾರ್ಯದರ್ಶಿ), ಶಶಿಧರ್ ಕೆ.ಶೆಟ್ಟಿ (ಸಹಾಯಕ ಕಾರ್ಯದರ್ಶಿ), ಸುನಿಲ್ ಎಸ್.ಶೆಟ್ಟಿ (ಗೌ.ಕೋಶಾಧಿಕಾರಿ), ದಯಾನಂದ್ ಬಿ.ಹೆಗ್ಡೆ (ಸಹಾಯಕ ಕೋಶಾಧಿಕಾರಿ), ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಕೆ.ಸಂಜೀವ ಶೆಟ್ಟಿ, ರಾಜೇಂದ್ರ ಎನ್.ಶೆಟ್ಟಿ, ಗೋಪಾಲ್ ಎ.ಸೇರಿಗಾರ, ದಿನಕರ್ ಕೆ.ಉಚ್ಚಿಲ್, ಸಂಜೀವ ಎಸ್. ಪೂಜಾರಿ, ಜಗದೀಶ್ ಬಿ.ಶೆಟ್ಟಿ, ಸುಧಾಕರ್ ಜಿ. ಕಾಂಚನ್, ನಿರಂಜನ್ ಆರ್.ಶೆಟ್ಟಿ, ಗಂಗಾಧರ್ ಆರ್.ಶೆಟ್ಟಿ, ಪ್ರಶಸ್ಥ ಎಸ್.ಶೆಟ್ಟಿ, ರಮೇಶ್ ಕೆ.ಶೆಟ್ಟಿ, ಹರೀಶ್ ಡಿ.ಸಾಲಿಯಾನ್, ಪ್ರಭಾಕರ್ ಎ. ಶೆಟ್ಟಿ, ರಾಜೇಶ್ ಆರ್. ಹೆಗ್ಡೆ ಆಯ್ಕೆಯಾಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here