Thursday 18th, April 2024
canara news

ಕುಂದಾಪುರದಲ್ಲಿ ಕಾರವಾರ ಮೂಲದ ಮಿಲಾಗ್ರಿಸ್ ಸೌಹಾರ್ದ ಸೊಸೈಟಿ ಶಾಖಾ ಉದ್ಘಾಟನೆ

Published On : 24 Jan 2017   |  Reported By : Bernard J Costa


ಕುಂದಾಪುರ,ಜ.23: ಕಾರವಾರ ಮೂಲದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ಹ್ ಲಿ. ಇದರ 49 ನೇ ಶಾಖೆಯಾಗಿ ಕುಂದಾಪುರ ಚರ್ಚ್ ರಸ್ತೆಯಲ್ಲಿನ ಕಾವೇರಿ ಕಾಂಪ್ಲೆಕ್ಸ್‍ನಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಪ್ರತಾಪ್ ಚಂದ್ರ ಶೆಟ್ಟಿಯವರು ಉದ್ಘಾಟಿಸಿದರು. ‘ದ.ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳು ಹುಟ್ಟಿ ಬೆಳೆದು ಅಭಿವ್ರದ್ದಿ ಹೊಂದಿದ ಹಿನ್ನೆಲೆ ಉಂಟು, ಇಂತಹ ಸಂಸ್ಥೆಗಳು ಇನ್ನೂ ಹೆಚ್ಚು ಹೆಚ್ಚು ಆರಂಭ ಗೊಳ್ಳುತ್ತವೆಂದರೆ ಅದರ ಅವಶ್ಯಕತೆ ಇದೆಯೆಂದು ತಿಳಿಯುತ್ತದೆ’ ಎನ್ನುತ್ತಾ ಅವರು ಸಂಸ್ಥೆಗೆ ಶುಭವನ್ನು ಕೋರಿದರು.

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾರವರು ಆಶಿರ್ವಚಿಸಿ ‘ಸಂಸ್ಥೆ ಪ್ರಮಾಣಿಕವಾಗಿ ಸೇವೆಗೆಯ್ದು, ಜನರ ಮನಸ್ಸನ್ನು ಗೆದ್ದು ಯಶ್ವವಿಯಾಗಲಿ’ ಎಂದು ಹಾರೈಸಿದರು. ಮುಖ್ಯ ಅಥಿತಿಗಳಾದ ಸಂತ ಮೇರಿಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ‘ಈ ಪರಿಸರದಲ್ಲಿ ಈ ಸಂಸ್ಥೆ ಬೆಳೆದು ಉತ್ತಮ ಹೆಸರುನ್ನು ಗಳಿಸುವಂತಾಗಲೆಂದು’ ಶುಭ ಕೋರಿದರು.

ಸಂಸ್ಥೆಯ ಸ್ಥಾಪಕ ಜಾರ್ಜ್ ಫೆರ್ನಾಂಡಿಸ್ ‘ಸಂಸ್ಥೆ 14 ವರ್ಷಗಳಲ್ಲಿ 49 ನೇಯ ಶಾಖೆಯನ್ನು ವಿಸ್ತರಿಸಿದೆಯೆಂದರೆ, ನಾವು ಈ ಕ್ಷೇತ್ರದಲ್ಲಿ ಅಗಾಧವಾದ ಸೇವೆ ಮಾಡಿದ್ದೆವೆ, ನಾವು ಎಲ್ಲಾ ವರ್ಗದ ಜನರಿಗೆ ಆಕರ್ಷಕವಾದ ಯೋಜನೆಗಳನ್ನು ಹಮ್ಮಿಕೊಂಡಿದ್ದೆವೆ ಮಾತ್ರವಲ್ಲಾ ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದೆವೆ’ ಎಂದು ಅವರು ಪ್ರಸ್ತಾವಿಕ ಭಾಷಣದಲ್ಲಿ ನುಡಿದರು.

ನಗರಾಭಿವ್ರದ್ದಿ ಯೋಜನ ಪ್ರಾಧಿಕಾರ ಅಧ್ಯಕ್ಷ ಜೇಕಬ್ ಡಿಸೋಜಾ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಹಾಜಿ.ಕೆ ಅಬ್ದುಲ್ ಖಾದಿರ್, ಕಿಶೋರ್ ಕುಮಾರ್ ಎ.ಕಿರಣ್ ಕ್ರಾಸ್ಟೊ, ಇವರೆಲ್ಲರು ಸಂಸ್ಥೆಗೆ ಶುಭ ಕೋರಿದರು. ಸಿಸ್ಟರ್ ಜೊಯ್ಸಿಲಿನ್ ಎ.ಸಿ. ಕೆಪ್ಟನ್ ಜೆ.ಫೆರ್ನಾಂಡಿಸ್, ಕಟ್ಟಡ ಮಾಲೀಕರಾದ ರಮಾನಂದ್ ಕೆ. ಕುಂದಾಪುರ ಶಾಖಾ ವ್ಯವಸ್ಥಾಪಕ ಜೊನ್ಸನ್ ಮಿನೇಜೆಸ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸೀಮಾ ಹಳ್ದಿಪುರ ಸ್ವಾಗತಿಸಿದರು. ರೇಖಾ ಮಸ್ಕರೇನಾಸ್ ಮತ್ತು ಭಾಗ್ಯ ಲಕ್ಷ್ಮಿ ಕೆ.ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಮತಾ ರೆಬೆಲ್ಲೊ ಧನ್ಯವಾದಗಳನ್ನು ನೀಡಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here