Thursday 18th, April 2024
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಭ್ರಮಿಸಿದ ಎಂಬತ್ತೈದನೇ ವಾರ್ಷಿಕೋತ್ಸವ

Published On : 25 Jan 2017   |  Reported By : Rons Bantwal


ನಾರಾಯಣ ಗುರುಗಳ ಸಂದೇಶ ಶ್ರಮದ ಬದುಕಿಗೆ ಪ್ರೇರಣೆ: ಮುದ್ದು ಮೂಡುಬೆಳ್ಳೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.24: ಜ್ಞಾನಗಳನ್ನು ಸಂದೇಶಗಳ ಮೂಲಕ ಹೇಳಲು ಸಮರ್ಥರಾದವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಜಾತಿಕ್ಕಿಂತ ನೀತಿ ಮೀರಿ ಮನುಕುಲದ ಸಮಾನತೆಗೆ ಶ್ರಮಿಸುತ್ತಾ ಸಮಾನ ಪರಿಗಣನೆ ಕಲ್ಪಸಿ ಕೊಡುವಲ್ಲಿ ಯಶಕಂಡ ಧರ್ಮಿಷ್ಠರಾಗಿದ್ದರು. ಸ್ವತಂತ್ರ್ಯ ಕಲ್ಪನಾಶಕ್ತಿವುಳ್ಳವರಾಗಿ ವಾಗ್ವಾದವಿರಿಸದೆ ಕ್ರಾಂತಿಕಾರ ಬದಲಾವಣೆಗೈದ ಸಮಾಜ ಸುಧಾರಕರಾದ ಗುರು ಒಂದು ಸಮಾಜಕ್ಕೆ ಸೇರುವವರಲ್ಲ. ಶ್ರಮದ ಬದುಕನ್ನು ರೂಪಿಸಿ ಸಮಾಜವನ್ನು ಸುಶಿಕ್ಷಿತಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಿ ವಿಶೇಷವಾಗಿ ಭಜನೆ ಮೂಲಕ ಸಮಾಜ ಪರಿವರ್ತನೆಗೊಳಿಸಿದವರೇ ಬ್ರಹ್ಮಶ್ರೀಗಳು. ಆರಾಧನೆ ಮನುಷ್ಯನ ಪ್ರಗತಿಯ ಆರಂಭದ ಮೆಟ್ಟಲು. ಅಸ್ಪ ೃಶ್ಯತಾ ಮನೋಭಾವದಿಂದ ಮುಕ್ತ ಸಮಾಜ ನಿರ್ಮಾಣಕ್ಕೆ ಹಿತಕಾರಿಯಾಗಿಸುವುದನ್ನು ಪಠಿಸಿದ ಗುರುಗಳ ತತ್ವಗಳು ಮಾನವತಾವಾದಿ ಆಗಿಸಿವೆ. ಅಂತಹ ಗುರುಗಳ ಸಂದೇಶದ ಪ್ರಸ್ತುತತೆ ಪ್ರಸಕ್ತ ಸಮಾಜಕ್ಕೆ ವರವಾಗಿವೆ. ಇಂತಹ ಅಮೂಲ್ಯ ಮತ್ತು ಮಹತ್ತರ ತತ್ವಗಳು ಆಧುನಿಕ ಜನಮನಕ್ಕೆ ತಲುಪಬೇಕು. ನಾರಾಯಣ ಗುರುಗಳ ಸಂದೇಶ ನಾಳಿನ ಚಿಂತನೆಗೆ ಪೂರಕವಾಗಿ ಸೋಣ. ಅವರ ಪ್ರತೀಯೊಂದು ಸಂದೇಶ ನಮ್ಮ ಬಾಳಿಗೆ ಪ್ರೇರಣೆಯಾಗಿಸೋಣ ಎಂದು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಗುರುನಾರಾಯಣ ಅಧ್ಯಯನ ಪೀಠದ ನಿರ್ದೇಶಕ, ಮಂಗಳೂರು ಆಕಾಶವಾಣಿಯ ಮಾಜಿ ಹಿರಿಯ ಉದ್ಘೋಷಕ ಮುದ್ದು ಮೂಡುಬೆಳ್ಳೆ ನುಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ 85ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಮಂಗಳವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ಗುರುನಾರಾಯಣ ಸಭಾಗೃಹದಲ್ಲಿ ವಿಜೃಂಭನೆಯಿಂದ ಸಂಭ್ರಮಿಸಿದ್ದು ಸಂತ ಶ್ರೇಷ್ಠ ಶ್ರೀ ನಾರಾಯಣ ಗುರುವರ್ಯರ ಸಂದೇಶ ಪ್ರಸ್ತುತತೆ ವಿಷಯವಾಗಿ ಶಿಖರೋಪನ್ಯಾಸ ನೀಡಿ ಮೂಡುಬೆಳ್ಳೆ ಮಾತನಾಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ವಾರ್ಷಿಕೋತ್ಸವ ಸಂಭ್ರಮ ಸಮಾರಂಭಕ್ಕೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಮಹಾಶೇಷ ರುಂಡಮಾಲಿನಿ (ಸುವರ್ಣ ಮಂದಿರ) ದೇವಸ್ಥಾನ ಪೆÇವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಆಶೀರ್ವಚನ ನೀಡಿದರು. ಅತಿಥಿüಯಾಗಿ ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಹಾಗೂ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಇದರ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಮಾರಂಭದಲ್ಲಿ ಸಮುದಾಯದ ಸರ್ವೋನ್ನತಿಗಾಗಿ ಶ್ರಮಿಸಿದ ಹಿರಿಯ ಮುಂದಾಳುಗಳಾದ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷರುಗಳಾದ ವರದ ಉಳ್ಳಾಲ್ (ಪತ್ನಿ ಜಯಂತಿ ವರದ್), ಎಲ್.ವಿ ಅವಿೂನ್ (ಪತ್ನಿ ಸುಧಾ ಎಲ್ವಿ), ಮಾಜಿ ಉಪಾಧ್ಯಕ್ಷರುಗಳಾದ ಡಿ.ಯು ಸಾಲಿಯಾನ್ (ಸೊಸೆ ದಕ್ಷಾ ಸಾಲಿಯಾನ್), ವಾಸುದೇವ ಆರ್.ಕೋಟ್ಯಾನ್ (ಪತ್ನಿ ಮೋಹಿನಿ ವಾಸುದೇವ್, ಬಾವ ರಾಮ ಜಿ.ಸುವರ್ಣ, ಅಳಿಯ ಸೊಹಾನ್ ಕೋಟ್ಯಾನ್), ಮಾಜಿ ಗೌ| ಪ್ರ| ಕೋಶಾಧಿಕಾರಿ ಎನ್.ಎಂ ಸನಿಲ್ (ಪತ್ನಿ ಲೀಲಾ ಸನಿಲ್), ಸಮಾಜ ಸೇವಕರೂ ಬಿಲ್ಲವ ಧುರೀಣರುಗಳಾದ ಗಿರಿಯ ಟಿ.ಪೂಜಾರಿ (ಸುಪುತ್ರ ರವೀಂದ್ರ ಜಿ.ಪೂಜಾರಿ, ಸಹೋದರ ಬಾಲಕೃಷ್ಣ ಟಿ. ಪೂಜಾರಿ ಹಾಗೂ ಮೊಮ್ಮಕ್ಕಳೊಂದಿಗೆ), ನರ್ಸಪ್ಪ ಸಿ.ಸಾಲ್ಯಾನ್ (ಪತ್ನಿ ಪುಷ್ಪಲತಾ ಸಾಲ್ಯಾನ್), ಅಸೋಸಿಯೇಶ ನ್‍ನ ಆಡಳಿತ ಸಮಿತಿ ಮಾಜಿ ಸದಸ್ಯರುಗಳಾ ಸೂರು ಸಿ.ಕರ್ಕೇರ (ಪತ್ನಿ ಶಾರದಾ ಕರ್ಕೇರ), ಸುರೇಶ್ ಎಸ್. ಪೂಜಾರಿ (ಪತ್ನಿ ಸಂತೋಷಿ ಸುರೇಶ್), ಗುಜರಾತ್ ಬಿಲ್ಲವರ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರಾ (ಪತ್ನಿ ಶೋಭಾ ದಯಾನಂದ್), ಬಿಲ್ಲವರ ಸಮಾಜ ಸೇವಾ ಸಂಘ ನಾಸಿಕ್ ಅಧ್ಯಕ್ಷ ಗಂಗಾಧರ ಕೆ. ಅಮೀನ್ (ಪತ್ನಿ ಪ್ರಮೀಳಾ ಗಂಗಾಧರ್), ಗುಜರಾತ್ ಬಿಲ್ಲವರ ಸಂಘದ ಸಂಸ್ಥಾಪಕ ಮೋಹನ್ ಸಿ.ಪೂಜಾರಿ, ಬಿಲ್ಲವ ಮುತ್ಸದ್ಧಿಗಳಾದ ಕೆ.ಭೋಜರಾಜ್ (ಪತ್ನಿ ಕೃಪಾ ಭೋಜರಾಜ್), ಜಿ.ಎಂ ಕೋಟ್ಯಾನ್ ಹಾಗೂ ಸ್ಥಾಪಕ ಅಧ್ಯಕ್ಷ ಎಂ. ಅಪ್ಪಣ್ಣ ಪರವಾಗಿ ಸಹೋದರ ಕೇಶವ ಟಿ.ಕೋಟ್ಯಾನ್ ಸಹೋದರರೊಂದಿಗೆ ಸನ್ಮಾನಿಸಿ ಅಭಿವಂದಿಸಲಾಯಿ ತು. ಅಂತೆಯೇ ಜಾಗತಿಕ ಮುಕ್ತ ವಿಶ್ವವಿದ್ಯಾಲಯ ನಾಗಾಲ್ಯಾಂಡ್ ಸಂಸ್ಥೆಯ ಗೌರವ ಡಾಕ್ಟರೇಟ್ ಪುರಸ್ಕøತ ಅಂತರಾಷ್ಟ್ರೀಯ ಕ್ರೀಡಾಪಟು ಡಾ| ದಯಾನಂದ ಕುಮಾರ್ (ಪತ್ನಿ ಶೋಭಾ ದಯಾನಂದ್ ಜೊತೆಗೂಡಿ), ಲೋನಾವಲಾ ಮುನ್ಸಿಪಾಲಿಟಿ ಕಾಪೆರ್Çರೇಶನ್‍ನ ಉಪಾಧ್ಯಕ್ಷ, ಬಿಜೆಪಿ ನೇತಾರ ಶ್ರೀಧರ ಎಸ್.ಪೂಜಾರಿ (ಪತ್ನಿ ಸುಕನ್ಯ ಶ್ರೀಧರ್), ಮಲೇಷಿಯಾ ರಾಷ್ಟ್ರದ ರಾಯಲ್ ಪೀಸ್ ಸಂಸ್ಥೆಯ ಗೌರವ ಡಾಕ್ಟರೇಟ್ ಪದವಿ, ಪುರಸ್ಕøತ ಚಲನಚಿತ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ಡಾ| ರಾಜಶೇಖರ ಕೋಟ್ಯಾನ್ (ಪತ್ನಿ ಹರಿಣಾಕ್ಷೀ ರಾಜಶೇಖರ್) ಅವರಿಗೆ ಸಾಧಕ ಸನ್ಮಾನವನ್ನೀಡಿ ಅಭಿನಂದಿಸಲಾಯಿತು. ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತು ಪೂಜಾ ಪುರುಷೋತ್ತಮ್ ದಂಪತಿ ಹಾಗೂ ಸಿಎ| ಅಶ್ವಜಿತ್ ಹೆಜ್ಮಾಡಿ ಅವರನ್ನೂ ಸತ್ಕರಿಸಿ ಅಭಿನಂದಿಸಲಾ ಯಿತು.

ಸಂಸ್ಥಾಪನಾ ದಿನಾಚರಣಾ ನಿಮಿತ್ತ ಧಾರ್ಮಿಕ ಕಾರ್ಯಕ್ರಮವನ್ನಾಗಿಸಿ ಸಂಜೆ ಭಜನೆ, ದೀಪೊತ್ಸವ ನಡೆಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ಗೆಜ್ಜೆಗಿರಿ ನಂದನ್‍ಬಿತ್ತಿಲ್ ಕ್ಷೇತ್ರಾಡಳಿತದ ದೀಪಕ್ ಕೋಟ್ಯಾನ್ ಗುರುಪುರ ಸಮ್ಮುಖದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಶಿಲಾನ್ಯಾಸ ಆಮಂತ್ರಣ ಬಿಡುಗಡೆಗೊಳಿಸಲಾಯಿತು.

ಸುವರ್ಣ ಬಾಬಾ ಆಶೀರ್ವಚನಗೈದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳೇ ಶ್ರೇಷ್ಠವಾದದ್ದು. ಅವರು ನಿತ್ಯಾನಂದ ಸ್ವಾಮಿ, ಸಾಯಿ ಬಾಬಾಕ್ಕಿಂತ ಮೀಗಿಲಾದ ಸಂತರು. ಸಮಾನತೆಗಾಗಿ ಹಲವು ದೇವಸ್ಥಾನಗಳಿಗೆ ಕಾಲಿಟ್ಟ ಪರಮ ಪುರುಷರು. ಶಿವಲಿಂಗ ಆರಾಧಿಸಿದ ಮಾನಾವತಾ ದೇವರು. ಜಯ ಸುವರ್ಣ ಅವರಿಗೆ ಬ್ರಹ್ಮಶ್ರೀಗಳ ಪವಿತ್ರ ಶಕ್ತಿ ಧಕ್ಕಿದೆ. ಅವರ ಸಾರಥ್ಯದಲ್ಲಿ ಬಿಲ್ಲವ ಸಮಾಜ ಬಲಿಷ್ಠಗೊಂಡಿದೆ. ಬಿಲ್ಲವರಿಗೆ ಜಯ ಸುವರ್ಣರೇ ಧೀಶಕ್ತಿ. ಹತ್ತು ಇದ್ದಲ್ಲಿ ಮುತ್ತು ಇದೆ ಎಂಬಂತೆ ಇಂದು ನಾವು ಏಕತಾ ಮನೋಭಾವದಿಂದ ಕಟ್ಟಿದ ಕೈಗಳು ಶಕ್ತಿಯಾಗಿ ಬೆಳೆಸಿ ಹಿಂದೂ ಧರ್ಮದಲ್ಲಿ ಪೂಜಾರಿಗಳ ಶಕ್ತಿಯಿದೆ ಎನ್ನುವುದನ್ನು ಶಾಭೀತು ಪಡಿಸೋಣ ಎಂದರು.

ಬಿಲ್ಲವ ಸಮುದಾಯದ ನಾಯಕತ್ವಕ್ಕೆ ಬಂಧುಗಳೇ ನನ್ನನ್ನು ಆಯ್ಕೆ ಮಾಡಿದ್ದರು. ಅವರ ವಿಶ್ವಾಸಕ್ಕೆ ವಿಧೇಯನಾದ ನಾನು ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ವಿನಿಯೋಗಿಸಿದ್ದೇನೆ. ಅಸೋಸಿಯೇಶನ್‍ನ ಪ್ರಸಕ್ತ ಅಧ್ಯಕ್ಷ ನಿತ್ಯಾನಂದ್ ಕೋಟ್ಯಾನ್ ಆಶಯದಂತೆ ಇಂತಹ ಕಾರ್ಯಕ್ರಮ ಸಾಧ್ಯವಾಯಿತು. ಇದನ್ನು ವಾರ್ಷಿಕವಾಗಿ ಅರ್ಥಪೂರ್ಣವಾಗಿ ಆಚರಿಸಿ ಸಮುದಾಯ ಬಾಂಧವರನ್ನು ಗುರುತಿಸಿ ಸಮಾಜವನ್ನು ಭದ್ರ ಪಡಿಸೋಣ. ಅತೀ ಶೀಘ್ರವೇ ಸ್ವಂತದ ಮೆಡಿಕಲ್, ಇಂಜಿನೀಯರಿಂಗ್ ಕಾಲೇಜು ನಿರ್ಮಿಸಿ ನಮ್ಮ ಅಸ್ತಿತ್ವವನ್ನು ವಿಶ್ವಕ್ಕೇ ತೋರ್ಪಡಿಸೋಣ ಎಂದು ಜಯ ಸುವರ್ಣ ತಿಳಿಸಿದರು.

ನಿತ್ಯಾನಂದ ಕೋಟ್ಯಾನ್ ಮಾತನಾಡಿ ಎಂ.ಅಪ್ಪಣ್ಣ, ಎ.ಪಿ ಕಿರೋಡಿಯನ್, ಎನ್.ಎಲ್ ಸುವರ್ಣ ಸೇರಿದಂತೆ ಎಲ್ಲಾ 24 ಅಧ್ಯಕ್ಷರನ್ನು ಅವರ ಸೇವಾ ಯೋಗದಾನ ನೆನಪಿಸಿ ಅಸೋಸಿಯೇಶನ್‍ಗಾಗಿನ ಅವರ ತ್ಯಾಗವನ್ನು ಮನವರಿಸಿಕೊಂಡರು. ಇಂತಹ ಸಂಭ್ರವು ನಮ್ಮೆಲ್ಲರ ಬಹುದಿನದ ಕನಸು ನನಸಾಗುತ್ತಿದ್ದು, ಇಂತಹ ವೇದಿಕೆಗೆ ಕಾತರದಿಂದ ಕಾಯುತ್ತಿದ್ದೆವು. ಅದು ಇಂದು ಸಕಾರಗೊಂಡಿದೆ. ಇಂತಹ ಹಿರಿಯರ ಸಾಧನಾ ಸನ್ಮಾನಿಸುವ ಭಾಗ್ಯ ನನ್ನ ಪಾಲಿಗೆ ಲಭಿಸಿದ್ದು ನನ್ನ ಸೌಭಾಗ್ಯವೇ ಸರಿ. ಬಿಲ್ಲವರು ಎಲ್ಲರೂ ಬಂಧುಗಳೆಂಬ ಭಾವನಾತ್ಮಕ ಬೆಸುಗೆಯಿಂದ ಕೂಡಿ ಬಾಳುತ್ತಾ ನಮ್ಮ ಏಕಾತ್ಮಕತೆಯನ್ನು ಮೆರೆಯೋಣ ಎಂದರು.

ಸುರೇಶ್ ಪೂಜಾರಿ ಮಾತನಾಡಿ ಬಿ.ಜನಾರ್ದನ ಪೂಜಾರಿ ಅವರು ಸಮುದಾಯದಲ್ಲಿ ತೋರಿದ ಕಳಕಳಿ ಬಿಲ್ಲವರ ಇಷ್ಟೆಲ್ಲ ಪ್ರಗತಿ ಹೊಂದಲು ಸಾಧ್ಯ. ಅಂತೆಯೇ ಜಯ ಸುವರ್ಣರ ಶ್ರಮ, ಅವರ ದೂರದೃಷ್ಠಿತ್ವ ನಮ್ಮ ಶ್ರೇಯಸ್ಸಿಗೆ ಕಾರಣವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಬಿಲ್ಲವರ ಭವನದಲ್ಲಿ ಪ್ರತಿಷ್ಠಾಪಿಸಿದ ಕಾರಣ ಇಲ್ಲಿ ಸಿದ್ಧಿ ಸಾಧಿಸಿತು. ಆ ಶಕ್ತಿ ಕಾರ್ಯದಿಂದ ನಮ್ಮ ಏಕತೆ ಸಾಧ್ಯವಾಯಿತು ಎಂದರು.

ಇದೊಂದು ನಮ್ಮೆಲ್ಲರಿಗೂ ಅತೀವ ಸಂತಸದ ಸೌಭಾಗ್ಯ ತಂದೊದಗಿಸಿದ ದಿನ. ಜಾಗೃತಿ ಬಳಗ ಮತ್ತು ಅಸೋಸಿಯೇಶನ್ ಮಿಲನದ ಸುದಿನ. ನಮ್ಮೆಲ್ಲರ ಏಕತೆಗೆ ದಯಾನಂದ ಬೋಂಟ್ರಾ, ಗಂಗಾಧರ ಅಮೀನ್, ಎಲ್.ವಿ ಅಮೀನ್ ಅವರ ಶ್ರಮವೇ ಕಾರಣ ಶ್ರೀ ಗುರುಗಳ ಅನುಗ್ರಹದಂತೆ ಎನ್.ಟಿ ಪೂಜಾರಿ ಅವರ ಸಮಕಾಲೀನ ಚಿಂತನೆ, ದೂರದೃಷ್ಠಿತ್ವ ಮತ್ತು ಅವರ ಆಶಯದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನಮ್ಮೆಲ್ಲರ ಏಕತೆಗೆ ವೇದಿಕೆಯಾಗಿದೆ. ಮುಂದೆದಿಗೂ ನಾವೆಲ್ಲರೂ ಒಂದೇ ಮಾತೆಯ ಮಕ್ಕಳಾಗಿ ಪರಸ್ಪರ ಅನ್ಯೋನತೆಯಿಂದ ಬಾಳೋಣ. ಆ ಮೂಲಕ ಬಿಲ್ಲವ ಸಮಾಜವನ್ನು ಏಕತೆಯಿಂದ ಮುನ್ನಡೆಸೋಣ ಎಂದು ಕೆ.ಭೋಜರಾಜ್ ಕರೆಯಿತ್ತರು.

ವರದ ಉಳ್ಳಾಲ್ ಮಾತನಾಡಿ ಜಯ ಸುವರ್ಣರ ದಕ್ಷ ನಾಯಕತ್ವ ನಮ್ಮೆಲ್ಲರ ಏಳಿಗೆಗೆ ಕಾರಣವಾಗಿದೆ. ಇದು ಒಳಿತಿನ ಸಂದೇಶವಾಗಿದೆ. ಇದೊಂದು ಯೋಚನಾತ್ಮಕ ಸಂಗತಿಯೇ ಸರಿ. ಸದ್ಯ ನಮ್ಮಲ್ಲಿನ ಹಿರಿಯ ಮಹಿಳೆಯರಿಗಾಗಿನ ಸಹಾಯ ಯೋಜನೆ ಮತ್ತೆ ಪುಷ್ಟೀಕರಿಸಬೇಕು. ಇತರೇ ಬೃಹತ್ ಯೋಜನೆಗಳು ತನ್ನೀತಾನೇ ಮುಂದುವರಿಯುವುದು ಎಂದರು.

ಇವತ್ತಿನ ಈ 18 ಸಾಧಕರ ಸನ್ಮಾನ ಒಂದು ಇತಿಹಾಸವೇ ಸರಿ. ಹಿರಿಯರ ತ್ಯಾಗ ಮನೋಭಾವದ ಫಲ ಸಿದ್ಧಿಯಾಗಿದಂತಿದೆ. ಬಿಲ್ಲವರ ಅಸೋಸಿಯೇಶನ್ ಮತ್ತು ಜಾಗೃತಿ ಬಳಗದ ಐಕ್ಯತೆ ಏಕತೆಯ ಖಾತೆ ತೆರೆದಂತಿದೆ. ಶೀಘ್ರವೇ ಏಕತಾ ಮಿಲನದ ಸಂಭ್ರಮಕ್ಕೆ ಸಜ್ಜಾಗೋಣ ಎಂದು ಎಲ್.ವಿ ಅವಿೂನ್ ತಿಳಿಸಿದರು.

ಕ್ರೀಡಾರಂಗ ರಣರಂಗದಂತೆ. ಸೂಕ್ತ ತರಬೇತಿಇಲ್ಲದೆ ಇಲ್ಲಿ ಸಾಧನೆ, ಶ್ರೇಯಸ್ಸು ಅಸಾಧ್ಯ. ಮಕ್ಕಳಲ್ಲಿ ಕ್ರೀಡಾ ಶಕ್ತಿ ಬೆಳೆಸಿ. ಕ್ರೀಡೆಯಲ್ಲಿ ಗೆಲುವಿನ ಸ್ಪೂರ್ತಿ ತುಂಬಿರಿ. ನನ್ನ ಕ್ರೀಡಾಸಕ್ತಿಯೇ ನನ್ನ ಸಾಧನೆಗೆ ಶಕ್ತಿಯಾಗಿದ್ದು. ಅದೇ ನನ್ನ ಈ ಸನ್ಮಾನಕ್ಕೆ ಪ್ರೇರಣೆಯಾಯಿತು ಎಂದು ಸನ್ಮಾನಕ್ಕೆ ಉತ್ತರಿಸಿ ದಯಾನಂದ ಕುಮಾರ್ ಅಭಿಪ್ರಾಯ ಪಟ್ಟರು.

ರಾಜಶೇಖರ ಕೋಟ್ಯಾನ್ ಮಾತನಾಡಿ ಈ ಸನ್ಮಾ ನನ್ನ ಮಾತಾಪಿತರ ಪುಣ್ಯದ ಫಲವಾಗಿದೆ. ತರುವಾಯ ಜಯ ಸುವರ್ಣರ ಗರಡಿಯಲ್ಲಿ ಪಳಗಿದ ನಾನು ಇಷ್ಟೇತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಚಲನಚಿತ್ರವನ್ನೂ ನಿರ್ಮಿಸುವ ಯೋಗ ನನಗೆ ಒದಗಿತು. ನಮ್ಮಲ್ಲಿನ ಯುವಶಕ್ತಿಯು ಸಮುದಾಯದ ಏಳಿಗೆಯ ಚಿಂಂತನೆಯನ್ನು ಮೈಗೂಡಿಸಿ ಸಂಘಟನೆಯಿಂದ ಬಲಯುವರಾಗುವ ಆಶಯ ನನ್ನದಾಗಿದೆ ಎಂದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಡಾ| ಯು.ಧನಂಜಯ ಕುಮಾರ್, ಶಂಕರ ಡಿ.ಪೂಜಾರಿ, ಭಾಸ್ಕರ ವಿ.ಬಂಗೇರ, ನ್ಯಾ| ರಾಜಾ ವಿ.ಸಾಲ್ಯಾನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು, ಬ್ಯಾಂಕ್‍ನ ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ ಮತ್ತಿತರ ಗಣ್ಯರು, ಇತರ ಪದಾಧಿಕಾರಿಗಳು, ಉಪಸಮಿತಿ, ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿದರು. ಗೋಪಾಲಕೃ ಷ್ಣ ಕೆಂಚನಕೆರೆ ಯಕ್ಷಗಾನ ಶೈಲಿಯ ಅನುಕರಣೆಯಲ್ಲಿ ಅಸೋಸಿಯೇಶನ್‍ನ ಕಾರ್ಯವೈಖರಿ ಮತ್ತು ಸಂಸ್ಥಾಪಕರು ಮತ್ತು ಅಧ್ಯಕ್ಷರುಗನ್ನು ವೈಶಿಷ್ಟ ್ಯಮಯವಾಗಿ ಪರಿಚಯಿಸಿದರು. ಭಾಗವತ ಮುದ್ದು ಸಾಲ್ಯಾನ್, ಸಹಕಲಾವಿದರಾದ ಪ್ರವೀಣ್ ಶೆಟ್ಟಿ, ಹರೀಶ್ ಸಾಲ್ಯಾನ್ ಯಕ್ಷಧ್ವನಿಯಲ್ಲಿ ಸನ್ಮಾನಿತರಿಗೆ ವೇದಿಕೆಗೆ ಸುಖಾಗಮನ ಬಯಸಿದರು. ಪ್ರಸ್ತಾವಿಕ ನುಡಿಗಳನ್ನಾಡಿದರು. ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಜೊತೆ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ವಂದನಾರ್ಪಣೆಗೈದರು.

ಸಾಮರಸ್ಯ ಬಾಳಿಗೆ ಪ್ರೇರಕವಾದ ಸಂಭ್ರಮ:

ಏಕತೆಯೊಂದಿಗೆ ಮತ್ತೆ ಎಂದೇ ವೇದಿಕೆಯಲ್ಲಿ ಒಂದಾದ ಸಮುದಾಯದ ಧುರೀಣರ ಸಂತಸವನ್ನು ಕಂಡ ಬಂಧುಗಳೆಲ್ಲರೂ ಸಂತೋಷದ ಸಾಗರದಲ್ಲಿ ತೇಲಾಡುವಂತಿದ್ದರು. ನೆರೆದ ಸರ್ವರ ಮೊಗದಲ್ಲೂ ಹರ್ಷದ ಹೊನಲು ಲಾಸ್ಯವಾಡುತಿತ್ತು. ಎಲ್ಲೆಲ್ಲೂ ಏಕತೆಯ ಸಂಭ್ರಮ... ತನ್ನ ಕಾಲಮಾನದಲ್ಲೇ ಒಂದಾಗಿ ಸಹೋದರತ್ವವನ್ನು ಮೆರೆದ ಎಲ್ಲರನ್ನೂ ಕಂಡ ಹಾಗೂ ಜಿ.ಕೆ ಕೆಂಚನಕೆರೆ ಪದ್ಯದಲ್ಲಿ ತನ್ನನ್ನು ಮಹಾತೇಜಸ್ವಿ ನಾಯಕನಾಗಿ ಗುರುತಿಸಿದ್ದನ್ನು ಆಲಿಸಿದ ಜಯ ಸುವರ್ಣರು  ಹಾಗೂ ತನ್ನ ಯುವ ನಾಯಕತ್ವ ಬಣ್ಣಿಸಿದ್ದನ್ನು ಕೇಳಿದ ನಿತ್ಯಾನಂದ ಕೋಟ್ಯಾನ್ ಸಂತೋಷಭರಿತರಾಗಿ ಭಾವೋದ್ವೆಗರಾಗಿ ಆನಂದಾಶ್ರುಗರೆದರು. 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here