Friday 29th, March 2024
canara news

ಕುಂದಾಪುರಲ್ಲಿ ರಂಗು ರಂಗಿನ ದಾಖಲೆಮಯ ರಂಗೋಲಿ ರಚನೆಗಳು

Published On : 24 Jan 2017   |  Reported By : Bernard J Costa


ಕುಂದಾಪುರ, ಜ. 22: ಭಾನುವಾರದಂದು ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮನೆ, ಶಾಲೆ, ದೇವಸ್ಥಾನಗಳು, ಸಭಾ ಮಂದಿರಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಒಂದೇ ದಿನ ಐದುಸಾವಿರಕ್ಕೂ ಹೆಚ್ಚು ರಂಗು ರಂಗಿನ ರಂಗೋಲಿ ರಚನೆ ಮಾಡುವ ಮೂಲಕ ಕುಂದಾಪುರದ ರಂಗೋಲಿ ಪ್ರಿಯರು ದಾಖಲೆಯನ್ನೇ ನಿರ್ಮಿಸಿದ್ದಾರೆ.

ಈ ನಡುವೆ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ನಡೆದು ಬಹಳ ಆಕರ್ಷಣೆ ಪಡೆಯಿತು. ನೂರಾರು ಮಂದಿ ವಿದ್ಯಾರ್ಥಿಗಳು , ಹಾಗೂ ಹಿರಿಯರು ಪೈಪೋಟಿಯಲ್ಲಿ ರಂಗೋಲಿ ರಚಿಸುವ ಮೂಲಕ ರಂಗೋಲಿಯ ವೈವಿಧ್ಯಮಯ ಚಿತ್ರಣದ ಪ್ರದರ್ಶನ ನೀಡಿದರು. ಕುಂದಾಪುರದ ಬಹುತೇಕ ರಸ್ತೆ ಬದಿಯಲ್ಲಿರುವ ಮನೆಗಳಲ್ಲಿ ಮುಂಜಾನೆಯಿಂದಲೇ ಗೃಹಿಣಿಯರು ಮಕ್ಕಳು ರಂಗೋಲಿ ರಚಿಸಿದ್ದು ರಂಗೋಲಿ ಉತ್ಸವಕ್ಕೆ ಸ್ಫೂರ್ತಿ ತುಂಬಿದರು.

ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆ, ಚಿಕ್ಕನ್‍ಸಾಲ್ ರಸ್ತೆ , ರಾಮ ಮಂದಿರ ರಸ್ತೆ ಖಾರ್ವಿಕೇರಿ ಮದ್ದುಗುಡ್ಡೆ ಈಸ್ಟ್ ಬ್ಲಾಕ್ ರಸ್ತೆ, ವೆಸ್ಟ್ ಬ್ಲಾಕ್ ರಸ್ತೆ , ಬಡಾಕೆರೆ, ಕುಂದೇಶ್ವರ ದೇವಸ್ಥಾನದ ರಸ್ತೆ , ಸಲೀಂ ಆಲಿ ರಸ್ತೆ, ವಡೇರ ಹೋಬಳಿ ರಸ್ತೆ , ನಾನಾ ಸಾಹೇಬ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಹಬ್ಬದ ವಾತಾವರಣದಲ್ಲಿ ರಂಗೋಲಿ ರಚನೆ ನಡೆಯಿತು.

ಬಹುತೇಕ ಶಾಲೆಗಳಲ್ಲೂ ರಂಗೋಲಿ ಪ್ರದರ್ಶನ ನಡೆದಿದೆ. ಬಿ.ಆರ್.ರಾಯರ ಹಿಂದೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯೂ ನಡೆದು ಬಹುಮಾನ ನೀಡಲಾಗಿದೆ. ಮುಖ್ಯ ಬೀದಿಗಳಲ್ಲಿ ರಂಗೋಲಿ ರಚನೆ ಬಹಳ ಕುತೂಹಲಕಾರಿ ವಿಷಯವಾಗಿ ಎಲ್ಲರ ಮನ ಗೆದ್ದಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here